ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2023: ಸಂಪೂರ್ಣ ಆವೃತ್ತಿಗೆ ಲಭ್ಯವಿರಲಿದ್ದಾರಾ ಆಸ್ಟ್ರೇಲಿಯಾ ಇಂಗ್ಲೆಂಡ್ ಆಟಗಾರರು?

IPL 2023: BCCI confirms Players from England and Australia will available for full season

ಈ ಬಾರಿಯ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳಿಗೆ ತಲೆನೋವಾಗಿದ್ದ ಅಂಶವೆಂದರೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡದ ಆಟಗಾರರ ಪೂರ್ಣ ಪ್ರಮಾಣದ ಲಭ್ಯತೆ ವಿಚಾರ. ಆಶಸ್ ಸರಣಿಯ ಹಿನ್ನೆಲೆಯಲ್ಲಿ ಈ ಎರಡು ತಂಡಗಳ ಆಟಗಾರರು ಪೂರ್ಣ ಪ್ರಮಾಣದಲ್ಲಿ ದೊರೆಯಲಾರರು ಎಂಬ ಮಾತುಗಳು ಹರಿದಾಡತೊಡಗಿತ್ತು. ಈ ವಿಚಾರವಾಗಿ ಈಗ ಸ್ವತಃ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೆ ಮಾಹಿತಿ ನೀಡಿದೆ.

ಮುಂದಿನ ಜೂನ್ ತಿಂಗಳಿನಲ್ಲಿ ಪ್ರತಿಷ್ಠಿತ ಆಶಸ್ ಸರಣಿ ಆರಂಭವಾಗಲಿದೆ. ಈ ಬಾರಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಈ ಸರಣಿಗಾಗಿ ಎರಡು ತಂಡಗಳ ಆಟಗಾರರು ಪೂರ್ಣ ಪ್ರಮಾಣದಲ್ಲಿ ಲಭ್ಯವಿರುವುದು ಅನುಮಾನ ಎನ್ನಲಾಗಿತ್ತು. ಆದರೆ ಬಿಸಿಸಿಐ ಈ ಎರಡು ತಂಡಗಳ ಆಟಗಾರರು ಕೂಡ ಐಪಿಎಲ್‌ನಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದೆ. ಇದು ಎಲ್ಲಾ ಫ್ರಾಂಚೈಸಿಗಳಿಗೆ ನಿರಾಳತೆ ಮೂಡಿಸಿದೆ.

IPL Auction 2023 Live Updates: ಕೊಚ್ಚಿಯಲ್ಲಿ ನಡೆಯಲಿರುವ ಹರಾಜಿಗೆ ಕ್ಷಣಗಣನೆIPL Auction 2023 Live Updates: ಕೊಚ್ಚಿಯಲ್ಲಿ ನಡೆಯಲಿರುವ ಹರಾಜಿಗೆ ಕ್ಷಣಗಣನೆ

ಬದಲಿ ಆಟಗಾರರ ಅಗತ್ಯದ ಬಗ್ಗೆ ಮಾತುಗಳು

ಬದಲಿ ಆಟಗಾರರ ಅಗತ್ಯದ ಬಗ್ಗೆ ಮಾತುಗಳು

ಇನ್ನು ಹರಾಜಿಗೂ ಮುನ್ನ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರರು ಮುಂದಿನ ಆವೃತ್ತಿಗೆ ಸಂಪೂರ್ಣ ಪ್ರಮಾಣದಲ್ಲಿ ಲಭ್ಯವಿರುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಯಾವೆಲ್ಲಾ ಫ್ರಾಂಚೈಸಿಗಳಲ್ಲಿ ಈ ಎರಡು ದೇಶಗಳ ಆಟಗಾರರು ಪ್ರಮುಖವಾಗಿದ್ದಾರೋ ಅವರಿಗೆ ಸೂಕ್ತವಾದ ಬದಲಿ ಆಟಗಾರರನ್ನು ಕಂಡುಕೊಳ್ಳಬೇಕಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿತ್ತು. ಹೀಗಾಗಿ ಈ ಹರಾಜಿನಲ್ಲಿ ಆ ಇಟ್ಟಿನಲ್ಲಿ ಫ್ರಾಂಚೈಸಿಗಳು ಚಿತ್ತ ನೆಟ್ಟಿದ್ದವು. ಆದರೆ ಇದೀಗ ಬಿಸಿಸಿಐ ಅಧಿಕೃತವಾಗಿ ಮಾಹಿತಿ ನೀಡುವ ಮೂಲಕ ಫ್ರಾಂಚೈಸಿಗಳಿಗೆ ನಿರಾಳತೆ ಮೂಡಿಸಿದೆ.

