ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಾರಾಜ ಟ್ರೋಫಿ: ಮತ್ತೊಂದು ಪಂದ್ಯ ಸೋತ ಶಿವಮೊಗ್ಗ ಸ್ಟ್ರೈಕರ್ಸ್; ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನ ಫಿಕ್ಸ್?

Maharaja Trophy 2022: Hubli Tigers beat Shivamogga Strikers by 6 wickets

ಸದ್ಯ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿರುವ ಮಹಾರಾಜಾ ಟ್ರೋಫಿ ನಡೆಯುತ್ತಿದ್ದು, ಲೀಗ್ ಹಂತದ 13ನೇ ಪಂದ್ಯದಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ತಂಡಗಳು ಮುಖಾಮುಖಿಯಾಗಿವೆ. ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ಆಗಸ್ಟ್ 13 ) ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಹುಬ್ಬಳ್ಳಿ ಟೈಗರ್ಸ್ ತಂಡದ ನಾಯಕ ಅಭಿಮನ್ಯು ಮಿಥುನ್ ಫೀಲ್ಡಿಂಗ್ ಆಯ್ದುಕೊಳ್ಳುವುದರ ಮೂಲಕ ಎದುರಾಳಿ ಶಿವಮೊಗ್ಗ ಸ್ಟ್ರೈಕರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.

ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ತಲೆನೋವಾಗಿದ್ದ ಅಫ್ರಿದಿ ಏಷ್ಯಾಕಪ್ ಪಂದ್ಯದಿಂದ ಔಟ್? ಬಾಬರ್ ಹೇಳಿದ್ದೇನು?ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ತಲೆನೋವಾಗಿದ್ದ ಅಫ್ರಿದಿ ಏಷ್ಯಾಕಪ್ ಪಂದ್ಯದಿಂದ ಔಟ್? ಬಾಬರ್ ಹೇಳಿದ್ದೇನು?

ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಸ್ಟ್ರೈಕರ್ಸ್ ಕೃಷ್ಣಮೂರ್ತಿ ಸಿದ್ಧಾರ್ಥ್ ಹಾಗೂ ಅವಿನಾಶ್ ಡಿ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿ ಎದುರಾಳಿ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಗೆಲ್ಲಲು 134 ರನ್‌ಗಳ ಸಾಮಾನ್ಯ ಗುರಿಯನ್ನು ನೀಡಿತು.

ಐಪಿಎಲ್‌ನಲ್ಲಿ ಎಷ್ಟು ರನ್ ಬಾರಿಸಿದರೆ ಬಿಸಿಸಿಐ ಆಯ್ಕೆ ಮಾಡುತ್ತೆ ಎಂಬುದು ಈಗ ಅರ್ಥವಾಗಿದೆ ಎಂದ ರಾಣಾ!ಐಪಿಎಲ್‌ನಲ್ಲಿ ಎಷ್ಟು ರನ್ ಬಾರಿಸಿದರೆ ಬಿಸಿಸಿಐ ಆಯ್ಕೆ ಮಾಡುತ್ತೆ ಎಂಬುದು ಈಗ ಅರ್ಥವಾಗಿದೆ ಎಂದ ರಾಣಾ!

ಇತ್ತ ಈ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾದ ಹುಬ್ಬಳ್ಳಿ ಟೈಗರ್ಸ್ ಮೊಹಮ್ಮದ್ ತಾಹ ಹಾಗೂ ಶ್ರೀನಿವಾಸ ಶರತ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 17.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 134 ರನ್ ಕಲೆ ಹಾಕುವುದರ ಮೂಲಕ 6 ವಿಕೆಟ್‍ಗಳ ಗೆಲುವನ್ನು ಸಾಧಿಸಿದೆ. ಹೀಗೆ ಈ ಪಂದ್ಯವನ್ನೂ ಸೋತ ಶಿವಮೊಗ್ಗ ಸ್ಟ್ರೈಕರ್ಸ್ ಟೂರ್ನಿಯಲ್ಲಿ ಸತತ ಐದನೇ ಪಂದ್ಯವನ್ನು ಸೋತಿದ್ದು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ.

