ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಕ್ರಿಕೆಟ್ ತಂಡದ 'ಸೂಪರ್‌ ಸ್ಟಾರ್‌' ಹೆಸರಿಸಿದ ಕೀರನ್ ಪೊಲಾರ್ಡ್

Kieron Pollard names the ‘superstar’ of Indian cricket

ನವದೆಹಲಿ, ಆಗಸ್ಟ್ 31: ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರಲ್ಲಿರುವ ಅತಿ ವಿಶ್ವಾಸ ಹೆಚ್ಚಿನವರಿಗೆ ದುರಹಂಕಾರವಾಗಿ ಕಾಣಿಸಬಹುದು. ಆದರೆ ಅದೇ ಅವರ ಅತಿದೊಡ್ಡ ಶಕ್ತಿ ಎಂದು ವೆಸ್ಟ್ ಇಂಡೀಸ್ ಆಲ್ ರೌಂಡರ್‌, ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಾರ್ದಿಕ್ ಜೊತೆಯಾಗಿ ಆಡುವ ಕೀರನ್ ಪೊಲಾರ್ಡ್ ಹೇಳಿಕೊಂಡಿದ್ದಾರೆ.

ಜಗತ್ತಿನ ಅತಿ ತೂಕದ ಈ 'ದೈತ್ಯ' ಕ್ರಿಕೆಟಿಗನ ಬಗ್ಗೆ ಗೊತ್ತೇ?ಜಗತ್ತಿನ ಅತಿ ತೂಕದ ಈ 'ದೈತ್ಯ' ಕ್ರಿಕೆಟಿಗನ ಬಗ್ಗೆ ಗೊತ್ತೇ?

ತನ್ನಲ್ಲಿರುವ ಆತ್ಮ ನಂಬಿಕೆಯಿಂದ ಹಾರ್ದಿಕ್ ಮೈದಾನದಲ್ಲಿ ಮ್ಯಾಜಿಕ್ ಕ್ಷಣಗಳನ್ನು ಸೃಷ್ಟಿಸುತ್ತಾರೆ. ಕ್ರಿಕೆಟರ್‌ಗೆ ತನ್ನ ವೃತ್ತಿಯತ್ತ ಗಮನ ಹರಿಸಲು ಇದು ಸಹಕಾರಿ. ಆಟದ ವೇಳೆ ಅಪರೂಪದ ಸಂದರ್ಭಗಳನ್ನು ನಿಭಾಯಿಸಲೂ ಇಂಥ ಆತ್ಮ ವಿಶ್ವಾಸ ನೆರವಾಗುತ್ತದೆ ಎಂದು ಪೊಲಾರ್ಡ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ vs ವೆಸ್ಟ್ ಇಂಡೀಸ್, 2ನೇ ಟೆಸ್ಟ್, 2ನೇ ದಿನ, Live ಸ್ಕೋರ್‌ಕಾರ್ಡ್

1
46251

ಕೆಪಿಎಲ್ 2019: ಪ್ಯಾಂಥರ್ಸ್‌ಗೆ ಸೋಲುಣಿಸಿದ ಟೈಗರ್ಸ್ ಪ್ರಶಸ್ತಿ ಸುತ್ತಿಗೆಕೆಪಿಎಲ್ 2019: ಪ್ಯಾಂಥರ್ಸ್‌ಗೆ ಸೋಲುಣಿಸಿದ ಟೈಗರ್ಸ್ ಪ್ರಶಸ್ತಿ ಸುತ್ತಿಗೆ

ಕಾಫೀ ವಿತ್‌ ಕರಣ್‌ ಶೋನಲ್ಲಿ ದುರಹಂಕಾರ ರೀತಿಯಲ್ಲಿ ನಡೆದುಕೊಂಡು ವಿವಾದಕ್ಕೀಡಾಗಿದ್ದ ಹಾರ್ದಿಕ್ ಬಗ್ಗೆ ಪೊಲಾರ್ಡ್ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಇಂಡಿಯನ್ ಸೂಪರ್‌ ಸ್ಟಾರ್

