ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಈ ಒಂದು ನಗರದಲ್ಲೇ ನಡೆಯಲಿವೆ 55 ಪಂದ್ಯಗಳು; ಸಂಪೂರ್ಣ ಟೂರ್ನಿ 3 ನಗರಗಳಲ್ಲಿ!

IPL 2022: Mumbai likely to host 55 league stage matches says BCCI officials

ಕಳೆದ ವರ್ಷ ಭಾರತದಲ್ಲಿ ಆರಂಭವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಧ್ಯಂತರದಲ್ಲಿಯೇ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡು ನಂತರ ಯುಎಇಯಲ್ಲಿ ಮುಂದುವರಿದಿತ್ತು. ಹೀಗೆ ವಿಶ್ವದ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಕಾರಣದಿಂದ ಆಯೋಜಕರಿಗೆ ಹಾಗೂ ಟೂರ್ನಿಯ ಮೇಲೆ ಹೂಡಿಕೆಗಳನ್ನು ಮಾಡಿದ್ದ ಹಲವಾರು ಹೂಡಿಕೆದಾರರಿಗೆ ತುಸು ನಷ್ಟವೂ ಕೂಡ ಉಂಟಾಗಿತ್ತು. ಇನ್ನು ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಂತೆ ಈ ಬಾರಿಯ ಟೂರ್ನಿ ಕೂಡ ಹಿನ್ನಡೆಯನ್ನು ಅನುಭವಿಸಬಾರದು ಎಂಬ ಕಾರಣದಿಂದಾಗಿ ಬಿಸಿಸಿಐ ಹೆಚ್ಚಿನ ನಿಗಾವಹಿಸಿ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದು, ಸಂಪೂರ್ಣ ಟೂರ್ನಿಯನ್ನು ಭಾರತ ನೆಲದಲ್ಲಿಯೇ ಅತಿದೊಡ್ಡ ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಸಲು ತೀರ್ಮಾನಿಸುತ್ತಿದೆ ಎನ್ನಲಾಗುತ್ತಿದೆ.

PKL 2022: ಸೆಮಿಫೈನಲ್‌ನಲ್ಲಿ ದಬಾಂಗ್ ಡೆಲ್ಲಿ ಸೋಲಿಸಿ ಹಳೇ ಸೇಡು ತೀರಿಸಿಕೊಳ್ಳುತ್ತಾ ಬೆಂಗಳೂರು ಬುಲ್ಸ್?PKL 2022: ಸೆಮಿಫೈನಲ್‌ನಲ್ಲಿ ದಬಾಂಗ್ ಡೆಲ್ಲಿ ಸೋಲಿಸಿ ಹಳೇ ಸೇಡು ತೀರಿಸಿಕೊಳ್ಳುತ್ತಾ ಬೆಂಗಳೂರು ಬುಲ್ಸ್?

ಹೌದು, ಕಳೆದ ಬಾರಿಯ ಐಪಿಎಲ್ ಟೂರ್ನಿಯನ್ನು ಭಾರತದ ನೆಲದಲ್ಲಿ ಆಯೋಜಿಸಿದ್ದರೂ ಕೂಡ ಟೂರ್ನಿಯ ಮಧ್ಯದ ವೇಳೆ ವಿವಿಧ ಆಟಗಾರರಿಗೆ ಕೊರೋನಾ ಸೊಂಕು ತಗುಲಿದ್ದು, ಬಿಸಿಸಿಐಗೆ ಭಾರೀ ಹಿನ್ನಡೆಯನ್ನುಂಟು ಮಾಡಿತ್ತು. ಹೀಗಾಗಿ ಈ ಬಾರಿ ಆ ರೀತಿಯ ಘಟನೆಗಳು ಸಂಭವಿಸಬಾರದು ಎಂಬ ಕಾರಣದಿಂದಾಗಿ ಟೂರ್ನಿಯ ಹೆಚ್ಚು ಪಂದ್ಯಗಳನ್ನು ಒಂದೇ ನಗರದಲ್ಲಿ ಆಯೋಜಿಸುವ ಚಿಂತನೆಯನ್ನು ಬಿಸಿಸಿಐ ನಡೆಸುತ್ತಿದೆ ಎಂಬ ಸುದ್ದಿ ಈ ಹಿಂದೆ ಸಾಕಷ್ಟು ಹರಿದಾಡಿತ್ತು. ಕಳೆದ ಆವೃತ್ತಿಯ ಹಾಗೆ ವಿವಿಧ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸುವುದರಿಂದ ಆಟಗಾರರು ಪಂದ್ಯಗಳನ್ನಾಡಲು ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣಿಸಬೇಕಾದ ಅಗತ್ಯತೆ ಬೀಳಲಿದ್ದು, ಬಯೋ ಬಬಲ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ಆಟಗಾರರು ವಿಫಲವಾಗಬಹುದು ಮತ್ತು ಪ್ರಯಾಣದಿಂದ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಈ ಎಲ್ಲಾ ಅಂಶಗಳನ್ನು ತಲೆಯಲ್ಲಿಟ್ಟುಕೊಂಡಿರುವ ಬಿಸಿಸಿಐ ಆಟಗಾರರು ನಗರಗಳಿಂದ ನಗರಗಳಿಗೆ ಪ್ರಯಾಣಿಸದಂತೆ ಟೂರ್ನಿಯನ್ನು ಆಯೋಜಿಸಲಿದೆ ಎಂದು ಬಿಸಿಸಿಐನ ಅಧಿಕಾರಿಯೋರ್ವರು ಮಾಹಿತಿ ಹಂಚಿಕೊಂಡಿದ್ದಾರೆ. ಹೀಗೆ ಬಿಸಿಸಿಐನ ಹಿರಿಯ ಅಧಿಕಾರಿಗಳು ಟೂರ್ನಿ ಯಾವಾಗ ಆರಂಭವಾಗಲಿದೆ, ಯಾವ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ ಎಂಬುದರ ಕುರಿತು ಮಾತನಾಡಿದ್ದು ಈ ಕೆಳಕಂಡಂತೆ ಮಾಹಿತಿಗಳನ್ನು ತಿಳಿಸಿದ್ದಾರೆ.

