ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

MI vs SRH: ಟಿಮ್ ಡೇವಿಡ್ ಅಬ್ಬರ ವ್ಯರ್ಥ; ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಕಂಡ ಸನ್ ರೈಸರ್ಸ್

IPL 2022: Sunrisers Hyderabad beats Mumbai Indians by 3 runs

ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 65ನೇ ಪಂದ್ಯ ಇಂದು ( ಮೇ 17 ) ನಡೆದಿದ್ದು, ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 3 ರನ್‌ಗಳ ರೋಚಕ ಜಯವನ್ನು ಸಾಧಿಸಿದೆ.

ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 194 ರನ್‌ಗಳ ಕಠಿಣ ಗುರಿಯನ್ನು ನೀಡಿತು.

ಥಾಮಸ್ ಕಪ್‌ ಗೆಲುವಿಗೆ ಸೊಳ್ಳೆ ಬ್ಯಾಟ್ ಕಾರಣ ಎಂದ IAS ಆಫೀಸರ್, ಅಮಿತ್ ಮಿಶ್ರಾ ತರಾಟೆಥಾಮಸ್ ಕಪ್‌ ಗೆಲುವಿಗೆ ಸೊಳ್ಳೆ ಬ್ಯಾಟ್ ಕಾರಣ ಎಂದ IAS ಆಫೀಸರ್, ಅಮಿತ್ ಮಿಶ್ರಾ ತರಾಟೆ

ಇನ್ನು ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಮುಂಬೈ ಇಂಡಿಯನ್ಸ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಜೋಡಿ 95 ರನ್‌ಗಳ ಜತೆಯಾಟವಾಡುವ ಮೂಲಕ ಕಮ್ ಬ್ಯಾಕ್ ಮಾಡಿದೆ. 10.4 ಓವರ್‌ಗಳಲ್ಲಿ 95 ರನ್ ಕಲೆಹಾಕಿದ ಈ ಜೋಡಿ ಕಠಿಣ ಗುರಿಯನ್ನು ಬೆನ್ನತ್ತಿದ್ದ ತಂಡಕ್ಕೆ ಉತ್ತಮ ಆರಂಭ ಕಟ್ಟಿ ಕೊಡುವಲ್ಲಿ ಯಶಸ್ವಿಯಾಯಿತು. ಇಶಾನ್ ಕಿಶನ್ 34 ಎಸೆತಗಳಲ್ಲಿ 43 ರನ್ ಕಲೆಹಾಕಿದರೆ, ರೋಹಿತ್ ಶರ್ಮಾ 36 ಎಸೆತಗಳಲ್ಲಿ 48 ರನ್ ಚಚ್ಚಿ 2 ರನ್‌ಗಳಿಂದ ಅರ್ಧಶತಕ ವಂಚಿತರಾದರು. ಡೇನಿಯಲ್ ಸ್ಯಾಮ್ಸ್ 15 ರನ್ ಗಳಿಸಿದರೆ, ತಿಲಕ್ ವರ್ಮಾ 8 ರನ್, ಟ್ರಿಸ್ಟಾನ್ ಸ್ಟಬ್ಸ್ 2 ರನ್ ಗಳಿಸಿದರು. ಇನ್ನು ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟೀಮ್ ಡೇವಿಡ್ 18 ಎಸೆತಗಳಲ್ಲಿ 46 ರನ್ ಸಿಡಿಸಿ ಅಬ್ಬರಿಸಿದರು. ಇನ್ನುಳಿದಂತೆ ಸಂಜಯ್ ಯಾದವ್ ಶೂನ್ಯ ಸುತ್ತಿದರೆ, ಜಸ್ ಪ್ರೀತ್ ಬುಮ್ರಾ ಯಾವುದೇ ರನ್ ಗಳಿಸದೆ ಅಜೇಯರಾಗಿ ಉಳಿದರು ಹಾಗೂ ರಮಣ್ ದೀಪ್ ಸಿಂಗ್ 6 ಎಸೆತಗಳಲ್ಲಿ ಅಜೇಯ 14 ರನ್ ಬಾರಿಸಿ ಗಮನ ಸೆಳೆದರು.

