ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಈ ದಿನದಂದು 16ನೇ ಐಪಿಎಲ್ ಆವೃತ್ತಿ ಆರಂಭ ಸಾಧ್ಯತೆ!

IPL 2023: 16th Edition of IPL Likely To Start On March 31st or April 1st

ಮೂರು ವರ್ಷಗಳ ಬಳಿಕ ತವರಿನಂಗಳದಲ್ಲಿ ಪ್ರೇಕ್ಷಕರೆದುರು ನಡೆಯುವ ಮತ್ತು ಭಾರೀ ನಿರೀಕ್ಷೆಯಿಂದ ಕಾಯುತ್ತಿರುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 16ನೇ ಆವೃತ್ತಿಯು ಮಾರ್ಚ್ 31 ಅಥವಾ ಏಪ್ರಿಲ್ 1ರಂದು ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

2023ರ ಐಪಿಎಲ್ ಆವೃತ್ತಿಯು 74 ಪಂದ್ಯಗಳನ್ನು ಒಳಗೊಂಡಿರುವುದರಿಂದ ಟೂರ್ನಿ ಆಯೋಜಕ ಬಿಸಿಸಿಐ, ಕಳೆದ ಋತುವಿನಂತೆಯೇ ಬೇಗ ಆರಂಭಿಸಲು ಸಜ್ಜಾಗಿದೆ. 2022ರಲ್ಲಿ ನಡೆದ ಐಪಿಎಲ್ ಪಂದ್ಯಾವಳಿ ಮಾರ್ಚ್ ಕೊನೆಯ ವಾರದಲ್ಲಿ ಪ್ರಾರಂಭವಾಗಿತ್ತು ಮತ್ತು ಮೇ ಅಂತ್ಯದವರೆಗೆ ನಡೆಯಿತು.

IND vs NZ: ಮೊದಲ ODI ಪಂದ್ಯ ಗೆದ್ದರೂ ಶೇ.60ರಷ್ಟು ದಂಡ ಕಟ್ಟಿದ ರೋಹಿತ್ ಶರ್ಮಾ ಪಡೆIND vs NZ: ಮೊದಲ ODI ಪಂದ್ಯ ಗೆದ್ದರೂ ಶೇ.60ರಷ್ಟು ದಂಡ ಕಟ್ಟಿದ ರೋಹಿತ್ ಶರ್ಮಾ ಪಡೆ

ಅದೇ ರೀತಿ ಐಪಿಎಲ್ 16ನೇ ಆವೃತ್ತಿಯನ್ನು ಮಾರ್ಚ್ ಕೊನೆಯ ವಾರ ಅಥವಾ ಎಪ್ರಿಲ್ ಮೊದಲ ವಾರದಲ್ಲಿ ಆರಂಭಿಸಲು ಚರ್ಚೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.

2023ರ ಮಹಿಳಾ ಐಪಿಎಲ್‌ನ ಉದ್ಘಾಟನಾ ಆವೃತ್ತಿಯು ಮಾರ್ಚ್ ಮೊದಲ ವಾರ ಅರಂಭವಾಗಲಿದ್ದು, ಮಾರ್ಚ್ 26ರಂದು ಫೈನಲ್ ಪಂದ್ಯ ನಡೆಯಲಿದೆ. ಮಹಿಳಾ ಐಪಿಎಲ್‌ನ ಫೈನಲ್ ಮತ್ತು ಪುರುಷರ ಐಪಿಎಲ್‌ನ ಆರಂಭಿಕ ಪಂದ್ಯದ ನಡುವೆ ಒಂದು ವಾರದ ಅಂತರವನ್ನು ಕಾಯ್ದುಕೊಳ್ಳಲು ಪಂದ್ಯಾವಳಿ ಆಯೋಜಕರು ಯೋಜಿಸಿದ್ದಾರೆ.

ಕ್ರಿಕ್‌ಬಝ್‌ನ ವರದಿಯ ಪ್ರಕಾರ 2023ರ ಮಹಿಳಾ ಐಪಿಎಲ್ ಉದ್ಘಾಟನಾ ಪಂದ್ಯಾವಳಿಯು ಮುಂಬೈನ ಬ್ರಬೋರ್ನ್ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

IPL 2023: 16th Edition of IPL Likely To Start On March 31st or April 1st

ಇನ್ನು ಮುಂಬೈನ ವಾಂಖೆಡೆ ಸ್ಟೇಡಿಯಂ ಪುರುಷರ 16ನೇ ಆವೃತ್ತಿ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಸಿದ್ಧವಾಗುತ್ತಿದೆ ಎಂದು ಕ್ರಿಕ್‌ಬಝ್ ತಿಳಿಸಿದೆ.

