ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಾರ್ದಿಕ್ ಪಾಂಡ್ಯ ನಾಯಕತ್ವಕ್ಕೆ ತಲೆದೂಗಿದ ಎದುರಾಳಿ ತಂಡದ ಆಟಗಾರ

Lockie Ferguson praises Hardik Pandya said He is an exceptional leader for India

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಅಂತಿಮ ಪಂದ್ಯ ಮಾತ್ರವೇ ಬಾಕಿಯಿದ್ದು ಸರಣಿ ಸಮಬಲಗೊಂಡಿರುವುದರಿಂದಾಗಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಂದರ್ಭದಲ್ಲಿ ನ್ಯೂಜಿಲೆಂಡ್
ತಂಡದ ಪ್ರಮುಖ ಆಟಗಾರ ಲ್ಯೂಕಿ ಫರ್ಗ್ಯೂಸನ್ ಟೀಮ್ ಇಂಡಿಯಾದ ನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಹಾರ್ದಿಕ್ ನಾಯಕತ್ವದ ಬಗ್ಗೆ ಫರ್ಗ್ಯೂಸನ್ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲ್ಯೂಕಿ ಫರ್ಗ್ಯೂಸನ್ ಹಾರ್ದಿಕ್ ನಾಯಕತ್ವದ ಬಗ್ಗೆ ಹೀಗೆ ಪ್ರಶಂಸೆ ವ್ಯಕ್ತಪಡಿಸಲು ಮತ್ತೊಂದು ಕಾರಣವೂ ಇದೆ. ಐಪಿಎಲ್‌ನಲ್ಲಿ ಕಿವೀಸ್ ತಂಡದ ಈ ವೇಗಿ ಹಾರ್ದಿಕ್ ನಾಯಕತ್ವದ ಗುಜರಾತ್ ಟೈಟನ್ಸ್ ತಂಡದ ಆಟಗಾರಾಗಿದ್ದಾರೆ. ಹೀಗಾಗಿ ಹಾರ್ದಿಕ್ ನಾಯಕತ್ವದಲ್ಲಿ ಆಡಿರುವುದನ್ನು ನೆನಪಿಸಿಕೊಂಡಿರುವ ಲ್ಯೂಕಿ ಆ ಅವಧಿಯನ್ನು ಆನಂದಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಭಾರತದ ದಿಗ್ಗಜ ಆಟಗಾರ್ತಿ ನೀಡಿದ ಸಲಹೆ ಸಹಕಾರಿಯಾಯಿತು ಎಂದ U-19 ಆಟಗಾರ್ತಿ ತಿತಾಸ್ ಸಧುಭಾರತದ ದಿಗ್ಗಜ ಆಟಗಾರ್ತಿ ನೀಡಿದ ಸಲಹೆ ಸಹಕಾರಿಯಾಯಿತು ಎಂದ U-19 ಆಟಗಾರ್ತಿ ತಿತಾಸ್ ಸಧು

"ಗುಜರಾತ್ ಟೈಟನ್ಸ್ ತಂಡದ ಪರವಾಗಿ ಆಡುವ ಮೊದಲ ದಿನದಿಂದಲೂ ಹಾರ್ದಿಕ್ ಮೇಲೆ ನನಗೆ ಗೌರವವಿದೆ. ಅವರು ತಂಡದೊಳಗೆ ನಿಜವಾದ ನಾಯಕ ಇತರರ ಮಾತುಗಳನ್ನು ಬೇಗನೆ ಕೇಳುತ್ತಾರೆ. ಅದೇ ರೀತಿ ಕೇನ್ ವಿಲಿಯಮ್ಸನ್ ರೀತಿಯಲ್ಲಿಯೇ ತಂಡದಲ್ಲಿರುವ ಎಲ್ಲರಿಗೂ ಸಮಯವನ್ನು ನೀಡುತ್ತಾರೆ" ಎಂದಿದ್ದಾರೆ ಲೂಕಿ ಫರ್ಗ್ಯೂಸನ್.

"ಆತ ಭಾರತ ತಂಡದಲ್ಲಿಯೂ ಅದ್ಭುತವಾಗಿ ನಾಯಕತ್ವ ನಿಭಾಯಿಸಿದ್ದಾರೆ. ಆತನ ಆಂಗಿಕ ಭಾಷೆ ಕೂಡ ಉತ್ತಮವಾಗಿದೆ. ನನ್ನ ಪ್ರಕಾರ ಅವರು ಭಾರತಕ್ಕೆ ದೊರೆದ ವಿಶಿಷ್ಟವಾದ ನಾಯಕನಾಗಿದ್ದಾರೆ. ಆತನ ನಾಯಕತ್ವದಲ್ಲಿ ಆಡಿರುವುದನ್ನು ನಾನು ಬಹಳ ಆನಂದಿಸಿದ್ದೇನೆ" ಎಂದಿದ್ದಾರೆ ಕಿವೀಸ್ ತಂಡದ ವೇಗಿ

ಇನ್ನು ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ಬುಧವಾರ ನಡೆಯಲಿದ್ದು ಅಹ್ಮದಾಬಾದ್‌ನಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಈಗಾಗಲೇ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಆಹ್ಮದಾಬಾದ್‌ಗೆ ತೆರಳಿದ್ದು ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ. ಮೊದಲ ಎರಡು ಪಂದ್ಯಗಳಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ತಲಾ ಒಂದು ಗೆಲುವು ಸಾಧಿಸುವ ಮೂಲಕ ಸರಣಿ ಸಮಬಲಗೊಂಡಿದೆ. ಹೀಗಾಗಿ ಅಂತಿಮ ಪಂದ್ಯದ ಮೇಲಿನ ಕುತೂಹಲ ಹೆಚ್ಚಾಗಿದೆ.

IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್

ಟೀಮ್ ಇಂಡಿಯಾ ಸ್ಕ್ವಾಡ್: ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಿವಂ ಮಾವಿ, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಜಿತೇಶ್ ಶರ್ಮಾ, ಮುಖೇಶ್ ಕುಮಾರ್, ಪೃಥ್ವಿ ಶಾ, ಉಮ್ರಾನ್ ಮಲಿಕ್

ನ್ಯೂಜಿಲೆಂಡ್ ಸ್ಕ್ವಾಡ್: ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡ್ಯಾರಿಲ್ ಮಿಚೆಲ್, ಮೈಕೆಲ್ ಬ್ರೇಸ್ವೆಲ್, ಇಶ್ ಸೋಧಿ, ಜಾಕೋಬ್ ಡಫ್ಫಿ, ಲಾಕ್ ಫರ್ಗುಸನ್, ಬ್ಲೇರ್ ಟಿಕ್ನರ್, ಮೈಕೆಲ್ ರಿಪ್ಪನ್, ಡೇನ್ ಕ್ಲೀವರ್, ಹೆನ್ರಿ ಶಿಪ್ಲಿ, ಬೆನ್ ಲಿಸ್ಟರ್

Story first published: Tuesday, January 31, 2023, 22:18 [IST]
Other articles published on Jan 31, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X