ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಫ್ಘನ್‌ ವಿರುದ್ಧದ ಪಂದ್ಯದಲ್ಲಿ ಅತಿಯಾಗಿ ವರ್ತಿಸಿದ ಕೊಹ್ಲಿಗೆ ದಂಡ!

ICC World Cup 2019 : ಕೊಹ್ಲಿ ಈ ವರ್ತನೆ ಸರಿಯಲ್ಲ ಎಂದು ದಂಡ ವಿಧಿಸಿದ ICC..? | Oneindia Kannada
Kohli fined for excessive appealing during Afghanistan match

ಲಂಡನ್‌, ಜೂನ್‌ 23: ಅಫಘಾನಿಸ್ತಾನ ವಿರುದ್ಧ ಶನಿವಾರ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಆನ್‌ಫೀಲ್ಡ್‌ ಅಂಪೈರ್‌ಗಳ ಎದುರು ವಿಕೆಟ್‌ ಸಲುವಾಗಿ ಅತಿಯಾಗಿ ಮನವಿ ಮಾಡಿದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಗೆ ಪಂದ್ಯದ ಸಂಭಾವನೆ ಶೇ.25 ರಷ್ಟನ್ನು ದಂಡವಾಗಿ ತೆರುವಂತಾಗಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

"ಐಸಿಸಿ ಆಟಗಾರರ ಮತ್ತು ಆಡಗಾರರ ಬೆಂಬಲ ಸಿಬ್ಬಂದಿಗಳಿಗೆ ಅನ್ವಯವಾಗುವ ಐಸಿಸಿ ನೀತಿ ನಿಯಮಗಳ 2.1 ಆರ್ಟಿಕಲ್‌ ಅನ್ವಯ ವಿರಾಟ್‌ ಕೊಹ್ಲಿ ನಿಯಮ ಉಲ್ಲಂಘಿಸಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಂಪೈರ್‌ಗಳ ಎದುರು ಅತಿಯಾಗಿ ಮನವಿ ಮಾಡಿದ ತಪ್ಪನ್ನು ವಿರಾಟ್‌ ಕೊಹ್ಲಿ ಮಾಡಿದ್ದಾರೆ,'' ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪಾಕ್‌ ತಂಡದ ಹೀನಾಯ ಪ್ರದರ್ಶನಕ್ಕೆ ಕಾರಣಕೊಟ್ಟ ಹಫೀಝ್‌!ಪಾಕ್‌ ತಂಡದ ಹೀನಾಯ ಪ್ರದರ್ಶನಕ್ಕೆ ಕಾರಣಕೊಟ್ಟ ಹಫೀಝ್‌!

ಶನಿವಾರ ನಡೆದ ಪಂದ್ಯದಲ್ಲಿ ಅಫಘಾನಿಸ್ತಾನ ತಂಡದ ಇನಿಂಗ್ಸ್‌ನ 29ನೇ ಓವರ್‌ನಲ್ಲಿ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ, ಎದುರಾಳಿ ಬ್ಯಾಟ್ಸ್‌ಮನ್‌ ರೆಹಮತ್‌ ಶಾ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದ್ದರು. ಈ ಸಂದರ್ಭದಲ್ಲಿ ಕ್ಯಾಪ್ಟನ್‌ ಕೊಹ್ಲಿ ಸ್ಟ್ರೈಕ್‌ ಅಂಪೈರ್‌ ಅಲೀಮ್‌ ದಾರ್‌ ಅವರ ಬಳಿ ಹೋಗಿ ವಿಕೆಟ್‌ ಸಲುವಾಗಿ ಅತಿಯಾಗಿ ಮನವಿ ಮಾಡಿದ್ದರು.

ಅಭ್ಯಾಸ-ವಿಶ್ರಾಂತಿಯ ಪಕ್ಕಾ ಫಾರ್ಮುಲಾ ಕಂಡುಕೊಂಡ ಟೀಮ್‌ ಇಂಡಿಯಾ!ಅಭ್ಯಾಸ-ವಿಶ್ರಾಂತಿಯ ಪಕ್ಕಾ ಫಾರ್ಮುಲಾ ಕಂಡುಕೊಂಡ ಟೀಮ್‌ ಇಂಡಿಯಾ!

ಇದು ಪ್ರಥಮಿಕ ಹಂತದ ನಿಯಮ ಉಲ್ಲಂಘನೆಯಾಗಿದ್ದು ಶೇ.50 ರಷ್ಟು ಪಂದ್ಯ ಸಂಭಾವನೆಯ ದಂಡ ವಿಧಿಸಬಹುದಾಗಿದೆ. ಕೊಹ್ಲಿ ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡ ಕಾರಣ ಮ್ಯಾಚ್‌ ರೆಫ್ರಿ ಕ್ರಿಸ್‌ ಬ್ರಾಡ್‌ ಈ ವಿಚಾರವಾಗಿ ಹೆಚ್ಚಿನ ವಿಚಾರಣೆಯನ್ನೇನು ನಡೆಸಿಲ್ಲ.

Story first published: Sunday, June 23, 2019, 17:29 [IST]
Other articles published on Jun 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X