ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಮ್ಯಾನ್ ಆಫ್‌ ದ ಮ್ಯಾಚ್' ಬ್ಯಾಟ್ಸ್‌ಮನ್‌ಗೆ ಸಿಗಬೇಕಿತ್ತು': ಮಂಜ್ರೇಕರ್

Man of the Match should’ve been a batsman, says Sanjay Manjrekar

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಗುರುವಾರ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆದ್ದಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ್ದ ಎಂಐ 57 ರನ್‌ಗಳಿಂದ ಪಂದ್ಯ ಗೆದ್ದಿತ್ತು.

ಕೊಹ್ಲಿಗೆ ಕುಹಕವಾಡಿದ ಇಸಿಬಿಗೆ ಕ್ರಿಕೆಟ್ ಪ್ರೇಮಿಗಳಿಂದ ಕಪಾಳ ಮೋಕ್ಷ!ಕೊಹ್ಲಿಗೆ ಕುಹಕವಾಡಿದ ಇಸಿಬಿಗೆ ಕ್ರಿಕೆಟ್ ಪ್ರೇಮಿಗಳಿಂದ ಕಪಾಳ ಮೋಕ್ಷ!

ಆ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ 40, ಸೂರ್ಯಕುಮಾರ್ ಯಾದವ್ 51, ಇಶಾನ್ ಕಿಶನ್ 55, ಹಾರ್ದಿಕ್ ಪಾಂಡ್ಯ 37 ರನ್‌ ಬಾರಿಸಿ ಬ್ಯಾಟಿಂಗ್ ವಿಭಾಗದಲ್ಲಿ ಬೆಂಬಲಿಸಿದ್ದರೆ, ಟ್ರೆಂಟ್ ಬೌಲ್ಟ್ 9ಕ್ಕೆ 2, ಜಸ್‌ಪ್ರೀತ್‌ 14ಕ್ಕೆ 14 ವಿಕೆಟ್ ಮುರಿದು ಗಮನ ಸೆಳೆದಿದ್ದರು.

ಪಂದ್ಯಶ್ರೇಷ್ಠ ಪ್ರಶಸ್ತಿ ಜಸ್‌ಪ್ರೀತ್‌ ಬೂಮ್ರಾಗೆ ಲಭಿಸಿತ್ತು. ಆದರೆ ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಂಜ್ರೇಕರ್, ಪಂದ್ಯಶ್ರೇಷ್ಠ ಪ್ರಶಸ್ತಿ ಬ್ಯಾಟ್ಸ್‌ಮನ್‌ಗೆ ಕೊಡಬೇಕಿತ್ತು. ಮುಂಬೈ ಗೆಲ್ಲಲು ಬ್ಯಾಟ್ಸ್‌ಮನ್‌ಗಳ ಪಾತ್ರ ಮಹತ್ವದ್ದಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.

ಮಹಿಳಾ ಕ್ರಿಕೆಟ್‌ ಉನ್ನತಿಗೆ ಸೌರವ್‌ ಗಂಗೂಲಿ ಆದ್ಯತೆಯನ್ನು ಹೊಗಳಿದ ಮಿಥಾಲಿ ರಾಜ್ಮಹಿಳಾ ಕ್ರಿಕೆಟ್‌ ಉನ್ನತಿಗೆ ಸೌರವ್‌ ಗಂಗೂಲಿ ಆದ್ಯತೆಯನ್ನು ಹೊಗಳಿದ ಮಿಥಾಲಿ ರಾಜ್

'ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆರಿಸುವಾಗ ಪಂದ್ಯ ಗೆಲುವಿನತ್ತ ಸಾಗಿದ್ದು ಹೇಗೆ ಎಂದು ನಾವು ನೋಡಬೇಕಾಗುತ್ತದೆ. ಎಂಐ ಪಂದ್ಯವನ್ನು ಬಹುತೇಕ ಗೆಲುವಿನತ್ತ ಕೊಂಡೊಯ್ದಿದ್ದು ಬ್ಯಾಟಿಂಗ್ ಬಲದಿಂದಾಗಿ. ಹೀಗಾಗಿ ಗೆಲುವಿನ ಪರಿಣಾಮ ಬೀರಿದ್ದು ಬ್ಯಾಟ್ಸ್‌ಮನ್‌ಗಳು. ಬ್ರೆಂಟ್ ಬೌಲ್ಟ್ ಮತ್ತು ಜಸ್‌ಪ್ರೀತ್‌ ಬೂಮ್ರಾಗೆ ಗೌರವಿಸಿ ಹೇಳುತ್ತಿದ್ದೇನೆ; MOM ಬ್ಯಾಟ್ಸ್‌ಮನ್‌ಗೆ ನೀಡಬೇಕಿತ್ತು,' ಎಂದು ಟ್ವೀಟ್‌ನಲ್ಲಿ ಮಂಜ್ರೇಕರ್ ಬರೆದುಕೊಂಡಿದ್ದಾರೆ.

Story first published: Friday, November 6, 2020, 20:41 [IST]
Other articles published on Nov 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X