ಕೇವಲ ಟಿ20 ವಿಶ್ವಕಪ್‌ಗೆ ಮಾತ್ರ: ಧೋನಿ ನೇಮಕದ ಬಗ್ಗೆ ಜಯ್ ಶಾ ಮಾತು

ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾದ ಸದಸ್ಯರನ್ನು ಬುಧವಾರ ಪ್ರಕಟಿಸಲಾಗಿದೆ. ಈ ತಂಡದ ಪ್ರಕಟದ ಜೊತೆಗೆ ಮತ್ತೊಂದು ಅಚ್ಚರಿಯ ಪ್ರಕಟಣೆ ಕೂಡ ಸುದ್ದಿ ಕೇಂದ್ರಕ್ಕೆ ತಲುಪಿತ್ತು. ಅದುವೇ ಈ ಟಿ20 ವಿಶ್ವಕಪ್‌ನ ತಂಡಕ್ಕೆ ಮೆಂಟರ್ ಆಗಿ ಮಾಜಿ ನಾಯಕ ಎಂಎಸ್ ಧೋನಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂಬ ಸುದ್ದಿ. ಇದು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳ ಪಾಲಿಗೆ ಸಂತಸದ ಸಂಗತಿಯಾಗಿದೆ. ಭಾರತೀಯ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ಹಾಗೂ ಆಟಗಾರನಾಗಿ ಧೋನಿ ನೀಡಿದ ಕೊಡುಗೆಯ ಕಾರಣದಿಂದಾಗಿ ಬಹುತೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐನ ಈ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ಮತ್ತೊಂದು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಟೀಮ್ ಇಂಡಿಯಾದ ಮೆಂಟರ್ ಆಗಿ ಟಿ20 ವಿಶ್ವಕಪ್‌ಗೆ ಒಪ್ಪಿಗೆಯನ್ನು ನೀಡುವುದಕ್ಕೆ ಮುನ್ನ ಎಂಎಸ್ ಧೋನಿ ಷರತ್ತೊಂದನ್ನು ಮುಂದಿಟ್ಟಿದ್ದಾರೆ ಎಂಬುದನ್ನು ಶಾ ತಿಳಿಸಿದ್ದಾರೆ.

ಇಂಗ್ಲೆಂಡ್‌ಗೆ ಡ್ರಾ ಮಾಡಿಕೊಳ್ಳುವ ಯೋಗ್ಯತೆಯೂ ಇಲ್ಲ ಎಂಬುದು ನಾಚಿಕೆಗೇಡು; ಕಿಡಿಕಾರಿದ ಆಂಗ್ಲ ಕ್ರಿಕೆಟಿಗ!ಇಂಗ್ಲೆಂಡ್‌ಗೆ ಡ್ರಾ ಮಾಡಿಕೊಳ್ಳುವ ಯೋಗ್ಯತೆಯೂ ಇಲ್ಲ ಎಂಬುದು ನಾಚಿಕೆಗೇಡು; ಕಿಡಿಕಾರಿದ ಆಂಗ್ಲ ಕ್ರಿಕೆಟಿಗ!

ಮಾಜಿ ನಾಯಕ ಎಂಎಸ್ ಧೋನಿಯನ್ನು ಮೆಂಟರ್ ಆಗಿ ನೇಮಕ ಮಾಡಿಕೊಂಡಿರುವ ವಿಚಾರವಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾತನಾಡಿದ್ದಾರೆ. ದುಬೈನಲ್ಲಿರುವ ಎಂಎಸ್ ಧೋನಿ ಜೊತೆಗೆ ಟಿ20 ವಿಶ್ವಕಪ್‌ಗೆ ಮೆಂಟರ್ ಆಗಿ ಕರ್ತವ್ಯ ನಿರ್ವಹಿಸುವ ಬಗ್ಗೆ ಮಾತನಾಡಿರುವುದಾಗಿ ಜಯ್ ಶಾ ತಿಳಿಸಿದ್ದಾರೆ. "ಈ ಆಫರ್‌ಅನ್ನು ಎಂಎಸ್ ಧೋನಿ ಒಪ್ಪಿಕೊಂಡಿದ್ದಾರೆ. ಅವರು ಈ ಬಾರಿ ಸಹಾಯಕ ಸಿಬ್ಬಂಧಿಯಾಗಿ ತಂಡಕ್ಕೆ ನೆರವಾಗಲು ಸಿದ್ಧರಾಗಿದ್ದಾರೆ" ಎಂದು ಶಾ ತಿಳಿಸಿದರು.

ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ಮೆಂಟರ್ ಆಗಿ ಎಂಎಸ್ ಧೋನಿ ಕೇವಲ ಟಿ20 ವಿಶ್ವಕಪ್‌ಗೆ ಮಾತ್ರವೇ ನೇಮಕವಾಗಿದ್ದಾರೆ ಎಂಬುದನ್ನು ಜಯ್ ಶಾ ಸ್ಪಷ್ಟವಾಗಿ ತಿಳಿಸಿದ್ದಾರೆ. ಟಿ20 ವಿಶ್ವಕಪ್‌ನ ಅವಧಿಗೆ ಮಾತ್ರವೇ ಧೋನಿ ಒಪ್ಪಿಕೊಂಡಿದ್ದಾರೆ ಎಂದು ಜಯ್ ಶಾ ತಿಳಿಸಿದರು. ಈ ನಿರ್ಧಾರದ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಜೊತೆಗೆ ಚರ್ಚಿಸಿದ್ದು ಅದಾದ ಬಳಿಕವೇ ಅಧಿಕೃತವಾಇ ಘೋಷಿಸಲಾಗಿದೆ ಎಂದಿ ವಿವರಿಸಿದ್ದಾರೆ.

"ಎಂಎಸ್ ಧೋನಿ ನಮ್ಮ ಮನವಿಗೆ ಒಪ್ಪಿಕೊಂಡಿರುವುದಕ್ಕೆ ನಾವು ಆಭಾರಿಯಾಗಿದ್ದೇನೆ. ಅವರು ಮತ್ತೊಮ್ಮೆ ನಮ್ಮ ರಾಷ್ಟ್ರೀಯ ತಂಡಕ್ಕೆ ಸೇವೆಯನ್ನು ಸಲ್ಲಿಸಲು ಉತ್ಸುಕರಾಗಿದ್ದಾರೆ. ಎಂಎಸ್ ಧೋನಿ ಟೀಮ್ ಇಂಡಿಯಾಕ್ಕೆ ಬೆಂಬಲ ನೀಡಲು ರವಿಶಾಸ್ತ್ರಿ ಹಾಗೂ ಇತರ ಸಹಾಯಕ ಸಿಬ್ಬಂದಿಯೊಂದಿಗೆ ಕರ್ತವ್ಯ ನಿರ್ವಹಿಸಲಿದ್ದಾರೆ" ಎಂದು ಜಯ್ ಶಾ ವಿವರಿಸಿದ್ದಾರೆ.

ಭಾರತ vs ಇಂಗ್ಲೆಂಡ್: ಅಂತಿಮ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 3 ಪ್ರಮುಖ ಬದಲಾವಣೆ ಸಂಭವಭಾರತ vs ಇಂಗ್ಲೆಂಡ್: ಅಂತಿಮ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 3 ಪ್ರಮುಖ ಬದಲಾವಣೆ ಸಂಭವ

ಟೀಮ್ ಇಂಡಿಯಾ ಬುಧವಾರ 15 ಆಟಗಾರರ ಭಾರತೀಯ ತಂಡವನ್ನು ಟಿ20 ವಿಶ್ವಕಪ್‌ಗೆ ಘೋಷಣೆ ಮಾಡಿದೆ. ಅಲ್ಲದೆ ಮೂವರು ಮೀಸಲು ಆಟಗಾರರು ಕೂಡ ಈ ತಂಡದೊಂದಿಗೆ ವಿಶ್ವಕಪ್‌ನಲ್ಲಿ ಆಭಗಿಯಾಗಲಿದ್ದಾರೆ. ಈ ತಂಡದಲ್ಲಿ ಅನುಭವಿ ಆರ್ ಅಶ್ವಿನ್ ನಾಲ್ಕು ವರ್ಷಗಳ ನಂತರ ಟಿ20 ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರೆ ಯುಜುವೇಂದ್ರ ಚಾಹಲ್, ಕೃನಾಲ್ ಪಾಂಡ್ಯ ಹಾಗೂ ಶಿಖರ್ ಧವನ್ ಸ್ಥಾನವನ್ನು ಪಡೆಯುವಲ್ಲಿ ವಿಫಲವಾಗಿದ್ದಾರೆ.

ಟೀಮ್ ಇಂಡಿಯಾ ಸಂಪೂರ್ಣ ತಂಡ ಹೀಗಿದೆ
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ಜಸ್ಪ್ರೀತ್ ಬೂಮ್ರಾ , ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ

T 20 ವಿಶ್ವಕಪ್ ಆಡಲು ಹೊರಟ ತಂಡಕ್ಕೆ ಧೋನಿ ಮಾರ್ಗದರ್ಶನ | Oneindia Kannada

ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್

For Quick Alerts
ALLOW NOTIFICATIONS
For Daily Alerts
Story first published: Wednesday, September 8, 2021, 23:40 [IST]
Other articles published on Sep 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X