ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ಗುಜರಾತ್ ಟೈಟನ್ಸ್ ತಂಡದ ಯಶಸ್ಸಿನ ಗುಟ್ಟು ಬಹಿರಂಗಗೊಳಿಸಿದ ರಾಹುಲ್ ತೆವಾಟಿಯಾ

IPL 2022: Rahul Tewatia revealed reason for Gujarat Titans success in IPL 2022

ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಗುಜರಾತ್ ಟೈಟನ್ಸ್ ತಂಡ ಫೈನಲ್ ಹಂತಕ್ಕೆ ಪ್ರವೇಶ ಪಡೆದ ಮೊದಲ ತಂಡ ಎನಿಸಿದೆ. ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಗುಜರಾತ್ ಟೈಟನ್ಸ್ ತಂಡ ಟೂರ್ನಿಯ ಆರಂಭಕ್ಕೂ ಮುನ್ನ ಯಾವುದೇ ನಿರೀಕ್ಷೆ ಮೂಡಿಸದೆ ಇದ್ದ ಜಿಟಿ ತಂಡ ಟೂರ್ನಿ ಆರಂಭವಾಗುತ್ತಿದ್ದಂತೆಯೇ ಅಮೋಘ ಪ್ರದರ್ಶನ ನೀಡುತ್ತಾ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಅದಕ್ಕೆ ಪೂರಕವಾಗಿ ಈಗ ಫೈನಲ್ ಪ್ರವೇಶಿಸಿದ್ದು ಮೊದಲ ಆವೃತ್ತಿಯಲ್ಲಿಯೇ ಚಾಂಪಿಯನ್ ಪಟ್ಟಕ್ಕೇರುವ ಆತ್ಮವಿಶ್ವಾಸದಲ್ಲಿದೆ.

ಭಾನುವಾರ ಈ ಐಪಿಎಲ್‌ನ ಫೈನಲ್ ಪಂದ್ಯ ನಡೆಯಲಿದ್ದು ಶುಕ್ರವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡ ಗುಜರಾತ್ ಟೈಟನ್ಸ್ ವಿರುದ್ಧ ಫೈನಲ್ ಪಂದ್ಯವನ್ನು ಆಡಲಿದೆ. ಈ ಮುಖಾಮುಖಿಗೂ ಮುನ್ನ ಗುಜರಾತ್ ಟೈಟನ್ಸ್ ತಂಡದ ಆಲ್‌ರೌಂಡರ್ ರಾಹುಲ್ ತೆವಾಟಿಯಾ ಕುತೂಹಲಕಾರಿ ಅಂಶವೊಂದನ್ನು ಹಂಚಿಕೊಂಡಿದ್ದಾರೆ. ಚೊಚ್ಚಲ ಆವೃತ್ತಿಯಲ್ಲಿ ಜಿಟಿ ತಂಡದ ಯಶಸ್ಸಿಗೆ ಕಾರಣವಾದ ಪ್ರಮುಖ ಅಂಶವೊಂದನ್ನು ರಾಹುಲ್ ತೆವಾಟಿಯಾ ಬಹಿರಂಗಪಡಿಸಿದ್ದಾರೆ.

RCB vs RR: ಗೆಲ್ಲಲೇಬೇಕಾದ ಪಂದ್ಯದಲ್ಲಿ ಆರ್‌ಸಿಬಿಗೆ ಕಂಠಕವಾಗುತ್ತಾರಾ ಈ 3 ತನ್ನದೇ ಮಾಜಿ ಆಟಗಾರರು!RCB vs RR: ಗೆಲ್ಲಲೇಬೇಕಾದ ಪಂದ್ಯದಲ್ಲಿ ಆರ್‌ಸಿಬಿಗೆ ಕಂಠಕವಾಗುತ್ತಾರಾ ಈ 3 ತನ್ನದೇ ಮಾಜಿ ಆಟಗಾರರು!

ತಂಡದ ಯಶಸ್ಸಿಗೆ ಸಾಂಘಿಕ ಪ್ರದರ್ಶನ ಕಾರಣ

ತಂಡದ ಯಶಸ್ಸಿಗೆ ಸಾಂಘಿಕ ಪ್ರದರ್ಶನ ಕಾರಣ

ಐಪಿಎಲ್ 15ನೇ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡ ಈವರೆಗೆ ಯಶಸ್ಸು ಸಾಧಿಸಿದ್ದು ಇದಕ್ಕೆ ತಂಡದ ಸಾಂಘಿಕ ಪ್ರದರ್ಶನ ಕಾರಣ ಎಂದಿದ್ದಾರೆ. ಅಲ್ಲದೆ ಹಾರ್ದಿಕ್ ಪಾಂಡ್ಯ ನಾಯಕತ್ವ ಹಾಗೂ ಆಶಿಶ್ ನೆಹ್ರಾ ಕೋಚ್ ಆಗಿ ತಂಡವನ್ನು ಮುನ್ನಡೆಸಿದ ರೀತಿ ಎಲ್ಲರಿಗೂ ಅಚ್ಚರಿಯ ಸಂಗತಿಯಾಗಿದೆ ಎಂದಿದ್ದಾರೆ ರಾಹುಲ್ ತೆವಾಟಿಯಾ.

