ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸಿಸ್ ಆಟಗಾರರ ವಿಶ್ವಕಪ್ ಸಿದ್ಧತೆಗೆ ಸೂಕ್ತ ವೇದಿಕೆ ಸೂಚಿಸಿದ ರಿಕಿ ಪಾಂಟಿಂಗ್

IPL in UAE best preparation for T20 World Cup says Ricky Ponting

ಆಸ್ಟ್ರೇಲಿಯಾದ ಮಾಜಿ ನಾಯಕ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಆಸ್ಟ್ರೇಲಿಯಾ ಕ್ರಿಕೆಟಿಗರ ಟಿ20 ವಿಶ್ವಕಪ್‌ನ ಸಿದ್ಧತೆಗೆ ಸಂಬಂಧಪಟ್ಟಂತೆ ಹೇಳಿಕೆಯನ್ನು ನೀಡಿದ್ದಾರೆ. ಇದು ಕೇವಲ ಆಸ್ಟ್ರೇಲಿಯಾ ಆಟಗಾರರ ಟಿ20 ವಿಶ್ವಕಪ್‌ಗೆ ಸಂಬಂಧಪಟ್ಟಂತಾ ಹೇಳಿಕೆಯಲ್ಲ. ಆಸ್ಟ್ರೇಲಿಯಾ ಕ್ರಿಕೆಟಿಗರು ಐಪಿಎಲ್‌ನಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಕೂಡ ರಿಕಿ ಪಾಂಟಿಂಗ್ ನೀಡಿದ ಈ ಹೇಳಿಕೆ ಅತ್ಯಂತ ಮಹತ್ವದ್ದಾಗಿದೆ.

ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರರು ರಾಷ್ಟ್ರೀಯ ತಂಡದಿಂದ ಹೊರಗುಳಿದು ಐಪಿಎಲ್‌ನಲ್ಲಿ ಭಾಗಿಯಾಗುವ ವಿಚಾರವಾಗಿ ಸಾಕಷ್ಟು ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಹೀಗಾಗಿ ಆಸ್ಟ್ರೇಲಿಯಾದ ಆಟಗಾರರು ಐಪಿಎಲ್‌ನಲ್ಲಿ ಭಾಗಿಯಾಗುವ ವಿಚಾರವಾಗಿ ರಿಕಿ ಪಾಂಟಿಂಗ್ ಆಟಗಾರರ ಬೆಂಬಲಕ್ಕೆ ನಿಂತಿದ್ದಾರೆ. ಆಸಿಸ್ ಆಟಗಾರರು ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಯುಎಇನಲ್ಲಿಯೇ ನಡೆಯಲಿರುವ ಟಿ20 ವಿಶ್ವಕಪ್‌ನ ಸಿದ್ಧತೆಗೆ ಉತ್ತಮ ಅವಕಾಶ ದೊರೆತಂತಾಗುತ್ತದೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

ಭಾರತ vs ಇಂಗ್ಲೆಂಡ್: ವಿರಾಟ್ ಕೊಹ್ಲಿಯ ಈ ತಪ್ಪು ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್ಭಾರತ vs ಇಂಗ್ಲೆಂಡ್: ವಿರಾಟ್ ಕೊಹ್ಲಿಯ ಈ ತಪ್ಪು ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್

ಈ ಬಾರಿಯ ಐಪಿಎಲ್ ಆವೃತ್ತಿಯ ಎರಡನೇ ಚರಣದ ಪಂದ್ಯಗಳನ್ನು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 15ರ ಅವಧಿಯಲ್ಲಿ ನಿಗದಿಗೊಳಿಸಲಾಗಿದೆ. ಈದಾಗಿ ಕೆಲವೇ ದಿನಗಳಲ್ಲಿ ಟಿ20 ವಿಶ್ವಕಪ್ ಅಕ್ಟೋಬರ್ 17ರಿಂದ ನವೆಂಬರ್ 14ರ ಅವಧಿಯಲ್ಲಿ ನಡೆಯಲಿದೆ. ಈ ಎರಡು ಟೂರ್ನಿಗಳು ಯುಎಇನಲ್ಲಿಯೇ ನಡೆಯಲಿದೆ ಎಂಬುದು ಗಮನಾರ್ಹ.

