ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾಜಿ ನಾಯಕ ಎಂಎಸ್ ಧೋನಿ ವೃತ್ತಿ ಬದುಕು ಮಸುಕು ಮಸುಕು!

Is former captain MS Dhonis career nearing its end?

ನವದೆಹಲಿ, ಅಕ್ಟೋಬರ್ 7: ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಶಕೆಗೆ ಚಾಲೂ ಇತ್ತವರು ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್‌ ಧೋನಿ. ಧೋನಿ ನಾಯಕತ್ವದಲ್ಲಿ, ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಅದೆಷ್ಟೋ ಗೆಲುವಿನ ಖುಷಿಯನ್ನು ಸಂಭ್ರಮಿಸಿದ್ದಿದೆ. ಆದರೆ ಇತ್ತೀಚೆಗೇಕೋ ಧೋನಿ ವೃತ್ತಿ ಬದುಕು ಮಸುಕಾಗಲಾರಂಭಿಸಿದೆಯೋ ಅನ್ನಿಸಲಾರಂಭಿಸಿದೆ.

ಇತಿಹಾಸ ಬರೆದ ರೋಹಿತ್ ಶರ್ಮಾ, 25 ವರ್ಷಗಳ ಹಿಂದಿನ ದಾಖಲೆ ಬದಿಗೆ!ಇತಿಹಾಸ ಬರೆದ ರೋಹಿತ್ ಶರ್ಮಾ, 25 ವರ್ಷಗಳ ಹಿಂದಿನ ದಾಖಲೆ ಬದಿಗೆ!

ಧೋನಿಯ ಅಂತಾರಾಷ್ಟ್ರೀಯ ಭವಿಷ್ಯದ ಬಗ್ಗೆ ಕ್ರಿಕೆಟ್‌ ವಲಯಗಳಲ್ಲಿ ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಗವಾಸ್ಕರ್ ಹೇಳಿಕೆಯೊಂದನ್ನು ನೀಡಿದ್ದರು. ತಂಡದಿಂದ ಕಡೆಗಣಿಸಲ್ಪಟ್ಟು ನಂತರ ನಿವೃತ್ತಿ ಘೋಷಿಸುವ ಬದಲು ತಾನಾಗೇ ಧೋನಿ ನಿವೃತ್ತಿ ನೀಡಿದರೆ ಒಳ್ಳೆಯದು ಎಂಬರ್ಥದಲ್ಲಿ ಗವಾಸ್ಕರ್ ಮಾತನಾಡಿದ್ದರು.

ಭಾರತದ ಘಟಾನುಘಟಿಗಳ ಹಿಂದಿಕ್ಕಿ ದಾಖಲೆ ಬರೆದ ರವೀಂದ್ರ ಜಡೇಜಾ!ಭಾರತದ ಘಟಾನುಘಟಿಗಳ ಹಿಂದಿಕ್ಕಿ ದಾಖಲೆ ಬರೆದ ರವೀಂದ್ರ ಜಡೇಜಾ!

ಸಾಲದ್ದಕ್ಕೆ ಧೋನಿ ಇತ್ತೀಚೆಗೆ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಂಡಿಲ್ಲ. ಇದು ಧೋನಿಯ ನಿವೃತ್ತಿ ಗುಮಾನಿಗೂ ಎಡೆಮಾಡಿಕೊಟ್ಟಿತ್ತು.

ಕ್ರಿಕೆಟ್‌ನಿಂದ ದೂರ ಉಳಿದಿರುವ ಧೋನಿ

ಕ್ರಿಕೆಟ್‌ನಿಂದ ದೂರ ಉಳಿದಿರುವ ಧೋನಿ

ಐಸಿಸಿ ವಿಶ್ವಕಪ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರ ಬಿದ್ದ ಬಳಿಕ ಧೋನಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿಲ್ಲ. ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಧೋನಿ ತಾನೇ ಸರಣಿಯಿಂದ ಹೊರಗಿದ್ದು ಭಾರತೀಯ ಸೇನೆಗೆ ಸೇವೆ ಸಲ್ಲಿಸಿದ್ದರು. ಅನಂತರ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ಸರಣಿಯಲ್ಲೂ ಧೋನಿ ಆಡುತ್ತಿಲ್ಲ. ಅಷ್ಟೇ ಯಾಕೆ, ಮುಂಬರಲಿರುವ ಬಾಂಗ್ಲಾ ಸರಣಿಯಿಂದಲೂ ಧೋನಿ ತಂಡದಿಂದ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ.

