ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Anil Kumble: ಪಂಜಾಬ್ ಕಿಂಗ್ಸ್ ಕೋಚ್ ಸ್ಥಾನದಿಂದ ಕನ್ನಡಿಗ ಕುಂಬ್ಳೆ ಔಟ್; ಬೇರೆ ಕೋಚ್ ಆಯ್ಕೆ!

IPL: Punjab Kings likely to appoint new coach as they not ready to renew Anil Kumbles coach contract

ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇನ್ನೂ ಸಾಕಷ್ಟು ತಿಂಗಳುಗಳ ಸಮಯವಿರುವಾಗಲೇ ಈಗಿನಿಂದಲೇ ಟೂರ್ನಿಯ ಕುರಿತಾದ ಚಟುವಟಿಕೆಗಳು ಗರಿಗೆದರಿವೆ. ಹೌದು, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ತಂಡಗಳ ಹೆಡ್ ಕೋಚ್‌ಗಳ ಕುರಿತಾಗಿ ಸದ್ಯ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚಿಗಷ್ಟೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಹೆಡ್ ಕೋಚ್ ಸ್ಥಾನದಿಂದ ಬ್ರೆಂಡನ್ ಮೆಕ್ಕಲಮ್ ಕೆಳಗಿಳಿದ ನಂತರ ಚಂದ್ರಕಾಂತ್ ಪಂಡಿತ್ ನೂತನ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದರು. ಇದಾದ ಬೆನ್ನಲ್ಲೇ ಇದೀಗ ಪಂಜಾಬ್ ಕಿಂಗ್ಸ್ ತಂಡ ಕೂಡ ತನ್ನ ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ಬದಲಾಗಿ ನೂತನ ಕೋಚ್ ಅನ್ನು ಆಯ್ಕೆ ಮಾಡಲು ಚಿಂತನೆ ನಡೆಸುತ್ತಿದೆ ಎಂಬ ಸುದ್ದಿಯನ್ನು ಬಲ್ಲ ಮೂಲಗಳು ತಿಳಿಸಿವೆ.

IND vs ZIM: ರಾಷ್ಟ್ರಗೀತೆ ಸಂದರ್ಭದಲ್ಲಿ ರಾಹುಲ್ ಮೈದಾನದಲ್ಲಿ ನಡೆದುಕೊಂಡ ರೀತಿ; ವಿಡಿಯೋ ವೈರಲ್IND vs ZIM: ರಾಷ್ಟ್ರಗೀತೆ ಸಂದರ್ಭದಲ್ಲಿ ರಾಹುಲ್ ಮೈದಾನದಲ್ಲಿ ನಡೆದುಕೊಂಡ ರೀತಿ; ವಿಡಿಯೋ ವೈರಲ್

ಪಂಜಾಬ್ ಕಿಂಗ್ಸ್ ತಂಡದ ಕೋಚ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರ ಅಧಿಕಾರ ಒಪ್ಪಂದದ ಅವಧಿ ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಅಂತ್ಯಗೊಳ್ಳಲಿದ್ದು, ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಅನಿಲ್ ಕುಂಬ್ಳೆ ಅವರನ್ನು ಕೋಚ್ ಆಗಿ ಮುಂದುವರಿಸಲು ಇಚ್ಚಿಸುತ್ತಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ನೂತನ ಕೋಚ್ ಹುಡುಕಾಟದಲ್ಲಿದೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ.

ಮಹಾರಾಜ ಟ್ರೋಫಿ: 22 ಲೀಗ್ ಪಂದ್ಯಗಳ ನಂತರದ ಅಂಕಪಟ್ಟಿ ಹೇಗಿದೆ? ನಂಬರ್ 1 ಯಾರು?ಮಹಾರಾಜ ಟ್ರೋಫಿ: 22 ಲೀಗ್ ಪಂದ್ಯಗಳ ನಂತರದ ಅಂಕಪಟ್ಟಿ ಹೇಗಿದೆ? ನಂಬರ್ 1 ಯಾರು?

ಇನ್ನು ಅನಿಲ್ ಕುಂಬ್ಳೆ ಅವರನ್ನು ಕೋಚ್ ಆಗಿ ಮುಂದುವರಿಸಲು ಪಂಜಾಬ್ ಕಿಂಗ್ಸ್ ಯಾಕೆ ಇಚ್ಚಿಸುತ್ತಿಲ್ಲ ಎಂಬ ವಿಷಯ ಮಾತ್ರ ತಿಳಿದು ಬರದೇ ಇದ್ದರೂ ಸಹ ಸಾಮಾಜಿಕ ಜಾಲತಾಣದಲ್ಲಿ ಅನಿಲ್ ಕುಂಬ್ಳೆ ಕೋಚ್ ಆಗಿ ವಿಫಲವಾಗಿದ್ದೇ ಈ ನಿರ್ಧಾರಕ್ಕೆ ಕಾರಣವಾಯ್ತಾ ಎಂಬ ಗುಸುಗುಸು ಶುರುವಾಗಿದೆ.

