ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಂಕಾ ಅಭಿಮಾನಿಗಳೊಟ್ಟಿಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದ ವಿಲಿಯಮ್ಸನ್‌: ವಿಡಿಯೊ

Kane Williamson celebrates birthday 2019

ಹೊಸದಿಲ್ಲಿ, ಆಗಸ್ಟ್‌ 09: ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿ ಸಲುವಾಗಿ ದ್ವೀಪರಾಷ್ಟ್ರಕ್ಕೆ ಕಾಲಿಟ್ಟಿರುವ ನ್ಯೂಜಿಲೆಂಡ್‌ ತಂಡ ಅಭ್ಯಾಸ ಪಂದ್ಯವನ್ನಾಡುವ ವೇಳೆ ಕಿವೀಸ್‌ ನಾಯಕ ಕೇನ್‌ ವಿಲಿಯಮ್ಸನ್‌ ಲಂಕಾದ ಅಭಿಮಾನಿಗಳೊಟ್ಟಿಗೆ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ವಿಡಿಯೊ ವೈರಲ್‌ ಆಗಿದೆ.

ಗುರುವಾರ 29ನೇ ವಸಂತಕ್ಕೆ ಕಾಲಿಟ್ಟ ವಿಲಿಯಮ್ಸನ್‌, ಶ್ರೀಲಂಕಾ 'ಎ' ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆ ಮಾಡುವ ಸಂದರ್ಭದಲ್ಲಿ ಲಂಕಾ ಅಭಿಮಾನಿಗಳ ಕೂಗಿಗೆ ಕಿವಿಕೊಟ್ಟು ಪಂದ್ಯದ ಮಧ್ಯದಲ್ಲೇ ಬೌಂಡರಿ ಸಮೀಪ ತೆರಳಿ ಅಭಿಮಾನಿಗಳು ತಂದಿದ್ದ ಕೇಕ್‌ ಕತ್ತರಿಸಿ, ತಿಂದು ಅವರಿಗೂ ತಿನ್ನಿಸಿ ಎಲ್ಲರ ಮನ ಗೆದ್ದಿದ್ದಾರೆ.

ಕಿವೀಸ್‌ ವಿರುದ್ಧದ ಟೆಸ್ಟ್‌ ಸರಣಿ: ಅನುಭವಿಗಳಿಗೆ ಮಣೆ ಹಾಕಿದ ಲಂಕಾಕಿವೀಸ್‌ ವಿರುದ್ಧದ ಟೆಸ್ಟ್‌ ಸರಣಿ: ಅನುಭವಿಗಳಿಗೆ ಮಣೆ ಹಾಕಿದ ಲಂಕಾ

ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ನ್ಯೂಜಿಲೆಂಡ್‌ ಪರ ಸ್ಥಿರ ಬ್ಯಾಟಿಂಗ್‌ ಪ್ರದರ್ಶನ ಕಾಯ್ದುಕೊಂಡು ರನ್‌ ಹೊಳೆ ಹರಿಸುವ ಮೂಲಕ ಮಿಂಚುತ್ತಿರುವ ಕೇನ್‌ ವಿಲಿಯಮ್ಸನ್‌, ತಮ್ಮ ಸರಳತೆಯ ಮೂಲಕವೂ ವಿಶ್ವದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅದರಲ್ಲೂ ಕಳೆದ ತಿಂಗಳು ನಡೆದ ವಿಶ್ವಕಪ್‌ ಟೂರ್ನಿ ಫೈನಲ್‌ ಪಂದ್ಯದಲ್ಲಿ ಟೈ ಫಲಿತಾಂಶದ ನಡುವೆ ಬೌಂಡರಿ ಸಂಖ್ಯೆಗಳ ಆಧಾರದ ಮೇರೆಗೆ ರನ್ನರ್ಸ್‌ಅಪ್‌ ಸ್ಥಾನ ಪಡೆದ ಸಂದರ್ಭದಲ್ಲಿ ಕಿವೀಸ್‌ ನಾಯಕ ಮೆರೆದ ಪ್ರೌಢಿಮೆಗೆ ಇಡೀ ಕ್ರಿಕೆಟ್‌ ಜಗತ್ತು ಸಲಾಮ್‌ ಹೊಡೆದಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ತನೆ ನಿವೃತ್ತಿ ಘೋಷಿಸಿದ ಆಮ್ಲಾಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ತನೆ ನಿವೃತ್ತಿ ಘೋಷಿಸಿದ ಆಮ್ಲಾ

ಅಭ್ಯಾಸ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ ನಷ್ಟಕ್ಕೆ 323 ರನ್‌ಗಳನ್ನು ದಾಖಲಿಸಿದೆ.

