ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಜರ್ಸಿ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತದೆ: ಜೂಲನ್ ಗೋಸ್ವಾಮಿ ನಿವೃತ್ತಿಗೆ ಮಿಥಾಲಿ ರಾಜ್ ಭಾವನಾತ್ಮಕ ಬರಹ

Mithali Raj writes emotional farewell message to Jhulan Goswami said Indian jersey will miss you dearly

ಭಾರತದ ಮಹಿಳಾ ಕ್ರಿಕೆಟ್ ತಂಡದ ವೇಗದ ಬೌಲರ್ ಜೂಲನ್ ಗೋಸ್ವಾಮಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯವನ್ನು ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಣೆ ಮಾಡಿದ್ದಾರೆ. ಸುದೀರ್ಘ ಕಾಲ ಭಾರತ ತಂಡದ ಪರ ಆಡಿದ್ದ ಗೋಸ್ವಾಮಿಗೆ ಭಾರತ ತಂಡ ಗೌರವಪೂರ್ವ ವಿದಾಯವನ್ನು ಹೇಳಿದ್ದು ಕೋಟ್ಯಂತರ ಅಭಿಮಾನಿಗಳು ಭಾರತದ ದಿಗ್ಗಜ ಆಟಗಾರ್ತಿಯ ನಿವೃತ್ತ ಜೀವನಕ್ಕೆ ಶುಭ ಹಾರೈಸಿದ್ದಾರೆ. ಇದೀಗ ಜೂಲನ್ ಗೋಸ್ವಾಮಿ ಜೊತೆಗೆ ಸುದೀರ್ಘ ಕಾಲ ಭಾರತದ ಪರವಾಗಿ ಆಡಿದ್ದ ಮಿಥಾಲಿ ರಾಜ್ ಭಾವನಾತ್ಮಕ ಬರಹವೊಂದನ್ನು ಬರೆದಿದ್ದು ನಿವೃತ್ತಿ ಜೀವನಕ್ಕೆ ಶುಭಹಾರೈಸಿದ್ದಾರೆ.

ಕಳೆದ ಎರಡು ದಶಕಗಳಿಂದ ಮಹಿಳಾ ಕ್ರಿಕೆಟ್‌ನಲ್ಲಿ ವೇಗದ ಬೌಲರ್ ಆಗಿ ನಂಬಲು ಅಸಾಧ್ಯವಾದ ರೀತಿಯಲ್ಲಿ ಪ್ರದರ್ಶನವನ್ನು ನೀಡಿದ್ದಾರೆ. ಅಂಡರ್-19 ದಿನಗಳಿಂದಲೂ ನಾವಿಬ್ಬರೂ ಜೊತೆಯಾಗಿ ಆಡುತ್ತಿದ್ದೇವೆ. ಆಟದ ಮೇಲೆ ಜೂಲನ್ ಗೋಸ್ವಾಮಿ ಹೊಂದಿರುವ ಬದ್ಧತೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಬಯಸುವ ಎಲ್ಲರಿಗೂ ಉತ್ತಮ ಪಾಠವಾಗಿದೆ. ಭಾರತದ ಜರ್ಸಿ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತದೆ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು, ಜುಲು" ಎಂದು ಮಿಥಾಲಿ ರಾಜ್ ಶುಭಹಾರೈಸಿದ್ದಾರೆ.

ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾದ ಆಡುವ ತಂಡದಲ್ಲಿ ಈತ ಸ್ಥಾನ ಪಡೆಯಲಿ: ಆಡಮ್ ಗಿಲ್‌ಕ್ರಿಸ್ಟ್ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾದ ಆಡುವ ತಂಡದಲ್ಲಿ ಈತ ಸ್ಥಾನ ಪಡೆಯಲಿ: ಆಡಮ್ ಗಿಲ್‌ಕ್ರಿಸ್ಟ್

