ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐರ್ಲೆಂಡ್ ವಿರುದ್ಧ ಇಲ್ಲಿಯವರೆಗೂ ಯಾವುದೇ ಪಂದ್ಯದಲ್ಲೂ ಸೋತಿಲ್ಲ ಈ 4 ತಂಡಗಳು; ಸೋತಿವೆ 7 ತಂಡಗಳು!

Ireland defeated Pakistan and England but never defeated these 4 teams in cricket history

ಐರ್ಲೆಂಡ್, ಕ್ರಿಕೆಟ್ ಜಗತ್ತಿನಲ್ಲಿ ಶಿಶು ಎನಿಸಿಕೊಂಡಿದ್ದರೂ ಸಹ ಕೆಲ ಬಲಿಷ್ಠ ತಂಡಗಳ ವಿರುದ್ಧ ಪುಟಿದೆದ್ದು ಭರ್ಜರಿ ಜಯ ಸಾಧಿಸಿರುವ ಸಾಹಸವನ್ನು ಮಾಡಿಸುವಂತಹ ತಂಡ.

IND vs ENG 5ನೇ ಟೆಸ್ಟ್: ಬುಮ್ರಾ ನಾಯಕನಲ್ಲ; ಅಚ್ಚರಿ ಮೂಡಿಸಿದ ರಾಹುಲ್ ದ್ರಾವಿಡ್ ಹೇಳಿಕೆ!IND vs ENG 5ನೇ ಟೆಸ್ಟ್: ಬುಮ್ರಾ ನಾಯಕನಲ್ಲ; ಅಚ್ಚರಿ ಮೂಡಿಸಿದ ರಾಹುಲ್ ದ್ರಾವಿಡ್ ಹೇಳಿಕೆ!

ಅದರಲ್ಲಿಯೂ ಎಂಎಸ್ ಧೋನಿ ನಾಯಕತ್ವದ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಎತ್ತಿ ಹಿಡಿದ 2011ರ ಟೂರ್ನಿಯಲ್ಲಿ ಇದೇ ಐರ್ಲೆಂಡ್ ಬಲಿಷ್ಠ ಇಂಗ್ಲೆಂಡ್ ತಂಡಕ್ಕೆ ಮಣ್ಣು ಮುಕ್ಕಿಸಿದ್ದನ್ನು ಯಾವ ಕ್ರಿಕೆಟ್ ಅಭಿಮಾನಿಗೆ ತಾನೇ ಮರೆಯಲು ಸಾಧ್ಯ. ಹೌದು, 2011ರ ಮಾರ್ಚ್ 2ರಂದು ಬೆಂಗಳೂರಿನ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ 2011ರ ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತದ 15ನೇ ಪಂದ್ಯದಲ್ಲಿ ಐರ್ಲೆಂಡ್ ಇಂಗ್ಲೆಂಡ್ ವಿರುದ್ಧ 3 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತ್ತು.

IND vs ENG: 4 ವಾರಗಳ ಹಿಂದೆ ಕೇಳಿದ್ರೆ ಭಾರತ ಗೆಲ್ಲುತ್ತೆ ಎನ್ನುತ್ತಿದ್ದೆ, ಈಗ ಹಾಗಿಲ್ಲ ಎಂದ ಇಂಗ್ಲೆಂಡ್ ಕ್ರಿಕೆಟಿಗIND vs ENG: 4 ವಾರಗಳ ಹಿಂದೆ ಕೇಳಿದ್ರೆ ಭಾರತ ಗೆಲ್ಲುತ್ತೆ ಎನ್ನುತ್ತಿದ್ದೆ, ಈಗ ಹಾಗಿಲ್ಲ ಎಂದ ಇಂಗ್ಲೆಂಡ್ ಕ್ರಿಕೆಟಿಗ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 327 ರನ್ ಕಲೆಹಾಕಿ ಐರ್ಲೆಂಡ್ ತಂಡಕ್ಕೆ ಗೆಲ್ಲಲು 328 ರನ್‌ಗಳ ಗುರಿಯನ್ನು ನೀಡಿತ್ತು. ಅತ್ತ 49.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 329 ರನ್ ಚಚ್ಚಿದ ಐರ್ಲೆಂಡ್ ಯಾರೂ ಊಹಿಸಿರದ ರೀತಿ ಇಂಗ್ಲೆಂಡ್ ತಂಡವನ್ನು 5 ಎಸೆತಗಳು ಬಾಕಿ ಇರುವಾಗಲೇ ಮಣಿಸಿತು. ಐರ್ಲೆಂಡ್ ತಂಡದ ಕೆವಿನ್ ಓಬ್ರಿಯನ್ ಶತಕ ಬಾರಿಸಿ ಮಿಂಚಿ ಕ್ರಿಕೆಟ್ ಪ್ರೇಮಿಗಳ ನೆನಪಿನಲ್ಲಿ ಅಚ್ಚಳಿಯದೆ ಉಳಿದು ಬಿಟ್ಟರು. ಹೀಗೆ ಇಂಗ್ಲೆಂಡ್ ಮಾತ್ರವಲ್ಲ ಕೆಲ ಬಲಿಷ್ಠ ತಂಡಗಳ ವಿರುದ್ಧ ಐರ್ಲೆಂಡ್ ಜಯ ಸಾಧಿಸಿದ್ದು, 4 ತಂಡಗಳ ವಿರುದ್ಧ ಮಾತ್ರ ಯಾವುದೇ ಅಂತರರಾಷ್ಟ್ರೀಯ ಪಂದ್ಯದಲ್ಲಿಯೂ ಜಯ ಸಾಧಿಸಿಲ್ಲ. ಹೀಗೆ ಐರ್ಲೆಂಡ್ ಯಾವ ತಂಡಗಳ ವಿರುದ್ಧ ಗೆದ್ದಿದೆ ಹಾಗೂ ಯಾವ ತಂಡಗಳ ವಿರುದ್ಧ ಇನ್ನೂ ಒಂದೇ ಒಂದು ಪಂದ್ಯದಲ್ಲಿಯೂ ಗೆದ್ದಿಲ್ಲ ಎಂಬುದರ ಕುರಿತಾದ ಮಾಹಿತಿ ಮುಂದೆ ಓದಿ.