ಯಶಸ್ಸಿಗೆ ಕಾರಣ ತಿಳಿಸಿದ ತೆವಾಟಿಯಾ

ಯಶಸ್ಸಿಗೆ ಕಾರಣ ತಿಳಿಸಿದ ತೆವಾಟಿಯಾ

ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ರಾಹುಲ್ ತೆವಾಟಿಯಾ ತಂಡದ ಯಶಸ್ಸಿಗೆ ಖಾರಣವಾದ ಒಂದು ಪ್ರಮುಖ ಅಂಶವನ್ನು ಬಹಿರಂಗಪಡಿಸಿದ್ದಾರೆ. "ನಮ್ಮ ತಂಡ ಯಾವುದೇ ಒಬ್ಬ ಆಟಗಾರನ ಮೇಲೆ ಅವಲಂಬಿತವಾಗಿಲ್ಲ. ಇಡೀ ತಂಡವಾಗಿ ನಾವು ಆಡುತ್ತಿದ್ದೇವೆ. ಆ ಕಾರಣದಿಂದಾಗಿಯೇ ನಾವು ಟೂರ್ನಿಯಲ್ಲಿ ಯಶಸ್ಸು ಸಾಧಿಸಿದೆವು. ತಂಡದ ವಾತಾವರಣ ಬಹಳ ನಿರಾಳವಾಗಿದ್ದು ಎಲ್ಲರು ಉತ್ಸಾಹದಿಂದಿದ್ದಾರೆ. ಈ ಕಾರಣದಿಂದಾಗಿಯೇ ಈ ರೀತಿಯ ಪ್ರದರ್ಶನ ನೀಡಲು ಸಾಧ್ಯವಾಯಿತು" ಎಂದಿದ್ದಾರೆ ರಾಹುಲ್ ತೆವಾಟಿಯಾ.

ಉತ್ತಮ ಪ್ರದರ್ಶನ ನೀಡಿ ಮಿಂಚಿರುವ ತೆವಾಟಿಯಾ

ಉತ್ತಮ ಪ್ರದರ್ಶನ ನೀಡಿ ಮಿಂಚಿರುವ ತೆವಾಟಿಯಾ

ಈ ಬಾರಿಯ ಐಪಿಎಲ್‌ನಲ್ಲಿ ರಾಹುಲ್ ತೆವಾಡಿಯಾ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದಾರೆ. 12 ಇನ್ನಿಂಗ್ಸ್‌ಗಳಲ್ಲಿ ಆಡಿರುವ ತೆವಾಟಿಯಾ ಕೆಳ ಕ್ರಮಾಂಕದಲ್ಲಿ ಕೆಲ ಅದ್ಭುತ ಪ್ರದರ್ಶನಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 217 ರನ್‌ಗಳನ್ನು ಗಳಿಸಿರುವ ತೆವಾಟಿಯಾ 147.62 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದು ಕೆಲ ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸುವಂತಾ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. ಇನ್ನು ಒತ್ತಡದ ಸಂದರ್ಭದಲ್ಲಿಯೂ ಬ್ಯಾಟಿಂಗ್ ನಡೆಸಿ ಮಿಂಚಿರುವ ತೆವಾಡಿಯಾ "ನಾನು ಒತ್ತಡದಲ್ಲಿ ಆಡುವುದನ್ನು ಇಷ್ಟಪಡುತ್ತೇನೆ. ಆ ಸಂದರ್ಭದಲ್ಲಿ ನನ್ನಿಂದ ಅತ್ಯುತ್ತಮ ಪ್ರದರ್ಶನ ಬರುತ್ತದೆ" ಎಂದಿದ್ದಾರೆ.

ಟೀಮ್ ಇಂಡಿಯಾ ಪರ ಆಡುವ ಕನಸು

ಟೀಮ್ ಇಂಡಿಯಾ ಪರ ಆಡುವ ಕನಸು

ಇನ್ನು ಈ ಸಂದರ್ಭದಲ್ಲಿ ರಾಹುಲ್ ತೆವಾಟಿಯಾ ಭಾರತ ತಂಡದ ಪರವಾಗಿ ಆಡುವ ತಮ್ಮ ಕನಸನ್ನು ಹಂಚಿಕೊಂಡಿದ್ದಾರೆ. ತನ್ನ ಕರ್ತವ್ಯವನ್ನು ತಾನು ಮುಂದೆಯೂ ಹೀಗೆಯೇ ನಿರ್ವಹಿಸಲಿದ್ದು ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ದೊರೆಯುವ ವಿಶ್ವಾಸವಿದೆ ಎಂದಿದ್ದಾರೆ. ನಂತರ ಈ ಬಾರಿಯ ಐಪಿಎಲ್ ಟೂರ್ನಿಯುದ್ದಕ್ಕೂ ತಮ್ಮ ತಂಡಕ್ಕೆ ಹಾಗೂ ತಮಗೆ ಬೆಂಬಲ ನೀಡಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದವನ್ನು ತಿಳಿಸಿದ್ದಾರೆ.

Story first published: Saturday, May 28, 2022, 9:45 [IST]
Other articles published on May 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X