ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IRE vs IND: ಎರಡು ಪಂದ್ಯಗಳ ಟಿ20 ಸರಣಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

Ireland vs India: Facts To Know About The Two-match T20 Series

ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವೆ ಎರಡು ಪಂದ್ಯಗಳ ಟಿ20 ಸರಣಿಯನ್ನು ಡಬ್ಲಿನ್‌ನ ದಿ ವಿಲೇಜ್‌ ಕ್ರೀಡಾಂಗಣದಲ್ಲಿ ಹಣಾಹಣಿ ನಡೆಸಲು ಸಿದ್ಧವಾಗಿವೆ. ಜೂನ್ 26ರ ಭಾನುವಾರ ಮತ್ತು ಜೂನ್ 28ರ ಮಂಗಳವಾರದಂದು ಪಂದ್ಯಗಳು ನಡೆಯಲಿವೆ.

ಮುಂಬರುವ ವೈಟ್ ಬಾಲ್ ಪಂದ್ಯಗಳಿಗೆ ಎರಡೂ ತಂಡಗಳು ತಮ್ಮ ತಮ್ಮ ತಂಡಗಳನ್ನು ಹೆಸರಿಸಿವೆ. ಹಾರ್ದಿಕ್ ಪಾಂಡ್ಯ ಅವರು 2022ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ನಂತರ ಮೊದಲ ಬಾರಿಗೆ ಭಾರತ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆಸಲಿದ್ದಾರೆ.

Ind vs Eng: ಹಜ್ ಯಾತ್ರೆಗೆ ಇಂಗ್ಲೆಂಡ್ ಸ್ಪಿನ್ನರ್; ಭಾರತ ನಿರಾಳ!Ind vs Eng: ಹಜ್ ಯಾತ್ರೆಗೆ ಇಂಗ್ಲೆಂಡ್ ಸ್ಪಿನ್ನರ್; ಭಾರತ ನಿರಾಳ!

ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೆನ್ ಇನ್ ಬ್ಲೂ ತಂಡದ ನಾಯಕರಾಗಿದ್ದ ರಿಷಭ್ ಪಂತ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅಲ್ಲದೇ ಅವರಿ ಇದೀಗ ಇಂಗ್ಲೆಂಡ್‌ನಲ್ಲಿ ಟೆಸ್ಟ್ ತಂಡವನ್ನು ಕೂಡಿಕೊಂಡಿದ್ದಾರೆ. ಐಪಿಎಲ್ 2022 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗಾಗಿ ಅಸಾಧಾರಣ ಪ್ರದರ್ಶನ ನೀಡಿದ ನಂತರ ಬಲಗೈ ಬ್ಯಾಟರ್ ರಾಹುಲ್ ತ್ರಿಪಾಠಿ ಅವರು ತಮ್ಮ ಮೊದಲ ಬಾರಿಗೆ ಭಾರತ ತಂಡದಿಂದ ಕರೆ ಪಡೆದಿದ್ದಾರೆ.

ಸಂಜು ಸ್ಯಾಮ್ಸನ್ ಕೂಡ ರಾಷ್ಟ್ರೀಯ ತಂಡದಲ್ಲಿ ಸ್ಥಾನ

ಸಂಜು ಸ್ಯಾಮ್ಸನ್ ಕೂಡ ರಾಷ್ಟ್ರೀಯ ತಂಡದಲ್ಲಿ ಸ್ಥಾನ

ಯುವ ವೇಗಿಗಳಾದ ಉಮ್ರಾನ್ ಮಲಿಕ್ ಮತ್ತು ಅರ್ಶ್‌ದೀಪ್ ಸಿಂಗ್ ಇಬ್ಬರೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿಲ್ಲ. ಇನ್ನು ಐರ್ಲೆಂಡ್ ವಿರುದ್ಧದ ಸರಣಿಗೆ ಸಂಜು ಸ್ಯಾಮ್ಸನ್ ಕೂಡ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆಂಡ್ರ್ಯೂ ಬಲ್ಬಿರ್ನಿ ನಾಯಕತ್ವದ ಐರ್ಲೆಂಡ್ ತಂಡ ಆಲ್‌ರೌಂಡರ್‌ಗಳಾದ ಶೇನ್ ಗೆಟ್‌ಕೇಟ್ ಮತ್ತು ಸಿಮಿ ಸಿಂಗ್ ಅವರನ್ನು ತಂಡದಿಂದ ಕೈಬಿಟ್ಟಿದೆ. ಮುಂಬರುವ ಪಂದ್ಯಗಳಿಗೆ ಆತಿಥೇಯರು ಬಲಗೈ ಬ್ಯಾಟರ್ ಸ್ಟೀಫನ್ ಡೊಹೆನಿ ಮತ್ತು ವೇಗದ ಬೌಲರ್ ಕಾನರ್ ಓಲ್ಫರ್ಟ್ ಅವರನ್ನು ಸೇರ್ಪಡೆ ಮಾಡಿಕೊಂಡಿದೆ.