ಐರ್ಲೆಂಡ್ ಎದುರು ಸೋತ ತಂಡಗಳು

ಐರ್ಲೆಂಡ್ ಎದುರು ಸೋತ ತಂಡಗಳು

ಐರ್ಲೆಂಡ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಸೋಲುಂಡಿರುವ 7 ತಂಡಗಳ ಪಟ್ಟಿ ಇಲ್ಲಿದೆ

1. ಪಾಕಿಸ್ತಾನ
2. ಇಂಗ್ಲೆಂಡ್
3. ವೆಸ್ಟ್ ಇಂಡೀಸ್
4. ಬಾಂಗ್ಲಾದೇಶ
5. ಅಫ್ಘಾನಿಸ್ತಾನ
6. ದಕ್ಷಿಣ ಆಫ್ರಿಕಾ
7. ಜಿಂಬಾಬ್ವೆ

ಐರ್ಲೆಂಡ್ ಎದುರು ಯಾವುದೇ ಪಂದ್ಯದಲ್ಲಿಯೂ ಸೋಲದ ತಂಡಗಳಿವು

ಐರ್ಲೆಂಡ್ ಎದುರು ಯಾವುದೇ ಪಂದ್ಯದಲ್ಲಿಯೂ ಸೋಲದ ತಂಡಗಳಿವು

ಕ್ರಿಕೆಟ್ ಇತಿಹಾಸದಲ್ಲಿ ಐರ್ಲೆಂಡ್ ವಿರುದ್ಧ ಯಾವುದೇ ಪಂದ್ಯದಲ್ಲಿಯೂ ಸೋಲದೇ ಇರುವ 4 ತಂಡಗಳ ಪಟ್ಟಿ ಕೆಳಕಂಡಂತಿದೆ.

1. ಭಾರತ
2. ನ್ಯೂಜಿಲೆಂಡ್
3. ಆಸ್ಟ್ರೇಲಿಯಾ
4. ಶ್ರೀಲಂಕಾ

Virat Kohli ಶತಕದ ಬದ್ಲು ನಮ್ಗೆ ಬೇಕಾಗಿರೋದು ಇದು...ರಾಹುಲ್ ದ್ರಾವಿಡ್ ಶಾಕಿಂಗ್ ಹೇಳಿಕೆ | *Cricket |OneIndia
ಹೀನಾಯ ಸೋಲು ಕಂಡಿತ್ತು ಪಾಕಿಸ್ತಾನ

ಹೀನಾಯ ಸೋಲು ಕಂಡಿತ್ತು ಪಾಕಿಸ್ತಾನ

ಈ ಹಿಂದೆ ವಿಶ್ವಕಪ್‌ ಪಂದ್ಯದಲ್ಲಿ ಐರ್ಲೆಂಡ್ ಎದುರು ಇಂಗ್ಲೆಂಡ್ ಹೀನಾಯ ಸೋಲನ್ನು ಕಂಡಿದ್ದರ ಬಗ್ಗೆ ಓದಿದ್ದೀರಿ. ಅದೇ ರೀತಿ ವಿಶ್ವಕಪ್ ಹಣಾಹಣಿಯೊಂದರಲ್ಲಿ ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಹೀನಾಯ ಸೋಲನ್ನು ಕಂಡಿತ್ತು. ಹೌದು, 2007ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಾರ್ಚ್ 17ರಂದು ಪಾಕಿಸ್ತಾನ ಮತ್ತು ಐರ್ಲೆಂಡ್ ತಂಡಗಳು ಟೂರ್ನಿಯ ಒಂಬತ್ತನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 132 ರನ್‌ಗಳಿಗೆ ಆಲ್ ಔಟ್ ಆಗಿತ್ತು. ಹಾಗೂ ಐರ್ಲೆಂಡ್ 41.4 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿ 3 ವಿಕೆಟ್‍ಗಳ ಜಯವನ್ನು ದಾಖಲಿಸಿತ್ತು.

Story first published: Wednesday, June 29, 2022, 23:48 [IST]
Other articles published on Jun 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X