ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL Auction 2023: ಪಿಎಸ್‌ಎಲ್‌ನಲ್ಲಿ ಕಡೆಗಣಿಸಿದ ಮೂವರು ಕ್ರಿಕೆಟಿಗರಿಗೆ ಐಪಿಎಲ್‌ನಲ್ಲಿ ಒಲಿಯಿತು ಅದೃಷ್ಟ

IPL Auction 2023: These 3 Players Who Were Ignored In PSL And To Will Be Part of IPL 2023

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಹರಾಜು ಮತ್ತು ಪಾಕಿಸ್ತಾನ ಸೂಪರ್ ಲೀಗ್ ಡ್ರಾಫ್ಟ್ 2023ರ ಎರಡೂ ಡಿಸೆಂಬರ್ 2022ರಲ್ಲಿ ನಡೆದವು. ಡಿಸೆಂಬರ್ 15ರಂದು ಪಿಎಸ್‌ಎಲ್‌ 2023ರ ಆವೃತ್ತಿಗೆ ಆಟಗಾರರನ್ನು ಡ್ರಾಫ್ಟ್ ಮಾಡಲಾಯಿತು. ಡಿಸೆಂಬರ್ 23ರಂದು ಐಪಿಎಲ್ ಮಿನಿ ಹರಾಜು ನಡೆಯಿತು.

ಭಾರತ ಮತ್ತು ಪಾಕಿಸ್ತಾನವನ್ನು ಹೊರತುಪಡಿಸಿ ಹಲವು ವಿದೇಶಿ ಆಟಗಾರರಿಗೆ ಈ ಟೂರ್ನಿಗಳು ಪ್ರಮುಖವಾಗಿದೆ. ಕೆಲವು ಆಟಗಾರರು 2023ರಲ್ಲಿ ಐಪಿಎಲ್‌ ಮತ್ತು ಪಿಎಸ್‌ಎಲ್‌ ತಂಡದ ಭಾಗವಾಗಲಿದ್ದಾರೆ.

ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಶೀದ್ ಖಾನ್, ರೋವ್‌ಮನ್ ಪೊವೆಲ್, ಭಾನುಕಾ ರಾಜಪಕ್ಸೆ, ವನಿಂದು ಹಸರಂಗಾ, ಡೇವಿಡ್ ವೈಸ್, ರಹಮಾನುಲ್ಲಾ ಗುರ್ಬಾಜ್ ಮತ್ತು ಫಜಲ್ಹಕ್ ಫಾರೂಕಿ ಐಪಿಎಲ್‌ ಮತ್ತು ಪಿಎಸ್‌ಎಲ್‌ ಎರಡೂ ಪಂದ್ಯಾವಳಿಗಳಲ್ಲಿ ಆಡಲಿದ್ದಾರೆ.

ಕ್ರಿಕೆಟ್ ಜೀವನವೇ ಅಂತ್ಯವಾಗುತ್ತಿತ್ತು : ಗಾಯಗೊಂಡ ಘಟನೆಯನ್ನು ವಿವರಿಸಿದ ಮ್ಯಾಕ್ಸ್‌ವೆಲ್ಕ್ರಿಕೆಟ್ ಜೀವನವೇ ಅಂತ್ಯವಾಗುತ್ತಿತ್ತು : ಗಾಯಗೊಂಡ ಘಟನೆಯನ್ನು ವಿವರಿಸಿದ ಮ್ಯಾಕ್ಸ್‌ವೆಲ್

ಆದರೆ, ಪಾಕಿಸ್ತಾನ ಸೂಪರ್ ಲೀಗ್‌ನ 2023ರ ಡ್ರಾಫ್ಟ್‌ನಲ್ಲಿ ಪ್ರಮುಖ ಮೂವರು ವಿದೇಶಿ ಆಟಗಾರರನ್ನು ನಿರ್ಲಕ್ಷಿಸಲಾಯಿತು. ಪಿಎಸ್‌ಎಲ್‌ ಡ್ರಾಫ್ಟ್‌ನಲ್ಲಿ ನಿರ್ಲಕ್ಷಿಸಿದರೂ ಇವರು ಐಪಿಎಲ್‌ ಮಿನಿ ಹರಾಜಿನಲ್ಲಿ ವಿವಿಧ ತಂಡಗಳನ್ನು ಸೇರಿಕೊಂಡರು. ಇವರು 2023ರ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

ಆರ್​ಸಿಬಿ ಸೇರಿದ ರೀಸ್ ಟೋಪ್ಲಿ

ಆರ್​ಸಿಬಿ ಸೇರಿದ ರೀಸ್ ಟೋಪ್ಲಿ

ಇಂಗ್ಲೆಂಡ್‌ನ ಎಡಗೈ ವೇಗದ ಬೌಲರ್ ರೀಸ್ ಟೋಪ್ಲಿ ಪಿಎಸ್‌ಎಲ್‌ 2023ರ ಡ್ರಾಫ್ಟ್‌ಗಾಗಿ ನೋಂದಾಯಿಸಿಕೊಂಡಿದ್ದರು. ಆದರೆ, ಯಾವುದೇ ತಂಡಗಳು ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಆಸಕ್ತಿ ತೋರಿಸಲಿಲ್ಲ.

