ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಆರ್‌ಸಿಬಿ ನಾಯಕನಾಗಲಿದ್ದಾರಾ ವಿರಾಟ್ ಕೊಹ್ಲಿ?: ಅಚ್ಚರಿಯ ಭವಿಷ್ಯ ನುಡಿದ ಆರ್ ಅಶ್ವಿನ್

IPL 2022: R Ashwin big prediction on Virat Kohli, said Kohli would return as captain next season

ಐಪಿಎಲ್ 15ನೇ ಆವೃತ್ತಿಯ ಹಿನ್ನೆಲೆಯಲ್ಲಿ ಆರ್‌ಸಿಬಿ ನೂತನ ನಾಯಕನನ್ನು ಆಯ್ಕೆ ಮಾಡಿದೆ. ವಿರಾಟ್ ಕೊಹ್ಲಿ ಕಳೆದ ಆವೃತ್ತಿಯ ಟೂರ್ನಿ ಅಂತ್ಯವಾದ ಬಳಿಕ ನಾಯಕನಾಗಿ ಮುಂದುವರಿಯುವುದಿಲ್ಲ ಎಂದು ಘೋಷಣೆ ಮಾಡಿದ ನಂತರ ಇತ್ತೀಚೆಗಷ್ಟೇ ಫಾಫ್ ಡು ಪ್ಲೆಸಿಸ್ ಅವರನ್ನು ನಾಯಕ ಎಂದು ಘೋಷಿಸಿದೆ ಆರ್‌ಸಿಬಿ. ಫಾಫ್ ನಾಯಕತ್ವದಲ್ಲಿ ಹೊಸ ಸ್ವರೂಪದಲ್ಲಿ ಆರ್‌ಸಿಬಿ ಮತ್ತೆ ಕಣಕ್ಕಿಳಿಯಲು ಸಂಪೂರ್ಣವಾಗಿ ಸಜ್ಜಾಗಿದೆ.

ಸುದೀರ್ಘ ಕಾಲದ ಬಳಿಕ ವಿರಾಟ್ ಕೊಹ್ಲಿ ನಾಯಕತ್ವವನ್ನು ಹೊರತುಪಡಿಸಿ ಬೇರೊಬ್ಬ ನಾಯಕನ ಮುಂದಾಳತ್ವದಲ್ಲಿ ಆರ್‌ಸಿಬಿ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಭಾರತ ತಂಡದ ಅನುಭವಿ ಆಟಗಾರ, ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಸ್ಪಿನ್ನರ್ ಆರ್ ಅಶ್ವಿನ್ ಕುತೂಹಲಕಾರಿ ಭವಿಷ್ಯ ನುಡಿದಿದ್ದಾರೆ. ಆರ್ ಅಶ್ವಿನ್ ಮಾತು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಖುಷಿ ನೀಡುವಂತಿದೆ.

ಐಪಿಎಲ್ ಶುರುಗೂ ಮೊದಲೇ ಪಂಜಾಬ್ ಕಿಂಗ್ಸ್ ಹಣೆಬರಹ ತಿಳಿಸಿದ ಆಕಾಶ್ ಚೋಪ್ರಾಐಪಿಎಲ್ ಶುರುಗೂ ಮೊದಲೇ ಪಂಜಾಬ್ ಕಿಂಗ್ಸ್ ಹಣೆಬರಹ ತಿಳಿಸಿದ ಆಕಾಶ್ ಚೋಪ್ರಾ

