ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಅಶ್ವಿನ್: ಕಾರಣ ವಿವರಿಸಿದ ನಾಯಕ ಸಂಜು ಸ್ಯಾಮ್ಸನ್

IPL 2022: Sanju Samson explain The Reason for Ashwin Batted At top order

ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 37 ರನ್‌ಗಳ ಅಂತರದ ಸೋಲು ಅನುಭವಿಸಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಿಂದ ಕೆಳಕ್ಕಿಳಿದಿದೆ. ಈ ಬಾರಿಯ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸಂಜು ಸ್ಯಾಮ್ಸನ್ ಪಡೆ ಗುಜರಾತ್ ಟೈಟನ್ಸ್ ವಿರುದ್ಧ ಮುಗ್ಗರಿಸಿದೆ. ಟಾಸ್ ಗೆದ್ದರೂ ಇದರ ಲಾಭ ಪಡೆಯುವಲ್ಲಿ ಸಂಜು ಬಳಗ ವಿಫಲವಾಯಿತು. ಇನ್ನು ತಂಡದ ಬ್ಯಾಟಿಂಗ್ ಸಂದರ್ಭದಲ್ಲಿ ಆರ್‌ಆರ್ ಮ್ಯಾನೇಜ್‌ಮೆಂಟ್ ತೆಗೆದುಕೊಂಡ ಒಂದು ನಿರ್ಧಾರ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿತು.

ಗುಜರಾತ್ ಟೈಟನ್ಸ್ ನೀಡಿದ 193 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ಸಂದರ್ಭದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಅನಿರೀಕ್ಷಿತ ಬದಲಾವಣೆ ಮಾಡಿತ್ತು ಆರ್‌ಆರ್ ತಂಡ. ಮೂರನೇ ಕ್ರಮಾಂಕದಲ್ಲಿ ನಾಯಕ ಸಂಜು ಸ್ಯಾಮ್ಸನ್ ಬದಲಿಗೆ ಆರ್ ಅಶ್ವಿನ್ ಕಣಕ್ಕಿಳಿಯುವ ಮೂಲಕ ಅಚ್ಚರಿ ಮೂಡಿಸಿದರು. ಈ ಬದಲಾವಣೆಗೆ ಕಾರಣವೇನು ಎಂಬುದನ್ನು ವಿವರಿಸಿದ್ದಾರೆ ನಾಯಕ ಸಂಜು ಸ್ಯಾಮ್ಸನ್.

ರಶೀದ್ ಖಾನ್‌ರನ್ನ SRH ರೀಟೈನ್ ಮಾಡದೆ ಇರಲು, ಕಾರಣ ತಿಳಿಸಿದ ಮುತ್ತಯ್ಯ ಮುರಳೀಧರನ್ರಶೀದ್ ಖಾನ್‌ರನ್ನ SRH ರೀಟೈನ್ ಮಾಡದೆ ಇರಲು, ಕಾರಣ ತಿಳಿಸಿದ ಮುತ್ತಯ್ಯ ಮುರಳೀಧರನ್

ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ನಾಯಕ ಸಂಜು ಸ್ಯಾಮ್ಸನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಅಶ್ವಿನ್ ಅವರು ಅಗ್ರ ಕ್ರಮಾಂಕದಲ್ಲಿ ನಿಜಕ್ಕೂ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಾರೆ. ಕಳೆದ ಪಂದ್ಯದಲಕ್ಲಿಯೂ ನೀವು ಗಮನಿಸಿದರೆ ಅವರು ಶಿಮ್ರಾನ್ ಹೇಟ್ಮೇಯರ್ ಅವರೊಂದಿಗೆ ನಿರ್ಣಾಯಕ ಜೊತೆಯಾಟ ನಡೆಸಿದರು. ನಾವು ಅವರನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದೇವೆ. ತಮ್ಮ ಎಲ್ಲಾ ಅನುಭವಗಳನ್ನು ಬಳಸಿಕೊಂಡು ಅವರು ರಶೀದ್ ಖಾನ್ ವಿರುದ್ಧ ಅದ್ಭುತವಾಗಿ ಆಡಿದ್ದಾರೆ. ಅವರು ಬಹಳ ಮುಖ್ಯೌಆದ ಆಲ್‌ರೌಂಡರ್ ಎಂದು ನಾನು ಭಾವಿಸುತ್ತೇನೆ. ಅವರನ್ನು ಸರಿಯಾದ ಸಂದರ್ಭದಲ್ಲಿ, ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದರ ಮೇಲೆ ನಿಂತಿದೆ" ಎಂದು ಆರ್ ಅಶ್ವಿನ್ ಅವರನ್ನು ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿಸಿದ ವಿಚಾರವಾಗಿ ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ ನೀಡಿದ್ದಾರೆ.

