ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಮ್ಮ ಆಟಗಾರರ ಬಗ್ಗೆ ತುಂಬಾ ಭರವಸೆಯಿದೆ: ಮುಂಬೈ ವಿರುದ್ಧ ಡೆಲ್ಲಿ ಗೆಲ್ಲಲಿದೆ ಎಂದ ಪಾಂಟಿಂಗ್

IPL 2022: Ricky Ponting confident of Delhi Capitals players said I have got full confidence in the players

ಶನಿವಾರ ನಡೆಯಲಿರುವ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದ್ದು ಎರಡು ತಂಡಗಳ ಭವಿಷ್ಯ ಈ ಪಂದ್ಯದಲ್ಲಿ ನಿರ್ಧಾರವಾಗಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೊತೆಗೆ ಆರ್‌ಸಿಬಿ ತಂಡಕ್ಕೆ ಕೂಡ ಈ ಪಂದ್ಯ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಮಾತ್ರವೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂದಿನ ಹಂತಕ್ಕೇರಲಿದೆ. ಹೀಗಾಗಿ ತಮ್ಮ ತಂಡದ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

" ನಮ್ಮ ತಂಡದ ಆಟಗಾರರು ಶನಿವಾರ ಅದ್ಭುತ ಪ್ರದರ್ಶನ ನೀಡಲಿದ್ದಾರೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ಈ ಹಿಂದಿನ ಪಂದ್ಯವನ್ನು ಗೆಲ್ಲುವ ಮೂಲಕ ನಾವು ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಸತತ ಎರಡು ಗೆಲುವು ಸಾಧಿಸಿದ್ದೇವೆ. ಈ ಆವೃತ್ತಿಯಲ್ಲಿ ನಾವು ಸಾಕಷ್ಟು ಏರಿಳಿತವನ್ನು ಕಂಡಿದ್ದರೂ ನಾವು ಕೆಲ ಉತ್ತಮ ಕ್ರಿಕೆಟ್ ಆಡಿದ್ದೇವೆ. ನಾನು ಅಂತಿಮವಾಗಿ ಯಾವಾಗಲೂ ಅತ್ಯುತ್ತಮ ಕ್ರಿಕೆಟ್ ಆಡುವ ಬಗ್ಗೆ ಹಾಗೂ ಸೂಕ್ತ ಸಮಯದಲ್ಲಿ ಉನ್ನತ ಮಟ್ಟಕ್ಕೇರುವ ಬಗ್ಗೆ ಮಾತನಾಡುತ್ತೇನೆ. ನಾಳಿನ ಪಂದ್ಯದಲ್ಲಿ ನಮ್ಮ ತಂಡದ ಆಟಗಾರರಿಂದ ಆ ಪ್ರದರ್ಶನ ಬರುವ ವಿಶ್ವಾಸವನ್ನು ಹೊಂದಿದ್ದೇನೆ" ಎಂದಿದ್ದಾರೆ ರಿಕಿ ಪಾಂಟಿಂಗ್.

IPL 2022ರ ಪ್ಲೇಆಫ್ ಅರ್ಹತೆ ಸನ್ನಿವೇಶ ಹೇಗಿದೆ?; DC ವಿರುದ್ಧ MI ಗೆಲ್ಲಲು RCB ಅಭಿಮಾನಿಗಳ ಪ್ರಾರ್ಥನೆIPL 2022ರ ಪ್ಲೇಆಫ್ ಅರ್ಹತೆ ಸನ್ನಿವೇಶ ಹೇಗಿದೆ?; DC ವಿರುದ್ಧ MI ಗೆಲ್ಲಲು RCB ಅಭಿಮಾನಿಗಳ ಪ್ರಾರ್ಥನೆ

ಇನ್ನು ನಿರ್ಣಾಯಕ ಸಂದರ್ಭದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಪಾಂಟಿಂಗ್ ಈ ಸಂದರ್ಭದಲ್ಲಿ ಪ್ರಶಂಸಿಸಿದ್ದಾರೆ. ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ಕುಲ್ದೀಪ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್ ಅವರಿಂದ ನಿರ್ಣಾಯಕ ಹಂತದಲ್ಲಿ ಬಂದ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಡೇವಿಡ್ ವಾರ್ನರ್ ಈ ಆವೃತ್ತಿಉಲ್ಲಿ ಈವರೆಗೆ 427 ರನ್‌ಗಳನ್ನು ಗಳಿಸಿದ್ದು ಈ ಆವೃತ್ತಿಯಲ್ಲಿ ಡೆಲ್ಲಿ ಪರವಾಗಿ ಗಳಿಸಿದ ಅತಿ ಹೆಚ್ಚಿನ ಸ್ಕೋರ್ ಆಗಿದೆ. ವಾರ್ನರ್ 53.37ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದು ಐದು ಅರ್ಧ ಶತಕ ದಾಖಲಿಸಿದ್ದಾರೆ.

ಮತ್ತೊಂದೆಡೆ ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ ಮಿಂಚಿದ್ದು 20 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 8.45 ಅವರ ಎಕಾನಮಿ ರೇಟ್ ಆಗಿದೆ. ಇನ್ನು ಮಾರ್ಶ್ ಹಾಗೂ ಶಾರ್ದೂಲ್ ಠಾಕೂರ್ ಕೂಡ ತಂಡಕ್ಕೆ ಅಗತ್ಯವಿರುವ ಸಂದರ್ಭಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ.