ಭಾರತ vs ಐರ್ಲೆಂಡ್ ಹೆಡ್ ಟು ಹೆಡ್

ಭಾರತ vs ಐರ್ಲೆಂಡ್ ಹೆಡ್ ಟು ಹೆಡ್

ಐರ್ಲೆಂಡ್ ತಂಡ ಕಡಿಮೆ ಸ್ವರೂಪದಲ್ಲಿ ಈವರೆಗೆ ಭಾರತವನ್ನು ಸೋಲಿಸಿಲ್ಲ ಎಂಬುದನ್ನು ಗಮನಿಸುವುದು ಅಂಶವಾಗಿದೆ. 2018ರಲ್ಲಿ ಇದೇ ಸ್ಥಳದಲ್ಲಿ ನಡೆದ ಟಿ20 ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸಿತ್ತು.

ಒಟ್ಟು ಪಂದ್ಯಗಳು- 3
ಭಾರತ- 3, ಐರ್ಲೆಂಡ್- 0

ಐರ್ಲೆಂಡ್‌ನಲ್ಲಿ ಪಂದ್ಯಗಳು- 2
ಭಾರತ- 2, ಐರ್ಲೆಂಡ್- 0

ಭಾರತ vs ಐರ್ಲೆಂಡ್ ಪಂದ್ಯದ ಸಮಯ, ಲೈವ್ ಟೆಲಿಕಾಸ್ಟ್ ಮತ್ತು ಸ್ಟ್ರೀಮಿಂಗ್

ಭಾರತ vs ಐರ್ಲೆಂಡ್ ಪಂದ್ಯದ ಸಮಯ, ಲೈವ್ ಟೆಲಿಕಾಸ್ಟ್ ಮತ್ತು ಸ್ಟ್ರೀಮಿಂಗ್

ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಎರಡು ಪಂದ್ಯಗಳನ್ನು ಪ್ರಸಾರ ಮಾಡಲಿದೆ. ಸೋನಿ LIV ಅಪ್ಲಿಕೇಶನ್‌ನಲ್ಲಿ ಆಟಗಳ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.

ಭಾನುವಾರ, ಜೂನ್ 26- ಐರ್ಲೆಂಡ್ ವಿರುದ್ಧ ಭಾರತ 1ನೇ ಟಿ20 ಪಂದ್ಯ. ದಿ ವಿಲೇಜ್, ಡಬ್ಲಿನ್. ಸಮಯ ಭಾರತೀಯ ಕಾಲಮಾನ ರಾತ್ರಿ 9 ಗಂಟೆ.
ಭಾನುವಾರ, ಜೂನ್ 28- ಐರ್ಲೆಂಡ್ ವಿರುದ್ಧ ಭಾರತ 2ನೇ ಟಿ20 ಪಂದ್ಯ. ದಿ ವಿಲೇಜ್, ಡಬ್ಲಿನ್. ಸಮಯ ಭಾರತೀಯ ಕಾಲಮಾನ ರಾತ್ರಿ 9 ಗಂಟೆ.

Team India ವನ್ನು ಕಾಡಿದ್ದ Englandಸ್ಟಾರ್ ಸ್ಪಿನ್ನರ್ Adil Rashid ಹಜ್ ಯಾತ್ರೆಗೆ... | *Cricket | OneIndia
ಭಾರತ vs ಐರ್ಲೆಂಡ್ ಸಂಭಾವ್ಯ ತಂಡಗಳು

ಭಾರತ vs ಐರ್ಲೆಂಡ್ ಸಂಭಾವ್ಯ ತಂಡಗಳು

ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅವೇಶ್ ಖಾನ್, ಹರ್ಷಲ್ ಪಟೇಲ್ ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್.

ಐರ್ಲೆಂಡ್ ತಂಡ: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್, ಗರೆಥ್ ಡೆಲಾನಿ, ಪಾಲ್ ಸ್ಟಿರ್ಲಿಂಗ್, ಕರ್ಟಿಸ್ ಕ್ಯಾಂಫರ್, ಸ್ಟೀಫನ್ ಡೊಹೆನಿ, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಮಾರ್ಕ್ ಅಡೇರ್, ಜಾರ್ಜ್ ಡಾಕ್ರೆಲ್, ಜೋಶುವಾ ಲಿಟಲ್, ಆಂಡಿ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಕಾನರ್ ಓಲ್ಫರ್ಟ್, ಕ್ರೇಗ್ ಯಂಗ್.

Story first published: Friday, June 24, 2022, 16:30 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X