ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೇ ಉಳಿಯಲಿದ್ದಾರೆ ರವೀಂದ್ರ ಜಡೇಜಾ: ವರದಿ

IPL 2023: Reports says Ravindra Jadeja not to leave CSK as skipper MS Dhoni wants him to stay

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕಳೆದ ಆವೃತ್ತಿಯ ಆರಂಭದಲ್ಲಿ ನಾಯಕತ್ವ ವಹಿಸಿಕೊಂಡಿದ್ದ ರವೀಂದ್ರ ಜಡೇಜಾ ಬಳಿಕ ನಾಯಕತ್ವ ತೊರೆದಿದ್ದರು ಮಾತ್ರವಲ್ಲದೆ ಗಾಯದ ಕಾರಣ ನೀಡಿ ಅಂತಿಮ ಕೆಲ ಪಂದ್ಯಗಳಿಂದ ಹೊರಗುಳಿಸಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದ ರವೀಂದ್ರ ಜಡೇಜಾ ಮುಂದಿನ ಆವೃತ್ತಿಯಲ್ಲಿ ಚೆನ್ನ ಸೂಪರ್ ಕಿಂಗ್ಸ್ ತಂಡದಲ್ಲಿ ಮುಂದುಯವರಿಯುವುದಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು. ಆದರೆ ಈಗ ಬಂದಿರುವ ವರದಿಗಳ ಪ್ರಕಾರ ರವೀಂದ್ರ ಜಡೇಜಾ ಮುಂದಿನ ಆವೃತ್ತಿಯಲ್ಲಿಯೂ ಸಿಎಸ್‌ಕೆ ತಂಡದಲ್ಲಿಯೇ ಮುಂದುವರಿಯಲಿದ್ದಾರೆ ಎನ್ನಲಾಗಿದೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿಗೆ ರವೀಂದ್ರ ಜಡೇಜಾ ತಂಡದಿಂದ ಹೊರಬೀಳುವುದು ಇಷ್ಟವಿಲ್ಲ ಎನ್ನಲಾಗಿದೆ. ತ

 IND vs BAN: ಆಸ್ಟ್ರೇಲಿಯದ ನೆಚ್ಚಿನ ಪಿಚ್‌ನಲ್ಲಿ ಮುಂದುವರೆದ ಕಿಂಗ್ ಕೊಹ್ಲಿ ಪರಾಕ್ರಮ; ಇಲ್ಲಿದೆ ಅಂಕಿಅಂಶ IND vs BAN: ಆಸ್ಟ್ರೇಲಿಯದ ನೆಚ್ಚಿನ ಪಿಚ್‌ನಲ್ಲಿ ಮುಂದುವರೆದ ಕಿಂಗ್ ಕೊಹ್ಲಿ ಪರಾಕ್ರಮ; ಇಲ್ಲಿದೆ ಅಂಕಿಅಂಶ

ಕಳೆದ ಐಪಿಎಲ್ ಆವೃತ್ತಿ ಆವೃತ್ತಿಯ ಆರಂಭಕ್ಕೆ ಕೆಲವೇ ದಿನಗಳಿದ್ದಾಗ ಎಂಎಸ್ ಧೋನಿ ನಾಯಕತ್ವವನ್ನು ತೊರೆದು ರವೀಂದ್ರ ಜಡೇಜಾಗೆ ನಾಯಕತ್ವದ ಹೊಣೆಗಾರಿಗೆ ನೀಡಲಾಗಿತ್ತು. ಸಿಎಸ್‌ಕೆ ತಂಡದಲ್ಲಿ ದಶಕಕ್ಕೂ ಹೆಚ್ಚು ಕಾಲ ಪ್ರಮುಖ ಆಟಗಾರನಾಗಿ ಗುರಿತಿಸಿಕೊಂಡಿದ್ದ ಜಡೇಜಾ ನಾಯಕತ್ವಕ್ಕೆ ಅರ್ಹ ಆಟಗಾರ ಎಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ ಹಾಲಿ ಚಾಂಪಿಯನ್ ಆಗಿ ಜಡೇಜಾ ನೇತೃತ್ವದಲ್ಲಿ ಕಣಕ್ಕಿಳಿದ ಸಿಎಸ್‌ಕೆ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಲು ಆರಂಭಿಸಿತ್ತು. ಅಲ್ಲದೆ ರವೀಮದ್ರ ಜಡೇಜಾ ಪ್ರದರ್ಶಣ ಕೂಡ ತೀರಾ ಕಳಪೆಯಾಗಿತ್ತು. ಹೀಗಾಗಿ ರವೀಂದ್ರ ಜಡೇಜಾ ನಾಯಕತ್ವದಿಂದ ಕೆಳಗಿಳಿದು ಮತ್ತೆ ಧೋನಿ ತಂಡದ ನೇತೃತ್ವ ವಹಿಸಿಕೊಂಡರು.

ಭಾರತದ ವಿರುದ್ಧ ಪ್ರತಿ ಬಾರಿಯೂ ಹೀಗೆಯೇ ಆಗುತ್ತಿದೆ!: ಸೋತ ಬಳಿಕ ಅಳಲು ತೋಡಿಕೊಂಡ ಬಾಂಗ್ಲಾ ನಾಯಕಭಾರತದ ವಿರುದ್ಧ ಪ್ರತಿ ಬಾರಿಯೂ ಹೀಗೆಯೇ ಆಗುತ್ತಿದೆ!: ಸೋತ ಬಳಿಕ ಅಳಲು ತೋಡಿಕೊಂಡ ಬಾಂಗ್ಲಾ ನಾಯಕ

ಇದೇ ಸಂದರ್ಭದಲ್ಲಿ ಪಂದ್ಯದಲ್ಲಿ ಜಡೇಜಾ ಗಾಯಗೊಂಡು ಟೂರ್ನಿಯ ಉಳಿದ ಪಂದ್ಯಗಳಿಗೆ ಅಲಭ್ಯವಾದರು. ಈ ಬೆಳವಣಿಗೆಗಳ ಬಳಿಕ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಹಾಗೂ ಜಡೇಜಾ ಮಧ್ಯೆ ಎಲ್ಲವೂ ಸರಿಯಾಗಿಲ್ಲ ಎಂಬ ಬಗ್ಗೆ ಆಗಾಗ ವರದಿಗಳಾಗುತ್ತಲೇ ಇದೆ. ಮುಂದಿನ ಆವೃತ್ತಿಯಲ್ಲಿ ಜಡೇಜಾ ಬೇರೆ ತಂಡದ ಪರವಾಗಿ ಆಡುವುದು ಖಚಿತ ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗಿದ್ದವು. ಆದರೆ ಈಗ ಅದಕ್ಕೆ ವ್ಯತಿರಿಕ್ತವಾದ ವರದಿಗಳು ಬರುತ್ತಿದ್ದು ಕುತೂಹಲ ಮೂಡಿಸಿದೆ.

ಇನ್ನು ಮುಂದಿನ ಆವೃತ್ತಿಗೂ ಮುನ್ನ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಡಿಸೆಂಬರ್ 16ರಂದು ನಡೆಯುವ ನಿರೀಕ್ಷೆಯಿದೆ. ಇದಕ್ಕೂ ಮುನ್ನ ಸಿಎಸ್‌ಕೆ ತಂಡ ಕ್ರಿಸ್ ಜೋರ್ಡನ್ ಹಾಗೂ ಆಡಮ್ ಮಿಲ್ನೆಡ ಅವರನ್ನು ಹರಾಜಿಗೆ ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

Story first published: Friday, November 4, 2022, 23:33 [IST]
Other articles published on Nov 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X