ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಂಡಗಳನ್ನು ಗೆಲ್ಲಿಸಲಾಗದೇ ಐಪಿಎಲ್ ಟೂರ್ನಿಯ ಮಧ್ಯದಲ್ಲಿಯೇ ನಾಯಕತ್ವ ಬಿಟ್ಟ 14 ನಾಯಕರು ಇವರೇ!

IPL: List of 14 captains who stepped down in the middle of a season

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಸಾಲು ಸಾಲು ಟ್ರೋಫಿಗಳನ್ನು ಗೆದ್ದ ನಾಯಕರೂ ಇದ್ದಾರೆ ಹಾಗೂ ಯಾವುದೇ ಟ್ರೋಫಿ ಗೆಲ್ಲದೇ ವಿಫಲರಾದ ನಾಯಕರೂ ಸಹ ಇದ್ದಾರೆ. ಹೀಗೆ ಯಶಸ್ವಿ ನಾಯಕರು ಎನಿಸಿಕೊಂಡಿರುವ ನಾಯಕರೇ ಕೆಲ ಆವೃತ್ತಿಗಳಲ್ಲಿ ತಮ್ಮ ತಂಡಗಳನ್ನು ಪ್ಲೇಆಫ್ ಹಂತಕ್ಕೂ ತಲುಪಿಸಲಾಗದೇ ವಿಫಲರಾದ ಉದಾಹರಣೆಗಳೂ ಸಹ ಇವೆ. ಇನ್ನು ಕೆಲ ನಾಯಕರು ಎಷ್ಟೇ ಕಳಪೆ ಪ್ರದರ್ಶನ ನೀಡಿದರೂ ನಾಯಕರಾಗಿಯೇ ಮುಂದುವರೆದರೆ, ಇನ್ನೂ ಕೆಲವರು ಟೂರ್ನಿ ಮಧ್ಯದಲ್ಲಿಯೇ ನಾಯಕತ್ವವನ್ನು ಕಳೆದುಕೊಂಡು ಕೆಳಗಿಳಿದಿದ್ದಾರೆ ಹಾಗೂ ಇನ್ನೂ ಕೆಲ ನಾಯಕರು ಇತರೆ ಸಮಸ್ಯೆಗಳಿಂದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

92 ರನ್ ಬಾರಿಸಿ ಶತಕದ ಸನಿಹದಲ್ಲಿದ್ದ ವಾರ್ನರ್‌ಗೆ ಬ್ಯಾಟಿಂಗ್ ನೀಡದ ಕುರಿತು ತುಟಿಬಿಚ್ಚಿದ ಪೊವೆಲ್!92 ರನ್ ಬಾರಿಸಿ ಶತಕದ ಸನಿಹದಲ್ಲಿದ್ದ ವಾರ್ನರ್‌ಗೆ ಬ್ಯಾಟಿಂಗ್ ನೀಡದ ಕುರಿತು ತುಟಿಬಿಚ್ಚಿದ ಪೊವೆಲ್!

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಟ್ಟು 14 ನಾಯಕರು ಟೂರ್ನಿ ಮಧ್ಯದಲ್ಲಿಯೇ ನಾಯಕತ್ವವನ್ನು ಕಳೆದುಕೊಂಡಿದ್ದು, ಆ ಎಲ್ಲಾ ನಾಯಕರ ಪಟ್ಟಿ ಈ ಕೆಳಕಂಡಂತಿದೆ..

