ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಪೋಲಾರ್ಡ್ ಕೈಬಿಡುವ ಮುನ್ನ ಮುಂಬೈ ಇಂಡಿಯನ್ಸ್ ಸ್ವಲ್ಪ ಯೋಚಿಸಲಿ; ಮಾಜಿ ಕ್ರಿಕೆಟರ್

IPL 2023: Mumbai Indians Think Before Dropping Kieron Pollard Says Former Spinner Harbhajan Singh

ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಕಳೆದ ವರ್ಷದಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿತು ಮತ್ತು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿ, ತನ್ನ ಅಭಿಯಾನ ಮುಗಿಸಿತು.

ಆದರೂ, ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು 2023ರ ಐಪಿಎಲ್‌ನಲ್ಲಿ ಕೆಲವೊಂದು ಬದಲಾವಣೆಗಳೊಂದಿಗೆ ಹೋಗಲಿದೆ. ತಂಡದ ಆಧಾರಸ್ತಂಭವಾಗಿದ್ದ ಕೀರಾನ್ ಪೋಲಾರ್ಡ್ ಅವರನ್ನು ತಂಡಕ್ಕೆ ತಂಡದಿಂದ ಕೈಬಿಡಲು ಸಿದ್ಧವಾಗಿದೆ.

ಇಂಗ್ಲೆಂಡ್ ಬಳಸಿದ ಈ ಸೂತ್ರವನ್ನು ಭಾರತ ತಂಡ ಅಳವಡಿಸಿಕೊಳ್ಳಬೇಕು; ಅನಿಲ್ ಕುಂಬ್ಳೆ ಒತ್ತಾಯಇಂಗ್ಲೆಂಡ್ ಬಳಸಿದ ಈ ಸೂತ್ರವನ್ನು ಭಾರತ ತಂಡ ಅಳವಡಿಸಿಕೊಳ್ಳಬೇಕು; ಅನಿಲ್ ಕುಂಬ್ಳೆ ಒತ್ತಾಯ

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ ತಂಡದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್, ಐಪಿಎಲ್ 2023ರ ಪಂದ್ಯಾವಳಿಗಾಗಿ ಆಲ್‌ರೌಂಡರ್ ಕೀರಾನ್ ಪೊಲಾರ್ಡ್ ಅವರನ್ನು ಉಳಿಸಿಕೊಳ್ಳಲು ಮುಂಬೈ ಇಂಡಿಯನ್ಸ್ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಐಪಿಎಲ್ ಮಿನಿ ಹರಾಜಿಗೂ ಮುನ್ನ ಉಳಿಸಿಕೊಂಡವರ ಮತ್ತು ಕೈಬಿಟ್ಟವರ ಪಟ್ಟಿ ನೀಡಲು ಇನ್ನು ಕೇವಲ ಒಂದು ದಿನ (ನವೆಂಬರ್ 15) ಮಾತ್ರ ಬಾಕಿ ಇದೆ. ಐದು ಬಾರಿಯ ಐಪಿಎಲ್ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಇದೀಗ ಮುಂದಿನ 4-5 ವರ್ಷಗಳವರೆಗೆ ಸೇವೆ ಸಲ್ಲಿಸುವ ಆಟಗಾರರನ್ನು ಆಯ್ಕೆಮಾಡಿಕೊಳ್ಳಬೇಕು ಎಂದು ಆಝಿ ಸ್ಪಿನ್ನರ್ ಹರ್ಭಜನ್ ಸಿಂಗ್ ತಿಳಿಸಿದರು.

