ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಾಲು ಸಾಲು ಯಶಸ್ಸು ಕಂಡರೂ ಆಸ್ಟ್ರೇಲಿಯಾ ಕೋಚ್ ಸ್ಥಾನದಿಂದ ಕೆಳಗಿಳಿದು ಆಶ್ಚರ್ಯ ಮೂಡಿಸಿದ ಲ್ಯಾಂಗರ್!

Justin Langer steps down as Australias head coach

ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ಅಂತರರಾಷ್ಟ್ರೀಯ ತಂಡವೊಂದರ ಹೆಡ್ ಕೋಚ್ ಯಾರು ಎಂದರೆ ಅದು ಆಸ್ಟ್ರೇಲಿಯಾದ ಹೆಡ್ ಕೋಚ್ ಜಸ್ಟಿನ್ ಲ್ಯಾಂಗರ್ ಎನ್ನಬಹುದು. ಹೌದು, 2018ರಿಂದ ಆಸ್ಟ್ರೇಲಿಯಾ ಅಂತರರಾಷ್ಟ್ರೀಯ ತಂಡದ ಹೆಡ್ ಕೋಚ್ ಆಗಿ ಕೆಲಸ ನಿರ್ವಹಿಸುತ್ತಿರುವ ಜಸ್ಟಿನ್ ಲ್ಯಾಂಗರ್ ಆಸ್ಟ್ರೇಲಿಯಾ ತಂಡವನ್ನು ಆ್ಯಶಸ್ ಸರಣಿ ಮತ್ತು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ವಿಜೇತರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಹೌದು, ಜಸ್ಟಿನ್ ಲ್ಯಾಂಗರ್ ಆಸ್ಟ್ರೇಲಿಯದ ಹೆಡ್ ಕೋಚ್ ಆಗಿ ಆಯ್ಕೆಯಾಗುವುದಕ್ಕೂ ಮುನ್ನ ಕೆಲ ವರ್ಷಗಳ ಕಾಲ ಆಸ್ಟ್ರೇಲಿಯಾ ತಂಡ ಸಾಕಷ್ಟು ವಿವಾದಗಳಿಗೆ ಒಳಗಾಗಿತ್ತು ಹಾಗೂ ವಿಶ್ವ ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡವೆನಿಸಿಕೊಂಡಿದ್ದ ಕಾಂಗರೂಗಳು ತಮ್ಮ ಲಯ ಕಳೆದುಕೊಂಡಿದ್ದರು. ಆಸ್ಟ್ರೇಲಿಯಾ ವಿಶ್ವದ ಇತರೆ ಬಲಿಷ್ಠ ಕ್ರಿಕೆಟ್ ತಂಡಗಳ ಜೊತೆ ಪೈಪೋಟಿ ನೀಡುವಷ್ಟು ಬಲಿಷ್ಠವಾಗಿಲ್ಲ ಮತ್ತು ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಟೀಕೆಗಳು ಎದುರಾಗುವ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಹೆಡ್ ಕೋಚ್ ಆಗಿ ಆಯ್ಕೆಯಾದ ಜಸ್ಟಿನ್ ಲ್ಯಾಂಗರ್ ತಮ್ಮ ಉತ್ತಮ ತರಬೇತಿಯಡಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮತ್ತೆ ಬಲಿಷ್ಠ ಪಡಿಸಿದರು.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಅವಕಾಶ ಸಿಗುವುದು ಈ ಬೌಲರ್‌ಗಳಿಗೆ ಮಾತ್ರ ಎಂದ ಹರ್ಷಲ್ ಪಟೇಲ್ರೋಹಿತ್ ಶರ್ಮಾ ನಾಯಕತ್ವದಲ್ಲಿ ಅವಕಾಶ ಸಿಗುವುದು ಈ ಬೌಲರ್‌ಗಳಿಗೆ ಮಾತ್ರ ಎಂದ ಹರ್ಷಲ್ ಪಟೇಲ್

2019ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಮೂಲಕ ಆಸ್ಟ್ರೇಲಿಯಾ ಹೆಡ್ ಕೋಚ್ ಜಸ್ಟಿನ್ ಲ್ಯಾಂಗರ್ ನೇತೃತ್ವದಲ್ಲಿ ತನ್ನ ಮೊದಲನೇ ಐಸಿಸಿ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿತು. ಹಾಗೂ ಆ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಸೆಮಿಫೈನಲ್ ಹಂತವನ್ನು ತಲುಪಿ ಫೈನಲ್ ಪ್ರವೇಶಿಸಿರುವ ಅವಕಾಶವನ್ನು ಕೊನೆಯಲ್ಲಿ ಕೈ ತಪ್ಪಿಸಿಕೊಂಡಿತ್ತು. ಹೀಗೆ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತವನ್ನು ತಲುಪಿದ್ದ ಆಸ್ಟ್ರೇಲಿಯಾ ನಂತರ ಅದೇ ವರ್ಷದಲ್ಲಿ ಇಂಗ್ಲೆಂಡ್ ನೆಲದಲ್ಲಿ ನಡೆದ ಆ್ಯಶಸ್ ಸರಣಿಯಲ್ಲಿ ಆಂಗ್ಲರನ್ನು ಬಗ್ಗುಬಡಿದಿತ್ತು.