1. ವಿವಿಎಸ್ ಲಕ್ಷ್ಮಣ್

1. ವಿವಿಎಸ್ ಲಕ್ಷ್ಮಣ್

ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಟನಾ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ನಾಯಕತ್ವವನ್ನು ವಿವಿಎಸ್ ಲಕ್ಷ್ಮಣ್ ವಹಿಸಿಕೊಂಡಿದ್ದರು. ಆದರೆ, ಉತ್ತಮ ಆಟಗಾರರಿಂದ ಕೂಡಿದ್ದರೂ ಸಹ ಡೆಕ್ಕನ್ ಚಾರ್ಜರ್ಸ್ ಆ ಆವೃತ್ತಿಯಲ್ಲಿ ಯಶಸ್ಸು ಗಳಿಸಲಿಲ್ಲ. ಲೀಗ್ ಹಂತದ ಒಟ್ಟು 14 ಪಂದ್ಯಗಳ ಪೈಕಿ 12 ಪಂದ್ಯಗಳಲ್ಲಿ ಡೆಕ್ಕನ್ ಚಾರ್ಜರ್ಸ್ ಸೋಲನ್ನು ಅನುಭವಿಸಿತ್ತು. ಹೀಗಾಗಿ ಡೆಕ್ಕನ್ ಚಾರ್ಜರ್ಸ್ ಫ್ರಾಂಚೈಸಿ ಟೂರ್ನಿ ಮಧ್ಯದಲ್ಲಿಯೇ ವಿವಿಎಸ್ ಲಕ್ಷ್ಮಣ್ ಅವರನ್ನು ನಾಯಕತ್ವದಿಂದ ತೆಗೆದು ಹಾಕಿ ಆಡಂ ಗಿಲ್‌ಕ್ರಿಸ್ಟ್‌ಗೆ ನಾಯಕತ್ವದ ಜವಾಬ್ದಾರಿಯನ್ನು ಹಾಕಿತು. ಇನ್ನು ಇದೇ ಗಿಲ್‌ಕ್ರಿಸ್ಟ್ ನಾಯಕತ್ವದಲ್ಲಿ ಮುಂದಿನ ಆವೃತ್ತಿಯಲ್ಲಿ ಕಣಕ್ಕಿಳಿದಿದ್ದ ಡೆಕ್ಕನ್ ಚಾರ್ಜರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

2. ಕೆವಿನ್ ಪೀಟರ್ಸನ್

2. ಕೆವಿನ್ ಪೀಟರ್ಸನ್


2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ರಾಹುಲ್ ದ್ರಾವಿಡ್ ಮುನ್ನಡೆಸಿದ್ದರು ಹಾಗೂ ಟೂರ್ನಿ ಮುಗಿದ ನಂತರ ಸ್ವತಃ ನಾಯಕತ್ವದಿಂದ ಕೆಳಗಿಳಿದಿದ್ದರು. ಇನ್ನು ನಂತರದ ಆವೃತ್ತಿಯಲ್ಲಿ ಕೆವಿನ್ ಪೀಟರ್ಸನ್ ಅವರನ್ನು ಆರ್‌ಸಿಬಿ ನಾಯಕನನ್ನಾಗಿ ನೇಮಿಸಿತು. ಇನ್ನು ಕೆವಿನ್ ಪೀಟರ್ಸನ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಆರ್‌ಸಿಬಿ ಆ ಆವೃತ್ತಿಯ ಮೊದಲ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಸೋತು ಕೆಟ್ಟ ಆರಂಭ ಪಡೆದುಕೊಂಡಿತ್ತು. ಈ ಸಂದರ್ಭದಲ್ಲಿ ಎಚ್ಚೆತ್ತ ವಿಜಯ್ ಮಲ್ಯ ಕೆವಿನ್ ಪೀಟರ್ಸನ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಅನಿಲ್ ಕುಂಬ್ಳೆ ಅವರನ್ನು ನೂತನ ನಾಯಕ ಎಂದು ನೇಮಿಸಿತು. ಇನ್ನು ಕುಂಬ್ಳೆ ನಾಯಕತ್ವದಲ್ಲಿ 10 ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ಗೆದ್ದ ಆರ್‌ಸಿಬಿ ಆ ಆವೃತ್ತಿಯಲ್ಲಿ ಫೈನಲ್ ತಲುಪಿ ಫೈನಲ್ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸೋಲನ್ನು ಅನುಭವಿಸಿತ್ತು.

