ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಬೌಲರ್‌ಗಳಿಗೆ ಔಟ್ ಆಗುವುದು ಅವರಿಬ್ಬರಿಗೂ ಇಷ್ಟವಿಲ್ಲ: ಅಶ್ವಿನ್ ಬಿಚ್ಚಿಟ್ರು ಕುತೂಹಲಕಾರಿ ಸಂಗತಿ!

IPL 2022: R Ashwin said 2 star Cricketers of Team India dont like getting out to bowlers inside the team

ಇಂಡಿಯನ್ ಪ್ರೀಮಿಯರ್ ಲೀಗ್. ವಿಶ್ವ ಕ್ರಿಕೆಟ್‌ನಲ್ಲಿ ಎದುರಾಳಿಗಳಾಗಿ ಆಡುವ ಆಟಗಾರರು ಈ ವೇದಿಕೆಯಲ್ಲಿ ಒಂದೇ ತಂಡದಲ್ಲಿ ಆಡುತ್ತಾರೆ. ಒಂದೇ ತಂಡದಲ್ಲಿ ಆಡುವ ಆಟಗಾರರು ಐಪಿಎಲ್‌ನಲ್ಲಿ ಬದ್ಧ ಎದುರಾಳಿಗಳಾಗಿ ಮುಖಾಮುಖಿಯಾಗುತ್ತಾರೆ. ಈ ಕಾರಣಕ್ಕೆ ಈ ಟೂರ್ನಿ ಹೆಚ್ಚು ಅಭಿಮಾನಿಗಳ ಮನ ಗೆದ್ದಿದೆ. 15ನೇ ಆವೃತ್ತಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಭಾರತೀಯ ತಂಡದೊಳಗಿನ ಆಟಗಾರರ ವಿಚಾರವಾಗಿ ಕುತೂಹಲಕಾರಿ ಸಂಗತಿಯೊಂದನ್ನು ಹಿರಿಯ ಕ್ರಿಕೆಟಿಗ ಆರ್ ಅಶ್ವಿನ್ ಬಿಚ್ಚಿಟ್ಟಿದ್ದಾರೆ.

ಟೀಮ್ ಇಂಡಿಯಾ ಒಟ್ಟಾಗಿ ಆಡುತ್ತಿರುವ ಎಲ್ಲಾ ಆಟಗಾರರು ಐಪಿಎಲ್‌ನಲ್ಲಿ ಎಲ್ಲಾ 10 ತಂಡಗಳಲ್ಲಿ ಹಂಚಿ ಹೋಗಿದ್ದಾರೆ. ಈ ಆಟಗಾರರ ನಡುವಿನ ಸೆಣೆಸಾಟವೂ ಸಾಕಷ್ಟು ಕುತೂಹಲಕಾರಿಯಾಗಿದೆ. ಯಾವ ಆಟಗಾರರ ವಿರುದ್ಧ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದು ಕುತೂಹಲಕಾರಿ ಅಂಶ. ಅದರಲ್ಲೂ ಟೀಮ್ ಇಂಡಿಯಾದ ಇಬ್ಬರು ಪ್ರಮುಖ ಸ್ಟಾರ್ ಆಟಗಾರರು ಭಾರತೀಯ ತಂಡದೊಳಗಿನ ಬೌಲರ್‌ಗಳಿಗೆ ವಿಕೆಟ್ ಒಪ್ಪಿಸುವುದನ್ನು ಯಾವುದೇ ಕಾರಣಕ್ಕೂ ಇಷ್ಟಪಡುವುದಿಲ್ಲ ಎಂದು ಆರ್ ಅಶ್ವಿನ್ ಬಹಿರಂಗಪಡಿಸಿದ್ದಾರೆ.

ಐಪಿಎಲ್‌ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಆರಂಭಿಕ ಎರಡು ಪಂದ್ಯ ಸೋತ ಸಿಎಸ್‌ಕೆಐಪಿಎಲ್‌ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಆರಂಭಿಕ ಎರಡು ಪಂದ್ಯ ಸೋತ ಸಿಎಸ್‌ಕೆ

ಆ ಇಬ್ಬರು ಆಟಗಾರರಿಗೆ ಬೌಲಿಂಗ್ ಮಾಡುವುದೆಂದರೆ ಇಷ್ಟ: ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಐಪಿಎಲ್‌ನಲ್ಲಿ ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ಸದಸ್ಯರಾಗಿದ್ದಾರೆ. ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಬೌಲಿಂಗ್ ಮಾಡುವುದೆಂದರೆ ಬಹಳ ಇಷ್ಟ ಎಂದಿದ್ದಾರೆ ಆರ್ ಅಶ್ವಿನ್. ಇದೇ ಸಂದರ್ಭದಲ್ಲಿ ಅವರು ಈ ಇಬ್ಬರು ಆಟಗಾರರ ಬಗ್ಗೆ ಕುತೂಹಲಕಾರಿ ಅಂಶವನ್ನು ಬಹಿರಂಗಪಡಿಸಿದ್ದಾರೆ.