2022ರಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಅವರನ್ನು ಡ್ರಾಫ್ಟ್‌ನಲ್ಲಿ ಆಯ್ಕೆ ಮಾಡಿಕೊಂಡಿತ್ತು, ಆದರೆ ಟೋಪ್ಲಿ ಒಪ್ಪಂದದಿಂದ ಹಿಂದೆ ಸರಿದ್ದರು. ನಂತರ ಅವರ ಬದಲಾಗಿ ವಕಾಸ್ ಮಕ್ಸೂದ್ ಇಸ್ಲಾಮಾಬಾದ್ ತಂಡದಲ್ಲಿ ಸ್ಥಾನ ಪಡೆದರು. ಇದೇ ಕಾರಣಕ್ಕೆ ಟೋಪ್ಲಿ ಅವರನ್ನು ತಂಡಗಳು ನಿರ್ಲಕ್ಷಿಸಿರುವ ಸಾಧ್ಯತೆ ಇದೆ.

ಟೋಪ್ಲಿಈ ಮೊದಲು ಐಪಿಎಲ್ ಆಡಿರಲಿಲ್ಲ. ಆದರೆ ಈ ಬಾರಿ ಅವರನ್ನು 1.9 ಕೋಟಿ ರುಪಾಯಿ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿ ಮಾಡಿದೆ. ಟೋಪ್ಲಿಯನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, ಉತ್ತಮ ನಿರ್ಧಾರ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟದ್ದಾರೆ. 2023ರ ಐಪಿಎಲ್‌ನಲ್ಲಿ ಟೋಪ್ಲಿ ಜೋಶ್ ಹೇಜಲ್‌ವುಡ್‌ಗೆ ಬ್ಯಾಕಪ್ ಆಯ್ಕೆಯಾಗುವ ಸಾಧ್ಯತೆಯಿದೆ.

ಕೆಕೆಆರ್ ತಂಡ ಸೇರಿದ ಶಕೀಬ್

ಕೆಕೆಆರ್ ತಂಡ ಸೇರಿದ ಶಕೀಬ್

ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ 2022 ರಲ್ಲಿ ಐಪಿಎಲ್‌ನ ಭಾಗವಾಗಿರಲಿಲ್ಲ. ಆದರೆ, 2023ರ ಮಿನಿಹರಾಜಿನಲ್ಲಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಮೂಲ ಬೆಲೆ 1.5 ಕೋಟಿ ರುಪಾಯಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಅಚ್ಚರಿ ಎನ್ನುವಂತೆ ಶಕೀಬ್ ಅಲ್‌ ಹಸನ್‌ರನ್ನು ಪಿಎಸ್‌ಎಲ್‌ 2023ರ ಡ್ರಾಫ್ಟ್‌ನಲ್ಲಿ ಯಾವುದೇ ತಂಡಗಳು ಆಯ್ಕೆ ಮಾಡಿಕೊಳ್ಳಲಿಲ್ಲ.

ಕೆಕೆಆರ್ ತಂಡ ಸೇರಿಕೊಂಡ ಲಿಟ್ಟನ್ ದಾಸ್

ಕೆಕೆಆರ್ ತಂಡ ಸೇರಿಕೊಂಡ ಲಿಟ್ಟನ್ ದಾಸ್

2022 ರ ಟಿ 20 ವಿಶ್ವಕಪ್‌ನಲ್ಲಿ ಅಡಿಲೇಡ್ ಓವಲ್‌ನಲ್ಲಿ ಭಾರತದ ವಿರುದ್ಧ ಗುಂಪು-ಹಂತದ ಪಂದ್ಯದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ಲಿಟ್ಟನ್ ದಾಸ್ ಫ್ರಾಂಚೈಸಿಗಳ ಗಮನ ಸೆಳೆದರು.

ಡಿಸೆಂಬರ್ 23 ರಂದು ನಡೆದ ಮಿನಿ ಹರಾಜಿನಲ್ಲಿ ಲಿಟ್ಟನ್ ದಾಸ್ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡರು. ಶಕೀಬ್ ಅಲ್‌ ಹಸನ್‌ರಂತೆ ಲಿಟ್ಟನ್ ದಾಸ್‌ ಮೂಲ ಬೆಲೆ 50 ಲಕ್ಷ ರುಪಾಯಿಗೆ ಕೆಕೆಆರ್ ತಂಡದ ಪಾಲಾದರು.

ಪಿಎಸ್‌ಎಲ್‌ 2023ರ ಡ್ರಾಫ್ಟ್‌ನಲ್ಲಿ ಲಿಟ್ಟನ್ ದಾಸ್ ಆಯ್ಕೆಯಾಗಲಿಲ್ಲ, ಅವರು ಆಟಗಾರರ ಡ್ರಾಫ್ಟ್‌ನ ಡೈಮಂಡ್ ವಿಭಾಗದಲ್ಲಿದ್ದರು.

Story first published: Wednesday, December 28, 2022, 5:35 [IST]
Other articles published on Dec 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X