ಮತ್ತೆ ಅಂಗಳಕ್ಕೆ ಸೆಹ್ವಾಗ್, ಯುವಿ ಸಹಿತ ದಿಗ್ಗಜರ ದಂಡು: ಲೆಜೆಂಡ್ಸ್ ಲೀಗ್ ಪಂದ್ಯದ ಆರಂಭ, ನೇರಪ್ರಸಾರದ ಮಾಹಿತಿ

ವಿಶ್ವ ಕ್ರಿಕೆಟ್‌ನಲ್ಲಿ ಮೆರೆದು ನಿವೃತ್ತಿಯನ್ನು ಪಡೆದ ಕ್ರಿಕೆಟಿಗರ ಆಟದ ವೈಖರಿಯನ್ನು ಅಭಿಮಾನಿಗಳು ಆಗಾಗ ನೆನಪಿಸಿಕೊಳ್ಳುವುದು ಸಾಮಾನ್ಯ. ಆ ಆಟಗಾರರು ಮತ್ತೆ ಆಡಲು ಕಣಕ್ಕಿಳಿದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಕೂಡ ಸಾಕಷ್ಟು ಅಭಿಮಾನಿಗಳು ಮನದಲ್ಲೇ ಅಂದುಕೊಂಡಿರುತ್ತಾರೆ. ಇದೀಗ ಅಂತಾದ್ದೊಂದು ವಿಶೇಷ ಕ್ಷಣ ಬಂದಿದೆ. ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದಿರುವ ದಿಗ್ಗಜ ಆಟಗಾರರ ಕ್ರಿಕೆಟ್ ಲೀಗ್‌ಗೆ ಇಂದಿನಿಂದ ಚಾಲನೆ ದೊರೆಯುತ್ತಿದೆ.

ವಿಶ್ವ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ಹಲವಾರು ದಿಗ್ಗಜ ಆಟಗಾರರು ಮೂರು ತಂಡಗಳ ಪರವಾಗಿ 'ಲೆಜೆಂಡ್ಸ್ ಕ್ರಿಕೆಟ್‌ ಲೀಗ್' ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದು ಈ ಲೀಗ್‌ನ ಮೊದಲ ಆವೃತ್ತಿ ಜನವರಿ 20ರಂದು ಚಾಲನೆ ಪಡೆದುಕೊಳ್ಳುತ್ತಿದೆ. ಈ ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನಲ್ಲಿ ಮೂರು ತಂಡಗಳು ಮುಖಾಮುಖಿಯಾತ್ತಿದೆ. ಇಂಡಿಯಾ ಮಹಾರಾಜಾಸ್, ಏಷ್ಯಾ ಲಯನ್ಸ್ ಹಾಗೂ ವರ್ಲ್ಡ್ ಜೈಂಟ್ಸ್ ತಂಡಗಳು ಸ್ಪರ್ಧೆಗಿಳಿಯುತ್ತಿದೆ.

ಭಾರತ vs ದ.ಆಫ್ರಿಕಾ ಪ್ರಥಮ ಏಕದಿನ: ಸಚಿನ್ ಬೃಹತ್ ದಾಖಲೆ ಮುರಿದು ಹಾಕಿದ ವಿರಾಟ್ ಕೊಹ್ಲಿಭಾರತ vs ದ.ಆಫ್ರಿಕಾ ಪ್ರಥಮ ಏಕದಿನ: ಸಚಿನ್ ಬೃಹತ್ ದಾಖಲೆ ಮುರಿದು ಹಾಕಿದ ವಿರಾಟ್ ಕೊಹ್ಲಿ

