ಐಪಿಎಲ್ 2023: ಹರಾಜಿಗೂ ಮುನ್ನ ಕೆಕೆಆರ್ ಪಾಲಾದ ಡೆಲ್ಲಿ ಕ್ಯಾಪಿಟಲ್ಸ್ ಸ್ಟಾರ್ ಆಟಗಾರ!

ಐಪಿಎಲ್ 2023ರ ಆವೃತ್ತಿಗೂ ಮುನ್ನ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಅದಕ್ಕೆ ಸಂಬಂಧಿಸಿದ ಬೆಳವಣಿಗೆಗಳು ಜೋರಾಗಿ ನಡೆಯುತ್ತಿದೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಈ ಮಿನಿ ಹರಾಜು ಪ್ರಕ್ರಿಯೆಗೂ ಮುನ್ನ ಆಟಗಾರರ ರೀಟೈನ್ ಪ್ರಕ್ರಿಯೆ ಹಾಗೂ ಟ್ರೇಡಿಂಗ್ ಪ್ರಕ್ರಿಯೆಗಳು ನಡೆಯುತ್ತಿದ್ದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯಿಂದ ಮಹತ್ವದ ಬೆಳವಣಿಗೆ ನಡೆದಿದೆ.

ಕಳೆದ ಐಪಿಎಲ್ ಮೆಗಾ ಹರಾಜಿನಲ್ಲಿ ಬೃಹತ್ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದ ಶಾರ್ದೂಲ್ ಠಾಕೂರ್ ಈ ಬಾರಿಯ ಹರಾಜು ಪ್ರಕ್ರಿಯೆಗೂ ಮುನ್ನ ಬೇರೆ ತಂಡದ ಪಾಲಾಗಿದ್ದಾರೆ. ಶಾರ್ದೂಲ್ ಠಾಕೂರ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೊತೆಗೆ ಟ್ರೇಡ್ ಮಾಡಿಕೊಳ್ಳುವ ಮೂಲಕ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕುತೂಹಲಕಾರಿ ಬೆಳವಣಿಗೆಯಾಗಿದೆ.

165 ಎಸೆತಗಳಲ್ಲಿ 407 ರನ್, 24 ಸಿಕ್ಸ್ ಸಿಡಿಸಿ ಸಾಗರದ ಹುಡಗನ ಐತಿಹಾಸಿಕ ಸಾಧನೆ165 ಎಸೆತಗಳಲ್ಲಿ 407 ರನ್, 24 ಸಿಕ್ಸ್ ಸಿಡಿಸಿ ಸಾಗರದ ಹುಡಗನ ಐತಿಹಾಸಿಕ ಸಾಧನೆ

ದೊಡ್ಡ ಮೊತ್ತ ಪಡೆದುಕೊಂಡಿದ್ದ ಶಾರ್ದೂಲ್

ದೊಡ್ಡ ಮೊತ್ತ ಪಡೆದುಕೊಂಡಿದ್ದ ಶಾರ್ದೂಲ್

ಕಳೆದ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 10.75 ಕೋಟಿ ನೀಡಿ ವಶಕ್ಕೆ ಪಡೆದುಕೊಂಡಿತ್ತು. ಆದರೆ ಈ ವರ್ಷ ನಡೆದ ಐಪಿಎಲ್ ಟೂರ್ನಿಯಲ್ಲಿ ಶಾರ್ದೂಲ್ ಠಾಕೂರ್ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ. ಹೀಗಾಗಿ ಮುಂದಿನ ಆವೃತ್ತಿಗೆ ಮುನ್ನ ಶಾರ್ದೂಲ್ ಠಾಕೂರ್ ಅವರನ್ನು ಹರಾಜಿಗಾಗಿ ತಂಡದಿಂದ ಕೈಬಿಡಲಿದೆ ಎಂಬ ಸುದ್ದಿ ಹರಿದಾಡಿತ್ತು.