ಇದಕ್ಕೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧಧ ಪಂದ್ಯದಲ್ಲಿ ಆರ್ ಅಶ್ವಿನ್ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಸಂಜು ಸ್ಯಾಮ್ಸನ್ ಬಳಗ 67 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಅಶ್ವಿನ್ ಆಡಲಿಳಿದಿದ್ದರು. ಈ ಸಂದರ್ಭದಲ್ಲಿ 23 ಎಸೆತಗಳನ್ನು ಎದುರಿಸಿದ್ದ ಅಶ್ವಿನ್ 28 ರನ್‌ಗಳಿಸಿ ಬಳಿಕ ರಿಟೈರ್ಡ್ ಔಟ್ ಆಗಿ ಫೆವಿಲಿಯನ್‌ಗೆ ತೆರಳಿದ್ದರು.

IPL 2022: ಸತತ 5 ಪಂದ್ಯ ಸೋತ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌IPL 2022: ಸತತ 5 ಪಂದ್ಯ ಸೋತ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌

ಇನ್ನು ಗುಜರಾತ್ ಟೈಟನ್ಸ್ ವಿರುದ್ಧಧ ಸೋಲಿನ ಬಳಿಕ ಸಂಜು ಸ್ಯಾಮ್ಸನ್ ತಂಡದ ಕಾಂಬಿನೇಶನ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. "ನಾವು ಈ ತಂಡದೊಂದಿಗೆ ಅದ್ಭುತವಾಗಿ ಆಡುತ್ತಿದ್ದೇವೆ. ಅಭ್ಯಾಸದ ಸಂದರ್ಭದಲ್ಲಿ ಬೋಲ್ಟ್ ಸಣ್ಣ ಪ್ರಮಾಣದ ಗಾಯಕ್ಕೆ ಒಳಗಾಗಿದ್ದಾರೆ. ಹಾಗಾಗಿ ಸಣ್ಣ ಬದಲಾವಣೆ ಮಾಡಿಕೊಳ್ಳಲಾಯಿತು. ಅದಲ್ಲದೆ ನಾವು ನಿಜವಾಗಿಯೂ ಉತ್ತಮವಾದ ಬ್ಯಾಟಿಂಗ್ ವಿಭಾಗವನ್ನು ಹೊಂದಿದ್ದೇವೆ. ಬೌಲಿಂಗ್ ಕೂಡ ಅದ್ಭುತವಾಗಿದೆ. ನಾನು ತಂಡದ ಸಂಯೋಜನೆಯ ವಿಚಾರವಾಗಿ ಸಂತಸಗೊಂಡಿದ್ದೇನೆ" ಎಂದಿದ್ದಾರೆ ಸಂಜು ಸ್ಯಾಮ್ಸನ್.

ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ರಾಸ್ಸಿ ವ್ಯಾನ್ ಡೆರ್ ಡುಸೆನ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ರಿಯಾನ್ ಪರಾಗ್, ಜೇಮ್ಸ್ ನೀಶಮ್, ಕುಲದೀಪ್ ಸೇನ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್
ಬೆಂಚ್: ನವದೀಪ್ ಸೈನಿ, ನಾಥನ್ ಕೌಲ್ಟರ್-ನೈಲ್, ಕರುಣ್ ನಾಯರ್, ಕೆಸಿ ಕಾರಿಯಪ್ಪ, ಡೇರಿಲ್ ಮಿಚೆಲ್, ಓಬೇದ್ ಮೆಕಾಯ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಅನುನಯ್ ಸಿಂಗ್, ಧ್ರುವ ಜುರೆಲ್, ಶುಭಂ ಗರ್ವಾಲ್, ಟ್ರೆಂಟ್ ಬೌಲ್ಟ್

RCB vs DC ಪಂದ್ಯದಲ್ಲಿ ಗೆಲುವು ಯಾರಿಗೆ | Oneindia Kannada

ಗುಜರಾತ್ ಟೈಟನ್ಸ್: ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಶುಭಮನ್ ಗಿಲ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ, ಯಶ್ ದಯಾಲ್
ಬೆಂಚ್:ವೃದ್ಧಿಮಾನ್ ಸಹಾ, ಪ್ರದೀಪ್ ಸಾಂಗ್ವಾನ್, ವರುಣ್ ಆರೋನ್, ಜಯಂತ್ ಯಾದವ್, ಗುರುಕೀರತ್ ಸಿಂಗ್ ಮಾನ್, ಅಲ್ಜಾರಿ ಜೋಸೆಫ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ರಹಮಾನುಲ್ಲಾ ಗುರ್ಬಾಜ್, ಡೊಮಿನಿಕ್ ಡ್ರೇಕ್ಸ್, ನೂರ್ ಅಹ್ಮದ್, ದರ್ಶನ್ ನಲ್ಕಂಡೆ, ಸಾಯಿ ಸುದರ್ಶನ್

Story first published: Friday, April 15, 2022, 13:51 [IST]
Other articles published on Apr 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X