ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

38 ರನ್‌ಗೆ ಗಂಟೂ ಮೂಟೆ ಕಟ್ಟಿದ ಐರ್ಲೆಂಡ್‌!, ಇಂಗ್ಲೆಂಡ್‌ಗೆ ಜಯ

Ireland post lowest ever Test score

ಲಂಡನ್‌, ಜುಲೈ 26: ಆತಿಥೇಯ ಇಂಗ್ಲೆಂಡ್‌ ತಂಡದ ಅನುಭವಿ ವೇಗದ ಬೌಲರ್‌ಗಳ ಮಾರಕ ಬೌಲಿಂಗ್‌ ದಾಳಿ ನೆರವಿನಿಂದ ಮಿಂಚಿದ ಇಂಗ್ಲೆಂಡ್‌ ತಂಡ, ಇಲ್ಲಿ ನಡೆದ ಪ್ರವಾಸಿ ಐರ್ಲೆಂಡ್‌ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ 143 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ಆಗಸ್ಟ್‌ 16ರಿಂದ ಕರ್ನಾಟಕ ಪ್ರೀಮಿಯರ್‌ ಲೀಗ್‌, ಫೈನಲ್‌ ಎಲ್ಲಿ ಗೊತ್ತಾ?ಆಗಸ್ಟ್‌ 16ರಿಂದ ಕರ್ನಾಟಕ ಪ್ರೀಮಿಯರ್‌ ಲೀಗ್‌, ಫೈನಲ್‌ ಎಲ್ಲಿ ಗೊತ್ತಾ?

ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 85ಕ್ಕೆ ಆಲ್‌ಔಟ್‌ ಆದರೂ, ಎರಡನೇ ಇನಿಂಗ್ಸ್‌ನಲ್ಲಿ ಚೇತರಿಸಿ ಐರ್ಲೆಂಡ್‌ಗೆ 182 ರನ್‌ಗಳ ಗುರಿ ನೀಡಿತ್ತು. ಬಳಿಕ ಐತಿಹಾಸಿಕ ಸಾಧನೆ ಮೆರೆಯುವ ಕನಸಿನೊಂದಿಗೆ ಗುರಿ ಬೆನ್ನತ್ತಿದ ಐರಿಷ್‌ ಪಡೆ 15.4 ಓವರ್‌ಗಳಲ್ಲಿ 38 ರನ್‌ಗೆ ಗಂಟೂ ಮೂಟೆ ಕಟ್ಟಿತು. ಇದರೊಂದಿಗೆ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಗೆಲುವಿನ ಉತ್ತಮ ಅವಕಾಶವನ್ನು ಕೈಚೆಲ್ಲಿತು.

8ನೇ ಆವೃತ್ತಿಯ ಕೆಪಿಎಲ್‌ ಟಿ20 ಕದನ: ಜು.27ರಂದು ಆಟಗಾರರ ಹರಾಜು8ನೇ ಆವೃತ್ತಿಯ ಕೆಪಿಎಲ್‌ ಟಿ20 ಕದನ: ಜು.27ರಂದು ಆಟಗಾರರ ಹರಾಜು

ಅನುಭವಿ ವೇಗದ ಬೌಲರ್‌ ಕ್ರಿಸ್‌ ವೋಕ್ಸ್‌ 17ಕ್ಕೆ 6 ವಿಕೆಟ್‌ ಪಡೆದು ಮಿಂಚಿದರೆ, ಅವರೊಟ್ಟಿಗೆ ಉತ್ತಮ ದಾಳಿ ಸಂಘಟಿಸಿದ ಮತ್ತೊಬ್ಬ ಅನುಭವಿ ವೇಗಿ ಸ್ಟುವರ್ಟ್‌ ಬ್ರಾಡ್‌ 19ಕ್ಕೆ 4 ವಿಕೆಟ್‌ ಪಡೆದು ಐರ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡಿದರು. ಆರಂಭಿಕ ಬ್ಯಾಟ್ಸ್‌ಮನ್‌ ಜೇಮ್ಸ್‌ ಮೆಕಲಮ್‌ 11 ರನ್‌ಗಳನ್ನು ಗಳಿಸಿದ್ದನ್ನು ಬಿಟ್ಟರೆ, ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳು ಒಂದಂಕಿಯ ರನ್‌ಗೆ ಸುಸ್ತಾದರು.

ಇದು ಲಾರ್ಡ್ಸ್‌ ಅಂಗಣದಲ್ಲಿ ಟೆಸ್ಟ್‌ ಪಂದ್ಯವೊಂದರಲ್ಲಿ ತಂಡವೊಂದು ಗಳಿಸಿದ ಅತ್ಯಂತ ಕಡಿಮೆ ಮೊತ್ತವಾಗಿದೆ.

ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌: 85 ಮತ್ತು 2ನೇ ಇನಿಂಗ್ಸ್‌ 303/10 (ಜಾಕ್‌ ಲೀಚ್‌ 92, ಜೇಸನ್‌ ರಾಯ್‌ 72; ಮಾರ್ಕ್‌ ಅಡೈರ್ 66ಕ್ಕೆ 3).
ಐರ್ಲೆಂಡ್‌: 207 ಮತ್ತು ಎರಡನೇ ಇನಿಂಗ್ಸ್‌ 38/10 (ಜೇಮ್ಸ್‌ ಮೆಕಲಮ್‌ 11; ಕ್ರಿಸ್‌ ವೋಕ್ಸ್‌ 17ಕ್ಕೆ 6, ಸ್ಟಿವರ್ಟ್‌ ಬ್ರಾಡ್‌ 19ಕ್ಕೆ 4).

1
44037

Story first published: Friday, July 26, 2019, 23:39 [IST]
Other articles published on Jul 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X