3. ಡೇನಿಯಲ್ ವೆಟ್ಟೋರಿ

3. ಡೇನಿಯಲ್ ವೆಟ್ಟೋರಿ

2012ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೇನಿಯಲ್ ವೆಟ್ಟೋರಿ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ 5 ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ಮಾತ್ರ ಗೆದ್ದಿತ್ತು. ಈ ಸಂದರ್ಭದಲ್ಲಿ ಬೃಹತ್ ನಿರ್ಧಾರ ತೆಗೆದುಕೊಂಡ ಫ್ರಾಂಚೈಸಿ ವೆಟ್ಟೋರಿಯನ್ನು ಕೆಳಗಿಳಿಸಿ ಯುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೆಗಲಿದೆ ನಾಯಕತ್ವವನ್ನು ಹಾಕಿತು.

4. ಕುಮಾರ್ ಸಂಗಕ್ಕಾರ

4. ಕುಮಾರ್ ಸಂಗಕ್ಕಾರ

2012ರ ಐಪಿಎಲ್‌ನಲ್ಲಿ ಮತ್ತೊಂದು ತಂಡ ಟೂರ್ನಿಯ ಮಧ್ಯದಲ್ಲಿಯೇ ನಾಯಕನನ್ನು ಬದಲಾಯಿಸಿತ್ತು. ಹೌದು, ಡೆಕ್ಕನ್ ಚಾರ್ಜರ್ಸ್ ಮತ್ತೊಮ್ಮೆ ತನ್ನ ನಾಯಕನ ಬದಲಾವಣೆಯನ್ನು ಮಾಡಿತ್ತು. ಟೂರ್ನಿಯಲ್ಲಿನ ತನ್ನ ಮೊದಲ 6 ಪಂದ್ಯಗಳಲ್ಲಿ ಕುಮಾರ್ ಸಂಗಕ್ಕಾರ ನಾಯಕತ್ವದಡಿಯಲ್ಲಿ ಕಣಕ್ಕಿಳಿದಿದ್ದ ಡೆಕ್ಕನ್ ಚಾರ್ಜರ್ಸ್ ಗೆಲುವಿನ ಖಾತೆ ತೆರೆಯುವಲ್ಲಿ ವಿಫಲವಾಗಿತ್ತು. ಹೀಗಾಗಿ ಸ್ವತಃ ಕುಮಾರ್ ಸಂಗಕ್ಕಾರ ಆಡುವ ಬಳಗದಿಂದ ಹೊರಗುಳಿದರು ಹಾಗೂ ಫ್ರಾಂಚೈಸಿ ಕೆಮರೂನ್ ವೈಟ್‌ಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಿತ್ತು.

5. ರಿಕಿ ಪಾಂಟಿಂಗ್

5. ರಿಕಿ ಪಾಂಟಿಂಗ್

2013ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಿಕಿ ಪಾಂಟಿಂಗ್ ನಾಯಕತ್ವದಡಿಯಲ್ಲಿ ಕಣಕ್ಕಿಳಿದಿದ್ದ ಮುಂಬೈ ಇಂಡಿಯನ್ಸ್ ಮೊದಲ 5 ಪಂದ್ಯಗಳಲ್ಲಿ 4 ಪಂದ್ಯಗಳಲ್ಲಿ ಸೋತು ಹಿನ್ನಡೆ ಅನುಭವಿಸಿತ್ತು. ಹೀಗಾಗಿ ರಿಕಿ ಪಾಂಟಿಂಗ್ ನಾಯಕ ಸ್ಥಾನದಿಂದ ಕೆಳಗಿಳಿದರು ಹಾಗೂ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಅವರನ್ನು ನೂತನ ನಾಯಕನಾಗಿ ಘೋಷಿಸಿತು.

