ರಾಷ್ಟ್ರಮಟ್ಟದ ಅಂಡರ್-17 ಕ್ರಿಕೆಟ್ ಟೂರ್ನಿಗಾಗಿ ಕರ್ನಾಟಕ ರಾಜ್ಯ ತಂಡ ಪ್ರಕಟ

ಮೈಸೂರು, ಜನವರಿ 2: ಅಂಡರ್ 17 ಬಾಲಕರ ಕ್ರಿಕೆಟ್ ಪಂದ್ಯಾವಳಿ ಜನವರಿ 3ರಿಂದ ಜನವರಿ 8ರವರೆಗೆ ದಮನ್ ಮತ್ತು ದಿಯುನಲ್ಲಿ ನಡೆಯಲಿದೆ. ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡವೂ ಪಾಲ್ಗೊಳ್ಳುತ್ತಿದ್ದು, ಒಟ್ಟು 16 ಮಂದಿ ಪ್ರತಿಭಾನ್ವಿತ ಆಟಗಾರರನ್ನು ಟೂರ್ನಿಗಾಗಿ ಹೆಸರಿಸಲಾಗಿದೆ.
ಟೂರ್ನಿ ಸಲುವಾಗಿ ಈಗಾಗಲೇ 16 ಆಟಗಾರರೂ ದಮನ್ ಮತ್ತು ದಿಯುಗೆ ತೆರಳಿದ್ದು, ತಂಡದಲ್ಲಿರುವ ಆಟಗಾರರಲ್ಲಿ ನಾಲ್ವರು ಮೈಸೂರಿನವರು. ಮತ್ತೋರ್ವ ಆಟಗಾರ ಮೂಲತಃ ಮಂಡ್ಯದವರು. ಅಂದ್ಹಾಗೆ, ದಮನ್ ಅನ್ನೋದು ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯುನಲ್ಲಿರುವ ಭಾರತದ ಕೇಂದ್ರಾಡಳಿತ ಪ್ರದೇಶ.
ಮೈಸೂರಿನ ಐಡಿಯಲ್ ಜಾವಾ ರೋಟರಿ ಶಾಲೆಯ ಎಚ್‌ಎನ್ ಪವನ್, ಮರಿಮಲ್ಲಪ್ಪ ಪ್ರೌಢಶಾಲೆಯ ಲಿಖಿತ್ ಎಸ್ ಗೌಡ, ಸಿದ್ದಾರ್ಥ ನಗರದ ಜಿಎಸ್ಎಸ್ಎಸ್ ಬಂಟ್ವಾಳ್ ಮಾಧವ ಶೆಣೈ ಪ್ರೌಢಶಾಲೆಯ ಎಸ್ನ ಯದುನಂದನ್, ವಿಜಯ ವಿಠಲ ಪ್ರೌಢಶಾಲೆಯ ಎಂಎಸ್ ಯಶವಂತ್, ಮಂಡ್ಯದ ಅಭಿನವ್ ಭಾರತಿ ವಿದ್ಯಾಕೇಂದ್ರ ಪ್ರೌಢಶಾಲೆಯ ಎಂಕೆ ಯಶವಂತ್ ಟೂರ್ನಿಗಾಗಿ ಆಯ್ಕೆಗೊಂಡವರು.
ದೈಹಿಕ ಶಿಕ್ಷಣ ಇಲಾಖೆ ತಂಡದ ಮ್ಯಾನೇಜರ್ ಆಗಿ ಕಲಬುರಗಿಯ ಎನ್‌ವಿಎಸ್ ಬಾಲಕರ ಪ್ರೌಢ ಶಾಲೆಯ ಸಂತೋಷ್ ಕುಮಾರ್ ಕೋಬಲ್, ತರಬೇತುದಾರರಾಗಿ ರಾಯಚೂರು ಜಿಲ್ಲೆಯ ಲಿಂಗಸಗೂರು ಇಂಡಿಯನ್ ಪಬ್ಲಿಕ್ ಸ್ಕೂಲ್‌ನ ಅಹ್ಮದ್ ಅವರನ್ನು ನೇಮಿಸಲ್ಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications