ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

92 ರನ್ ಬಾರಿಸಿ ಶತಕದ ಸನಿಹದಲ್ಲಿದ್ದ ವಾರ್ನರ್‌ಗೆ ಬ್ಯಾಟಿಂಗ್ ನೀಡದ ಕುರಿತು ತುಟಿಬಿಚ್ಚಿದ ಪೊವೆಲ್!

IPL 2022: Rovman Powell Reveals Why he didnt gave the strike to David Warner in the last over vs SRH

ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 51ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸಿದವು. ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 21 ರನ್‌ಗಳ ಗೆಲುವನ್ನು ಸಾಧಿಸಿದೆ. ಬ್ರಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 207 ರನ್ ಬಾರಿಸಿ ಎದುರಾಳಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲ್ಲಲು 208 ರನ್‌ಗಳ ಗುರಿಯನ್ನು ನೀಡಿತು. ಇನ್ನು ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿ ಸೋಲನ್ನು ಅನುಭವಿಸಿತು.

GT vs MI: ಈ ಮೈಲಿಗಲ್ಲುಗಳ ಮೇಲೆ ರೋಹಿತ್, ಇಶಾನ್ ಕಿಶನ್ ಮತ್ತು ರಶೀದ್ ಖಾನ್ ಕಣ್ಣುGT vs MI: ಈ ಮೈಲಿಗಲ್ಲುಗಳ ಮೇಲೆ ರೋಹಿತ್, ಇಶಾನ್ ಕಿಶನ್ ಮತ್ತು ರಶೀದ್ ಖಾನ್ ಕಣ್ಣು

ಇನ್ನು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಆಟಗಾರರಾಗಿ ಮನ್‌ದೀಪ್ ಸಿಂಗ್ ಮತ್ತು ಡೇವಿಡ್ ವಾರ್ನರ್ ಕಣಕ್ಕಿಳಿದರು. ಈ ಪೈಕಿ ಮನ್‌ದೀಪ್ ಸಿಂಗ್ 5 ಎಸೆತಗಳಲ್ಲಿ ಶೂನ್ಯ ರನ್ ಕಲೆಹಾಕಿ ಔಟ್ ಆದರೆ ಡೇವಿಡ್ ವಾರ್ನರ್ 58 ಎಸೆತಗಳಲ್ಲಿ 92 ರನ್ ಚಚ್ಚಿ ಅಜೇಯರಾಗಿ ಉಳಿದರು. ಡೆಲ್ಲಿ ಕ್ಯಾಪಿಟಲ್ಸ್ ಶೂನ್ಯ ರನ್‌ಗೆ ಮೊದಲನೇ ಓವರ್‌ನಲ್ಲಿಯೇ ಮನ್‌ದೀಪ್ ಸಿಂಗ್ ಅವರ ವಿಕೆಟ್ ಕಳೆದುಕೊಂಡರೆ, 37 ರನ್ ಗಳಿಸಿದ್ದಾಗ ಮಿಚೆಲ್ ಮಾರ್ಷ್ (10) ವಿಕೆಟ್ ಒಪ್ಪಿಸಿದರು ಹಾಗೂ ನಾಯಕ ರಿಷಭ್ ಪಂತ್ 26 ರನ್‌ಗಳಿಗೆ ಔಟ್ ಆದರು. ಹೀಗೆ ಒಂದೆಡೆ ತಂಡದ ಮೊದಲ ಮೂರು ವಿಕೆಟ್ ಉರುಳಿದರೆ ಮತ್ತೊಂದೆಡೆ ಡೇವಿಡ್ ವಾರ್ನರ್ ವಿಕೆಟ್ ಕಾಯ್ದುಕೊಂಡು ಅಬ್ಬರಿಸುತ್ತಿದ್ದರು.