"ಅಗ್ರ ಕ್ರಮಾಂಕದಲ್ಲಿ ಡೇವಿ(ವಾರ್ನರ್) ನಿಜಕ್ಕೂ ಅದ್ಭುತವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಮಿಚೆಲ್ ಮಾರ್ಶ್ ಕೂಡ ಎಷ್ಟು ವಿಧ್ವಂಸಕಾರಿ ಪ್ರದರ್ಶನ ನಿಡಿದರು ಎಂಬುದನ್ನು ನಾವು ಗಮನಿಸಿದ್ದೇವೆ. ಇನ್ನು ಬೌಲರ್‌ಗಳ ಪೈಕಿ ಕುಲ್ದೀಪ್ ವಿಶೇಷ ಪ್ರದರ್ಶನ ನೀಡಿದ್ದಾರೆ. ಅಕ್ಷರ್ ಪಟೇಲ್ ಎಕನಾಮಿಕಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ಶಾರ್ದೂಲ್ ಕೂ ಉತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ" ಎಂದು ತಂಡದ ಆಟಗಾರರ ಬಗ್ಗೆ ಪಾಂಟಿಂಗ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕಿಂಗ್ ಇಸ್ ಬ್ಯಾಕ್: ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ; ಟ್ವಿಟ್ಟರ್‌ನಲ್ಲಿ ಶ್ಲಾಘಿಸಿದ ಮಾಜಿ ಆಟಗಾರರುಕಿಂಗ್ ಇಸ್ ಬ್ಯಾಕ್: ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ; ಟ್ವಿಟ್ಟರ್‌ನಲ್ಲಿ ಶ್ಲಾಘಿಸಿದ ಮಾಜಿ ಆಟಗಾರರು

ಶನಿವಾರ ನಡೆಯಲಿರುವ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಅಭಿಮಾನಿಗಳ ಜೊತೆಗೆ ಆರ್‌ಸಿಬಿ ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ. ಡೆಲ್ಲಿ ಕ್ಯಾಫಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿದರೆ ಈ ಆವೃತ್ತಿಯಲ್ಲಿ ಆರ್‌ಸಿಬಿ ಪ್ಲೇಆಫ್‌ಗೇರುವುದು ಖಚಿತವಾಗಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಶನಿವಾರದ ಪಂದ್ಯದಲ್ಲಿ ಆರ್‌ಸಿಬಿಗೆ ಸೋಲುವುದು ಅನಿವಾರ್ಯವಾಗಿದೆ.

ಮುಂಬೈ ಇಂಡಿಯನ್ಸ್ ಸ್ಕ್ವಾಡ್‌: ರೋಹಿತ್ ಶರ್ಮಾ, ಕೀರನ್ ಪೊಲಾರ್ಡ್, ಜಸ್ಪ್ರೀತ್ ಬುಮ್ರಾ, ಇಶಾನ್ ಕಿಶನ್, ರಮಣ್‌ದೀಪ್ ಸಿಂಗ್, ರಾಹುಲ್ ಬುದ್ಧಿ, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಆರ್ಯನ್ ಜುಯಲ್, ಫ್ಯಾಬಿಯನ್ ಅಲೆನ್, ಡೆವಾಲ್ಡ್ ಬ್ರೆವಿಸ್, ಬಾಸಿಲ್ ಥಂಪಿ, ಎಂ ಅಶ್ವಿನ್, ಜಯದೇವ್ ಉನದ್ಕತ್, ಮಯಾಂಕ್ ಮರ್ಕಂಡೆ, ತಿಲಕ್ ಮಾರ್ಕಂಡೆ , ಸಂಜಯ್ ಯಾದವ್, ರಿಲೆ ಮೆರೆಡಿತ್, ಮೊಹಮ್ಮದ್ ಅರ್ಷದ್ ಖಾನ್, ಅನ್ಮೋಲ್ಪ್ರೀತ್ ಸಿಂಗ್, ಟ್ರಿಸ್ಟನ್ ಸ್ಟಬ್ಸ್

ವಿರಾಟ್ ಒಂಥರಾ ಸ್ಪೆಷಲ್ ವ್ಯಕ್ತಿ !! | OneIndia Kannada

ಡೆಲ್ಲಿ ಕ್ಯಾಪಿಟಲ್ಸ್ ಸ್ಕ್ವಾಡ್‌: ರಿಷಬ್ ಪಂತ್ (ನಾಯಕ & ವಿಕೆಟ್ ಕೀಪರ್), ಪೃಥ್ವಿ ಶಾ, ಟಿಮ್ ಸೀಫರ್ಟ್, ಮನ್‌ದೀಪ್ ಸಿಂಗ್, ಲಲಿತ್ ಯಾದವ್, ರೋವ್‌ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಅಶ್ವಿನ್ ಹೆಬ್ಬಾರ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶ್ರೀಕರ್, ಭರತ್ ಸರ್ಫರಾಜ್ ಖಾನ್, ಲುಂಗಿ ಎನ್‌ಗಿಡಿ, ಪ್ರವೀಣ್ ದುಬೆ, ಅನ್ರಿಚ್ ನಾರ್ಟ್ಜೆ, ಕಮಲೇಶ್ ನಾಗರಕೋಟಿ, ಚೇತನ್ ಸಕರಿಯಾ, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಒಸ್ತ್ವಾಲ್

Story first published: Saturday, May 21, 2022, 8:51 [IST]
Other articles published on May 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X