ಇಂಡಿಯನ್ ಸೂಪರ್‌ ಸ್ಟಾರ್

ಐಎಎನ್‌ಎಸ್ ಜೊತೆ ಮಾತನಾಡುತ್ತ ಕೀರನ್, 'ಮುಂಬೈ ಇಂಡಿಯನ್ಸ್‌ನಲ್ಲಿ ಆಡಲಾರಂಭಿಸಿದಾಗಿನಿಂದಲೂ ನಾನು ಹಾರ್ದಿಕ್ ನನ್ನು ನೋಡುತ್ತಿದ್ದೇನೆ ಹೀಗಾಗಿ ನನಗೆ ಆತನ ಅತಿ ವಿಶ್ವಾಸದ ಮನೋಭಾವ ಅಚ್ಚರಿಯುಂಟು ಮಾಡಿಲ್ಲ. ಇದೇ ಆತ್ಮ ವಿಶ್ವಾದ ಮನೋಭಾವವನ್ನು ಆತ 'ಇಂಡಿಯನ್ ಸೂಪರ್‌ ಸ್ಟಾರ್' ಅನ್ನಾಗಿ ಬದಲಿಸಿಕೊಂಡಿದ್ದಾರೆ,' ಎಂದು ಹೇಳಿದರು.

ಆಟಕ್ಕೆ ಆತ್ಮವಿಶ್ವಾಸ ಬೇಕು

ಆಟಕ್ಕೆ ಆತ್ಮವಿಶ್ವಾಸ ಬೇಕು

'ಮೈದಾನದ ಹೊರಗೆ ನೀವು ಹೆಚ್ಚು ವಿಶ್ವಾಸ ಹೊಂದಿರುವ ವ್ಯಕ್ತಿಯಾಗಿರುತ್ತೀರಿ, ಅದೇ ವಿಶ್ವಾಸವನ್ನು ನೀವು ಮೈದಾನದ ಆಟದ ವೇಳೆಯೂ ಕೊಂಡೊಯ್ಯಬೇಕು, ಬಳಸಿಕೊಳ್ಳಬೇಕು. ಅದು ನಿಮ್ಮಲ್ಲಿರುವ ದೊಡ್ಡ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ನಾನು ಭಾವಿಸುತ್ತೇನೆ,' ಎಂದು ಹಾರ್ದಿಕ್ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯಗೆ ಕ್ಲೋಸ್‌ ಆಗಿರುವ ಪೊಲಾರ್ಡ್ ನುಡಿದಿದ್ದಾರೆ.

ವಿವಾದದ ಬಿಸಿ

ವಿವಾದದ ಬಿಸಿ

ಕಳೆದ ಜನವರಿಯಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಪಂದ್ಯಕ್ಕೂ ಮುನ್ನವೇ ವಾಪಸ್ ಕರೆಸಿಕೊಳ್ಳಾಗಿತ್ತು. ಕಾಫೀ ವಿತ್ ಕರಣ್ ಟಿವಿ ಶೋನಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆ ಇಬ್ಬರ ವೃತ್ತಿ ಬದುಕಿಗೂ ಹೊಡೆತ ಕೊಟ್ಟಿತ್ತು.

ಸ್ಫೋಟಕ ಬ್ಯಾಟಿಂಗ್

ಸ್ಫೋಟಕ ಬ್ಯಾಟಿಂಗ್

ವಿವಾದ ತಣ್ಣಗಾದ ಬಳಿಕ ಮುಂಬೈ ಇಂಡಿಯನ್ಸ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಹಾರ್ದಿಕ್, ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದರು. ಸೆಪ್ಟೆಂಬರ್‌ನಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ vs ಭಾರತ ಟಿ20 ಸರಣಿಗಾಗಿ ಬಿಸಿಸಿಐಯು 15 ಜನರ ತಂಡ ಪ್ರಕಟಿಸಿದ್ದು, ಇದರಲ್ಲಿ ಪಾಂಡ್ಯ ಸಹೋದರರ ಹೆಸರಿದೆ.

Story first published: Saturday, August 31, 2019, 21:06 [IST]
Other articles published on Aug 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X