ಒಂದೇ ನಗರದಲ್ಲಿ 55 ಪಂದ್ಯಗಳು

ಒಂದೇ ನಗರದಲ್ಲಿ 55 ಪಂದ್ಯಗಳು

ಬಿಸಿಸಿಐನ ಹಿರಿಯ ಅಧಿಕಾರಿಯೋರ್ವರು ನೀಡಿರುವ ಮಾಹಿತಿಯ ಪ್ರಕಾರ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಎಲ್ಲಾ ಪಂದ್ಯಗಳು ಕೂಡ ಮಹಾರಾಷ್ಟ್ರದ ಮುಂಬೈ ಹಾಗೂ ಪುಣೆ ನಗರಗಳ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಅದರಲ್ಲಿಯೂ ಲೀಗ್ ಹಂತದ ಒಟ್ಟು 55 ಪಂದ್ಯಗಳು ಮುಂಬೈ ನಗರದಲ್ಲಿಯೇ ನಡೆಯಲಿವೆ ಎಂದು ಬಿಸಿಸಿಐನ ಅಧಿಕಾರಿ ತಿಳಿಸಿದ್ದಾರೆ. ಮುಂಬೈ ನಗರದಲ್ಲಿ ವಾಂಖೆಡೆ, ಬ್ರಬೌರ್ನ್ ಕ್ರೀಡಾಂಗಣ ಮತ್ತು ಡಿವೈ ಪಾಟೀಲ್ ಕ್ರೀಡಾಂಗಣ ಎಂಬ 3 ಅಂತರರಾಷ್ಟ್ರೀಯ ಪಂದ್ಯಗಳನ್ನು ಏರ್ಪಡಿಸಬಹುದಾದ ಕ್ರೀಡಾಂಗಣಗಳು ಇರುವುದರಿಂದ ಮುಂಬೈ ನಗರದಲ್ಲಿಯೇ 55 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ.

ಪುಣೆಯಲ್ಲಿ 15 ಪಂದ್ಯಗಳು

ಪುಣೆಯಲ್ಲಿ 15 ಪಂದ್ಯಗಳು

ಇನ್ನು ಮಹಾರಾಷ್ಟ್ರದ ಮತ್ತೊಂದು ನಗರವಾದ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಒಟ್ಟು 15 ಪಂದ್ಯಗಳನ್ನು ನಡೆಸಲು ಬಿಸಿಸಿಐ ತೀರ್ಮಾನಿಸಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ ರಿಲಯನ್ಸ್ ಒಡೆತನದ ಜಿಯೋ ಕ್ರೀಡಾಂಗಣದಲ್ಲಿಯೂ ಕೂಡ ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಮಾತುಕತೆಯನ್ನು ನಡೆಸುತ್ತಿದೆ ಎಂಬ ಮಾಹಿತಿಯನ್ನು ಕೂಡ ಇದೇ ವೇಳೆ ಹಂಚಿಕೊಂಡಿದ್ದಾರೆ.

ಐಪಿಎಲ್ ಆರಂಭ ಯಾವಾಗ? ಪ್ಲೇ ಆಫ್ ಪಂದ್ಯಗಳು ಎಲ್ಲಿ?

ಐಪಿಎಲ್ ಆರಂಭ ಯಾವಾಗ? ಪ್ಲೇ ಆಫ್ ಪಂದ್ಯಗಳು ಎಲ್ಲಿ?

ಇನ್ನೂ ಮುಂದುವರಿದು ಮಾಹಿತಿಗಳನ್ನು ಹಂಚಿಕೊಂಡಿರುವ ಬಿಸಿಸಿಐನ ಅಧಿಕಾರಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಾರ್ಚ್ 26ರಂದು ಆರಂಭವಾಗಲಿದ್ದು ಮೊದಲನೇ ದಿನ 1 ಪಂದ್ಯ ನಡೆಯಲಿದೆ ಹಾಗೂ ನಂತರ ಮಾರ್ಚ್ 27ರಂದು 2 ಪಂದ್ಯಗಳು ನಡೆಯಲಿವೆ ಎಂದಿದ್ದಾರೆ. ಇನ್ನು ಉದ್ಘಾಟನಾ ಪಂದ್ಯ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪ್ಲೇ ಆಫ್ ಹಂತದ ಪಂದ್ಯಗಳನ್ನು ಅಹಮದಾಬಾದ್ ನಗರದ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಸಹ ಆಟಗಾರನಿಗೆ ಕಪಾಳ ಮೋಕ್ಷ ಮಾಡಿದ ರೌಫ್ | Oneindia Kannada

Story first published: Thursday, February 24, 2022, 9:42 [IST]
Other articles published on Feb 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X