ಶಾರ್ದೂಲ್ ತೆಕ್ಕೆಗೆ ಹಾಕಿಕೊಳ್ಳಲು ನಡೆದಿತ್ತು ಪೈಪೋಟಿ

ಶಾರ್ದೂಲ್ ತೆಕ್ಕೆಗೆ ಹಾಕಿಕೊಳ್ಳಲು ನಡೆದಿತ್ತು ಪೈಪೋಟಿ

ಈ ಸಂದರ್ಭದಲ್ಲಿ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಆವರನ್ನು ಟ್ರೇಡ್ ಮೂಲಕ ವಶಕ್ಕೆ ಪಡೆದುಕೊಳ್ಳಲೊಉ ಸಾಕಷ್ಟು ಪೈಪೋಟಿ ನಡೆದಿತ್ತು. ಶಾರ್ದೂಲ್ ಠಾಕೂರ್ ಅವರ ಮಾಜಿ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಶಾರ್ದೂಲ್ ಠಾಕೂರ್ ಅವರನ್ನು ಟ್ರೇಡ್ ಮಾಡಿಕೊಳ್ಳುವ ಉತ್ಸಾಹ ತೋರಿಸಿದ್ದವು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಅಂದುಕೊಂಡಂತೆ ವ್ಯವಹಾರಗಳು ನಡೆಯದ ಕಾರಣ ಈ ಫ್ರಾಂಚೈಸಿಗಳಿಗೆ ನಿರಾಸೆಯಾಯಿತು. ಆದರೆ ಅಂತಿಮವಾಗಿ ಕೆಕೆಆರ್ ತಂಡದ ಪಾಲಾಗಿದ್ದಾರೆ ಭಾರತದ ಸ್ಟಾರ್ ಆಟಗಾರ.

6ನೇ ಐಪಿಎಲ್ ತಂಡವನ್ನು ಸೇರಿಕೊಳ್ಳಲಿರುವ ಠಾಕೂರ್

6ನೇ ಐಪಿಎಲ್ ತಂಡವನ್ನು ಸೇರಿಕೊಳ್ಳಲಿರುವ ಠಾಕೂರ್

ಇನ್ನು ಟೀಮ್ ಇಂಡಿಯಾ ಪರವಾಗಿ ಸಾಕಷ್ಟು ಭರವಸೆಯ ಪ್ರದರ್ಶನ ನೀಡಿ ಮಿಂಚಿರುವ ಶಾರ್ದೂಲ್ ಠಾಕೂರ್ ಮುಂದಿನ ಐಪಿಎಲ್ ಆವೃತ್ತಿಗೆ ಕೆಕೆಆರ್ ತಂಡದ ಪಾಲಾಗುವ ಮೂಲಕ 6ನೇ ಫ್ರಾಂಚೈಸಿಗೆ ಸೇರಿಕೊಂಡಂತಾಗಿದೆ. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್, ಕಿಂಗ್ಸ್ XI ಪಂಜಾಬ್(ಈಗ ಪಂಜಾಬ್ ಕಿಂಗ್ಸ್) ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು.

ಟ್ರೇಡ್ ಮೂಲಕ 3ನೇ ಆಟಗಾರನನ್ನು ತೆಕ್ಕೆಗೆ ಹಾಕಿಕೊಂಡ ಕೆಕೆಆರ್

ಟ್ರೇಡ್ ಮೂಲಕ 3ನೇ ಆಟಗಾರನನ್ನು ತೆಕ್ಕೆಗೆ ಹಾಕಿಕೊಂಡ ಕೆಕೆಆರ್

ಇನ್ನು ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಗೂ ಮುನ್ನ ನಡೆಯುತ್ತಿರುವ ಆಟಗಾರರ ಬದಲಾವಣೆ ಪ್ರಕ್ರಿಯೆಯಲ್ಲಿ ಕೆಕೆಆರ್ ವಶಕ್ಕೆ ಪಡೆದುಕೊಂಡಿರುವ ಮೂರನೇ ಆಟಗಾರ ಶಾರ್ದೂಲ್ ಠಾಕೂರ್ ಆಗಿದ್ದಾರೆ. ಇದಕ್ಕೂ ಮುನ್ನ ನ್ಯೂಜಿಲೆಂಡ್‌ನ ವೇಗಿ ಲೂಕಿ ಫರ್ಗ್ಯೂಸನ್ ಹಾಗೂ ಅಫ್ಘಾನಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ರಹ್ಮನುಲ್ಲಾಹ್ ಗುರ್ಬಾಜ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಈ ಇಬ್ಬರು ಆಟಗಾರರು ಕೂಡ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡದ ಜೊತೆಗೆ ಟ್ರೇಡ್ ಮೂಲಕ ಕೆಕೆಆರ್ ಪಾಲಾಗಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, November 14, 2022, 17:47 [IST]
Other articles published on Nov 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X