ಧೋನಿಯನ್ನು ಬಿಟ್ಟು ಮುನ್ನಡೆಯಬೇಕು

ಧೋನಿಯನ್ನು ಬಿಟ್ಟು ಮುನ್ನಡೆಯಬೇಕು

ಧೋನಿ ನಿವೃತ್ತಿ ಬಗ್ಗೆ ಮಾತನಾಡಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, 'ಧೋನಿಯ ಮನಸ್ಸಿನಲ್ಲಿ ಏನಿದೆ ಅನ್ನೋದು ಯಾರಿಗೆ ಗೊತ್ತು. ಭಾರತೀಯ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ತನ್ನ ಮನಸ್ಸಿನಲ್ಲೇನಿದೆ ಅನ್ನೋದನ್ನು ಅವರೇ ಹೇಳಬೇಕು. ಆದರೆ ನನಗನ್ನಿಸುವಂತೆ 38ರಲ್ಲಿರುವ ಧೋನಿಯನ್ನು ಬಿಟ್ಟು ತಂಡ ಮುನ್ನಡೆಯಬೇಕಿದೆ,' ಎಂದು ಹೇಳಿದ್ದರು.

ಕೂಲ್ ಕ್ಯಾಪ್ಟನ್‌ಗೆ ಗಾಯದ ಬರೆ

ಕೂಲ್ ಕ್ಯಾಪ್ಟನ್‌ಗೆ ಗಾಯದ ಬರೆ

2020ರ ಅಕ್ಟೋಬರ್ 8ರಿಂದ ನವೆಂಬರ್ 15ರ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವ ಟಿ20 ಟೂರ್ನಿಯಲ್ಲಿ ಧೋನಿ ಭಾಗವಹಿಸುತ್ತಾರೆ ಎಂಬ ನಿರೀಕ್ಷೆ ಕ್ರಿಕೆಟ್‌ ಅಭಿಮಾನಿಗಳಲ್ಲಿದೆ. ಆದರೆ ಕ್ರಿಕೆಟ್‌ನಿಂದ ಧೋನಿ ಹೀಗೆ ದೂರ ಉಳಿದುಬಿಟ್ಟರೆ ಏಕಾಏಕಿ ಮೈದಾನಕ್ಕಿಳಿದು ಆಡಲಾಗದು. ಅಲ್ಲದೆ ಧೋನಿಗೀಗ 38ರ ಹರೆಯ. ವಯಸ್ಸು ಸಹಜವಾಗೇ ಆಟಕ್ಕೆ ಅಡ್ಡಿಯಾಗೋದಿದೆ. ಸಾಲ್ಲದ್ದಕ್ಕೆ ಧೋನಿಗೆ ಗಾಯದ ಸಮಸ್ಯೆಯೂ ಇದೆ. ಇದಕ್ಕಾಗಿಯೇ ಧೋನಿ ಇತ್ತೀಚೆಗೆ ಸರಣಿಗಳಿಂದ ದೂರ ಉಳಿಯುತ್ತಿದ್ದಾರೆ ಎಂಬ ವಿಚಾರವೂ ಕೇಳಿ ಬಂದಿದೆ.

ಬದಲಿ ಕೀಪರ್ ಹುಡುಕಾಟದಲ್ಲಿ ಬಿಸಿಸಿಐ

ಬದಲಿ ಕೀಪರ್ ಹುಡುಕಾಟದಲ್ಲಿ ಬಿಸಿಸಿಐ

ಭಾರತ ತಂಡದಲ್ಲಿ ಬ್ಯಾಟಿಂಗ್ ಮತ್ತು ವಿಕೆಟ್‌ ಕೀಪಿಂಗ್‌ಗಾಗಿ ಎಂಎಸ್ ಧೋನಿಗೆ ಬದಲಿ ಆಟಗಾರನ್ನು ಬಿಸಿಸಿಐ ಹುಡುಕುತ್ತಿರುವಂತೆಯೂ ಕಾಣಿಸುತ್ತಿದೆ. ಬಿಸಿಸಿಐ ಈಚೀಚೆಗೆ ರಿಷಬ್ ಪಂತ್‌ಗೆ ಹೆಚ್ಚು ಆಡುವ ಅವಕಾಶ ನೀಡಿತ್ತು. ಅಲ್ಲದೆ 'ಭಾರತ 'ಎ' ತಂಡದಲ್ಲಿರುವ ಕೆಎಲ್ ಭರತ್ ದೀರ್ಘ ಕ್ರಿಕೆಟ್‌ ಮಾದರಿಯಲ್ಲಿ ಕೀಪಿಂಗ್‌ಗೆ ಸೂಕ್ತರಿದ್ದಾರೆ. ನಿಗದಿತ ಓವರ್‌ಗಳ ಮಾದರಿಗೆ ನಮ್ಮಲ್ಲಿ ಭಾರತ 'ಎ' ತಂಡದಲ್ಲಿ ಆಡುತ್ತಿರುವ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಸೂಕ್ತರಿದ್ದಾರೆ,' ಎಂದು ಇತ್ತೀಚೆಗೆ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್‌ ಹೇಳಿದ್ದರು.

Story first published: Monday, October 7, 2019, 9:37 [IST]
Other articles published on Oct 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X