ಒತ್ತಡದಿಂದ ಹೊರಬರಲು ಕೊಹ್ಲಿ ನಿರ್ಧಾರ

ಒತ್ತಡದಿಂದ ಹೊರಬರಲು ಕೊಹ್ಲಿ ನಿರ್ಧಾರ

ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ನಾಯಕತ್ವದಿಂದ ಕೆಳಗಿಳಿಯಲು ಅವರ ಮೇಲಿರುವ ಒತ್ತಡದ ಕಾರಣವಿರಬಹುದು ಎಂದಿದ್ದಾರೆ ಆರ್ ಅಶ್ವಿನ್. ಹೀಗಾಗಿ ವಿರಾಟ್ ಕೊಹ್ಲಿ ಸ್ಟಾಪ್-ಗ್ಯಾಪ್ ಡಿಸಿಸನ್ ತೆಗೆದುಕೊಂಡಿರಬಹುದು. ಒತ್ತಡದಿಂದ ಹೊರಗೆ ಬರುವ ಸಲುವಾಗಿ ವಿರಾಟ್ ಕೊಹ್ಲಿ ನಾಯಕತ್ವದಿಂದ ವಿರಾಮವನ್ನು ತೆಗೆದುಕೊಂಡಿರಬಹುದು ಎಂದಿದ್ದಾರೆ ಆರ್ ಅಶ್ವಿನ್ ಈ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

"ಮತ್ತೆ ಆರ್‌ಸಿಬಿ ನಾಯಕತ್ವ ವಹಿಸಿಕೊಳ್ಳಬಹುದು ಕೊಹ್ಲಿ"

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಆರ್ ಅಶ್ವಿನ್ ಆರ್‌ಸಿಬಿ ತಂಡದ ನಾಯಕತ್ವದ ಬಗ್ಗೆ ಪ್ರಮುಖ ಹೇಳಿಕೆ ನೀಡಿದ್ದಾರೆ. ನನ್ನ ಪ್ರಕಾರ ವಿರಾಟ್ ಕೊಹ್ಲಿ ಒತ್ತಡದ ಕಾರಣದಿಂದಾಗಿ ನಾಯಕತ್ವವನ್ನು ತೊರೆದಿದ್ದಾರೆ. ಹಾಗಾಗಿ ವಿರಾಟ್ ಕೊಹ್ಲಿ ಮುಂದಿನ ಆವೃತ್ತಿಯಲ್ಲಿ ಆರ್‌ಸಿಬಿ ತಂಡವನ್ನು ಮತ್ತೊಮ್ಮೆ ಮುನ್ನಡೆಸಲೂ ಬಹುದು ಎಂದು ಆರ್ ಅಶ್ವಿನ್ ಭವಷ್ಯ ನುಡಿದಿದ್ದಾರೆ. ವಿರಾಟ್ ಕೊಹ್ಲಿ ಬಹುತೇಕ ಒಂದು ದಶಕಗಳ ಕಾಲ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದಾರೆ.

"ವೃತ್ತಿ ಜೀವನದ ಅಂತಿಮ ಘಟ್ಟದಲ್ಲಿದ್ದಾರೆ ಫಾಫ್"

ಆರ್ ಅಶ್ವಿನ್ ವಿರಾಟ್ ಕೊಹ್ಲಿ ಬಗ್ಗೆ ಈ ಭವಿಷ್ಯ ನುಡಿಯಲು ಕಾರಣವೂ ಇದೆ. "ಆರ್‌ಸಿಬಿ ತಂಡದ ನಾಯಕನಾಗಿರುವ ಫಾಫ್ ಡು ಪ್ಲೆಸಿಸ್ ತಮ್ಮ ವೃತ್ತಿ ಜೀವನದ ಅಂತಿಮ ಘಟ್ಟದಲ್ಲಿದ್ದಾರೆ. ಆಟಗಾರನಾಗಿ ಅವರು ಇನ್ನು ಎರಡುರಿಂದ ಮೂರು ವರ್ಷಗಳ ಕಾಲ ಮುಂದುವರಿಯಬಹುದು. ಆತನನ್ನು ಆರ್‌ಸಿಬಿ ನಾಯಕನನ್ನಾಗಿ ಆಯ್ಕೆ ಮಾಡಿದ್ದು ನಿಜಕ್ಕೂ ಉತ್ತಮವಾದ ನಿರ್ಧಾರ. ಆತ ಅನುಭವಿ ಆಟಗಾರನಾಗಿರುವ ಕಾರಣ ಆತನ ಅನುಭವ ಆರ್‌ಸಿಬಿ ತಂಡಕ್ಕೆ ದೊಡ್ಡ ಮಟ್ಟದಲ್ಲಿ ನೆರವು ನೀಡಲಿದೆ. ಕಳೆದ ಕೆಲ ವರ್ಷಗಳಿಂದ ನಾಯಕನಾಗಿ ಸಾಕಷ್ಟು ಒತ್ತಡವನ್ನು ಅನುಭವಿಸಿದ ಕಾರಣದಿಂದಾಗಿ ವಿರಾಟ್ ಈ ಬಾರಿ ನಾಯಕತ್ವದಿಂದ ವಿರಾಮವನ್ನು ಪಡೆದುಕೊಂಡಿರಬಹುದು. ಆರ್‌ಸಿಬಿ ಮುಂದಿನ ವರ್ಷ ವಿರಾಟ್ ಕೊಹ್ಲಿಯನ್ನೇ ಮತ್ತೆ ನಾಯಕನನ್ನಾಗಿ ಮುಂದುವರಿಸಲೂಬಹುದು" ಎಂದಿದ್ದಾರೆ ಆರ್ ಅಶ್ವಿನ್.