'ಸೆನ್' ರೋಡಿಯೋ ಕಾರ್ಯಕ್ರಮದಲ್ಲಿ ಟಿಮ್ ಪೈನ್ ಅವರೊಂದಿಗಿನ ಸಂವಾದದಲ್ಲಿ ರಿಕಿ ಪಾಂಟಿಂಗ್ ಈ ವಿಚಾರವಾಗಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಕ್ರಿಕೆಟ್.ಕಾಮ್.ಎಯು ಉಲ್ಲೇಖ ಮಾಡಿದೆ. "ಕೆಲ ಆಟಗಾರರು ಕಳೆದ ಮೂರ್ನಾಲ್ಕು ತಿಂಗಳಿನಿಂದ ಕ್ರಿಕೆಟ್‌ನಿಂದ ದೂರವಿದ್ದಾರೆ. ಈಗ ಅವರು ಮತ್ತೆ ಕ್ರಿಕೆಟ್‌ಗೆ ಮರಳಬೇಕಾದರೆ ಅತ್ಯುನ್ನತ ಮಟ್ಟದ ಸ್ಪರ್ಧೆಯಲ್ಲಿ, ಉತ್ಕೃಷ್ಟಮಟ್ಟದ ಎದುರಾಳಿಗಳನ್ನು ಎದುರಿಸಬೇಕಾಗಿದೆ" ಎಂದಿದ್ದಾರೆ.

"ಇದು ಟಿ20 ವಿಶ್ವಕಪ್‌ಗೆ ಅವರಿಗೆ ಅತ್ಯುತ್ತಮ ಸಿದ್ಧತೆಯಾಗಿರಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಒಂದೇ ಸ್ಥಳದಲ್ಲಿ ಎರಡು ಟೂರ್ನಿಗಳು ಕೂಡ ನಡೆಯುತ್ತಿದೆ. ಐಪಿಎಲ್ ವಿಶ್ವದ ಅತ್ಯಂತ ಬಲಿಷ್ಠ ಡೊಮೆಸ್ಟಿಕ್ ಕ್ರಿಕೆಟ್ ಆಗಿರುವ ಕಾರಣ ಅತ್ಯುತ್ತಮ ನಿರ್ಧಾರವಾಗಲಿದೆ" ಎಂದಿದ್ದಾರೆ ರಿಕಿ ಪಾಂಟಿಂಗ್. ಈ ಮೂಲಕ ಆಸ್ಟ್ರೇಲಿಯಾ ಕ್ರಿಕೆಟಿಗರು ಐಪಿಎಲ್‌ನಲ್ಲಿ ಭಾಗಿಯಾಗುವ ವಿಚಾರವಾಗಿ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಭಾಗಿಯಾಗುವ ಬಗ್ಗೆ ಡೇವಿಡ್ ವಾರ್ನರ್ ಈಗಾಗಲೇ ಹೇಳಿಕೆಯನ್ನು ನೀಡಿದ್ದು ಭಾಗಿಯಾಗುವುದಾಗಿ ತಿಳಿಸಿದ್ದಾರೆ. ಆದರೆ ಕೆಕೆಆರ್ ತಂಡದ ಉಪನಾಯಕನಾಗಿರುವ ಪ್ಯಾಟ್ ಕಮ್ಮಿನ್ಸ್ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಈ ಬಾರಿಯ ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ. ಉಳಿದಂತೆ ಆಟಗಾರರು ಭಾಗಿಯಾಗಲಿರುವ ಬಗ್ಗೆ ಅಧಿಕರತವಾಗಿ ಇನ್ನಷ್ಟೇ ಮಾಹಿತಿಗಳು ಲಭ್ಯವಾಗಬೇಕಿದೆ.

ಅಜಿಂಕ್ಯಾ ರಹಾನೆ ಬದಲು ಭಾರತ ಟೆಸ್ಟ್ ತಂಡದ ಉಪನಾಯಕನಾಗುವ ಸಾಧ್ಯತೆಯಿರುವ 3 ಆಟಗಾರರು!ಅಜಿಂಕ್ಯಾ ರಹಾನೆ ಬದಲು ಭಾರತ ಟೆಸ್ಟ್ ತಂಡದ ಉಪನಾಯಕನಾಗುವ ಸಾಧ್ಯತೆಯಿರುವ 3 ಆಟಗಾರರು!

ವಿರಾಟ್ ಆಟದ ವೈಖರಿ ಬಗ್ಗೆ ಮಾತಾಡಿದ ಪಾಕ್ ಆಟಗಾರ !! | Oneindia Kannada

ಇನ್ನು ಐಪಿಎಲ್ ಆರಂಭವಾದಾಗಿನಿಂದಲೂ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಐಪಿಎಲ್‌ನ ಭಾಗವಾಗಿದ್ದಾರೆ. ಆರಂಭದಲ್ಲಿ ಆಟಗಾರನಾಗಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಪಾಂಟಿಂಗ್ ನಿವೃತ್ತಿಯ ಬಳಿಕವೂ ಕೋಚ್ ಆಗಿ ಹಾಗೂ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದಾರೆ ರಿಕಿ ಪಾಂಟಿಂಗ್

Story first published: Saturday, August 14, 2021, 13:11 [IST]
Other articles published on Aug 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X