ನಾಯಕನಾಗಿ ಗೆದ್ದರೆ ಸಾಲುವುದಿಲ್ಲ, ಬ್ಯಾಟ್ ಬೀಸಿ ಅಬ್ಬರಿಸಬೇಕು; ವಿಕೆಟ್ ಕೀಪರ್ ನಾಯಕನಿಗೆ ರೈನಾ ಸಲಹೆನಾಯಕನಾಗಿ ಗೆದ್ದರೆ ಸಾಲುವುದಿಲ್ಲ, ಬ್ಯಾಟ್ ಬೀಸಿ ಅಬ್ಬರಿಸಬೇಕು; ವಿಕೆಟ್ ಕೀಪರ್ ನಾಯಕನಿಗೆ ರೈನಾ ಸಲಹೆ

ಇನ್ನು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೋವ್‌ಮನ್ ಪೊವೆಲ್ ಡೇವಿಡ್ ವಾರ್ನರ್ ಜೊತೆ ಸೇರಿ ಅಬ್ಬರಿಸಿ 122 ರನ್‌ಗಳ ಜತೆಯಾಟವನ್ನಾಡಿದರು. ಆರಂಭದಿಂದ ಅಂತಿಮದವರೆಗೂ ಅಬ್ಬರಿಸಿದ ಡೇವಿಡ್ ವಾರ್ನರ್ ಅವರಿಗೆ ಅಂತಿಮ ಓವರ್‌ನಲ್ಲಿ ಶತಕ ಬಾರಿಸುವ ಅವಕಾಶವಿದ್ದರೂ ಕೈತಪ್ಪಿಸಿಕೊಂಡಿದ್ದಾರೆ. ಈ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಶತಕದ ಸನಿಹದಲ್ಲಿದ್ದರೂ ವಾರ್ನರ್‌ಗೆ ಸಿಗಲಿಲ್ಲ ಬ್ಯಾಟಿಂಗ್

ಶತಕದ ಸನಿಹದಲ್ಲಿದ್ದರೂ ವಾರ್ನರ್‌ಗೆ ಸಿಗಲಿಲ್ಲ ಬ್ಯಾಟಿಂಗ್

92 ರನ್ ಬಾರಿಸಿ ಅಜೇಯನಾಗಿ ಉಳಿದಿದ್ದ ಡೇವಿಡ್ ವಾರ್ನರ್ ಪಂದ್ಯದ ಅಂತಿಮ ಓವರ್‌ನಲ್ಲಿ ನಾನ್ ಸ್ಟ್ರೈಕ್ ಎಂಡ್‌ನಲ್ಲಿದ್ದರು. ಇತ್ತ ಸ್ಟ್ರೈಕ್‌ನಲ್ಲಿದ್ದ ರೋವ್‌ಮನ್ ಪೊವೆಲ್ ಆ ಓವರ್‌ನಲ್ಲಿ ಶತಕದ ಅಂಚಿನಲ್ಲಿದ್ದ ಡೇವಿಡ್ ವಾರ್ನರ್‌ಗೆ ಆಡುವ ಅವಕಾಶ ನೀಡದೇ ಓವರ್‌ನ ಎಲ್ಲಾ ಎಸೆತಗಳನ್ನೂ ತಾವೇ ಎದುರಿಸಿ ಅರ್ಧಶತಕವನ್ನು ಬಾರಿಸಿ ಮಿಂಚಿದರು. ಹೀಗೆ ಶತಕದ ಸನಿಹದಲ್ಲಿದ್ದ ಡೇವಿಡ್ ವಾರ್ನರ್‌ ಅವರಿಗೆ ಬ್ಯಾಟಿಂಗ್ ನೀಡದೇ ಬ್ಯಾಟ್ ಬೀಸಿದ ರೋವ್‌ಮನ್ ಪೊವೆಲ್ ವಿರುದ್ಧ ಕ್ರಿಕೆಟ್ ಅಭಿಮಾನಿಗಳಲ್ಲಿ ತುಸು ಅಸಮಾಧಾನವೂ ಸಹ ಇತ್ತು.