2022ರ ಐಪಿಎಲ್‌ಗೆ ಮುಂಚಿತವಾಗಿ ಕೀರಾನ್ ಪೊಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್ 6 ಕೋಟಿ ರೂ.ಗೆ ರಿಟೇನ್ ಮಾಡಿಕೊಂಡಿತ್ತು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಪೊಲಾರ್ಡ್, ಐಪಿಎಲ್‌ನ ಯಶಸ್ವಿ ತಂಡದ ಪರ ಅಬ್ಬರಿಸಲು ವಿಫಲರಾದರು. ಕೀರಾನ್ ಪೊಲಾರ್ಡ್ ಐಪಿಎಲ್‌ನ 11 ಪಂದ್ಯಗಳಲ್ಲಿ 107ರ ಸ್ಟ್ರೈಕ್ ರೇಟ್‌, 15ಕ್ಕಿಂತ ಕಡಿಮೆ ಸರಾಸರಿಯಲ್ಲಿ ಕೇವಲ 144 ರನ್ ಗಳಿಸಿದರು. ಇದು ಮುಂಬೈ ಇಂಡಿಯನ್ಸ್ ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಗಲು ಕಾರಣವಾಯಿತು.

IPL 2023: Mumbai Indians Think Before Dropping Kieron Pollard Says Former Spinner Harbhajan Singh

ಕೀರಾನ್ ಪೊಲಾರ್ಡ್ 2010ರಲ್ಲಿ ಫ್ರಾಂಚೈಸ್‌ಗೆ ಸಹಿ ಹಾಕಿದ ನಂತರ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡಿದ್ದಾರೆ. ಮಾಜಿ ವೆಸ್ಟ್ ಇಂಡೀಸ್ ನಾಯಕ ಪೋಲಾರ್ಡ್ ಐಪಿಎಲ್‌ನಲ್ಲಿ 3412 ರನ್ ಗಳಿಸಿದ್ದಾರೆ ಮತ್ತು 69 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಇದುವರೆಗಿನ ಅವರ ತಂಡ ಚಾಂಪಿಯನ್ ಆದಾಗಲೆಲ್ಲಾ ಪ್ರಮುಖ ಪಾತ್ರ ವಹಿಸಿದ್ದಾರೆ.

ಮುಂಬೈ ಇಂಡಿಯನ್ಸ್ 5 ಬಾರಿಯ ಚಾಂಪಿಯನ್ ತಂಡ. ಇದನ್ನೇ ಮುಂದುವರೆಸಿಕೊಂಡು ಹೋಗಲು ಫಿನಿಶರ್ ಪಾತ್ರಕ್ಕಾಗಿ ಬೇರೊಬ್ಬ ಆಟಗಾರನನ್ನು ನೋಡಬೇಕು. ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಉತ್ತಮ ಫಿನಿಶರ್ ಆಗಿ ವಿಕಸನಗೊಳ್ಳಬಹುದು ಎಂದು ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದರು.

"ಹಲವು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಕೀರಾನ್ ಪೋಲರ್ಡ್‌ರನ್ನು ಬಿಡುಗಡೆ ಮಾಡುವುದು ತುಂಬಾ ಕಷ್ಟಕರವಾಗಿದೆ. ಅವರು ಹಲವು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಆಡುತ್ತಿದ್ದಾರೆ. ತಂಡದ ಮ್ಯಾನೇಜ್‌ಮೆಂಟ್ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಸಂದರ್ಭ ಬಂದಿದೆ. ಏಕೆಂದರೆ ಮುಂದಿನ 4-5 ವರ್ಷಗಳ ಕಾಲ ತಂಡವನ್ನು ರಚಿಸಿ ಮತ್ತು ಕೀರಾನ್ ಪೊಲಾರ್ಡ್ ಸ್ಥಾನ ತುಂಬಬಲ್ಲ ಬ್ಯಾಟ್ಸ್‌ಮನ್‌ಗಾಗಿ ಹುಡುಕಲು ಪ್ರಯತ್ನಿಸಿ," ಹರ್ಭಜನ್ ಸಿಂಗ್ ಕಿವಿಮಾತು ಹೇಳಿದ್ದಾರೆ.

ಇದಲ್ಲದೆ, ಇದೇ ಡಿಸೆಂಬರ್‌ನಲ್ಲಿ ನಡೆಯಲಿರುವ ಐಪಿಎಲ್ 2023 ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ತಿಳಿಸಿದರು.

Story first published: Monday, November 14, 2022, 22:53 [IST]
Other articles published on Nov 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X