ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಡಿಸೆಂಬರ್ 23ರ ಹರಾಜಿನಲ್ಲಿ 2 ಕೋಟಿ ರೂ. ಬೆಲೆಯಲ್ಲಿರುವ ಆಟಗಾರರ ಪಟ್ಟಿ

IPL 2023: Players List With Rs 2 Crore Base Price In IPL Auction

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2023ರ ಐಪಿಎಲ್‌ಗಾಗಿ ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಸಲಿದೆ.

ಇದೀಗ ಹರಾಜಾಗಲು ಸಿದ್ಧರಿರುವ ಆಟಗಾರರ ಶಾರ್ಟ್‌ಲಿಸ್ಟ್ ಅನ್ನು ಬಿಸಿಸಿಐ ಮಂಗಳವಾರ, ಡಿಸೆಂಬರ್ 13ರಂದು ಪ್ರಕಟಿಸಿದೆ. 10 ತಂಡಗಳೊಂದಿಗೆ ಸಮಾಲೋಚಿಸಿದ ನಂತರ 132 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 405 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ.

IND vs BAN 1st Test: ಈತ ಭಾರತ ತಂಡದ ಉಪನಾಯಕನಾಗಿದ್ದು ಆಘಾತಕಾರಿ ಎಂದ ಮೊಹಮ್ಮದ್ ಕೈಫ್!IND vs BAN 1st Test: ಈತ ಭಾರತ ತಂಡದ ಉಪನಾಯಕನಾಗಿದ್ದು ಆಘಾತಕಾರಿ ಎಂದ ಮೊಹಮ್ಮದ್ ಕೈಫ್!

10 ತಂಡಗಳು ನವೆಂಬರ್‌ನಲ್ಲಿ ತಮ್ಮ ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರನ್ನು ಘೋಷಿಸಿದ ನಂತರ, 991 ಆಟಗಾರರು ಐಪಿಎಲ್ 2023 ಹರಾಜಿಗೆ ಸಹಿ ಹಾಕಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿತ್ತು.

ಅನಂತರ, 369 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು ಮತ್ತು ತಂಡಗಳು ತಮ್ಮ ವಿನಂತಿಗಳನ್ನು ಸಲ್ಲಿಸಿದ ನಂತರ ಇನ್ನೂ 36 ಆಟಗಾರರನ್ನು ಪಟ್ಟಿಗೆ ಸೇರಿಸಲಾಗಿದೆ.

2 ಕೋಟಿ, 1.5 ಕೋಟಿ ಮತ್ತು 1 ಕೋಟಿ ವಿಭಾಗ

2 ಕೋಟಿ, 1.5 ಕೋಟಿ ಮತ್ತು 1 ಕೋಟಿ ವಿಭಾಗ

ಐಪಿಎಲ್ 2023ರ ಟೂರ್ನಿಗಾಗಿ ಎಲ್ಲಾ 10 ತಂಡಗಳ ಉಳಿಸಿಕೊಳ್ಳುವ ಮತ್ತು ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ, ಮಿನಿ ಹರಾಜಿನಲ್ಲಿ ಒಟ್ಟು 87 ಸ್ಲಾಟ್‌ಗಳು ಲಭ್ಯವಿರುತ್ತವೆ. 42.25 ಕೋಟಿ ರೂಪಾಯಿಗಳ ಹೆಚ್ಚಿನ ಮೊತ್ತದೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಹರಾಜಿಗೆ ಹೋಗಲಿದೆ.

ಶಾರ್ಟ್‌ಲಿಸ್ಟ್ ಆಟಗಾರರನ್ನು ಅವರ ಮೂಲ ಬೆಲೆಯ ಆಧಾರದ ಮೇಲೆ ವರ್ಗೀಕರಿಸಲಾಗಿದೆ. 2 ಕೋಟಿ ರೂ., 1.5 ಕೋಟಿ ರೂ. 1 ಕೋಟಿ ರೂ. ಎಂಬ ವಿಭಾಗಗಳನ್ನಾಗಿ ಮಾಡಲಾಗಿದೆ. ಅನ್‌ಕ್ಯಾಪ್ಡ್ ಆಟಗಾರರು 20 ಲಕ್ಷಕ್ಕಿಂತ ಹೆಚ್ಚಿನ ಮೂಲ ಬೆಲೆಯಲ್ಲಿ ತಮ್ಮನ್ನು ಪಟ್ಟಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

27 ಆಟಗಾರರನ್ನು ಹೊಂದಿರುವ ಇಂಗ್ಲೆಂಡ್

27 ಆಟಗಾರರನ್ನು ಹೊಂದಿರುವ ಇಂಗ್ಲೆಂಡ್

ಇಂಗ್ಲೆಂಡ್ 27 ಆಟಗಾರರೊಂದಿಗೆ ಅತಿ ಹೆಚ್ಚು ಶಾರ್ಟ್‌ಲಿಸ್ಟ್ ಮಾಡಿದ ಆಟಗಾರರನ್ನು ಹೊಂದಿದ್ದರೆ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ 22 ಮತ್ತು 21 ಆಟಗಾರರೊಂದಿಗೆ ಅಗ್ರ 3 ಸ್ಥಾನಗಳನ್ನು ಪೂರ್ಣಗೊಳಿಸಿವೆ.

