IPL 2023: ಆತ ಫಾರ್ಮ್‌ಗೆ ಮರಳಿದರೆ ಲಕ್ನೋ ಸೂಪರ್ ಜೈಂಟ್ಸ್‌ ಅಪಾಯಕಾರಿ ತಂಡವಾಗಲಿದೆ ಎಂದ ಮಾಜಿ ಕ್ರಿಕೆಟಿಗ

ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಐಪಿಎಲ್ 2023 ರಲ್ಲಿ ನಾಯಕ ಕೆಎಲ್ ರಾಹುಲ್ ಒಂದು ವೇಳೆ ಫಾರ್ಮ್ ಕಂಡುಕೊಂಡರೆ, ಅದು ತುಂಬಾ ಅಪಾಯಕಾರಿ ತಂಡವಾಗಲಿದೆ ಎಂದು ಸಜಯ್ ಮಂಜ್ರೇಕರ್ ಹೇಳಿದ್ದಾರೆ.

ಐಪಿಎಲ್‌ 2022 ರಲ್ಲಿನ ಪ್ರತಿಷ್ಠಿತ ಲೀಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಮ್ಮ ಚೊಚ್ಚಲ ಋತುವಿನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿತು. 2023ರ ಮಿನಿ ಹರಾಜಿಗೆ ಮುನ್ನ ಅವರು 15 ಆಟಗಾರರನ್ನು ಮಾತ್ರ ಉಳಿಸಿಕೊಂಡಿದ್ದಾರೆ, ಪರ್ಸ್‌ನಲ್ಲಿ 23.35 ಕೋಟಿ ರುಪಾಯಿ ಉಳಿಸಿಕೊಂಡಿದ್ದು, ಇನ್ನೂ 10 ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಅವಕಾಶವಿದೆ. ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯುವ ಮಿನಿ ಹರಾಜಿನಲ್ಲಿ ದೊಡ್ಡ ಆಟಗಾರರ ಮೇಲೆ ಎಲ್‌ಎಸ್‌ಜಿ ಕಣ್ಣಿಟ್ಟಿದೆ.

IPL Player Auction 2023: ಹರಾಜಿಗೆ ಮುನ್ನ ಆರ್‌ಸಿಬಿ ತಂಡ, ಆಟಗಾರರ ಸಂಬಳ, ಹರಾಜಿಗೆ ಉಳಿದಿರುವ ಹಣದ ವಿವರIPL Player Auction 2023: ಹರಾಜಿಗೆ ಮುನ್ನ ಆರ್‌ಸಿಬಿ ತಂಡ, ಆಟಗಾರರ ಸಂಬಳ, ಹರಾಜಿಗೆ ಉಳಿದಿರುವ ಹಣದ ವಿವರ

ಸ್ಟಾರ್ ಸ್ಪೋರ್ಟ್ಸ್ ಶೋ 'ಗೇಮ್ ಪ್ಲಾನ್' ನಲ್ಲಿ ಮಾತನಾಡಿದ ಸಂಜಯ್ ಮಂಜ್ರೇಕರ್, ರಾಹುಲ್ ಏನಾದರೂ ಫಾರ್ಮ್‌ಗೆ ಮರಳಿ ಆಕ್ರಮಣಕಾರಿಯಾಗಿ ಆಡಲು ಆರಂಭಿಸಿದರೆ, ಎದುರಾಳಿ ತಂಡಗಳಿಗೆ ಮಾರಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಲಕ್ನೋ ಸೂಪರ್ ಜೈಂಟ್ಸ್ ತಂಡ ಉತ್ತಮ ಆರಂಭಿಕ ಆಟಗಾರರನ್ನು ಹೊಂದಿದೆ. ಉತ್ತಮ-ಗುಣಮಟ್ಟದ ಆರಂಭಿಕರೊಂದಿಗೆ ಸುರಕ್ಷಿತವಾಗಿದ್ದಾರೆ. ಕೆಎಲ್ ರಾಹುಲ್ ಉತ್ತಮ ಋತುವನ್ನು ಹೊಂದಿದ್ದರೆ, ಅವರ ಒಟ್ಟು ರನ್‌ಗಳಂತೆಯೇ ಅವರ ಸ್ಟ್ರೈಕ್ ರೇಟ್ ಕೂಡ ಉತ್ತಮವಾಗಿದ್ದರೆ, ಅದು ಅಪಾಯಕಾರಿ ತಂಡವಾಗಿರುತ್ತದೆ." ಎಂದು ಹೇಳಿದರು.

ತಂಡಕ್ಕೆ 3ನೇ ಕ್ರಮಾಂಕದ ಬ್ಯಾಟರ್ ಅಗತ್ಯವಿದೆ

ಲಕ್ನೋ ತಂಡಕ್ಕೆ ಮೂರನೇ ಕ್ರಮಾಂಕದಲ್ಲಿ ಉತ್ತಮ ಬ್ಯಾಟರ್ ಅಗತ್ಯವಿದೆ ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ದೀಪಕ್ ಹೂಡಾ ತಂಡದಲ್ಲಿದ್ದಾರೆ ಆದರೆ, ಕೆಳ ಮಧ್ಯಮ ಕ್ರಮಾಂಕದಲ್ಲಿ ಮಾಡಲು ಸೂಕ್ತವಾಗಿದ್ದಾರೆ. 5 ಅಥವಾ 6ನೇ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂದು ಹೇಳಿದರು.

2022ರ ಆವೃತ್ತಿಯಲ್ಲಿ ದೀಪಕ್ ಹೂಡಾ ಉತ್ತಮ ಪ್ರದರ್ಶನ ನೀಡಿದ್ದರು. 15 ಪಂದ್ಯಗಳಲ್ಲಿ 32.21 ಸರಾಸರಿಯಲ್ಲಿ 136.66 ರ ಪ್ರಭಾವಶಾಲಿ ಸ್ಟ್ರೈಕ್ ರೇಟ್‌ನಲ್ಲಿ 451 ರನ್ ಗಳಿಸಿದ್ದರು. ಮಾರ್ಕಸ್ ಸ್ಟೊಯಿನಿಸ್ 0 ಇನ್ನಿಂಗ್ಸ್‌ಗಳಲ್ಲಿ 19.50 ಸರಾಸರಿಗಿಂತ ಕಡಿಮೆ ಸರಾಸರಿಯಲ್ಲಿ 156 ರನ್ ಗಳಿಸಿದರು.

ಕೃನಾಲ್ ಪಾಂಡ್ಯ 3 ಅಥವಾ 4ನೇ ಕ್ರಮಾಂಕದಲ್ಲಿ ಆಡುವ ಬ್ಯಾಟರ್ ಅಲ್ಲ, ಈ ಬಾರಿಯ ಮಿನಿ ಹರಾಜಿನಲ್ಲಿ ಎಲ್‌ಎಸ್‌ಜಿ ರಿಲೀ ರೊಸೊವ್ ಮತ್ತು ಕ್ಯಾಮರೂನ್ ಗ್ರೀನ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡರೆ ತಂಡದ ಬ್ಯಾಟಿಂಗ್ ಮತ್ತಷ್ಟು ಬಲಿಷ್ಠವಾಗಲಿದೆ. ಜೇಸನ್ ಹೋಲ್ಡರ್ ಬದಲಿಗೆ ಕ್ಯಾಮರೂನ್ ಗ್ರೀನ್ ಉತ್ತಮ ಆಯ್ಕೆಯಾಗಿದ್ದಾರೆ ಎಂದು ಮಂಜ್ರೇಕರ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, December 19, 2022, 23:49 [IST]
Other articles published on Dec 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X