ತಂಡಕ್ಕೆ ಗೆಲ್ಲಲು 18 ಎಸೆತಗಳಲ್ಲಿ 45 ರನ್ ಬೇಕಿದ್ದಾಗ ಟಿ ನಟರಾಜನ್ ಮಾಡಿದ 18ನೇ ಓವರ್‌ನಲ್ಲಿ 4 ಸಿಕ್ಸರ್ ಚಚ್ಚಿದ ಟಿಮ್ ಡೇವಿಡ್ ಅದೇ ಓವರ್‌ನ ಕೊನೆಯಲ್ಲಿ ರನ್ ಔಟ್ ಆದರು ಹಾಗೂ ಗೆಲ್ಲಲು ಬೇಕಿದ್ದ ಗುರಿಯನ್ನು 12 ಎಸೆತಗಳಲ್ಲಿ 19 ರನ್‌ಗೆ ತಂದು ನಿಲ್ಲಿಸಿದರು. ಆದರೆ ನಂತರ ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ತಂಡದ ಬಾಲಂಗೋಚಿಗಳು ಉಳಿದ ರನ್ ಕಲೆಹಾಕುವಲ್ಲಿ ವಿಫಲರಾದ ಪರಿಣಾಮ ಮುಂಬೈ ಇಂಡಿಯನ್ಸ್ ಸೋಲನ್ನು ಅನುಭವಿಸಿತು. 19ನೇ ಓವರ್ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ಆ ಓವರ್‌ನಲ್ಲಿ 1 ವಿಕೆಟ್ ಸಹಿತ ಮೇಡನ್ ಪಡೆದರು. ಹೀಗಾಗಿ ಮುಂಬೈ ಇಂಡಿಯನ್ಸ್ ಕೊನೆಯ 6 ಎಸೆತಗಳಲ್ಲಿ ಗೆಲ್ಲಲು 19 ರನ್ ಬಾರಿಸಬೇಕಾದ ಅಗತ್ಯವಿತ್ತು. ಈ ಸಂದರ್ಭದಲ್ಲಿ ಕೊನೆಯ ಓವರ್‌ನ ನಾಲ್ಕನೇ ಎಸೆತಕ್ಕೆ ಬೌಂಡರಿ ಮತ್ತು ಅಂತಿಮ ಎಸೆತಕ್ಕೆ ಸಿಕ್ಸರ್ ಚಚ್ಚಿದ ರಮಣದೀಪ್ ಸಿಂಗ್ ಮಿಂಚಿದರೂ ಸಹ ಜಯ ತಂದುಕೊಡುವಲ್ಲಿ ವಿಫಲರಾದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಕಲೆಹಾಕಿತು.

ಟಿ20 ಕ್ರಿಕೆಟ್‌ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್ಟಿ20 ಕ್ರಿಕೆಟ್‌ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್

ಡೆಲ್ಲಿ ವಿರುದ್ಧ ಹೀನಾಯವಾಗಿ ಸೋತ್ಮೇಲೆ ಪಂಜಾಬ್ ಕೋಚ್ ಅನಿಲ್ ಕುಂಬ್ಳೆಗೆ | Oneindia Kannada ಸಂಕಷ್ಟ

ಇನ್ನು ಸನ್ ರೈಸರ್ಸ್ ಹೈದರಾಬಾದ್ ಪರ ಉಮ್ರಾನ್ ಮಲಿಕ್ 3 ವಿಕೆಟ್ ಪಡೆದರೆ ವಾಷಿಂಗ್ಟನ್ ಸುಂದರ್ ಮತ್ತು ಭುವನೇಶ್ವರ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು.

Story first published: Wednesday, May 18, 2022, 10:26 [IST]
Other articles published on May 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X