ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ರಿಷಬ್ ಪಂತ್ ಐಪಿಎಲ್‌ನಲ್ಲಿ ಆಡುವುದಿಲ್ಲ ಎಂದ ಗಂಗೂಲಿ, ಡೆಲ್ಲಿ ಕ್ಯಾಪಿಟಲ್ಸ್‌ಗೆ ಶೀಘ್ರದಲ್ಲೇ ಹೊಸ ನಾಯಕನ ನೇಮಕ

IPL 2023: Delhi Capitals Director of Cricket Sourav Ganguly Confirms Rishabh Pant Out From IPL 2023

ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಿಷಬ್ ಪಂತ್ 2023ರ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಖಚಿತಪಡಿಸಿದೆ. ಡೆಲ್ಲಿ ಕ್ಯಾಪಿಟಲ್ಸ್‌ನ ಕ್ರಿಕೆಟ್‌ ನಿರ್ದೇಶಕ ಸೌರವ್ ಗಂಗೂಲಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿರುವ ರಿಷಬ್ ಪಂತ್ ಸದ್ಯ ಇಡೀ ಟೂರ್ನಿಯನ್ನು ತಪ್ಪಿಸಿಕೊಳ್ಳುವುದರಿಂದ, ತಂಡಕ್ಕೆ ಹೊಸ ನಾಯಕನನ್ನು ಶೀಘ್ರದಲ್ಲೇ ಆಯ್ಕೆ ಮಾಡುವುದಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತಿಳಿಸಿದೆ. ಈ ಮೊದಲು ರಿಷಬ್ ಪಂತ್ ಸುಧಾರಿಸಿಕೊಳ್ಳುವ ವಿಶ್ವಾಸದಲ್ಲಿದ್ದ ತಂಡ ಕಾದು ನೋಡಲು ನಿರ್ಧರಿಸಿತ್ತು.

ಆದರೆ, ಮುಂಬೈನ ಆಸ್ಪತ್ರೆಯ ವರದಿಗಳು, ಬಿಸಿಸಿಐ ಅಧಿಕಾರಿಗಳು ರಿಷಬ್ ಪಂತ್ ಕನಿಷ್ಠ 6-9 ತಿಂಗಳು ಕ್ರಿಕೆಟ್‌ನಿಂದ ದೂರವುಳಿಯಲಿದ್ದಾರೆ ಎಂದು ಹೇಳಿದ ನಂತರ ಡೆಲ್ಲಿ ಕ್ಯಾಪಿಟಲ್ಸ್ ಈ ನಿರ್ಣಯ ತೆಗೆದುಕೊಂಡಿದೆ.

Ranji Trophy: ಅಸ್ಸಾಂ ವಿರುದ್ಧ ಅಜೇಯ 240 ರನ್ ಚಚ್ಚಿದ ಪೃಥ್ವಿ ಶಾRanji Trophy: ಅಸ್ಸಾಂ ವಿರುದ್ಧ ಅಜೇಯ 240 ರನ್ ಚಚ್ಚಿದ ಪೃಥ್ವಿ ಶಾ

ಈ ಬಗ್ಗೆ ಮಾತನಾಡಿರುವ ಸೌರವ್ ಗಂಗೂಲಿ, "2023ರ ಐಪಿಎಲ್‌ಗಾಗಿ ರಿಷಬ್ ಪಂತ್ ಲಭ್ಯವಿರುವುದಿಲ್ಲ. ನಾನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೊತೆ ಸಂಪರ್ಕದಲ್ಲಿದ್ದೇನೆ, ನಾವು ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತೇವೆ. ರಿಷಬ್ ಪಂತ್ ಗಾಯಗೊಂಡು ಹೊರಗುಳಿಯುತ್ತಿರುವುದು ತಂಡದ ಮೇಲೆ ಪರಿಣಾಮ ಬೀರಲಿದೆ" ಎಂದು ತಿಳಿಸಿದ್ದಾರೆ.