ಮೆಗಾ ಹರಾಜಿನಲ್ಲಿ ಆರ್‌ಸಿಬಿ ಪಾಲಾದ ಫಾಫ್ ಡು ಪ್ಲೆಸಿಸ್

ಮೆಗಾ ಹರಾಜಿನಲ್ಲಿ ಆರ್‌ಸಿಬಿ ಪಾಲಾದ ಫಾಫ್ ಡು ಪ್ಲೆಸಿಸ್

ಕಳೆದ ಒಂದು ದಶಕಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಕಣಕ್ಕಿಳಿಯುತ್ತಿದ್ದ ಫಾಫ್ ಡು ಪ್ಲೆಸಿಸ್ ಈ ಬಾರಿಯ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಪಾಲಾಗಿದ್ದಾರೆ. 7 ಕೋಟಿಗೆ ಆರ್‌ಸಿಬಿ ಫಾಫ್ ಡು ಪ್ಲೆಸಿಸ್ ಅವರನ್ನು ಸೇರ್ಪಡೆಗೊಳಿಸಿದೆ. ನಂತರ ಫಾಫ್ ಅವರನ್ನು ತಂಡದ ನಾಯಕನನ್ನಾಗಿಯೂ ಘೋಷಣೆ ಮಾಡಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ಸ್ಕ್ವಾಡ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ಸ್ಕ್ವಾಡ್

1. ವಿರಾಟ್ ಕೊಹ್ಲಿ, 2. ಗ್ಲೆನ್ ಮ್ಯಾಕ್ಸ್‌ವೆಲ್, 3. ಮೊಹಮ್ಮದ್ ಸಿರಾಜ್, 4. ಹರ್ಷಲ್ ಪಟೇಲ್, 5. ಫಾಫ್ ಡು ಪ್ಲೆಸಿಸ್, 6. ವನಿಂದು ಹಸರಂಗ, 7. ದಿನೇಶ್ ಕಾರ್ತಿಕ್, 8. ಜೋಶ್ ಹ್ಯಾಜಲ್‌ವುಡ್, 9. ಶಹಬಾಜ್ ಅಹಮದ್, 10. ಅನುಜ್ ರಾವತ್, 11. ಆಕಾಶ್ ದೀಪ್, 12. ಮಹಿಪಾಲ್ ಲೊಮ್ರೋರ್, 13. ಫಿನ್ ಅಲೆನ್, 14. ಶೆರ್ಫೇನ್ ರುದರ್‌ಫೋರ್ಡ್, 15. ಜೇಸನ್ ಬೆಹ್ರೆನ್‌ಡಾರ್ಫ್, 16. ಸುಯಶ್ ಪ್ರಭುದೇಸಾಯಿ, 17. ಚಾಮಾ ಮಿಲಿಂದ್, 18. ಶರ್ಮಾ, ಕರ್ನ್, ಅನೆ. 20. ಸಿದ್ಧಾರ್ಥ್ ಕೌಲ್, 21. ಲುವ್ನಿತ್ ಸಿಸೋಡಿಯಾ, 22. ಡೇವಿಡ್ ವಿಲ್ಲಿ.

Story first published: Wednesday, March 23, 2022, 13:13 [IST]
Other articles published on Mar 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X