ಐಸಿಸಿ ಮಹಿಳೆಯರ ಏಕದಿನ ತಂಡ 2021: ಭಾರತದ ಇಬ್ಬರು ಆಟಗಾರ್ತಿಯರಿಗೆ ಸ್ಥಾನ

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ 2021ರ ಏಕದಿನ ಕ್ರಿಕೆಟ್‌ನ ಪ್ರದರ್ಶನದ ಆಧಾರದಲ್ಲಿ ವಷರ್ದ ಮಹಿಳೆಯರ ಅತ್ಯುತ್ತಮ ಏಕದಿನ ತಂಡವನ್ನು ಪ್ರಕಟಿಸಿದೆ. ಐಸಿಸಿ ಪ್ರಕಟಿಸಿದ ಈ ತಂಡದಲ್ಲಿ ಭಾರತದ ಇಬ್ಬರು ಆಟಗಾರ್ತಿಯರು ಸ್ಥಾನ ಪಡೆದುಕೊಂಡಿದ್ದಾರೆ.

ಭಾರತ ತಂಡದ ಇಬ್ಬರು ಅನುಭವಿ ಆಟಗಾರ್ತಿಯರಾದ ಮಿಥಾಲಿ ರಾಜ್ ಹಾಗೂ ಜೂಲನ್ ಗೋಸ್ವಾಮಿ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡ ಆಟಗಾರ್ತಿಯರಾಗಿದ್ದಾರೆ. ಐಸಿಸಿ ಪ್ರಕಟಿಸಿದ ಈ ತಂಡದ ನಾಯಕತ್ವವನ್ನು ಇಂಗ್ಲೆಂಡ್ ತಂಡದ ನಾಯಕಿ ಹೀದರ್ ನೈಟ್‌ಗೆ ವಹಿಸಲಾಗಿದೆ.

ಐಸಿಸಿ ಪ್ರಕಟಿಸಿದ ಈ ತಂಡದಲ್ಲಿ ಭಾರತದ ಇಬ್ಬರು ಆಟಗಾರ್ತಿಯರನ್ನು ಹೊರತುಪಡಿಸಿದರೆ ದಕ್ಷಿಣ ಆಫ್ರಿಕಾದ ಮೂವರು ಆಟಗಾರ್ತಿಯರು, ಆಸ್ಟ್ರೇಲಿಯಾದ ಓರ್ವ ಆಟಗಾರ್ತಿ, ವೆಸ್ಟ್ ಇಂಡೀಸ್ ತಂಡದ ಇಬ್ಬರು ಆಟಗಾರ್ತಿಯರು ಹಾಗೂ ಇಂಗ್ಲೆಂಡ್ ತಂಡದ ಇಬ್ಬರು ಆಟಗಾರ್ತಿಯರಿದ್ದಾರೆ.

ಅಂಡರ್ 19 ವಿಶ್ವಕಪ್: ನಾಯಕ ಯಶ್ ಧುಲ್ ಸೇರಿ 6 ಭಾರತೀಯ ಆಟಗಾರರಿಗೆ ತಗುಲಿದ ಕೊವಿಡ್ಅಂಡರ್ 19 ವಿಶ್ವಕಪ್: ನಾಯಕ ಯಶ್ ಧುಲ್ ಸೇರಿ 6 ಭಾರತೀಯ ಆಟಗಾರರಿಗೆ ತಗುಲಿದ ಕೊವಿಡ್

ಕಳೆದ ಹಲವು ವರ್ಷಗಳಿಂದ ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿರುವ ಇಂಗ್ಲೆಂಡ್ ತಂಡದ ನಾಯಕ ಹೀದರ್ ನೈಟ್ 2021ರಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ಹೀದರ್ 2021ರಲ್ಲಿ 42.30 ಸರಾಸರಿಯಲ್ಲಿ 423 ರನ್‌ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಮೂರು ಅರ್ಧ ಶತಕ ಸೇರಿದೆ. ಅಲ್ಲದೆ ಬೌಲಿಂಗ್‌ನಲ್ಲಿಯೂ ತಂಡಕ್ಕೆ ಹಿದರ್ ನೈಟ್ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ.