IPL 2023: Delhi Capitals Director of Cricket Sourav Ganguly Confirms Rishabh Pant Out From IPL 2023

ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಪಂತ್

ಕಾರು ಅಪಘಾತದಲ್ಲಿ ಗಾಯಗೊಂಡಿರುವ ಪಂತ್ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅಸ್ಥಿರಜ್ಜು ಹರಿದಿದ್ದರಿಂದ ಅವರಿಗೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿತ್ತು.

ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಕನಿಷ್ಟ 4 ತಿಂಗಳು ವಿಶ್ರಾಂತಿ ಪಡೆಯಬೇಕು, ಆ ನಂತರ ಪಂತ್ ಫಿಟ್ ಆಗಲು 2 ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಇದರಿಂದ ಅವರು 2023ರ ಐಪಿಎಲ್‌ ಕಳೆದುಕೊಳ್ಳುವುದು ಖಚಿತವಾಗಿತ್ತು.

ಬಿಸಿಸಿಐ ಉನ್ನತ ಮೂಲಗಳ ಪ್ರಕಾರ ರಿಷಬ್ ಪಂತ್ 2023ರ ಏಕದಿನ ವಿಶ್ವಕಪ್‌ ಕೂಡ ಕಳೆದುಕೊಳ್ಳುವ ಸಾಧ್ಯತೆ ಇದೆ. ಅವರ ಪಾದದ ಅಸ್ಥಿರಜ್ಜು ಕೂಡ ಹರಿದಿರುವುದರಿಂದ ಅದಕ್ಕೂ ಶಸ್ತ್ರಚಿಕಿತ್ಸೆ ಮಾಡುವ ಸಾಧ್ಯತೆ ಇದ್ದು, ಕನಿಷ್ಠ 9 ತಿಂಗಳು ಅವರು ಕ್ರಿಕೆಟ್‌ನಿಂದ ದೂರವುಳಿಯಲಿದ್ದಾರೆ.

IPL 2023: Delhi Capitals Director of Cricket Sourav Ganguly Confirms Rishabh Pant Out From IPL 2023

ಪೂರ್ತಿ ಸಂಬಳ ಪಡೆಯಲಿರುವ ಪಂತ್

ರಿಷಬ್ ಪಂತ್ 2023ರ ಐಪಿಎಲ್‌ನಲ್ಲಿ ಆಡದೇ ಇದ್ದರೂ, ಒಪ್ಪಂದದಂತೆ 16 ಕೋಟಿ ರುಪಾಯಿ ಪೂರ್ತಿ ಸಂಬಳವನ್ನು ಪಡೆಯಲಿದ್ದಾರೆ. ಐಪಿಎಲ್‌ಗೆ ಆಯ್ಕೆಯಾದ ಆಟಗಾರರು ಗಾಯಗೊಂಡು ಟೂರ್ನಿಯಿಂದ ಹೊರಗುಳಿದರೆ, ಅಂತಹ ಆಟಗಾರರಿಗೆ ತಮ್ಮ ಸಂಬಳ ಪೂರ್ತಿ ಪಡೆಯಲು ಅವಕಾಶ ಇರುತ್ತದೆ. ಎಲ್ಲಾ ಫ್ರಾಂಚೈಸಿಗಳು ವಿಮೆ ಮಾಡಿಸಿದ್ದು, ಇಂತಹ ಸಂದರ್ಭದಲ್ಲಿ ವಿಮಾ ಕಂಪನಿ ಸಂಬಳವನ್ನು ಭರಿಸಲಿದೆ.

ಐಪಿಎಲ್ ಸಂಬಳದ ಜೊತೆಗೆ, ರಾಷ್ಟ್ರೀಯ ತಂಡದ ಜೊತೆ ಪಂತ್ ಮಾಡಿಕೊಂಡಿರುವ ಒಪ್ಪಂದದಂತೆ 5 ಕೋಟಿ ರುಪಾಯಿ ವೇತನವನ್ನು ನೀಡಲು ಬಿಸಿಸಿಐ ನಿರ್ಧಾರ ಮಾಡಿದೆ.

Story first published: Tuesday, January 10, 2023, 23:54 [IST]
Other articles published on Jan 10, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X