ಜೂನ್ 2002 ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಜೂಲನ್ ಗೋಸ್ವಾಮಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂದು, ತನ್ನ ಮೊದಲ ಪಂದ್ಯದಲ್ಲೇ ಆಕೆ ಎರಡು ವಿಕೆಟ್ ಪಡೆದು ಮಿಂಚಿದ್ದರು. ಆಕೆಯ ಚೊಚ್ಚಲ ಟೆಸ್ಟ್ ಪಂದ್ಯವನ್ನು ಕೂಡ 2002ರ ಜುಲೈ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧವೇ ಆಡಿದ್ದರು. ಅದಾದ ನಾಲ್ಕು ವರ್ಷಗಳ ನಂತರ ಅವರು ಮೊದಲ ಟಿ20 ಪಂದ್ಯವನ್ನು ಆಡಿದರು, ಅದೂ ಕೂಡ ಇಂಗ್ಲೆಂಡ್ ತಂಡದ ವಿರುದ್ಧವೇ ಎನ್ನುವುದು ವಿಶೇಷ. ಈಗ ಏಕದಿನ ಮಾದರಿ ಕ್ರಿಕೆಟ್‌ನ ಕೊನೆಯ ಪಂದ್ಯವನ್ನೂ ಇಂಗ್ಲೆಂಡ್ ವಿರುದ್ಧವೇ ಆಡುವ ಮೂಲಕ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದರು.

ಕಳೆದ ಮಾರ್ಚ್‌ನಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ಏಕದಿನ ಮಾದರಿಯ ವಿಶ್ವಕಪ್‌ನ ನಂತರ ಜೂಲನ್ ಗೋಸ್ವಾಮಿ ಯಾವುದೇ ಸರಣಿಯಲ್ಲಿ ಭಾಗಿಯಾಗಿರಲಿಲ್ಲ. ಆದರೆ ಬಿಸಿಸಿಐ ಆಯ್ಕೆ ಸಮಿತಿಯು ಇಂಗ್ಲೆಂಡ್ ಪ್ರವಾಸಕ್ಕೆ ಜೂಲನ್ ಅವರನ್ನು ಆಯ್ಕೆ ಮಾಡಿದ ಬಳಿಕ ಜೂಲನ್ ಗೋಸ್ವಾಮಿ ಈ ಸರಣಿಯ ನಂತರ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇತ್ತೀಚೆಗೆ ಜೂಲನ್ ಗೋಸ್ವಾಮಿ ನಿವೃತ್ತಿ ವಿಚಾರವನ್ನು ಬಹಿರಂಗಪಡಿಸಿದ್ದರು.

ವಿರಾಟ್ ಕೊಹ್ಲಿಗೆ ರನ್ ಹಸಿವಿದೆ, ಲಯಕ್ಕೆ ಮರಳಿದ್ದಾರೆ: ಸಂಜಯ್ ಬಂಗಾರ್ವಿರಾಟ್ ಕೊಹ್ಲಿಗೆ ರನ್ ಹಸಿವಿದೆ, ಲಯಕ್ಕೆ ಮರಳಿದ್ದಾರೆ: ಸಂಜಯ್ ಬಂಗಾರ್

ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿರುವ ಜೂಲನ್ ಗೋಸ್ವಾಮಿ ಎಲ್ಲಾ ಮಾದರಿಯಲ್ಲಿಯೂ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿ ನಿವೃತ್ತಿಯಾಗಲಿದ್ದಾರೆ. ಮೂರು ಮಾದರಿಗಳಲ್ಲಿ ಒಟ್ಟು ಸೇರಿಸಿದರೆ ಗೋಸ್ವಾಮಿ 352 ವಿಕೆಟ್ ಪಡೆದುಕೊಂಡಿದ್ದು ಈ ಸಾಧನೆ ಮಾಡಿದ್ದಾರೆ. ಇನ್ನು ಈ ವರ್ಷಾರಂಭದಲ್ಲಿ ಭಾರತದ ಮಾಜಿ ನಾಯಕಿ ಹಾಗೂ ಜೂಲನ್ ಗೋಸ್ವಾಮಿ ಅವರ ಸುದೀರ್ಘ ಕಾಲದ ಸಹಪಾಠಿ ಮಿಥಾಲಿ ರಾಜ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

Story first published: Tuesday, September 27, 2022, 21:30 [IST]
Other articles published on Sep 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X