ಇನ್ನು ಭಾರತ ಮಹಿಳಾ ಏಕದಿನ ತಂಡದ ನಾಯಕ ಮಿಥಾಲಿ ರಾಜ್ ಕೂಡ 42.30 ಸರಾಸರಿಯಲ್ಲಿ 423 ರನ್‌ಗಳಿಸಿದ್ದಾರೆ. ಆದರೆ ಮಿಥಾಲಿ ರಾಜ್ ಸಿಡಿಸಿದ ಈ ರನ್ ಭಾರತ ತಂಡ ಸಂಕಷ್ಟದ ಸಂದರ್ಭದಲ್ಲಿ ಇದ್ದಾಗ ಬಂದಿದೆ ಎಂಬುದು ಗಮನಾರ್ಹ. ಹೀಗಾಗಿ ಭಾರತ ತಂಡದ ನಾಯಕಿಯ ರನ್ ಕೊಡುಗೆಗೆ ಹೆಚ್ಚಿನ ತೂಕವಿದೆ. 2021ರಲ್ಲಿ ಮಿಥಾಲಿ ರಾಜ್ ಶತಕವನ್ನು ಸಿಡಿಸಿಲ್ಲವಾದರೂ ಆರು ಅರ್ಧ ಶತಕಗಳಿಸಿದ್ದಾರೆ. ಇನ್ನು 39ರ ಹರೆಯದ ಜೂಲನ್ ಗೋಸ್ವಾಮಿ ಭಾರತ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿ ಇನ್ನೂ ಗಣನೀಯ ಕೊಡುಗೆ ನೀಡುತ್ತಿದ್ದಾರೆ. 2021ರಲ್ಲಿ ಏಕದಿನ ಮಾದರಿಯಲ್ಲಿ ಜೂಲನ್ 15 ವಿಕೆಟ್ ಸಂಪಾದಿಸಿದ್ದಾರೆ. ರನ್‌ ನೀಡುವಲ್ಲಿಯೂ ಜೂಲನ್ ಗಣನೀಯ ನಿಯಂತ್ರಣ ಸಾಧಿಸುತ್ತಿದ್ದು ಭಾರತದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ.

ದ.ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದ ಸೋಲಿಗೆ ಕಾರಣ ಯಾರೆಂಬುದನ್ನು ಬಿಚ್ಚಿಟ್ಟ ನಾಯಕ ರಾಹುಲ್ದ.ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದ ಸೋಲಿಗೆ ಕಾರಣ ಯಾರೆಂಬುದನ್ನು ಬಿಚ್ಚಿಟ್ಟ ನಾಯಕ ರಾಹುಲ್

KL Rahul ಬಗ್ಗೆ ಅವರ ತಾಯಿ ಏನ್ ಹೇಳಿದ್ರು ಗೊತ್ತಾ! | Oneindia Kannada

2021ರ ಐಸಿಸಿ ಮಹಿಳಾ ಏಕದಿನ ತಂಡ: ಲಿಜೆಲ್ ಲೀ (ದಕ್ಷಿಣ ಆಫ್ರಿಕಾ), ಅಲಿಸ್ಸಾ ಹೀಲಿ (ಆಸ್ಟ್ರೇಲಿಯಾ), ಟಮ್ಮಿ ಬ್ಯೂಮಾಂಟ್ (ಇಂಗ್ಲೆಂಡ್), ಮಿಥಾಲಿ ರಾಜ್ (ಭಾರತ), ಹೀದರ್ ನೈಟ್ (ನಾಯಕಿ, ಇಂಗ್ಲೆಂಡ್), ಹೇಲಿ ಮ್ಯಾಥ್ಯೂಸ್ (ವೆಸ್ಟ್ ಇಂಡೀಸ್), ಮರಿಜಾನ್ನೆ ಕಪ್ ( ದಕ್ಷಿಣ ಆಫ್ರಿಕಾ), ಶಬ್ನಿಮ್ ಇಸ್ಮಾಯಿಲ್ (ದಕ್ಷಿಣ ಆಫ್ರಿಕಾ), ಫಾತಿಮಾ ಸನಾ (ಪಾಕಿಸ್ತಾನ), ಜೂಲನ್ ಗೋಸ್ವಾಮಿ (ಭಾರತ), ಮತ್ತು ಅನಿಸಾ ಮೊಹಮ್ಮದ್ (ವೆಸ್ಟ್ ಇಂಡೀಸ್).

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, January 20, 2022, 16:06 [IST]
Other articles published on Jan 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X