ಇಂಡಿಯಾ ಮಹಾರಾಜಾಸ್ ತಂಡ ಭಾರತೀಯ ಆಟಗಾರರನ್ನು ಒಳಗೊಂಡಿರುವ ತಂಡವಾಗಿದ್ದರೆ ಏಷ್ಯಾ ಲಯನ್ಸ್ ತಂಡ ಭಾರತವನ್ನು ಹೊರತುಪಡಿಸಿ ಉಪಖಂಡದ ಉಳಿದ ದೇಶಗಳ ಆಟಗಾರರನ್ನು ಹೊಂದಿರುವ ತಂಡವಾಗಿದೆ. ಇನ್ನು ವರ್ಲ್ಡ್ ಜೈಂಟ್ಸ್ ತಂಡದಲ್ಲಿ ವಿಶ್ವದ ಇತರ ದೇಶಗಳ ನಿವೃತ್ತ ದಿಗ್ಗಜ ಕ್ರಿಕೆಟಿಗರನ್ನು ಒಳಗೊಂಡಿದೆ. ಹೀಗಾಗಿ ಈ ಲೀಗ್ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಈ ಟೂರ್ನಿ ರೌಂಡ್ ರಾಬಿನ್ ಮಾದರಿಯಲ್ಲಿ ಆಯೋಜನೆಯಾಗಲಿದೆ.

ಮೊದಲ ಪಂದ್ಯದ ಸಮಯ: ಈ ಲೀಗ್ ಟೂರ್ನಿಯ ಮೊದಲ ಪಂದ್ಯ ಇಂಡಿಯಾ ಮಹಾರಾಜಾಸ್ ಹಾಗೂ ಏಷ್ಯಾ ಲಯನ್ಸ್ ತಂಡಗಳ ಮಧ್ಯೆ ನಡೆಯಲಿದೆ. ಜನವರಿ 20 ಗುರುವಾರ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.

ಪಂದ್ಯದ ನೇರಪ್ರಸಾರ, ಲೈವ್ ಸ್ಟೀಮಿಂಗ್: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಲೀಗ್‌ನ ಮೊದಲ ಪಂದ್ಯವನ್ನು ಅಭಿಮಾನಿಗಳು ವೀಕ್ಷಿಸಲು ಅವಕಾಶವಿದೆ. ಭಾರತದಲ್ಲಿ ಈ ಪಂದ್ಯಗಳು ಸೋನಿ ಟೆನ್ 1 ಹಾಗೂ ಸೋನಿ ಟೆನ್ 3 ಚಾನೆಲ್‌ನಲ್ಲಿ ನೇರಪ್ರಸಾರವಾಗಲಿದೆ.

ಭಾಗವಹಿಸುತ್ತಿರುವ ತಂಡಗಳ ಆಟಗಾರರ ಪಟ್ಟಿ ಹೀಗಿದೆ
ಇಂಡಿಯಾ ಮಹಾರಾಜಾಸ್ ಸ್ಕ್ವಾಡ್: ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಬದರಿನಾಥ್, ಆರ್‌ಪಿ ಸಿಂಗ್, ಪ್ರಗ್ಯಾನ್ ಓಜಾ, ನಮನ್ ಓಜಾ, ಮನ್‌ಪ್ರೀತ್ ಗೋನಿ, ಹೇಮಂಗ್ ಬದಾನಿ, ಮುನಾಫ್ ಪಟೇಲ್, ವೇಣುಗೋಪಾಲ್ ರಾವ್, ಸಂಜಯ್ ಬಂಗಾರ್, ನಯನ್ ಮೊಂಗಿಯಾ ಮತ್ತು ಅಮಿತ್ ಭಂಡಾರಿ

ಏಷ್ಯಾ ಲಯನ್ಸ್ ಸ್ಕ್ವಾಡ್: ಶೋಯೆಬ್ ಅಖ್ತರ್, ಶಾಹಿದ್ ಅಫ್ರಿದಿ, ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್, ಕಮ್ರಾನ್ ಅಕ್ಮಲ್, ಚಾಮಿಂಡಾ ವಾಸ್, ರೋಮೇಶ್ ಕಲುವಿತಾರಣ, ತಿಲಕರತ್ನೆ ದಿಲ್ಶನ್, ಅಜರ್ ಮಹಮೂದ್, ಮಿಸ್ಬಾ-ಉಲ್-ಹಕ್, ಉಪುಲ್ ತರಂಗ, ಮೊಹಮ್ಮದ್ ಹಫೀಜ್, ಶೋಯಬ್ ಮಲಿಕ್, ಮೊಹಮ್ಮದ್ ಯೂಸುಫ್, ಉಮರ್ ಗುಲ್, ಅಸ್ಗರ್ ಅಫ್ಘಾನ್

