ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಫೌಂಡೇಶನ್ ದಿನದ ಸಂಭ್ರಮದಲ್ಲಿ ಆರ್‌ಸಿಬಿ ಪ್ರಾಂಚೈಸಿ

IPL: Royal Challengers bangalore celebrates Foundation day

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಗೆ ಸಿದ್ಧತೆ ನಡೆಸುತ್ತಿದೆ. ಈ ಆವೃತ್ತಿಗೂ ಮುನ್ನ ಮಿನಿ ಹರಾಜಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಐಪಿಎಲ್ ಆಡಳಿತ ಮಂಡಳಿ ಆರಂಭಿಸಿದೆ. ಐಪಿಎಲ್ ಹರಾಜಿನ ಈ ಸಿದ್ಧತೆಗಳ ಮಧ್ಯೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿಶೇಷ ದಿನವೊಂದನ್ನು ಸಂಭ್ರಮಿಸುತ್ತಿದೆ.

ಐಪಿಎಲ್‌ನಲ್ಲಿ ಪ್ರಮುಖ ಫ್ರಾಂಚೈಸಿಯಾಗಿರುವ ಆರ್‌ಸಿಬಿ ಇಂದು ಸ್ಥಾಪನೆಯಾದ ದಿನವಾಗಿದೆ. ಇದನ್ನು ಫ್ರಾಂಚೈಸಿ ಫೌಂಡೇಶನ್ ದಿನ ಎಂದು ಸಂಭ್ರಮಿಸುತ್ತಿದೆ. 13 ವರ್ಷಗಳ ಹಿಂದೆ ಆರ್‌ಸಿಬಿ ಫ್ರಾಂಚೈಸಿಯ ಆರಂಭವಾಗಿತ್ತು. ಹೀಗಾಗಿ ಆರ್‌ಸಿಬಿಗೆ ಇದು ವಿಶೇಷ ದಿನವಾಗಿದೆ.

ಅಜಿಂಕ್ಯ ರಹಾನೆ ಇಷ್ಟವಾಗೋದು ಇಂಥ ಒಳ್ಳೆಯತನಗಳಿಗಾಗಿಯೇ!ಅಜಿಂಕ್ಯ ರಹಾನೆ ಇಷ್ಟವಾಗೋದು ಇಂಥ ಒಳ್ಳೆಯತನಗಳಿಗಾಗಿಯೇ!

2008ರಲ್ಲಿ ಕ್ರಿಕೆಟ್‌ನ ಅತಿದೊಡ್ಡ ಲೀಗ್ ಟೂರ್ನಮೆಂಡ್ ಐಪಿಎಲ್‌ಅನ್ನು ಬಿಸಿಸಿಐ ಆರಂಭಿಸಿತು. ಆ ಆರಂಭಿಕ ಟೂರ್ನಿಯಿಂದಲೇ ಆರ್‌ಸಿಬಿ ಐಪಿಎಲ್‌ನ ಭಾಗವಾಗಿದೆ. ಹಾಗಾಗಿ 2008 ರ ಜನವರಿ 24ರಂದು ಆರ್‌ಸಿಬಿ ಜನ್ಮತಾಳಿತು.

ಕಳೆದ 13 ಆವೃತ್ತಿಗಳಲ್ಲಿ ಆರ್‌ಸಿಬಿ ಐಪಿಎಲ್‌ನಲ್ಲಿ ಪಾಲ್ಗೊಂಡಿದೆ. ಈವರೆಗೆ ಐಪಿಎಲ್ ಟೂರ್ನಿಯಲ್ಲಿ ಕಪ್ ಗೆಲ್ಲಲು ಸಾಧ್ಯವಾಗದಿದ್ದರೂ ಐಪಿಎಲ್ 3 ಬಾರಿ ಐಪಿಎಲ್ ಫೈನಲ್‌ ಹಂತಕ್ಕೇರುವಲ್ಲಿ ಸಫಲವಾಗಿತ್ತು. 2009, 2011 ಹಾಗೂ 2016ರಲ್ಲಿ ಫೈನಲ್ ಹಂತಕ್ಕೇರಿತ್ತು ಆರ್‌ಸಿಬಿ. ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಅವರಂತಾ ದಿಗ್ಗಜ ಆಟಗಾರರು ಆರ್‌ಸಿಇ ತಂಡವನ್ನು ಮುನ್ನಡೆಸಿದ್ದಾರೆ.

ಆರ್‌ಸಿಬಿ ತಂಡವನ್ನು 2011ರ ಆವೃತ್ತಿಯಿಂದ ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಪ್ಲೇಆಫ್ ಹಂತಕ್ಕ್ಏರುವಲ್ಲಿ ಯಶಸ್ವಿಯಾಗಿದ್ದ ಆರ್‌ಸಿಬಿ ಈ ಮುಂದಿನ ಆವೃತ್ತಿಯಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ.

Story first published: Sunday, January 24, 2021, 12:24 [IST]
Other articles published on Jan 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X