ಅಷ್ಟೇ ಅಲ್ಲದೆ ಕಳೆದ ವರ್ಷ ನಡೆದ ಪ್ರತಿಷ್ಠಿತ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿದ ಆಸ್ಟ್ರೇಲಿಯಾ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವುದರ ಮೂಲಕ ಯಶಸ್ಸಿನ ಹಾದಿಗೆ ಮರಳಿತು. ಹೌದು, ಕಳೆದ ವರ್ಷ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಟ್ರೋಫಿ ಎತ್ತಿಹಿಡಿಯಲಿದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಆಸ್ಟ್ರೇಲಿಯಾ ಸೆಮಿಫೈನಲ್ ಹಂತದವರೆಗೆ ತಲುಪಿದರೆ ಹೆಚ್ಚು ಭವಿಷ್ಯ ನುಡಿದಿದ್ದವರಿಗೆ ಜಸ್ಟಿನ್ ಲ್ಯಾಂಗರ್ ನೇತೃತ್ವದ ಆಸ್ಟ್ರೇಲಿಯಾ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಪ್ರತ್ಯುತ್ತರವನ್ನು ನೀಡಿತ್ತು. ಹೀಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ವಿಜೇತರಾಗಿ ಹೊರಹೊಮ್ಮಿದ ಆಸ್ಟ್ರೇಲಿಯಾ ನಂತರ ತವರಿನಲ್ಲಿ ನಡೆದ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡಕ್ಕೆ 4 -0 ಅಂತರದಲ್ಲಿ ಸೋಲುಣಿಸಿತು.

ಈ ಆಟಗಾರರಿಗೆ ಅವಕಾಶ ಕೊಡಿ, ಇವರಿಗೆ ಕೊಡಬೇಡಿ ಎಂದಿದ್ರಾ ಗಂಗೂಲಿ? ಕೊನೆಗೂ ತುಟಿಬಿಚ್ಚಿದ ದಾದಾಈ ಆಟಗಾರರಿಗೆ ಅವಕಾಶ ಕೊಡಿ, ಇವರಿಗೆ ಕೊಡಬೇಡಿ ಎಂದಿದ್ರಾ ಗಂಗೂಲಿ? ಕೊನೆಗೂ ತುಟಿಬಿಚ್ಚಿದ ದಾದಾ

ಹೀಗೆ ಜಸ್ಟಿನ್ ಲ್ಯಾಂಗರ್ ಹೆಡ್ ಕೋಚ್ ಆಗಿ ನೇಮಕಗೊಂಡ ನಂತರ ಆಡಿರುವ ಬಹುತೇಕ ಎಲ್ಲಾ ಪ್ರಮುಖ ಟೂರ್ನಿಗಳಲ್ಲಿ ಹಾಗೂ ಸರಣಿಗಳಲ್ಲಿಯೂ ಕೂಡ ಆಸ್ಟ್ರೇಲಿಯಾ ಹೆಚ್ಚಿನ ಯಶಸ್ಸನ್ನು ಕಂಡಿದೆ. ಇನ್ನು ಅಂತರರಾಷ್ಟ್ರೀಯ ಹೆಡ್ ಕೋಚ್ ಆಗಿ ಯಶಸ್ಸು ಸಾಧಿಸಿರುವ ಜಸ್ಟಿನ್ ಲ್ಯಾಂಗರ್ ದಿಢೀರನೆ ತಮ್ಮ ಹೆಡ್ ಕೋಚ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಆಶ್ಚರ್ಯ ಮೂಡಿಸಿದ್ದಾರೆ.

ಹೌದು, ಈ ಕುರಿತು ಮಾಹಿತಿ ಹಂಚಿಕೊಂಡಿರುವ ಜಸ್ಟಿನ್ ಲ್ಯಾಂಗರ್ ಅವರ ಮ್ಯಾನೇಜರ್ ಕ್ರಿಕೆಟ್ ಆಸ್ಟ್ರೇಲಿಯಾದ ಜೊತೆ ನಡೆದ ಸಭೆಯ ನಂತರ ಜಸ್ಟಿನ್ ಲ್ಯಾಂಗರ್ ತಮ್ಮ ಕೋಚ್ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಆಟಗಾರನಾಗಿದ್ದ ಸಂದರ್ಭದಲ್ಲಿಯೂ ಕೂಡ ಆಸ್ಟ್ರೇಲಿಯಾ ಆ್ಯಶಸ್ ಸರಣಿಯೊಂದರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿ ವೈಟ್ ವಾಶ್ ಬಳಿದ ಬಳಿಕ ರಾಜೀನಾಮೆಯನ್ನು ಸಲ್ಲಿಸಿದ್ದರು ಎಂಬ ವಿಷಯವನ್ನು ಕೂಡ ಜಸ್ಟಿನ್ ಲ್ಯಾಂಗರ್ ಅವರ ಮ್ಯಾನೇಜರ್ ಇದೇ ವೇಳೆ ತಿಳಿಸಿದ್ದಾರೆ. ಆದರೆ ಜಸ್ಟಿನ್ ಲ್ಯಾಂಗರ್ ದಿಢೀರನೆ ರಾಜೀನಾಮೆ ಸಲ್ಲಿಸಲು ನಿಖರವಾದ ಕಾರಣವೇನೆಂಬುದನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

Story first published: Saturday, February 5, 2022, 9:46 [IST]
Other articles published on Feb 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X