ವೀಕ್ಷಕರ ಉಪಸ್ಥಿತಿಯಲ್ಲೇ ಐಪಿಎಲ್ ಆಯೋಜಿಸಲು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಉತ್ಸುಕ!

ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ನಡೆಯುತ್ತೋ ಇಲ್ವೋ ಎಂಬ ಪ್ರಶ್ನೆಗೆ ಈಗ ಉತ್ತರ ಸ್ಪಷ್ಟವಾಗಿದ್ದು ಯುಎಇನಲ್ಲಿ ಈ ಬಾರಿಯ ಐಪಿಎಲ್ ಆಯೋಜಿಸಲು ವೇದಿಕೆ ಸಿದ್ದವಾಗಿದೆ. ಆದರೆ ಕೊರೊನಾ ಹಾವಳಿಯ ಭೀತಿಯ ಮಧ್ಯೆಯೂ ವೀಕ್ಷಕರ ಉಪಸ್ಥಿತಿಯಲ್ಲೇ ನಡೆಸಲು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಉತ್ಸುಕವಾಗಿದೆ.
ಈ ಬಗ್ಗೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಮುಬಾಶ್ಶಿರ್ ಉಸ್ಮಾನಿ ಮಾಃಇತಿಯನ್ನು ನೀಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಪಂದ್ಯದ ಸಮಯದಲ್ಲಿ 30-50 ಶೇಕಡಾದಷ್ಟು ಪ್ರೇಕ್ಷಕರಿಗೆ ಅವಕಾಶವನ್ನು ನೀಡಲು ಚಿಂತನೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ. ಪಿಟಿಐ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡುತ್ತಾ ಅವರು ಈ ವಿಚಾರವನ್ನು ತಿಳಿಸಿದ್ದಾರೆ.
ಇತ್ತೀಚೆಗೆ ಐಪಿಎಲ್ ಆರಂಭ ಹಾಗೂ ಅಂತ್ಯದ ದಿನಾಂಕವನ್ನು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಬಹಿರಂಗಪಡಿಸಿದ ಸಂದರ್ಭದಲ್ಲೂ ಈ ವಿಚಾರವನ್ನು ಹೇಳಿದ್ದರು. ಪ್ರೇಕ್ಷಕರ ಉಪಸ್ಥಿತಿಯಲ್ಲಿ ಪಂದ್ಯಾವಳಿ ನಡೆಸುವುದನ್ನು ಯುಎಇ ಕ್ರಿಕೆಟ್ ಮಂಡಳಿಯೇ ತಿರ್ಮಾನ ಕೈಗೊಳ್ಳಲಿದೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದರು.
ಐಪಿಎಲ್ ದಿನಾಂಕವನ್ನು ಘೋಷಿಸಲು ಬಿಸಿಸಿಐ ಸರ್ಕಾರದ ಅನುಮತಿಯನ್ನು ನಿರೀಕ್ಷಿಸುತ್ತಿದೆ. 'ಬಿಸಿಸಿಐ ಭಾರತದ ಸರ್ಕಾರದಿಂದ ಅನುಮತಿಯನ್ನು ಮಡೆದುಕೊಂಡ ನಂತರ ನಾವು ನನ್ನ ಸರ್ಕಾರದ ಜೊತೆಗೆ ಈ ವಿಚಾರವಾಗಿ ಸಂಒಊರ್ಣ ದಾಖಲಾತಿಗಳೊಂದಿಗೆ ಮಾತುಕತೆ ನಡೆಸಿ ಅನುಮತಿಯನ್ನು ಕೋರುತ್ತೇವೆ ಎಂದು ಉಸ್ಮಾನಿ ಹೇಳಿದ್ದಾರೆ.
ಈ ಪ್ರತಿಷ್ಠಿತ ಕ್ರೀಡಾಕೂಟವನ್ನು ನಮ್ಮ ಜನರು ಅನುಭವಿಸಬೇಕೆಂದು ನಾವು ಖಂಡಿತವಾಗಿ ಬಯಸುತ್ತೇವೆ ಆದರೆ ಇದು ಸಂಪೂರ್ಣವಾಗಿ ಸರ್ಕಾರದ ನಿರ್ಧಾರವಾಗಿದೆ. ಇಲ್ಲಿನ ಹೆಚ್ಚಿನ ಪಂದ್ಯಗಳಿಗೆ 30-50ಶೇಕಡಾದಷ್ಟು ಹಾಜರಾತೊಯಿರುತ್ತದೆ. ನಾವು ಇದೇ ಸಂಖ್ಯೆಯನ್ನು ನಿರೀಕ್ಷಿಸುತ್ತೇವೆ. ಇದಕ್ಕೆ ನಮ್ಮ ಸರ್ಕಾರದ ಅನುಮೋದನೆ ಪಡೆಯುವ ಭರವಸೆ ಇದೆ" ಎಂದು ಮುಬಾಶ್ಶಿರ್ ಉಸ್ಮಾನಿ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications