ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

RR vs RCB: ಕೊಹ್ಲಿ ಅಲ್ಲ, ಫಾಫ್ ಅಲ್ಲ ರಾಜಸ್ಥಾನ್ ವಿರುದ್ಧ ಹೆಚ್ಚು ರನ್ ಚಚ್ಚಿರುವ ಆರ್‌ಸಿಬಿ ಆಟಗಾರ ಈತ!

IPL 2022: Not Kohli, not Du Plessis, Dinesh Karthik has the highest strike rate aginst RR in IPL

ಸದ್ಯ ಇಂದು ( ಮೇ 27 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿವೆ. ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಗೆಲ್ಲಲಿರುವ ತಂಡ ಫೈನಲ್ ಪ್ರವೇಶಿಸಿ ಈಗಾಗಲೇ ಫೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿರುವ ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿಯಲಿದ್ದರೆ, ಪಂದ್ಯದಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ.

RCB vs RR: ಈ ತಂಡ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ಫೈನಲ್ ತಲುಪಲಿದೆ ಎಂದ ಸಂಜಯ್ ಮಂಜ್ರೇಕರ್RCB vs RR: ಈ ತಂಡ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ಫೈನಲ್ ತಲುಪಲಿದೆ ಎಂದ ಸಂಜಯ್ ಮಂಜ್ರೇಕರ್

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ನಡೆಯಲಿರುವ ಈ ಬಾರಿಯ ಐಪಿಎಲ್ ಟೂರ್ನಿಯ ಮೂರನೇ ಮುಖಾಮುಖಿ ಪಂದ್ಯ ಇದಾಗಿದ್ದು, ಇತ್ತಂಡಗಳ ನಡುವೆ ಲೀಗ್ ಹಂತದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲು ಸಾಧಿಸಿತ್ತು ಹಾಗೂ ದ್ವಿತೀಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಜಯ ಕಂಡಿತ್ತು. ಹೀಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ್ದರೆ, ಒಟ್ಟಾರೆ ಇಂಡಿಯನ್ ಪ್ರೀಮಿಯರ್ ಮುಖಾಮುಖಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪಷ್ಟ ಮೇಲುಗೈ ಸಾಧಿಸಿದೆ.

IPL 2022: ಗುಜರಾತ್ ಅಲ್ಲ ಈ ಬಲಿಷ್ಠ ತಂಡ ಈ ಬಾರಿ ಚಾಂಪಿಯನ್ ಆಗುತ್ತೆ ಎಂದ ಹರ್ಭಜನ್ ಸಿಂಗ್IPL 2022: ಗುಜರಾತ್ ಅಲ್ಲ ಈ ಬಲಿಷ್ಠ ತಂಡ ಈ ಬಾರಿ ಚಾಂಪಿಯನ್ ಆಗುತ್ತೆ ಎಂದ ಹರ್ಭಜನ್ ಸಿಂಗ್

ಇನ್ನು ಇತ್ತಂಡಗಳ ನಡುವಿನ ಈ ಪಂದ್ಯ ಎರಡೂ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆಗಳು ಹೆಚ್ಚಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೆಜಿಎಫ್ ಆದ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಫಾಫ್ ಡು ಪ್ಲೆಸಿಸ್ ಅಬ್ಬರಿಸುವ ನಿರೀಕ್ಷೆ ಇದ್ದು, ಕಳೆದ ಪಂದ್ಯದ ಹೀರೋ ರಜತ್ ಪಾಟಿದಾರ್ ಕೂಡ ಸಿಡಿಯಬಹುದು. ಇನ್ನು ದಿನೇಶ್ ಕಾರ್ತಿಕ್ ನಂಬುಗೆಯ ಆಟಗಾರನಾಗಿದ್ದು, ಅಂತಿಮ ಹಂತದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್‌ಗಳಿಗೆ ರನ್ ಮಳೆ ಸುರಿಸುವ ಸಾಧ್ಯತೆಗಳಿವೆ. ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಆಟಗಾರರ ಪೈಕಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಯಾವ ಆಟಗಾರ ಹೆಚ್ಚು ರನ್ ಬಾರಿಸಿದ್ದಾರೆ ಎಂಬುದನ್ನು ತಿಳಿಯಲು ಐಪಿಎಲ್ ಇತಿಹಾಸದ ಕಡೆಗೆ ಕಣ್ಣು ಹಾಯಿಸಿದರೆ ನಮಗೆ ಸಿಗುವ ಅಂಕಿಅಂಶಗಳು ಈ ಕೆಳಕಂಡಂತೆ ಹೇಳುತ್ತವೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಫಾಫ್ ಡು ಪ್ಲೆಸಿಸ್ ಅಬ್ಬರ