6. ಏಂಜಲೋ ಮ್ಯಾಥ್ಯೂಸ್

6. ಏಂಜಲೋ ಮ್ಯಾಥ್ಯೂಸ್

2013ರ ಐಪಿಎಲ್ ಆವೃತ್ತಿಯಲ್ಲಿ ಮಹಾರಾಷ್ಟ್ರದ ಮತ್ತೊಂದು ಫ್ರಾಂಚೈಸಿಯಾದ ಪುಣೆ ವಾರಿಯರ್ಸ್ ಟೂರ್ನಿಯ ಮಧ್ಯದಲ್ಲಿ ತನ್ನ ನಾಯಕನ ಬದಲಾವಣೆ ಮಾಡಿತ್ತು. ಆ ಆವೃತ್ತಿಯಲ್ಲಿ ಮೊದಲ 5 ಪಂದ್ಯಗಳ ಪೈಕಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಗೆದ್ದು ಕೆಟ್ಟ ಆರಂಭ ಪಡೆದುಕೊಂಡಿದ್ದ ಕಾರಣ ಏಂಜಲೋ ಮ್ಯಾಥ್ಯೂಸ್ ನಾಯಕತ್ವದಿಂದ ಕೆಳಗಿಳಿದರು ಹಾಗೂ ತಂಡಕ್ಕೆ ಆರನ್ ಫಿಂಚ್ ನೂತನ ನಾಯಕನಾಗಿ ಆಯ್ಕೆಯಾದರು.

7. ಶಿಖರ್ ಧವನ್

7. ಶಿಖರ್ ಧವನ್

2014ರ ಐಪಿಎಲ್ ಟೂರ್ನಿಯಲ್ಲಿ ಶಿಖರ್ ಧವನ್ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದರು. ಶಿಖರ್ ಧವನ್ ನಾಯಕತ್ವದಲ್ಲಿ ಮೊದಲ 4 ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಮಾತ್ರ ಸನ್ ರೈಸರ್ಸ್ ಹೈದರಾಬಾದ್ ಗೆದ್ದಿತ್ತು ಹಾಗೂ ಶಿಖರ್ ಧವನ್ ರನ್ ಗಳಿಸಲಾಗದೇ ಪರದಾಡಿದ್ದರು. ಇದನ್ನು ಅರಿತ ಶಿಖರ್ ಧವನ್ ನಾಯಕತ್ವದಿಂದ ಟೂರ್ನಿಯ ಮಧ್ಯದಲ್ಲಿಯೇ ಕೆಳಗಿಳಿದರು ಹಾಗೂ ಡ್ಯಾರೆನ್ ಸ್ಯಾಮಿ ನೂತನ ನಾಯಕನಾಗಿ ಆಯ್ಕೆಯಾದರು.

8. ಶೇನ್ ವಾಟ್ಸನ್

8. ಶೇನ್ ವಾಟ್ಸನ್

2015ರ ಐಪಿಎಲ್ ಆವೃತ್ತಿಯಲ್ಲಿ ಶೇನ್ ವಾಟ್ಸನ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ರಾಜಸ್ಥಾನ್ ರಾಯಲ್ಸ್ ಮೊದಲ 10 ಪಂದ್ಯಗಳ ಪೈಕಿ 6 ಪಂದ್ಯಗಳಲ್ಲಿ ಗೆದ್ದಿತ್ತು ಹಾಗೂ ಎರಡು ಪಂದ್ಯಗಳು ರದ್ದಾಗಿದ್ದವು ಮತ್ತು ಒಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಹೀಗೆ ಶೇನ್ ವಾಟ್ಸನ್ ನಾಯಕತ್ವ ಉತ್ತಮವಾಗಿ ಕೆಲಸ ನಿರ್ವಹಿಸಿತ್ತಾದರೂ ತನ್ನ ವೈಯಕ್ತಿಕ ಆಟದತ್ತ ಗಮನ ಹರಿಸುವ ಸಲುವಾಗಿ ವಾಟ್ಸನ್ ರಾಜಸ್ಥಾನ್ ರಾಯಲ್ಸ್ ನಾಯಕತ್ವವನ್ನು ಟೂರ್ನಿ ಮಧ್ಯದಲ್ಲಿಯೇ ತ್ಯಜಿಸಿದರು ಹಾಗೂ ಸ್ಟೀವ ಸ್ಮಿತ್ ನೂತನ ನಾಯಕನಾಗಿ ಆಯ್ಕೆಯಾದರು.