ಕಾರಣ ಬಿಚ್ಚಿಟ್ಟ ಪೊವೆಲ್

ಕಾರಣ ಬಿಚ್ಚಿಟ್ಟ ಪೊವೆಲ್

ಇನ್ನು ಅಂತಿಮ ಓವರ್‌ನಲ್ಲಿ ವಾರ್ನರ್‌ಗೆ ಏಕೆ ಬ್ಯಾಟಿಂಗ್ ನೀಡಲಿಲ್ಲ ಎಂಬುದನ್ನು ಪಂದ್ಯ ಮುಗಿದ ನಂತರ ಬಿಚ್ಚಿಟ್ಟಿರುವ ರೋವ್‌ಮನ್ ಪೊವೆಲ್ 'ಅಂತಿಮ ಓವರ್‌ನ ಮೊದಲ ಎಸೆತದಲ್ಲಿಯೇ ಸಿಂಗಲ್ ತೆಗೆದುಕೊಳ್ಳುತ್ತೇನೆ ಶತಕ ಬಾರಿಸುತ್ತೀರಾ ಎಂದು ವಾರ್ನರ್‌ಗೆ ಕೇಳಿದೆ. ಆದರೆ ಇದಕ್ಕೆ ಉತ್ತರಿಸಿದ ಡೇವಿಡ್ ವಾರ್ನರ್ ಈ ರೀತಿ ಕ್ರಿಕೆಟ್ ಆಡಬಾರದು, ನಿಮ್ಮ ಕೈಲಾದಷ್ಟು ಹೊಡೆತಗಳನ್ನು ಬಾರಿಸಿ ಎಂದು ಹೇಳಿದರು ಹಾಗೂ ಅದನ್ನೇ ನಾನು ಮಾಡಿದೆ' ಎಂದು ಹೇಳಿಕೆ ನೀಡಿದ್ದಾರೆ.

ಶತಕದಂಚಿನಲ್ಲಿದ್ದ ವಾರ್ನರ್ ಗೆ ಬ್ಯಾಟಿಂಗ್ ಅವಕಾಶವನ್ನು ನೀಡದ ಪೊವೆಲ್ ಹೇಳಿದ್ದೇನು? | Oneindia Kannada
ಅಂತಿಮ ಓವರ್‌ನಲ್ಲಿ ಅಬ್ಬರಿಸಿದ ಪೊವೆಲ್

ಅಂತಿಮ ಓವರ್‌ನಲ್ಲಿ ಅಬ್ಬರಿಸಿದ ಪೊವೆಲ್

ಇನ್ನು ಉಮ್ರಾನ್ ಮಲಿಕ್ ಎಸೆದ ಅಂತಿಮ ಓವರ್ ಎದುರಿಸಿದ ರೋವ್‌ಮನ್ ಪೊವೆಲ್ 6 ಎಸೆತಗಳಿಗೆ 19 ರನ್ ಬಾರಿಸಿ ಅಬ್ಬರಿಸಿದರು. ವಾರ್ನರ್ ಹೊಡೆತ ಬಾರಿಸಿ ಎಂದು ಹೇಳಿದ ನಂತರ ಅಂತಿಮ ಓವರ್‌ನ ಮೊದಲ ಎಸೆತವನ್ನು ಎದುರಿಸಿದ ಪೊವೆಲ್ ಸಿಕ್ಸರ್ ಬಾರಿಸಿದರು, ನಂತರ ಅದೇ ಓವರ್‌ನಲ್ಲಿ ಹ್ಯಾಟ್ರಿಕ್ ಬೌಂಡರಿ ಹಾಗೂ ಒಂದು ಸಿಂಗಲ್‌ನ್ನೂ ಕೂಡ ಗಳಿಸಿದರು. ರೋವ್‌ಮನ್ ಪೊವೆಲ್ 35 ಎಸೆತಗಳಲ್ಲಿ ಅಜೇಯ 67 ರನ್ ಬಾರಿಸಿ 3 ಬೌಂಡರಿ ಹಾಗೂ 6 ಸಿಕ್ಸರ್ ಚಚ್ಚಿದರು.

Story first published: Friday, May 6, 2022, 13:47 [IST]
Other articles published on May 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X