ಟೀಮ್ ಇಂಡಿಯಾದೊಳಗಿನ ಆಟಗಾರರಿಗೆ ವಿಕೆಟ್ ಒಪ್ಪಿಸುವುದು ಇಷ್ಟವಿಲ್ಲ: ಭಾರತೀಯ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಹಾಲಿ ನಾಯಕ ರೋಹಿತ್ ಶರ್ಮಾ ಬಗ್ಗೆಯೇ ಆರ್ ಅಶ್ವಿನ್ ಈ ಕುತೂಹಲಕಾರಿ ಅಂಶವನ್ನು ಬಿಚ್ಚಿಟ್ಟಿದ್ದಾರೆ. ಇಬ್ಬರು ಆಟಗಾರರು ಕೂಡ ಭಾರತೀಯ ತಂಡದಲ್ಲಿರುವ ಬೌಲರ್‌ಗಳಿಗೆ ವಿಕೆಟ್ ಒಪ್ಪಿಸುವುದನ್ನು ಇಷ್ಟಪಡುವುದಿಲ್ಲ ಎಂದಿದ್ದಾರೆ ಆರ್ ಅಶ್ವಿನ್.

"ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿರುದ್ಧ ಆಡುವುದೆಂದರೆ ನನಗೆ ಬಹಳ ಇಷ್ಟ. ಭಾರತ ಡ್ರೆಸ್ಸಿಂಗ್‌ರೂಮ್‌ನಲ್ಲಿರುವ ಇಬ್ಬರು ಉತ್ಕೃಷ್ಟ ಗುಣಮಟ್ಟದ ಆಟಗಾರರು ಇವರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಇಬ್ಬರು ಗುಣಮಟ್ಟದ ಆಟಗಾರರ ವಿರುದ್ಧ ಆಡುವ ಅವಕಾಶ ನನಗೆ ದೊರೆತಿಲ್ಲ. ಆದರೆ ಐಪಿಎಲ್‌ನಲ್ಲಿ ಇವರಿಬ್ಬರ ವಿರುದ್ಧ ಆಡುವುದು ನನಗೆ ಬಹಳ ಇಷ್ಟ. ಅವರಿಬ್ಬರು ಕೂಡ ಭಾರತ ತಂಡದೊಳಗಿನ ಆಟಗಾರರಿಗೆ ವಿಕೆಟ್ ಒಪ್ಪಿಸುವುದನ್ನು ಇಷ್ಟಪಡುವುದಿಲ್ಲ. ಹಾಗಾಗಿ ಅವರೊಮದಿಗಿನ ಸೆಣೆಸಾಟವನ್ನು ನಾನು ಪ್ರತಿ ಆವೃತ್ತಿಯಲ್ಲಿಯೂ ಆನಂದಿಸುತ್ತೇನೆ" ಎಂದಿ ಆರ್ ಅಶ್ವಿನ್ ವಿವರಿಸಿದ್ದಾರೆ.

Aus vs Pak 2nd ODI :ಏಕದಿನ ಕ್ರಿಕೆಟ್‌ನಲ್ಲಿ ತನ್ನದೇ ದಾಖಲೆ ಮುರಿದ ಪಾಕಿಸ್ತಾನ: ಆಸ್ಟ್ರೇಲಿಯಾ ವಿರುದ್ಧ ಬೃಹತ್ ಜಯAus vs Pak 2nd ODI :ಏಕದಿನ ಕ್ರಿಕೆಟ್‌ನಲ್ಲಿ ತನ್ನದೇ ದಾಖಲೆ ಮುರಿದ ಪಾಕಿಸ್ತಾನ: ಆಸ್ಟ್ರೇಲಿಯಾ ವಿರುದ್ಧ ಬೃಹತ್ ಜಯ

ಅಭಿಮಾನಿಗಳ ದೃಷ್ಟಿಕೋನದಿಂದಲೂ ಈ ಸ್ಟಾರ್ ಆಟಗಾರರ ನಡುವಿನ ಸೆಣೆಸಾಟದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈ ಸೆಣೆಸಾಟದ ಕುತೂಹಲಕ್ಕೆ ತೆರೆ ಬೀಳುವ ಕ್ಷಣವೂ ಹತ್ತಿರವಾಗುತ್ತಿದೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈಉ ಇಂಡಿಯನ್ಸ್ ತಂಡ ಹಾಗೂ ಆರ್ ಅಶ್ವಿನ್ ಸದಸ್ಯರಾಗಿರುವ ರಾಜಸ್ಥಾನ್ಗ ರಾಯಲ್ಸ್ ತಂಡಗಳು ಏಪ್ರಿಲ್ 2 ಶನಿವಾರದಂದು ನಡೆಯಲಿದ್ದು ರೋಹಿತ್ ಹಾಗೂ ಅಶ್ವಿನ್ ನೆಣೆಸಾಟದಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಪಂದ್ಯ ನಡೆದ ಮೂರು ದಿನಗಳ ಬಳಿಕ ಆರ್‌ಸಿಬಿ ವಿರುದ್ಧ ಆರ್‌ಆರ್ ಪಂದ್ಯ ನಡೆಯಲಿದ್ದು ಕೊಹ್ಲಿ vs ಅಶ್ವಿನ್ ಮುಖಾಮುಖಿ ನಡೆಯಲಿದೆ.

Story first published: Saturday, April 2, 2022, 10:16 [IST]
Other articles published on Apr 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X