9. ಡೇವಿಡ್ ಮಿಲ್ಲರ್

9. ಡೇವಿಡ್ ಮಿಲ್ಲರ್

2016ರ ಐಪಿಎಲ್‌ನಲ್ಲಿ ಡೇವಿಡ್ ಮಿಲ್ಲರ್ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದರು. ಮಿಲ್ಲರ್ ನಾಯಕತ್ವದಡಿಯಲ್ಲಿ ಪಂಜಾಬ್ ಕಿಂಗ್ಸ್ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ ಹಾಗೂ ಮಿಲ್ಲರ್ ಕೂಡ 6 ಪಂದ್ಯಗಳ ಪೈಕಿ 76 ರನ್ ಕಲೆಹಾಕಿ ನೆಲಕಚ್ಚಿದ್ದರು. ಹೀಗಾಗಿ ಟೂರ್ನಿಯ ಮಧ್ಯದಲ್ಲಿಯೇ ನಾಯಕನ ಬದಲಾವಣೆಯ ತೀರ್ಮಾನವನ್ನು ಕೈಗೊಂಡ ಪಂಜಾಬ್ ಕಿಂಗ್ಸ್ ಡೇವಿಡ್ ಮಿಲ್ಲರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಮುರಳಿ ವಿಜಯ್‌ಗೆ ನಾಯಕನ ಜವಾಬ್ದಾರಿಯನ್ನು ಹಾಕಿತ್ತು.

10. ಗೌತಮ್ ಗಂಭೀರ್

10. ಗೌತಮ್ ಗಂಭೀರ್

ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಎರಡು ಬಾರಿ ಟ್ರೋಫಿಯನ್ನು ಗೆಲ್ಲಿಸಿದ್ದ ಗೌತಮ್ ಗಂಭೀರ್ 2018ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮರಳಿ ಡೆಲ್ಲಿ ಫ್ರಾಂಚೈಸಿ ಸೇರಿ ನಾಯಕನಾಗಿ ನೇಮಕಗೊಂಡಿದ್ದರು. ಆದರೆ, ಡೆಲ್ಲಿ ತಂಡ ಮೊದಲ ಆರು ಪಂದ್ಯಗಳ ಪೈಕಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಜಯ ಸಾಧಿಸಿ ಉಳಿದ ಎಲ್ಲಾ ಪಂದ್ಯಗಳಲ್ಲಿಯೂ ಸೋತ ಕಾರಣ ಗೌತಮ್ ಗಂಭೀರ್ ನಾಯಕ ಸ್ಥಾನದಿಂದ ಕೆಳಗಿಳಿದರು ಹಾಗೂ ಫ್ರಾಂಚೈಸಿ ಯುವ ಆಟಗಾರ ಶ್ರೇಯಸ್ ಐಯ್ಯರ್ ಹೆಗಲಿಗೆ ನಾಯಕನ ಜವಾಬ್ದಾರಿಯನ್ನು ಹಾಕಿತು.

11. ಅಜಿಂಕ್ಯಾ ರಹಾನೆ

11. ಅಜಿಂಕ್ಯಾ ರಹಾನೆ

2018ರ ಐಪಿಎಲ್ ಆವೃತ್ತಿಯಲ್ಲಿ ಅಜಿಂಕ್ಯಾ ರಹಾನೆ ನಾಯಕತ್ವದಡಿಯಲ್ಲಿ ಕಣಕ್ಕಿಳಿದಿದ್ದ ರಾಜಸ್ಥಾನ್ ರಾಯಲ್ಸ್ 8 ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿತ್ತು. ಇನ್ನು ನಾಯಕನಾಗಿ ಯಶಸ್ವಿಯಾಗದೇ ಇದ್ದ ರಹಾನೆ ನಾಯಕ ಸ್ಥಾನದಿಂದ ಕೆಳಗಿಳಿದರು ಹಾಗೂ ಸ್ಟೀವ್ ಸ್ಮಿತ್ ನೂತನ ನಾಯಕನಾಗಿ ಆಯ್ಕೆಯಾದರು.

