ಧೋನಿ, ಜಡೇಜಾ, ರೈನಾ, ಬ್ರಾವೋ ಅಲ್ಲ; ಈತ ಸಿಎಸ್‌ಕೆ ತಂಡದ ಅತ್ಯುತ್ತಮ ಆಟಗಾರ ಎಂದ ಗಂಭೀರ್!

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸಕ್ತ ಸಾಲಿನ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಸಾಲು ಸಾಲು ಪಂದ್ಯಗಳನ್ನು ಗೆಲ್ಲುವುದರ ಮೂಲಕ ಪ್ಲೇ ಆಫ್ ಹಂತವನ್ನು ಪ್ರವೇಶಿಸಿದ ಮೊಟ್ಟ ಮೊದಲ ತಂಡ ಎಂಬ ಕೀರ್ತಿಗೆ ಪಾತ್ರವಾಯಿತು.

'ಎಬಿ ಇದ್ದರೂ ಆತ ಔಟ್ ಆದಾಗಲೇ ಪಂದ್ಯ ನಮ್ಮ ಕೈ ತಪ್ಪಿತ್ತು'; SRH ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ಕೊಹ್ಲಿ'ಎಬಿ ಇದ್ದರೂ ಆತ ಔಟ್ ಆದಾಗಲೇ ಪಂದ್ಯ ನಮ್ಮ ಕೈ ತಪ್ಪಿತ್ತು'; SRH ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ಕೊಹ್ಲಿ

ಹೌದು, ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಂಕಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದು, ಆಡಿರುವ 13 ಪಂದ್ಯಗಳ ಪೈಕಿ 9 ಪಂದ್ಯಗಳಲ್ಲಿ ಜಯ ಸಾಧಿಸಿ 18 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಸದ್ಯ ದ್ವಿತೀಯ ಸ್ಥಾನದಲ್ಲಿದೆ. ಎಂಎಸ್ ಧೋನಿ ನಾಯಕತ್ವದಲ್ಲಿ ಆರಂಭದಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದ್ದು 3 ಬಾರಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಚೆನ್ನೈ ಸೂಪರ್ ಕಿಂಗ್ಸ್ ಎಂಬ ಹೆಸರು ಕೇಳಿದ ಕೂಡಲೇ ಪ್ರತಿಯೊಬ್ಬರ ನೆನಪಿಗೆ ಬರುವುದು ಎಂ ಎಸ್ ಧೋನಿ ಅವರ ಹೆಸರು. ಧೋನಿ ಅವರನ್ನು ಹೊರತುಪಡಿಸಿದರೆ ಸುರೇಶ್ ರೈನಾ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೊ ಮತ್ತು ಫಾಫ್ ಡು ಪ್ಲೆಸಿಸ್ ಹಲವಾರು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ. ಮತ್ತು ಈಗಲೂ ಸಹ ಈ ಆಟಗಾರರು ತಮ್ಮ ತಂಡದ ಪರ ಉತ್ತಮ ಪ್ರದರ್ಶನವನ್ನು ನೀಡುತ್ತಿರುವ ಕಾರಣದಿಂದಾಗಿಯೇ ತಂಡದಲ್ಲಿ ಸತತವಾಗಿ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದಾರೆ.

 ಐಪಿಎಲ್‌ನಿಂದ ನಿವೃತ್ತಿ ಹೊಂದಿದ ನಂತರ ಸಿನಿಮಾ ನಟನಾಗುತ್ತಾರಾ ಧೋನಿ?; ಧೋನಿ ಹೇಳಿದ್ದಿಷ್ಟು ಐಪಿಎಲ್‌ನಿಂದ ನಿವೃತ್ತಿ ಹೊಂದಿದ ನಂತರ ಸಿನಿಮಾ ನಟನಾಗುತ್ತಾರಾ ಧೋನಿ?; ಧೋನಿ ಹೇಳಿದ್ದಿಷ್ಟು

ಈ ಕುರಿತಾಗಿ ಇದೀಗ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಾತನಾಡಿದ್ದು ಕಳೆದ ಮೂರ್ನಾಲ್ಕು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಉತ್ತಮ ಪ್ರದರ್ಶನವನ್ನು ನೀಡುತ್ತಿರುವ ಆಟಗಾರ ಯಾರೆಂಬುದನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ.

