ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಟಿ20: ನಬಿ ಆಕರ್ಷಕ ಆಟ, ಐರ್ಲೆಂಡ್ ವಿರುದ್ಧ ಅಫ್ಘಾನ್‌ಗೆ ಜಯ

Mohammad Nabi stars as Afghanistan beat Ireland in first T20

ಡೆಹ್ರಾಡೂನ್, ಫೆಬ್ರವರಿ 22: ಅನುಭವಿ ಆಟಗಾರ ಮೊಹಮ್ಮದ್ ನಬಿ ಆಕರ್ಷಕ ಬ್ಯಾಟಿಂಗ್ ಸಹಾಯದಿಂದ ಗುರುವಾರ (ಫೆಬ್ರವರಿ 21) ನಡೆದ ಮೊದಲ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಐರ್ಲೆಂಡ್ ವಿರುದ್ಧ 5 ವಿಕೆಟ್ ಗೆಲುವು ದಾಖಲಿಸಿದೆ. ಭಾರತ ಪ್ರವಾಸದಲ್ಲಿರುವ ಎರಡೂ ತಂಡಗಳು ಉತ್ತರಖಂಡದ ಡೆಹ್ರಾಡೂನ್‌ನಲ್ಲಿರುವ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಿ20 ಸರಣಿ ಆಡುತ್ತಿದೆ.

ಪಾಕ್ ಶೂಟರ್‌ಗಳಿಗೆ ವೀಸಾ ನೀಡದ ಭಾರತದ ವಿರುದ್ಧ ಒಲಿಂಪಿಕ್ ಸಮಿತಿ ಕಿಡಿಪಾಕ್ ಶೂಟರ್‌ಗಳಿಗೆ ವೀಸಾ ನೀಡದ ಭಾರತದ ವಿರುದ್ಧ ಒಲಿಂಪಿಕ್ ಸಮಿತಿ ಕಿಡಿ

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಐರ್ಲೆಂಡ್, ಆರಂಭಿಕ ಆಟಗಾರ, ನಾಯಕ ಪಾಲ್ ಸ್ಟಿರ್ಲಿಂಗ್ 23, ಜಾರ್ಜ್ ಡಾಕ್ರೆಲ್ 34, ಸ್ಟುವರ್ಟ್ ಪಾಯಿಂಟರ್ 31 ರನ್ ಅಷ್ಟೇ ಗಮನಾರ್ಹವೆನಿಸಿತು. ಐರ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದು 132 ರನ್ ಗಳಿಸಿತು.

ಇನ್ನಿಂಗ್ಸ್‌ಗೆ ಇಳಿದ ಅಫ್ಘಾನಿಸ್ತಾನ ತಂಡವೂ ಆರಂಭಿಕ ವಿಕೆಟ್ ಗಳನ್ನು ಬೇಗನೆ ಕಳೆದುಕೊಂಡಿತು. ಆರಂಭಿಕ ಬ್ಯಾಟ್ಸ್ಮನ್ ಹಝರತುಲ್ಲಾ ಜಾಝಾಯಿ 11, ನಾಯಕ ಅಸ್ಘರ್ ಅಫ್ಘಾನ್ 5, ಸಮೀಉಲ್ಲ ಶೆನ್ವಾರಿ 17, ಕರೀಮ್ ಜನತ್ 0 ರನ್ನಿಗೆ ನಿರ್ಗಮಿಸಿದರು.

ಪುಲ್ವಾಮಾ ದಾಳಿ: ಪಾಕ್ ಕ್ರಿಕೆಟ್ ಅಭಿಮಾನಿ ಆದಿಲ್ ಮನದ ಮಾತು ಕೇಳಿ!ಪುಲ್ವಾಮಾ ದಾಳಿ: ಪಾಕ್ ಕ್ರಿಕೆಟ್ ಅಭಿಮಾನಿ ಆದಿಲ್ ಮನದ ಮಾತು ಕೇಳಿ!

ಆದರೆ ಅನಂತರ ಬ್ಯಾಟ್ ಕೈಗೆತ್ತಿಕೊಂಡ ನಬಿ ಮತ್ತು ನಜಿಬುಲ್ಲಾ ಝದ್ರನ್ ವಿಕೆಟ್ ಕಾವಲು ನಿಂತರು. ನಬಿ ಅಜೇಯ 49, ಝದ್ರನ್ 40 ರನ್ ಸೇರಿಸಿ ತಂಡಕ್ಕೆ ಗೆಲುವು ತಂದಿತ್ತರು. ಅಫ್ಘಾನ್ ತಂಡ 19.2 ಓವರ್‌ನಲ್ಲಿ 5 ವಿಕೆಟ್ ನಷ್ಟದೊಂದಿಗೆ 136 ರನ್ ಕಲೆ ಹಾಕಿತು. ನಬಿ ಪಂದ್ಯಶ್ರೇಷ್ಠರೆನಿಸಿದರು. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಅಫ್ಘಾನ್ 1-0ಯ ಮುನ್ನಡೆಯಲ್ಲಿದೆ.

Story first published: Friday, February 22, 2019, 11:03 [IST]
Other articles published on Feb 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X