12. ದಿನೇಶ್ ಕಾರ್ತಿಕ್

12. ದಿನೇಶ್ ಕಾರ್ತಿಕ್

2020ರ ಐಪಿಎಲ್ ಆವೃತ್ತಿಯಲ್ಲಿ ದಿನೇಶ್ ಕಾರ್ತಿಕ್ ನಾಯಕತ್ವದಡಿಯಲ್ಲಿ ಕಣಕ್ಕಿಳಿದಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ 7 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಗೆದ್ದು ಉತ್ತಮ ಆರಂಭವನ್ನೇ ಪಡೆದುಕೊಂಡಿತ್ತು. ಆದರೆ, ದಿನೇಶ್ ಕಾರ್ತಿಕ್ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವಿಫಲರಾಗಿದ್ದರು ಹಾಗೂ ಟೂರ್ನಿ ಮಧ್ಯದಲ್ಲಿಯೇ ನಾಯಕ ಸ್ಥಾನದಿಂದ ಕೆಳಗಿಳಿದರು ಹಾಗೂ ಇಯಾನ್ ಮಾರ್ಗನ್ ನೂತನ ನಾಯಕನಾಗಿ ಆಯ್ಕೆಯಾದರು.

13. ಡೇವಿಡ್ ವಾರ್ನರ್

13. ಡೇವಿಡ್ ವಾರ್ನರ್

2021ರ ಐಪಿಎಲ್ ಆವೃತ್ತಿಯಲ್ಲಿ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಸನ್ ರೈಸರ್ಸ್ ಹೈದರಾಬಾದ್ 7 ಪಂದ್ಯಗಳಲ್ಲಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಗೆದ್ದು ಉಳಿದ ಪಂದ್ಯಗಳಲ್ಲಿ ಸೋತು ಹೀನಾಯ ಹಂತದಲ್ಲಿತ್ತು. ಹಾಗೂ ಇದೇ ಸಂದರ್ಭದಲ್ಲಿ ವಾರ್ನರ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನಡುವೆ ಉಂಟಾದ ಒಳಜಗಳದ ಕಾರಣದಿಂದ ವಾರ್ನರ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿ ಕೇನ್ ವಿಲಿಯಮ್ಸನ್ ಹೆಗಲಿಗೆ ನಾಯಕತ್ವದ ಜವಾಬ್ದಾರಿಯನ್ನು ಹೊರಿಸಲಾಯಿತು.

RCBಗೆ ಪ್ಲೇ ಆಫ್ ದಾರಿ ಈಗ ಹೇಗಿದೆ | Oneindia Kannada
14. ರವೀಂದ್ರ ಜಡೇಜಾ

14. ರವೀಂದ್ರ ಜಡೇಜಾ

ಈ ಬಾರಿಯ ( 2022 ) ಐಪಿಎಲ್ ಅವೃತ್ತಿಯಲ್ಲಿ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮೊದಲ 8 ಪಂದ್ಯಗಳ ಪೈಕಿ 2 ಪಂದ್ಯಗಳಲ್ಲಿ ಮಾತ್ರ ಗೆದ್ದಿತ್ತು. ಇನ್ನು ನಾಯಕತ್ಬವನ್ನು ನಿರ್ವಹಿಸಲಾಗದ ರವೀಂದ್ರ ಜಡೇಜಾ ಟೂರ್ನಿ ಮಧ್ಯದಲ್ಲಿಯೇ ಎಂಎಸ್ ಧೋನಿಗೆ ನಾಯಕತ್ವವನ್ನು ಮರಳಿ ಹಸ್ತಾಂತರಿಸಿದರು.

Story first published: Friday, May 6, 2022, 16:35 [IST]
Other articles published on May 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X