ಆಸ್ಟ್ರೇಲಿಯಾ ಆಟಗಾರರ ಲಭ್ಯತೆ ಬಗ್ಗೆ ಬಿಸಿಸಿಐ ಹೇಳಿದ್ದಿಷ್ಟು

ಆಸ್ಟ್ರೇಲಿಯಾ ಆಟಗಾರರ ಲಭ್ಯತೆ ಬಗ್ಗೆ ಬಿಸಿಸಿಐ ಹೇಳಿದ್ದಿಷ್ಟು

ಬಿಸಿಸಿಐ ಆಸ್ಟ್ರೇಲಿಯಾ ಆಟಗಾರರ ಲಭ್ಯತೆಯ ಬಗ್ಗೆ ಫ್ರಾಂಚೈಸಿಗಳಿಗೆ ಮೇಲ್ ಮೂಲಕ ಮಾಹಿತಿ ನೀಡಿದೆ. ಸಂಪೂರ್ಣವಾಗಿ ಆಟಗಾರರು ಲಭ್ಯವಿರಲಿದ್ದಾರೆ. ಅಫ್ಘಾಇಸ್ತಾನ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿರುವ ಆಟಗಾರರು ಮಾರ್ಚ್ 30ರಿಂದ ಲಭ್ಯವಿರಲಿದ್ದಾರೆ ಹಾಗೂ ಶೆಫೀಲ್ಡ್ ಶೀಲ್ಡ್‌ನ ಫೈನಲ್‌ನಲ್ಲಿ ಭಾಗವಹಿಸುವ ಆಟಗಾರರು ಮಾರ್ಚ್ 28 ರಿಂದ ಲಭ್ಯವಿರಲಿದ್ದಾರೆ" ಎಂದು ಬಿಸಿಸಿಐ ಮಾಹಿತಿಯನ್ನು ಹಂಚಿಕೊಂಡಿದೆ.

ಸಂಪೂರ್ಣ ಟೂರ್ನಿ ಆಡಲ್ಲ ಬಾಂಗ್ಲಾದೇಶ ಆಟಗಾರರು

ಸಂಪೂರ್ಣ ಟೂರ್ನಿ ಆಡಲ್ಲ ಬಾಂಗ್ಲಾದೇಶ ಆಟಗಾರರು

ಇನ್ನು ಇಂಗ್ಲೆಂಡ್ ಆಟಗಾರರ ಬಗ್ಗೆಯೂ ಮಾಹಿತಿ ನೀಡಿರುವ ಬಿಸಿಸಿಐ ಪೂರ್ಣ ಪ್ರಮಾಣದಲ್ಲಿ ಲಭ್ಯವಿರಲಿದ್ದಾರೆ ಎಂದು ಅಧಿಕೃತವಾಗಿ ತಿಳಿಸಿದೆ. ಆದರೆ ಬಾಂಗ್ಲಾದೇಶ ತಂಡದ ಆಟಗಾರರು ಸೀಮಿತ ಸಮಯಕ್ಕೆ ಮಾತ್ರವೇ ಲಭ್ಯವಿರಲಿದ್ದಾರೆ ಎಂದಿದೆ. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾಗವಹಿಸಲಿರುವ ಕಾರಣ ಬಾಂಗ್ಲಾದೇಶದ ಆಟಗಾರರು ಏಪ್ರಿಲ್ 8ರಿಂದ ಮೇ 1ರ ವರೆಗೆ ಮಾತ್ರವೇ ಲಭ್ಯವಿರಲಿದ್ದಾರೆ ಎಂದು ಮಾಹಿತಿ ನೀಡಿದೆ. ಇನ್ನು ಇದೇ ಸಂದರ್ಭದಲ್ಲಿ ಶ್ರೀಲಂಕಾದ ಆಟಗಾರರ ಏಪ್ರಿಲ್ 8ರಿಂದ ಲಭ್ಯವಿರಲಿದ್ದಾರೆ ಎಂದಿದೆ.

Story first published: Friday, December 23, 2022, 10:44 [IST]
Other articles published on Dec 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X