ಶುಭ ಕೋರಿದ ಲಂಕಾ ಬೋರ್ಡ್‌

ವಿಲಿಯಮ್ಸನ್‌ ಕೇಕ್‌ ಕತ್ತರಿಸಿದ ಫೋಟೊವನ್ನು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತನ್ನ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಟ್ವೀಟ್‌ ಮಾಡಿದ ಶ್ರೀಲಂಕಾ ಕ್ರಿಕೆಟ್‌ ಮಂಡಳಿ, "ಹುಟ್ಟುಹಬ್ಬದ ಸಂಭ್ರಮ ಅದ್ಭುತ. ಕೇನ್‌ ವಿಲಿಯಮ್ಸನ್‌ ತಮ್ಮ 29ನೇ ಜನ್ಮದಿನವನ್ನು ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಅಭಿಮಾನಿಗಳೊಟ್ಟಿಗೆ ಕೇಕ್‌ ಕತ್ತರಿಸಿ, ತಿಂದು ಸಂಭ್ರಮಿಸಿದ್ದಾರೆ," ಎಂದು ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ ಭಾರತೀಯ ಕ್ರಿಕೆಟಿಗರಾದ ಶಿಖರ್‌ ಧವನ್‌ ಮತ್ತು ಹರ್ಭಜನ್‌ ಸಿಂಗ್‌ ಕೂಡ ಟ್ವೀಟ್‌ ಮಾಡಿ ವಿಲಿಯಮ್ಸನ್‌ಗೆ ಶುಭಹಾರೈಸಿದ್ದಾರೆ.

ಆಗಸ್ಟ್‌ 14ರಂದು ಮೊದಲ ಟೆಸ್ಟ್‌

ಪ್ರವಾಸಿ ನ್ಯೂಜಿಲೆಂಡ್‌ ತಂಡ ಶ್ರೀಲಂಕಾ ನೆಲದಲ್ಲಿ ಎರಡು ಟೆಸ್ಟ್‌ ಪಂದ್ಯಗಳ ಸರಣಿಯನ್ನಾಡಲಿದ್ದು, ಮೊದಲ ಟೆಸ್ಟ್‌ ಪಂದ್ಯ ಆಗಸ್ಟ್‌ 14ರಂದು ಗಾಲೆಯಲ್ಲಿ ಆರಂಭವಾಗಲಿದೆ. ಈ ಮೂಲಕ ಇತ್ತಂಡಗಳು ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಅಭಿಯಾನ ಆರಂಭಿಸಲಿವೆ. ಇದೇ ವೇಳೆ ಲಂಕಾ ನೆಲದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಯಶಸ್ಸು ಗಳಿಸಲು ನ್ಯೂಜಿಲೆಂಡ್‌ ತಂಡ ತನ್ನ ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳಿಗೆ ಸ್ಥಾನ ನೀಡಿದೆ.

ಪ್ರಥಮ ಟೆಸ್ಟ್‌ ಪಂದ್ಯಕ್ಕೆ ಶ್ರೀಲಂಕಾ ತಂಡ ಇಂತಿದೆ

ದಿಮುತ್‌ ಕರುಣಾರತ್ನೆ (ನಾಯಕ) ಏಂಜಲೊ ಮ್ಯಾಥ್ಯೂಸ್‌, ದಿನೇಶ್‌ ಚಾಂದಿಮಾಲ್‌, ಲಾಹಿರು ತಿರಿಮನ್ನೆ, ಕುಶಲ್‌ ಮೆಂಡಿಸ್‌, ಕುಶಲ್‌ ಪೆರೆರಾ, ನಿರೋಶನ್‌ ಡಿಕ್ವೆಲ್ಲಾ, ಧನಂಜಯ ಡಿ'ಸಿಲ್ವಾ, ಅಖಿಲ ಧನಂಜಯ, ಎಲ್‌. ಎಂಬುಲ್ದೆನಿಯಾ, ಸುರಂಗ ಲಕ್ಮಲ್‌, ಲಾಹಿರು ಕುಮಾರ, ಒಶಾದ ಫರ್ನಾಂಡೊ, ಲಕ್ಷಣ್‌ ಸಂದಕನ್‌, ವಿಶ್ವ ಫರ್ನಾಂಡೊ.

ಶ್ರೀಲಂಕಾ ಪ್ರವಾಸಕ್ಕೆ ನ್ಯೂಜಿಲೆಂಡ್‌ ಟೆಸ್ಟ್‌ ತಂಡ

ಕೇನ್‌ ವಿಲಿಯಮ್ಸನ್‌ (ನಾಯಕ), ಟಾಟ್‌ ಆಸೆಲ್‌, ಟಾಮ್‌ ಬ್ಲಂಡಲ್‌ (ವಿಕೆಟ್‌ಕೀಪರ್‌), ಟ್ರೆಂಟ್‌ ಬೌಲ್ಟ್‌, ಕಾಲಿನ್‌ ಡಿ'ಗ್ರ್ಯಾಂಡ್‌ ಹೋಮ್‌, ಟಾಮ್‌ ಲೇಥಮ್‌, ಹೆನ್ರಿ ನಿಕೋಲ್ಸ್‌, ಏಜಾಝ್‌ ಪಟೇಲ್‌, ಜೀತ್‌ ರಾವಲ್‌, ವಿಲ್‌ ಸಮರ್‌ವಿಲ್‌, ಮಿಚೆಲ್‌ ಸ್ಯಾಂಟ್ನರ್‌, ಟಿಮ್‌ ಸೌಥೀ, ರಾಸ್‌ ಟೇಲರ್‌, ನೇಯ್ಲ್‌ ವ್ಯಾಗ್ನರ್‌ ಹಾಗೂ ಬಿ.ಜೆ ವ್ಯಾಟ್ಲಿಂಗ್‌.

Story first published: Friday, August 9, 2019, 16:16 [IST]
Other articles published on Aug 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X