ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2018-19ರ ದೇಸಿ ಸೀಸನ್ ನಲ್ಲಿ ಬೆಂಗಾಲ್ ತಂಡಕ್ಕೆ ತಿವಾರಿ ನಾಯಕ

Manoj Tiwary named Bengal skipper for the 2018-19 domestic season

ನವದೆಹಲಿ, ಜುಲೈ 28: ಮುಂಬರಲಿರುವ (2018-19ರ) ದೇಸಿ ಸೀಸನ್ ಗೆ ಮನೋಜ್ ತಿವಾರಿ ನಾಯಕನಾಗಿ ಆಯ್ಕೆಯಾಗಿದ್ದಾರೆ. ಬೆಂಗಾಲ್ ತಂಡದ ಮಾಜಿ ನಾಯಕ ಪಾಲಾಶ್ ನಂದಿ ಮುಂದಾಳತ್ವದ ಆಯ್ಕೆ ಸಮಿತಿಯು ತಿವಾರಿ ಮತ್ತು ಕೋಚ್ ಸೈರಾಜ್ ಬಹುತುಲೆ ಸಮ್ಮುಖದಲ್ಲೇ ತಿವಾರಿ ಅವರನ್ನು ನೇಮಿಸಿತು.

ಮಲ್ಯ ಒಡೆತನದ 'ಫೋರ್ಸ್ ಇಂಡಿಯಾ ಎಫ್-1' ಕೋರ್ಟ್ ಆಡಳಿತಕ್ಕೆಮಲ್ಯ ಒಡೆತನದ 'ಫೋರ್ಸ್ ಇಂಡಿಯಾ ಎಫ್-1' ಕೋರ್ಟ್ ಆಡಳಿತಕ್ಕೆ

ಮೂಲವೊಂದರ ಪ್ರಕಾರ ಸ್ವತಃ ತಿವಾರಿಗೆ ಬೆಂಗಾಲ್ ತಂಡವನ್ನು ಮುನ್ನಡೆಸಲು ಮನಸ್ಸಿಲ್ಲ. ಆದರೆ ಬೆಂಗಾಲ್ ಆಯ್ಕೆ ಸಮಿತಿ ನಾಯಕನ ಜವಾಬ್ದಾರಿ ನೀಡಿರುವುದರಿಂದ ಅನಿವಾರ್ಯವಾಗಿ ಅದನ್ನು ಒಪ್ಪಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಮನೋಜ್ ಭಾರತ ಕ್ರಿಕೆಟ್ ಆಯ್ಕೆ ಸಮಿತಿ ಮೇಲೆ ಬೇಸರ ತೋರಿಕೊಂಡಿದ್ದರು. ಕಾರಣ ದುಲೀಪ್ ಟ್ರೋಫಿ ಮತ್ತು ಭಾರತ ಎ, ಬಿ ತಂಡಗಳನ್ನು ರಚಿಸುವಾಗಿ ಯಾವ ತಂಡದಲ್ಲೂ ತಿವಾರಿಗೆ ಆಯ್ಕೆ ಸಮಿತಿ ಅವಕಾಶ ನೀಡಿರಲಿಲ್ಲ. ಕಳೆದ ಸೀಸನ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ತನ್ನನ್ನು ಕಡೆಗಣಿಸಿದ್ದರ ಬಗ್ಗೆ ತಿವಾರಿ ಸಹಜವಾಗೇ ಅಸಮಾಧಾನ ವ್ಯಕ್ತಪಡಿಸಿದ್ದರು.

'ಹೌದು, ದುಲೀಪ್ ಟ್ರೋಫಿ ಸೇರಿದಂತೆ ಯಾವ ತಂಡಕ್ಕೂ ನನ್ನನ್ನು ಆಯ್ಕೆ ಮಾಡದಿದ್ದಕ್ಕೆ ನನಗೆ ಬೇಸರ ಅನ್ನಿಸಿತ್ತು. ಆದರೆ ತಂಡವೊಂದಕ್ಕೆ ನಾಯಕವಾಗಬೇಕೆಂದು ನಾನೆಂದೂ ಬಯಸಿರಲಿಲ್ಲ. ಬೆಂಗಾಲ್ ತಂಡಕ್ಕೆ ನಾಯಕನಾಗಿದ್ದು ನನಗೆ ಹೆಮ್ಮೆಯೆನಿಸಿದೆ. ಸವಾಲನ್ನು ಸ್ವೀಕರಿಸಲು ನಾನ್ಯಾವತ್ತಿಗೂ ಸಿದ್ಧವಾಗಿದ್ದೇನೆ' ಎಂದು ತಿವಾರಿ ತಿಳಿಸಿದ್ದಾರೆ.

Story first published: Saturday, July 28, 2018, 18:02 [IST]
Other articles published on Jul 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X