ನೂತನ ಕೋಚ್ ಆಗಿ ಈ ಇಬ್ಬರಲ್ಲಿ ಒಬ್ಬರ ಆಯ್ಕೆ ಸಾಧ್ಯತೆ

ನೂತನ ಕೋಚ್ ಆಗಿ ಈ ಇಬ್ಬರಲ್ಲಿ ಒಬ್ಬರ ಆಯ್ಕೆ ಸಾಧ್ಯತೆ

ಇನ್ನು ಅನಿಲ್ ಕುಂಬ್ಳೆ ಅವಧಿ ಮುಕ್ತಾಯವಾಗುತ್ತಿರುವ ಹಿನ್ನಲೆಯಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಈಗಾಗಲೇ ನೂತನ ಕೋಚ್ ಹುಡುಕಾಟದಲ್ಲಿದ್ದು, ಇಯಾನ್ ಮಾರ್ಗನ್ ಅಥವಾ ಟ್ರೆವರ್ ಬೇಲಿಸ್ ನೂತನ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ವರದಿಗಳ ಪ್ರಕಾರ ಈ ಇಬ್ಬರನ್ನು ಈಗಾಗಲೇ ಪಂಜಾಬ್ ಕಿಂಗ್ಸ್ ಸಂಪರ್ಕಿಸಿದ್ದು, ಇಬ್ಬರಲ್ಲೊಬ್ಬರು ನೂತನ ಹೆಡ್ ಕೋಚ್ ಆಗಿ ಅನಿಲ್ ಕುಂಬ್ಳೆ ಅವರ ಬದಲಾಗಿ ಆಯ್ಕೆಯಾಗುವುದು ಖಚಿತ ಎನ್ನಲಾಗುತ್ತಿದೆ.

ಕುಂಬ್ಳೆ ಮಾರ್ಗದರ್ಶನದಡಿಯಲ್ಲಿ ಪಂಜಾಬ್ ಕಿಂಗ್ಸ್ ಗೆದ್ದಿದ್ದೆಷ್ಟು?

ಕುಂಬ್ಳೆ ಮಾರ್ಗದರ್ಶನದಡಿಯಲ್ಲಿ ಪಂಜಾಬ್ ಕಿಂಗ್ಸ್ ಗೆದ್ದಿದ್ದೆಷ್ಟು?

ಅನಿಲ್ ಕುಂಬ್ಳೆ ಕೋಚ್ ಆಗಿ ಪಂಜಾಬ್ ಕಿಂಗ್ಸ್ ತಂಡವನ್ನು 42 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ಪೈಕಿ ಕೇವಲ 19 ಪಂದ್ಯಗಳಲ್ಲಿ ಮಾತ್ರ ಪಂಜಾಬ್ ಕಿಂಗ್ಸ್ ಜಯ ಸಾಧಿಸಿದ್ದು, ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.

Ravi Shastri ಅವಧಿಯಲ್ಲಿ ದಿನೇಶ್ ಕಾರ್ತಿಕ್ ಭಯಪಟ್ಟಿದ್ದು ಯಾಕೆ? | *Cricket | OneIndia Kannada
ಪ್ರತೀ ಆವೃತ್ತಿಯಲ್ಲಿಯೂ ವಿಫಲ

ಪ್ರತೀ ಆವೃತ್ತಿಯಲ್ಲಿಯೂ ವಿಫಲ

ಇನ್ನು ಪಂಜಾಬ್ ಕಿಂಗ್ಸ್ 2014ರ ಐಪಿಎಲ್ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದು ಬಿಟ್ಟರೆ ನಂತರ ನಡೆದ ಯಾವುದೇ ಆವೃತ್ತಿಯಲ್ಲಿಯೂ ಸಹ ಪ್ಲೇ ಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿಲ್ಲ. ಹೀಗೆ ಸಾಲು ಸಾಲು ಆವೃತ್ತಿಗಳಲ್ಲಿ ವಿಫಲವಾಗಿರುವ ಪಂಜಾಬ್ ಕಿಂಗ್ಸ್ ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ಸಹ ವಿಫಲವಾಗಿದ್ದು ಇದೀಗ ಕೋಚ್ ಬದಲಾವಣೆಯತ್ತ ಚಿಂತಿಸುತ್ತಿದೆ.

Story first published: Friday, August 19, 2022, 11:53 [IST]
Other articles published on Aug 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X