ರಾಜಸ್ಥಾನ್ ರಾಯಲ್ಸ್ ವಿರುದ್ಧ ಫಾಫ್ ಡು ಪ್ಲೆಸಿಸ್ ಅಬ್ಬರ

ರಾಜಸ್ಥಾನ್ ರಾಯಲ್ಸ್ ವಿರುದ್ಧ ಐಪಿಎಲ್ ಇತಿಹಾಸದಲ್ಲಿ 12 ಪಂದ್ಯಗಳನ್ನಾಡಿರುವ ಫಾಫ್ ಡು ಪ್ಲೆಸಿಸ್ 261 ಎಸೆತಗಳನ್ನು ಎದುರಿಸಿ 347 ರನ್ ಬಾರಿಸಿದ್ದಾರೆ. ಫಾಫ್ ಡು ಪ್ಲೆಸಿಸ್ 13 ಸಿಕ್ಸರ್ ಮತ್ತು 27 ಬೌಂಡರಿಗಳನ್ನು ಬಾರಿಸಿದ್ದು 132.95 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.

ಪಿಂಕ್ ಜೆರ್ಸಿ ವಿರುದ್ಧ ಕೊಹ್ಲಿ ಬಾರಿಸಿರುವ ರನ್

ಪಿಂಕ್ ಜೆರ್ಸಿ ವಿರುದ್ಧ ಕೊಹ್ಲಿ ಬಾರಿಸಿರುವ ರನ್

ಐಪಿಎಲ್ ಉದ್ಘಾಟನಾ ಆವೃತ್ತಿಯಿಂದಲೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡುತ್ತಿರುವ ವಿರಾಟ್ ಕೊಹ್ಲಿ ( ಎರಡು ವರ್ಷಗಳನ್ನು ಹೊರತುಪಡಿಸಿ ) 27 ಪಂದ್ಯಗಳಲ್ಲಿ ರಾಜಸ್ತಾನ್ ವಿರುದ್ಧ ಬ್ಯಾಟ್ ಬೀಸಿದ್ದು 512 ಎಸೆತಗಳಲ್ಲಿ 593 ರನ್ ದಾಖಲಿಸಿದ್ದಾರೆ. ವಿರಾಟ್ ಕೊಹ್ಲಿಯವರ ಈ ರನ್‌ಗಳಲ್ಲಿ 47 ಬೌಂಡರಿ ಮತ್ತು 17 ಸಿಕ್ಸರ್ ಸೇರಿದ್ದು 115.82 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ

ರಾಯಲ್ಸ್ ಮೇಲೆ ಡಿಕೆ ಬಾಸ್ ಸವಾರಿ

ರಾಯಲ್ಸ್ ಮೇಲೆ ಡಿಕೆ ಬಾಸ್ ಸವಾರಿ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಪರ ಮಿಂಚಿ ಡಿಕೆ ಬಾಸ್ ಎಂದೇ ಹೆಸರನ್ನು ಮಾಡಿರುವ ದಿನೇಶ್ ಕಾರ್ತಿಕ್ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ 31 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 463 ಎಸೆತಗಳನ್ನು ಎದುರಿಸಿ 625 ರನ್ ಚಚ್ಚಿದ್ದಾರೆ. 25 ಸಿಕ್ಸರ್ ಮತ್ತು 56 ಬೌಂಡರಿಗಳನ್ನು ಬಾರಿಸಿರುವ ದಿನೇಶ್ ಕಾರ್ತಿಕ್ 134.99 ಸ್ಟ್ರೈಕ್ ರೇಟ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಬ್ಯಾಟ್ ಬೀಸಿ ಅಬ್ಬರಿಸಿದ್ದಾರೆ.

Story first published: Saturday, May 28, 2022, 9:45 [IST]
Other articles published on May 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X