ನೆದರ್ಲ್ಯಾಂಡ್ಸ್ ಮತ್ತು ಯುಎಇ ಕೂಡ ತಲಾ ಒಬ್ಬರು ಶಾರ್ಟ್‌ಲಿಸ್ಟ್ ಮಾಡಿದ ಆಟಗಾರರನ್ನು ಹೊಂದಿದ್ದರೆ, ಬಾಂಗ್ಲಾದೇಶ ಮತ್ತು ಐರ್ಲೆಂಡ್ ತಲಾ 4 ಶಾರ್ಟ್‌ಲಿಸ್ಟ್ ಆಟಗಾರರನ್ನು ಹೊಂದಿವೆ. ಜಿಂಬಾಬ್ವೆ ಮತ್ತು ನಮೀಬಿಯಾ ಕೂಡ ತಲಾ 2 ಶಾರ್ಟ್‌ಲಿಸ್ಟ್ ಆಟಗಾರರನ್ನು ಹೊಂದಿದೆ.

ಭಾರತೀಯ ಆಟಗಾರರು 2 ಕೋಟಿ ಪಟ್ಟಿಯಲ್ಲಿ ಹೆಸರು ಪಡೆದಿಲ್ಲ

ಭಾರತೀಯ ಆಟಗಾರರು 2 ಕೋಟಿ ಪಟ್ಟಿಯಲ್ಲಿ ಹೆಸರು ಪಡೆದಿಲ್ಲ

19 ಆಟಗಾರರು 2 ಕೋಟಿ ರೂ., 11 ಆಟಗಾರರು 1.5 ಕೋಟಿ ರೂ. ಮತ್ತು 20 ಆಟಗಾರರು 1 ಕೋಟಿ ರೂ.ಗಳ ಅತ್ಯಧಿಕ ಮೂಲ ಬೆಲೆಯ ಪಟ್ಟಿಯಲ್ಲಿದ್ದಾರೆ.

ವಿಪರ್ಯಾಸವೆಂದರೆ, ಯಾವುದೇ ಭಾರತೀಯ ಆಟಗಾರರು 2 ಕೋಟಿ ರೂ. ಮೂಲ ಬೆಲೆಯ ಪಟ್ಟಿಯಲ್ಲಿ ಹೆಸರು ಪಡೆದಿಲ್ಲ. ಈ ಪಟ್ಟಿಯಲ್ಲಿ ಒಟ್ಟು 19 ಆಟಗಾರರಿದ್ದಾರೆ.

2 ಕೋಟಿ ರೂ. ಮೂಲ ಬೆಲೆ ಹೊಂದಿರುವ ಆಟಗಾರರು

2 ಕೋಟಿ ರೂ. ಮೂಲ ಬೆಲೆ ಹೊಂದಿರುವ ಆಟಗಾರರು

1) ಬೆನ್ ಸ್ಟೋಕ್ಸ್ (ಇಂಗ್ಲೆಂಡ್)

2) ಫಿಲ್ ಸಾಲ್ಟ್ (ಇಂಗ್ಲೆಂಡ್)

3) ಸ್ಯಾಮ್ ಕುರ್ರಾನ್ (ಇಂಗ್ಲೆಂಡ್)

4) ಟಾಮ್ ಬ್ಯಾಂಟನ್ (ಇಂಗ್ಲೆಂಡ್)

5) ಕ್ರಿಸ್ ಜೋರ್ಡಾನ್ (ಇಂಗ್ಲೆಂಡ್)

6) ಆದಿಲ್ ರಶೀದ್ (ಇಂಗ್ಲೆಂಡ್)

7) ಜೇಮೀ ಓವರ್ಟನ್ (ಇಂಗ್ಲೆಂಡ್)

8) ಕ್ರೇಗ್ ಓವರ್ಟನ್ (ಇಂಗ್ಲೆಂಡ್)

9) ಟೈಮಲ್ ಮಿಲ್ಸ್ (ಇಂಗ್ಲೆಂಡ್)

10) ಕ್ಯಾಮರೂನ್ ಗ್ರೀನ್ (ಆಸ್ಟ್ರೇಲಿಯಾ)

11) ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)

12) ಕ್ರಿಸ್ ಲಿನ್ (ಆಸ್ಟ್ರೇಲಿಯಾ)

13) ರಿಲೀ ರೋಸ್ಸೌ (ದಕ್ಷಿಣ ಆಫ್ರಿಕಾ)

14) ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)

15) ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್)

16) ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್)

17) ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ದಕ್ಷಿಣ ಆಫ್ರಿಕಾ)

18) ಜೇಮ್ಸ್ ನೀಶಮ್ (ನ್ಯೂಜಿಲೆಂಡ್)

19) ಆಡಮ್ ಮಿಲ್ನೆ (ನ್ಯೂಜಿಲೆಂಡ್)

Story first published: Tuesday, December 13, 2022, 22:31 [IST]
Other articles published on Dec 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X