ಅಂಬಾಟಿ ರಾಯುಡು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯುತ್ತಮ ಆಟಗಾರ ಎಂದ ಗೌತಮ್ ಗಂಭೀರ್

ಅಂಬಾಟಿ ರಾಯುಡು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯುತ್ತಮ ಆಟಗಾರ ಎಂದ ಗೌತಮ್ ಗಂಭೀರ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಎಂಎಸ್ ಧೋನಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಫಾಫ್ ಡು ಪ್ಲೆಸಿಸ್ ಮತ್ತು ಸುರೇಶ್ ರೈನಾ ಅವರ ಹೆಸರನ್ನು ತೆಗೆದುಕೊಳ್ಳದ ಗೌತಮ್ ಗಂಭೀರ್ ಅಂಬಾಟಿ ರಾಯುಡು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯುತ್ತಮ ಆಟಗಾರ ಎಂದಿದ್ದಾರೆ. 'ಅಂಬಾಟಿ ರಾಯುಡು ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದಾಗಿನಿಂದ ಇಲ್ಲಿಯವರೆಗೂ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ. ಇಲ್ಲಿಯವರೆಗೂ ಸತತವಾಗಿ ಉತ್ತಮ ಪ್ರದರ್ಶನವನ್ನು ನೀಡುತ್ತಿರುವ ಅಂಬಾಟಿ ರಾಯುಡು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯುತ್ತಮ ಆಟಗಾರ' ಎಂದು ಗೌತಮ್ ಗಂಭೀರ್ ಶ್ಲಾಘಿಸಿದ್ದಾರೆ.

ಯಾವುದೇ ಕ್ರಮಾಂಕದಲ್ಲಿ ಕಣಕ್ಕಿಳಿದರೂ ಅಂಬಾಟಿ ರಾಯುಡು ಉತ್ತಮ ಪ್ರದರ್ಶನ

ಯಾವುದೇ ಕ್ರಮಾಂಕದಲ್ಲಿ ಕಣಕ್ಕಿಳಿದರೂ ಅಂಬಾಟಿ ರಾಯುಡು ಉತ್ತಮ ಪ್ರದರ್ಶನ

ಅಂಬಾಟಿ ರಾಯುಡು ಕೇವಲ ಆರಂಭಿಕ ಆಟಗಾರನಾಗಿ ಅಲ್ಲದೇ ಹಲವಾರು ಕ್ರಮಾಂಕಗಳಲ್ಲಿ ಕಣಕ್ಕಿಳಿದಿದ್ದಾರೆ ಎಂದು ಹೇಳಿಕೆ ನೀಡಿರುವ ಗೌತಮ್ ಗಂಭೀರ್ 'ಯಾವುದೇ ಕ್ರಮಾಂಕದಲ್ಲಿ ಕಣಕ್ಕಿಳಿದರೂ ಅವರು ನೀಡುತ್ತಿದ್ದ ಪ್ರದರ್ಶನದಲ್ಲಿ ಮಾತ್ರ ವ್ಯತ್ಯಾಸವಿರುತ್ತಿರಲಿಲ್ಲ. ಆರಂಭಿಕ ಆಟಗಾರನಾಗಿ ಪ್ರದರ್ಶನ ನೀಡಿ ಯಾವ ರೀತಿಯ ಪ್ರಭಾವವನ್ನು ಬೀರುತ್ತಿದ್ದರೋ ಅದೇ ರೀತಿಯ ಪ್ರಭಾವವನ್ನು ಉಳಿದ ಕ್ರಮಾಂಕಗಳಲ್ಲಿ ಕಣಕ್ಕಿಳಿದಾಗಲೂ ಬೀರುತ್ತಿದ್ದರು' ಎಂದು ಅಂಬಾಟಿ ರಾಯುಡು ಪ್ರದರ್ಶನವನ್ನು ಗೌತಮ್ ಗಂಭೀರ್ ಹೊಗಳಿದ್ದಾರೆ.

ಚಹರ್ ತನ್ನ ಹುಡುಗಿಗೆ ಸ್ಟೇಡಿಯಂನಲ್ಲೇ ಲವ್ ಪ್ರಪೋಸ್ ಮಾಡಿದ್ದನ್ನ ನೋಡಿ ಎಲ್ರೂ ಶಾಕ್ | Oneindia Kannada
ಉಳಿದ ಆಟಗಾರರ ಬಗ್ಗೆ ಮಾತನಾಡಬಹುದು ಆದರೆ, ಅಂಬಾಟಿ ರಾಯುಡು ಅತ್ಯುತ್ತಮ

ಉಳಿದ ಆಟಗಾರರ ಬಗ್ಗೆ ಮಾತನಾಡಬಹುದು ಆದರೆ, ಅಂಬಾಟಿ ರಾಯುಡು ಅತ್ಯುತ್ತಮ

'ಚೆನ್ನೈ ಸೂಪರ್ ಕಿಂಗ್ಸ್ ತಂಡದ ರವೀಂದ್ರ ಜಡೇಜಾ ಮತ್ತು ಸುರೇಶ್ ರೈನಾ ಹಾಗೂ ಇನ್ನೂ ಮುಂತಾದ ಆಟಗಾರರ ಆಟದ ಬಗ್ಗೆಯೂ ಕೂಡ ನಾವು ಮಾತನಾಡಬಹುದು. ಆದರೆ ಅವರೆಲ್ಲರಿಗಿಂತ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬರುತ್ತಿರುವುದು ಅಂಬಾಟಿ ರಾಯುಡು' ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, October 7, 2021, 16:20 [IST]
Other articles published on Oct 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X