ಆರಂಭದಲ್ಲೇ ಮುಗ್ಗರಿಸಿದ ಶಿವಮೊಗ್ಗ ಸ್ಟ್ರೈಕರ್ಸ್

ಆರಂಭದಲ್ಲೇ ಮುಗ್ಗರಿಸಿದ ಶಿವಮೊಗ್ಗ ಸ್ಟ್ರೈಕರ್ಸ್

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಸ್ಟ್ರೈಕರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಆಟಗಾರರು ಹಾಗೂ ತಂಡದ ಮೇಲಿನ ಕ್ರಮಾಂಕ ಅಕ್ಷರಶಃ ಮುಗ್ಗರಿಸಿತು. ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ರೋಹನ್ ಕದಮ್ 1 ರನ್ ಕಲೆಹಾಕಿದರೆ, ಶರತ್ ಬಿ ಆರ್ 3 ರನ್ ಬಾರಿಸಿದರು. ಹೀಗೆ ತಂಡದ ಇಬ್ಬರು ಆರಂಭಿಕರು ಕಳಪೆ ರನ್ ಗಳಿಸಿ ಔಟ್ ಆದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಕೃಷ್ಣಪ್ಪ ಗೌತಮ್ 4 ರನ್ ಕಲೆಹಾಕಿ ನಿರಾಸೆ ಮೂಡಿಸಿದರು. ಇನ್ನುಳಿದಂತೆ ಡೆಸ್ಮಾಂಟ್ ಆಂಟನಿ 1 ರನ್, ವಿನಯ್ ಸಾಗರ್ 13 ರನ್, ಅವಿನಾಶ್ ಡಿ 41 ರನ್ ಕಲೆಹಾಕಿದರು. ತಂಡದ ಪರ ಅಂತಿಮ ಹಂತದವರೆಗೂ ಹೋರಾಟ ನಡೆಸಿದ ಹೋರಾಟ ನಡೆಸಿದ ಕೃಷ್ಣಮೂರ್ತಿ ಸಿದ್ಧಾರ್ಥ್ 53 ಎಸೆತಗಳಲ್ಲಿ 62 ರನ್ ಕಲೆಹಾಕಿ ಅಜೇಯನಾಗಿ ಉಳಿದು ತಂಡಕ್ಕೆ ಆಪತ್ಬಾಂಧವನಾದರು ಹಾಗೂ ಸ್ಟಾಲಿನ್ ಹೂವರ್ ಅಜೇಯ 7 ರನ್ ಕಲೆಹಾಕಿದರು.

ಹುಬ್ಬಳ್ಳಿ ಟೈಗರ್ಸ್ ಪರ ವೈಶಾಖ್ ಕೌಶಿಕ್ 3 ವಿಕೆಟ್, ನಾಯಕ ಅಭಿಮನ್ಯು ಮಿಥುನ್ 2 ವಿಕೆಟ್ ಹಾಗೂ ನವೀನ್ ಎಂಜಿ ಒಂದು ವಿಕೆಟ್ ಪಡೆದರು.

ಗೆದ್ದ ಹುಬ್ಬಳ್ಳಿ

ಗೆದ್ದ ಹುಬ್ಬಳ್ಳಿ

ಶಿವಮೊಗ್ಗ ಸ್ಟ್ರೈಕರ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಲವ್ನಿತ್ ಸಿಸೋಡಿಯಾ ಶೂನ್ಯಕ್ಕೆ ಔಟ್ ಆದರೆ, ಮತ್ತೋರ್ವ ಆರಂಭಿಕ ಆಟಗಾರ ಮೊಹಮ್ಮದ್ ತಹಾ 49 ಎಸೆತಗಳಲ್ಲಿ ಅಜೇಯ 78 ರನ್ ಕಲೆಹಾಕಿ ತಂಡಕ್ಕೆ ಆಸರೆಯಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನುಳಿದಂತೆ ಸ್ವಪ್ನಿಲ್ ಯೆಳಲೆ 6 ರನ್, ಶ್ರೀನಿವಾಸ್ ಶರತ್ 41, ನಾಯಕ ಅಭಿಮನ್ಯು ಮಿಥುನ್ ಶೂನ್ಯ, ತುಷಾರ್ ಸಿಂಗ್ ಅಜೇಯ 4 ರನ್ ಕಲೆಹಾಕಿದರು.

ಶಿವಮೊಗ್ಗ ಸ್ಟ್ರೈಕರ್ಸ್ ಪರ ಕೃಷ್ಣಪ್ಪ ಗೌತಮ್, ಉತ್ತಮ್ ಅಯ್ಯಪ್ಪ, ಅವಿನಾಶ್ ಡಿ ಹಾಗೂ ಸ್ಟಾಲಿನ್ ಹೂವರ್ ತಲಾ ಒಂದೊಂದು ವಿಕೆಟ್ ಪಡೆದರು.

ಆಡುವ ಬಳಗ

ಆಡುವ ಬಳಗ

ಹುಬ್ಬಳ್ಳಿ ಟೈಗರ್ಸ್: ಲುವ್ನಿತ್ ಸಿಸೋಡಿಯಾ (ವಿಕೆಟ್ ಕೀಪರ್), ಮೊಹಮ್ಮದ್ ತಾಹಾ, ಸ್ವಪ್ನಿಲ್ ಯೆಲವೆ, ತುಷಾರ್ ಸಿಂಗ್, ನವೀನ್ ಎಂಜಿ, ಅಭಿಮನ್ಯು ಮಿಥುನ್ (ನಾಯಕ), ಶ್ರೀನಿವಾಸ್ ಶರತ್, ವಾಸುಕಿ ಕೌಶಿಕ್, ಆನಂದ್ ದೊಡ್ಡಮನಿ, ಶರಣ್ ಗೌಡ, ಸೌರಭ್ ಶ್ರೀವಾಸ್ತವ್

ಶಿವಮೊಗ್ಗ ಸ್ಟ್ರೈಕರ್ಸ್: ರೋಹನ್ ಕದಮ್, ಶರತ್ ಬಿಆರ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್ (ನಾಯಕ), ಅವಿನಾಶ್ ಡಿ, ವಿನಯ್ ಸಾಗರ್, ಕೃಷ್ಣಮೂರ್ತಿ ಸಿದ್ಧಾರ್ಥ್, ಸ್ಟಾಲಿನ್ ಹೂವರ್, ಕೆಸಿ ಕಾರಿಯಪ್ಪ, ಡೆಸ್ಮಂಡ್ ಆಂಟೋನಿ, ಎಂ ಬಿ ದರ್ಶನ್, ಉತ್ತಮ್ ಅಯ್ಯಪ್ಪ

Story first published: Saturday, August 13, 2022, 20:05 [IST]
Other articles published on Aug 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X