ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ: ಹೈದರಾಬಾದ್ ಮುಂದೆ ರನ್‌ಗಳ ಬೆಟ್ಟ ಪೇರಿಸಿದ ಕರ್ನಾಟಕ

By Manjunatha
Karnataka v/s Hydarabad cricket match

ನವ ದೆಹಲಿ, ಫೆಬ್ರವರಿ 21: ವಿಜಯ್ ಹಜಾರೆ ಟೂರ್ನಿಯ ನಾಕೌಟ್‌ ಪಂದ್ಯದಲ್ಲಿ ಹೈದರಾಬಾದ್ ತಂಡದ ವಿರುದ್ಧ ಕರ್ನಾಟಕ ತಂಡವು ಬೃಹತ್ ಮೊತ್ತ ಪೇರಿಸಿದೆ.

ಕರ್ನಾಟಕದ ಭರವಸೆಯ ಬ್ಯಾಟ್ಸ್‌ಮನ್‌ಗಳಾದ ಮಯಾಂಕ್ ಅಗರ್ವಾಲ್ ಮತ್ತು ಆರ್.ಸಮರ್ಥ್ ಅವರ ಅದ್ಬುತ ಶತಕದ ನೆರವಿನಿಂದ 347 ರನ್‌ ಗುರಿಯನ್ನು ಹೈದರಾಬಾದ್ ತಂಡದ ಎದುರು ಕರ್ನಾಟಕ ತಂಡ ಇರಿಸಿದೆ.

ನವದೆಹಲಿಯ ಫಿರೋಜ್‌ ಷಾ ಕೋಟ್ಲಾ ಮೈದಾನದಲ್ಲಿ ಟಾಸ್ ಗೆದ್ದ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ ಆರಂಭದಲ್ಲಿಯೇ ನಾಯರ್ (10) ವಿಕೆಟ್ ಕಳೆದುಕೊಂಡಿತಾದರೂ ಆ ನಂತರ ಮಯಾಂಕ್ ಅಗರ್ವಾಲ್ ಮತ್ತು ಆರ್.ಸಮರ್ಥ್ ದ್ವಿಶತಕದ ದಾಖಲೆ ಜೊತೆಯಾಟ ಆಡಿದರು.

ಹೈದರಾಬಾದ್‌ನ ಪ್ರತಿ ಬೌಲರ್‌ಗಳನ್ನೂ ಮನಸೋಇಚ್ಛೆ ದಂಡಿಸಿದ ಈ ಇಬ್ಬರು ಬ್ಯಾಟ್ಸ್‌ನ್‌ಗಳು ನೆರೆದಿದ್ದ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನಿಡಿದರು.

111 ಎಸೆತ ಎದುರಿಸಿದ ಮಯಾಂಕ್ ಅಗರ್ವಾಲ್ ಅವರು 12 ಬೌಂಡರಿ ಮತ್ತು 7 ಸಿಕ್ಸರ್‌ ಸಹಿತ 140 ರನ್ ಭಾರಿಸಿ ರವಿತೇಜ ಬೌಲಿಂಗ್‌ನಲ್ಲಿ ಔಟಾದರು ಆಗ ತಂಡದ ಮೊತ್ತ 271. ಸ್ವಲ್ಪ ತಾಳ್ಮೆಯ ಆಟವಾಡಿದ ಆರ್.ಸಮರ್ಥ್‌ 124 ಬಾಲ್ ಎದುರಿಸಿ 125 ರನ್ ಗಳಿಸಿದರು ಅವರು 13 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು.

ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಔಟಾದ ನಂತರ ಮತ್ತೆ ಲಯಕ್ಕೆ ಮರಳಿದ ಹೈದರಾಬಾದ್ ಬೌಲರ್‌ಗಳು ಸ್ವಲ್ಪ ಹಿಡಿತ ಸಾಧಿಸಿದರು ಹಾಗಾಗಿ ಕೊನೆಯ ಓವರ್‌ಗಳಲ್ಲಿ ಕರ್ನಾಟಕಕ್ಕೆ ನಿರೀಕ್ಷಿತ ಮಟ್ಟದ ರನ್‌ ಬರಲಿಲ್ಲ.

ಪವನ್ ದೇಶಪಾಂಡೆ 19 ರನ್ ಗಳಿಸಿ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಸ್ಟುವರ್ಟ್‌ ಬಿನ್ನಿ ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿದರು. ಕೆ.ಗೌಥಮ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆನಂತರ ಬಂದ ಸಿ.ಗೌಥಮ್ 20 ರನ್ ಗಳಿಸಲಷ್ಟೆ ಶಕ್ತವಾದರು.

ಹೈದರಾಬಾದ್‌ ತಂಡದ ಪರ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಸಿರಾಜ್‌ 5 ವಿಕೆಟ್ ಗಳಿಸಿ ಮಿಂಚಿದರು. ರವಿ ಕಿರಣ್ 2 ವಿಕೆಟ್ ಕಬಳಿಸಿದರು. ಹಾಗೂ ರವಿ ತೇಜ 1 ವಿಕೆಟ್ ಗಳಿಸಿದರು. ಹೈದರಾಬಾದ್ ತಂಡದ ಪರ ಒಟ್ಟು 8 ಬೌಲರ್‌ಗಳು ಬೌಲಿಂಗ್ ನಡೆಸಿದ್ದು ವಿಶೇಷವಾಗಿತ್ತು.

ಗಾಯದ ಕಾರಣ ಕರ್ನಾಟಕದ ಪ್ರಮುಖ ಬೌಲರ್‌ ವಿನಯ್‌ಕುಮಾರ್ ತಂಡದಿಂದ ಹೊರಗಿದ್ದು, ಕರ್ನಾಟಕದ ಬೌಲರ್‌ಗಳು ಹೇಗೆ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುತ್ತಾರೊ ನೋಡಬೇಕು. ಇದು ನಾಕೌಟ್‌ ಹಂತದ ಪಂದ್ಯವಾಗಿದ್ದು ಇದನ್ನು ಗೆದ್ದಲ್ಲಿ ಕರ್ನಾಟಕವು ಸೆಮಿಫೈನಲ್‌ ಪ್ರವೇಶಿಸಲಿದೆ.

Story first published: Wednesday, February 21, 2018, 13:56 [IST]
Other articles published on Feb 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X