ಐಪಿಎಲ್: ಅತಿ ಹೆಚ್ಚು ರನ್ ಗಳಿಕೆಯಲ್ಲಿ ರೋಹಿತ್ ಹಿಂದಿಕ್ಕಿದ ಧವನ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಲ್ಲಾ ಸೀಸನ್ ಸೇರಿಸಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರು ಮೇಲಕ್ಕೇರಿದ್ದಾರೆ. ಇದಲ್ಲದೆ, ಐಪಿಎಲ್ 13ರಲ್ಲಿ 600ರನ್ ಕಲೆ ಹಾಕಿದ್ದಾರೆ.

ಕಿಂಗ್ಸ್ ಎಲೆವನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಅವರು ಈ ಐಪಿಎಲ್ ನಲ್ಲಿ 600 ರನ್ ಕಲೆ ಹಾಕಿದ ಮೊದಲ ಆಟಗಾರರಾಗಿದ್ದರೆ, ಧವನ್ ಈ ಸಾಧನೆ ಮಾಡಿದ ಎರಡನೇ ಆಟಗಾರರಾಗಿದ್ದಾರೆ. ಡೆಲ್ಲಿ ತಂಡದ ಪರ ಈ ಹಿಂದೆ ರಿಷಬ್ ಪಂತ್ ಅವರು 600 ಪ್ಲಸ್ ರನ್ ಗಳಿಸಿದ್ದರು. ಈಗ ಗಬ್ಬರ್ ಧವನ್ ಈ ಸಾಧನೆ ಮಾಡಿದ್ದಾರೆ.

ದಾಖಲೆ: ಮೊದಲ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದ ಡೆಲ್ಲಿ

ಅಬುದಾಭಿಯಲ್ಲಿ ಭಾನುವಾರ(ನ.8) ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಎಡಗೈ ಬ್ಯಾಟ್ಸ್ ಮನ್ ಧವನ್ ಅವರು 50 ಎಸೆತಗಳಲ್ಲಿ 78ರನ್ ( 2 ಸಿಕ್ಸರ್, 6 ಬೌಂಡರಿ) ಬಾರಿಸಿದರು. ಈ ಮೂಲಕ ಆರೆಂಜ್ ಕ್ಯಾಪ್ ರೇಸಿನಲ್ಲಿ ಈಗ ಕೆಎಲ್ ರಾಹುಲ್ ನಂತರ 2ನೇ ಸ್ಥಾನದಲ್ಲಿದ್ದಾರೆ. ಕೆಎಲ್ ರಾಹುಲ್ ಅವರು 14 ಪಂದ್ಯಗಳಲ್ಲಿ670ರನ್ ಗಳಿಸಿ, ಈಗಲೂ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಟಿ20ಯಲ್ಲಿ ಧವನ್ ಅಲ್ಲದೆ ಸತತ ಶತಕ ಸಿಡಿಸಿದ ಕಲಿಗಳು ಯಾರು?

ಈ ಸಾಧನೆ ಮೂಲಕ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಕೆ ಪಟ್ಟಿಯಲ್ಲಿ ಧವನ್ ಅವರು 4ನೇ ಸ್ಥಾನಕ್ಕೇರಿದ್ದಾರೆ. 175 ಪಂದ್ಯಗಳಿಂದ 5182ರನ್ ಗಳಿಸಿದ್ದಾರೆ. ಈ ಮೂಲಕ 199 ಪಂದ್ಯಗಳಿಂದ 5162 ಗಳಿಸಿರುವ ರೋಹಿತ್ ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದು, 192 ಪಂದ್ಯಗಳಲ್ಲಿ 5878ರನ್ ಬಾರಿಸಿದ್ದಾರೆ.

ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಕೆ ಟಾಪ್ 5

ವಿರಾಟ್ ಕೊಹ್ಲಿ: 192 ಪಂದ್ಯ 5878 ರನ್

ಸುರೇಶ್ ರೈನಾ: 193 ಪಂದ್ಯ 5368 ರನ್

ಡೇವಿಡ್ ವಾರ್ನರ್: 142 ಪಂದ್ಯ 5254ರನ್

ಶಿಖರ್ ಧವನ್: 175 ಪಂದ್ಯ 5182 ರನ್

ರೋಹಿತ್ ಶರ್ಮ: 199 ಪಂದ್ಯ 5162 ರನ್

ಐಪಿಎಲ್ 2020: ಸತತ 2 ಶತಕದ ನಂತರ ಬೇಡದ ದಾಖಲೆ ಬರೆದ ಶಿಖರ್ ಧವನ್

****

ಐಪಿಎಲ್ ನಲ್ಲಿ 500 ಪ್ಲಸ್ ಗಳಿಸಿದ ಆಟಗಾರರ ಪಟ್ಟಿ

ಡೇವಿಡ್ ವಾರ್ನರ್: 5 ಬಾರಿ

ವಿರಾಟ್ ಕೊಹ್ಲಿ: 5 ಬಾರಿ

ಶಿಖರ್ ಧವನ್: 4 ಬಾರಿ

ಕೆಎಲ್ ರಾಹುಲ್, ಕ್ರಿಸ್ ಗೇಲ್, ಸುರೇಶ್ ರೈನಾ, ಗೌತಮ್ ಗಂಭೀರ್ 3 ಬಾರಿ 500ರನ್ ಗಡಿ ದಾಟಿದ್ದಾರೆ. ಈ ಪೈಕಿ ಕೆಎಲ್ ರಾಹುಲ್ ಅವರು ಸತತವಾಗಿ 3 ಬಾರಿ 500 ಪ್ಲಸ್ ರನ್ ಗಳಿಸಿದ್ದರೆ, ವಾರ್ನರ್ ಸತತ 4 ಬಾರಿ ಈ ಸಾಧನೆ ಮಾಡಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, November 9, 2020, 10:18 [IST]
Other articles published on Nov 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X