ವರ್ಲ್ಡ್ ಜೈಂಡ್ಸ್ ಸ್ಕ್ವಾಡ್: ಡ್ಯಾರೆನ್ ಸ್ಯಾಮಿ, ಡೇನಿಯಲ್ ವೆಟ್ಟೋರಿ, ಬ್ರೆಟ್ ಲೀ, ಕೆವಿನ್ ಪೀಟರ್ಸನ್, ಜಾಂಟಿ ರೋಡ್ಸ್, ಇಮ್ರಾನ್ ತಾಹಿರ್, ಓವೈಸ್ ಶಾ, ಹರ್ಷಲ್ ಗಿಬ್ಸ್, ಅಲ್ಬಿ ಮೊರ್ಕೆಲ್, ಮೋರ್ನೆ ಮೊರ್ಕೆಲ್, ಕೋರಿ ಆಂಡರ್ಸನ್, ಮಾಂಟಿ ಪನೇಸರ್, ಬ್ರಾಡ್ ಹ್ಯಾಡಿನ್, ಕೆವಿನ್ ಒ'ಬ್ರಿನ್ ಟೇನ್, ಮತ್ತು ಬ್ರೆಂಡನ್ ಟೇಲರ್

ದ.ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದ ಸೋಲಿಗೆ ಕಾರಣ ಯಾರೆಂಬುದನ್ನು ಬಿಚ್ಚಿಟ್ಟ ನಾಯಕ ರಾಹುಲ್ದ.ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದ ಸೋಲಿಗೆ ಕಾರಣ ಯಾರೆಂಬುದನ್ನು ಬಿಚ್ಚಿಟ್ಟ ನಾಯಕ ರಾಹುಲ್

ಸಂಪೂರ್ಣ ವೇಳಾಪಟ್ಟಿ:

Legends League Cricket: Virender Singh ನೇತೃತ್ವದಲ್ಲಿ ಇಂಡಿಯಾ ಮಹಾರಾಜ ತಂಡ!! | Oneindia Kannada

ಜನವರಿ 20, 2022: ಇಂಡಿಯಾ ಮಹಾರಾಜಸ್ vs ಏಷ್ಯಾ ಲಯನ್ಸ್, ರಾತ್ರಿ 8 ಗಂಟೆಗೆ
ಜನವರಿ 21, 2022: ವಲ್ಡ್ ಜೈಂಟ್ಸ್ vs ಏಷ್ಯಾ ಲಯನ್ಸ್, ರಾತ್ರಿ 8 ಗಂಟೆಗೆ
ಜನವರಿ 22, 2022: ವರ್ಲ್ಡ್ ಜೈಂಟ್ಸ್ vs ಭಾರತ ಮಹಾರಾಜರು, ರಾತ್ರಿ 8 ಗಂಟೆಗೆ
ಜನವರಿ 24, 2022: ಏಷ್ಯಾ ಲಯನ್ಸ್ vs ಭಾರತ ಮಹಾರಾಜರು, ರಾತ್ರಿ 8 ಗಂಟೆಗೆ
ಜನವರಿ 26, 2022: ಇಂಡಿಯಾ ಮಹಾರಾಜಸ್ vs ವರ್ಲ್ಡ್ ಜೈಂಟ್ಸ್, ರಾತ್ರಿ 8 ಗಂಟೆಗೆ
ಜನವರಿ 27, 2022: ಏಷ್ಯಾ ಲಯನ್ಸ್ vs ವರ್ಲ್ಡ್ ಜೈಂಟ್ಸ್, ರಾತ್ರಿ 8 ಗಂಟೆಗೆ
ಜನವರಿ 29, 2022: ಫೈನಲ್ ಪಂದ್ಯ, ರಾತ್ರಿ 8 ಗಂಟೆಗೆ

For Quick Alerts
ALLOW NOTIFICATIONS
For Daily Alerts
Story first published: Thursday, January 20, 2022, 14:17 [IST]
Other articles published on Jan 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X