ಚೊಚ್ಚಲ ಮಹಿಳಾ ಐಪಿಎಲ್ ಪಂದ್ಯಾವಳಿಯಲ್ಲಿ 5 ತಂಡಗಳು ಭಾಗಿಯಾಗಲಿದ್ದರೆ, ಪುರುಷರ ಐಪಿಎಲ್ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಲಿವೆ.

"ಎಲ್ಲಾ ಸಾಧ್ಯತೆಗಳ ಪ್ರಕಾರ, ಮೊದಲ ಮಹಿಳಾ ಐಪಿಎಲ್ ಲೀಗ್ ಅನ್ನು ಮುಂಬೈನ ಬ್ರಬೋರ್ನ್ ಸ್ಟೇಡಿಯಂ ಮತ್ತು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣಗಳಲ್ಲಿ 22 ಪಂದ್ಯಗಳಿಗೆ ಸಂಭಾವ್ಯ ಸ್ಥಳಗಳಾಗಿ ಗುರುತಿಸಲಾಗಿದ".

Ranji Trophy: 43 ವರ್ಷಗಳ ನಂತರ ಮೊದಲ ಬಾರಿಗೆ ಮುಂಬೈ ಸೋಲಿಸಿ ಇತಿಹಾಸ ನಿರ್ಮಿಸಿದ ದೆಹಲಿ!Ranji Trophy: 43 ವರ್ಷಗಳ ನಂತರ ಮೊದಲ ಬಾರಿಗೆ ಮುಂಬೈ ಸೋಲಿಸಿ ಇತಿಹಾಸ ನಿರ್ಮಿಸಿದ ದೆಹಲಿ!

"ಅದೇ ರೀತಿ, ಮಹಿಳಾ ಐಪಿಎಲ್ ನಂತರ ಮಾರ್ಚ್ 31 ಅಥವಾ ಏಪ್ರಿಲ್ 1ರಂದು ಪುರುಷರ ಐಪಿಎಲ್ 2023ರ ಉದ್ಘಾಟನಾ ಪಂದ್ಯಕ್ಕೆ ವಾಂಖೆಡೆ ಸ್ಟೇಡಿಯಂ ಸಜ್ಜುಗೊಳಿಸುವ ಸಾಧ್ಯತೆಯಿದೆ," ಎಂದು ಕ್ರಿಕ್‌ಬಝ್ ವರದಿ ಮಾಡಿದೆ.

ಈಗಾಗಲೇ ತಿಳಿಸಿದಂತೆ, 2023ರ ಐಪಿಎಲ್ ತನ್ನ ಹಳೆಯ ಸ್ವರೂಪಕ್ಕೆ ಹಿಂದಿರುಗಲಿದ್ದು, ಎಲ್ಲಾ ತಂಡಗಳು ಒಟ್ಟು ಲೀಗ್ ಪಂದ್ಯಗಳ ಅರ್ಧದಷ್ಟು ಲೀಗ್ ಪಂದ್ಯಗಳನ್ನು ತಮ್ಮ ತವರು ಮೈದಾನದಲ್ಲಿ ಮತ್ತು ಉಳಿದವುಗಳನ್ನು ಎದುರಾಳಿ ಅಥವಾ ತಟಸ್ಥ ಸ್ಥಳದಲ್ಲಿ ಆಡಲು ಸಿದ್ಧವಾಗಿವೆ.

ಕೋವಿಡ್-19 ಕಾರಣದಿಂದಾಗಿ ಮೂರು ಋತುಗಳಲ್ಲಿ ತವರಿನ ಅಂಗಳದಲ್ಲಿ ಆಡಲು ಸಾಧ್ಯವಾಗಿರಲಿಲ್ಲ. 2020ರಲ್ಲಿ ಅರ್ಧದಷ್ಟು ಮತ್ತು 2021ರಲ್ಲಿ ಸಂಪೂರ್ಣ ಐಪಿಎಲ್ ಪಂದ್ಯಾವಳಿಯನ್ನು ಯುಎಇಯಲ್ಲಿ ಆಯೋಜಿಸಿದ್ದರೆ, ಐಪಿಎಲ್ 2022 ಪಂದ್ಯಾವಳಿಯನ್ನು ಭಾರತದ ಐದು ಕ್ರೀಡಾಂಗಣಗಳಲ್ಲಿ ಆಡಿಸಲಾಗಿತ್ತು.

Story first published: Friday, January 20, 2023, 18:37 [IST]
Other articles published on Jan 20, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X