ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲೆಜೆಂಡ್ಸ್‌ ಲೀಗ್ ಕ್ರಿಕೆಟ್‌: ಮಣಿಪಾಲ್ ಟೈಗರ್ಸ್ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿದ ಭಿಲ್ವಾರಾ ಕಿಂಗ್ಸ್

ಲೆಜೆಂಡ್ಸ್‌ ಲೀಗ್ ಕ್ರಿಕೆಟ್‌ನ ಎರಡನೇ ಪಂದ್ಯದಲ್ಲಿ ಮಣಿಪಾಲ್ ಟೈಗರ್ಸ್ ವಿರುದ್ಧ ಭಿಲ್ವಾರಾ ಕಿಂಗ್ಸ್ 3 ವಿಕೆಟ್‌ಗಳ ಜಯ ಸಾಧಿಸಿದೆ. ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಿಲ್ವಾರಾ ಕಿಂಗ್ಸ್ ಅತ್ಯುತ್ತಮ ಪ್ರದರ್ಶನ ನೀಡಿತು.

15 ರನ್ ಆಗುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡ ಮಣಿಪಾಲ್ ಟೈಗರ್ಸ್ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಆಸರೆಯಾದ ಮೊಹಮ್ಮದ್ ಕೈಫ್ ಅತ್ಯುತ್ತಮ ಆಟವಾಡಿದರು. ತಟೆಂಡಾ ತೈಬು (16), ಪ್ರದೀಪ್ ಸಾಹು (30) ಮತ್ತು ಶಿವಕಾಂತ್ ಶುಕ್ಲಾ (17) ಜೊತೆ ಪ್ರಮುಖ ಜೊತೆಯಾಟಗಳನ್ನು ನಡೆಸಿದರು. ಅಂತಿಮವಾಗಿ ತಂಡದ ಮೊತ್ತವನ್ನು 150 ರ ಗಡಿ ದಾಟಿಸಿದರು. ಅಂತಿಮವಾಗಿ ಮಣಿಪಾಲ್ ಟೈಗರ್ಸ್ ತಂಡ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು.

Ind vs Eng 1st ODI: ಮಂದಾನ, ಕೌರ್ ಭರ್ಜರಿ ಬ್ಯಾಟಿಂಗ್, 7 ವಿಕೆಟ್‌ಗಳ ಜಯ ಸಾಧಿಸಿದ ಭಾರತ ವನಿತೆಯರುInd vs Eng 1st ODI: ಮಂದಾನ, ಕೌರ್ ಭರ್ಜರಿ ಬ್ಯಾಟಿಂಗ್, 7 ವಿಕೆಟ್‌ಗಳ ಜಯ ಸಾಧಿಸಿದ ಭಾರತ ವನಿತೆಯರು

154 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಿಲ್ವಾರಾ ಕಿಂಗ್ಸ್ ಯೂಸುಫ್ ಪಠಾಣ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗೆಲವು ಸಾಧಿಸಿತು. ಸುಲಭದ ಗುರಿಯನ್ನು ಬೆನ್ನಟ್ಟಿದ ಭಿಲ್ವಾರಾ ಕಿಂಗ್ಸ್‌ ಕೂಡ ಆರಂಭದಲ್ಲಿ ಆಘಾತ ಅನುಭವಿಸಿತು. 11 ರನ್ ಆಗುವಷ್ಟರಲ್ಲಿ ಇಬ್ಬರು ಆರಂಭಿಕ ಆಟಗಾರರನ್ನು ಕಳೆದುಕೊಂಡ ಭಿಲ್ವಾರ ಕಿಂಗ್ಸ್‌ಗೆ ತನ್ಮಯ್ ಶ್ರೀವಾಸ್ತವ ಮತ್ತು ಯೂಸುಫ್ ಪಠಾಣ್ ಆಸರೆಯಾದರು.

Legends League Cricket 2022: Yusuf Pathan and Tino Best powered Bhilwara Kings to a 3-wicket victory over Manipal Tigers

ನಿಧಾನ ಗತಿಯಲ್ಲಿ ಎಚ್ಚರಿಕೆಯ ಆಟವಾಡಿದ ನ್ಮಯ್ ಶ್ರೀವಾಸ್ತವ ಕೂಡ 28 ಎಸೆತಗಳಲ್ಲಿ 28 ರನ್ ಗಳಿಸಿದರು. ಆದರೆ ವೇಗವಾಗಿ ರನ್ ಗಳಿಸಿದ ಯೂಸುಫ್ ಪಠಾಣ್ 28 ಎಸೆತಗಳಲ್ಲಿ 44 ರನ್ ಗಳಿಸಿದರು. ಇದರಲ್ಲಿ 4 ಬೌಂಡರಿ, ಎರಡು ಭರ್ಜರಿ ಸಿಕ್ಸರ್ ಕೂಡ ಸೇರಿದ್ದವು. ಅಂತಿಮವಾಗಿ ಟಿನೋ ಬೆಸ್ಟ್ 7 ಎಸೆತಗಳಲ್ಲಿ 2 ಬೌಂಡರಿ ಒಂದು ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ ಭಿಲ್ವಾರಾ ಕಿಂಗ್ಸ್ ಜಯ ಗಳಿಸಿತು.

ಮಣಿಪಾಲ್ ಟೈಗರ್ಸ್ ಪ್ಲೇಯಿಂಗ್ 11:

ರವಿಕಾಂತ್ ಶುಕ್ಲಾ, ಸ್ವಪ್ನಿಲ್ ಅಸ್ನೋಡ್ಕರ್, ಕೋರಿ ಆಂಡರ್ಸನ್, ಮೊಹಮ್ಮದ್ ಕೈಫ್, ರಿಯಾನ್ ಜೇ ಸೈಡ್‌ಬಾಟಮ್, ತಟೆಂಡಾ ತೈಬು, ಹರ್ಭಜನ್ ಸಿಂಗ್ (ನಾಯಕ), ಪರ್ವಿಂದರ್ ಅವಾನಾ, ಕ್ರಿಸ್ ಎಂಪೋಫು, ರಿಕಾರ್ಡೊ ಪೊವೆಲ್, ಪರ್ದೀಪ್ ಸಾಹು, ಶಿವಕಾಂತ್ ಶುಕ್ಲಾ, ಮುತ್ತಯ್ಯ ಮುರಳೀಧರನ್

ಭಿಲ್ವಾರಾ ಕಿಂಗ್ಸ್ ಪ್ಲೇಯಿಂಗ್ 11:

ನಮನ್ ಓಜಾ, ವಿಲಿಯಂ ಪೋರ್ಟರ್‌ಫೀಲ್ಡ್, ನಿಕ್ ಕಾಂಪ್ಟನ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್ (ನಾಯಕ), ಫಿಡೆಲ್ ಎಡ್ವರ್ಡ್ಸ್, ಟಿನೋ ಬೆಸ್ಟ್, ಮಾಂಟಿ ಪನೇಸರ್, ತನ್ಮಯ್ ಶ್ರೀವಾಸ್ತವ, ದಿನೇಶ್ ಸಾಲುಂಖೆ, ರಾಜೇಶ್ ಬಿಷ್ಣೋಯ್, ಎಸ್ ಶ್ರೀಶಾಂತ್

Story first published: Monday, September 19, 2022, 0:38 [IST]
Other articles published on Sep 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X