ಧೋನಿ ತಂಗಿದ್ದ ದೆಹಲಿ ಹೊಟೇಲ್ ನಲ್ಲಿ ಬೆಂಕಿ ಅನಾಹುತ

By: ಅವಿನಾಶ್ ಶರ್ಮಾ

ನವದೆಹಲಿ, ಮಾರ್ಚ್ 17: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತವರ ಜಾರ್ಖಂಡ್ ತಂಡ ತಂಗಿದ್ದ ದೆಹಲಿಯ ಹೊಟೇಲ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಕಾಲ ಆತಂಕ ಸೃಷ್ಟಿಯಾಯಿತು.

ಆಟಗಾರೆಲ್ಲರನ್ನೂ ರಕ್ಷಿಸಲಾಗಿದ್ದು, ಯಾರಿಗೂ ಯಾವುದೇ ಅಪಾಯವಾಗಿಲ್ಲ. ಆದರೆ ಆಟಗಾರರ ಕಿಟ್ ಗಳೆಲ್ಲವೂ ಬೆಂಕಿಯಿಂದ ಸುಟ್ಟು ಹೋಗಿವೆ.

MS Dhoni and Jharkhand team rescued from hotel fire

ಘಟನೆಯ ಕಾರಣದಿಂದಾಗಿ ಇಂದು ಬಂಗಾಳ ಮತ್ತು ಜಾರ್ಖಾಂಡ್ ನಡುವೆ ನಡೆಯಬೇಕಿದ್ದ ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯವನ್ನು ಮಾರ್ಚ್ 18, ಶನಿವಾರಕ್ಕೆ ಮುಂದೂಡಲಾಗಿದೆ ಎಂದು ಎಂದು ಬಿಸಿಸಿ ಐ ತಿಳಿಸಿದೆ.

Story first published: Friday, March 17, 2017, 10:46 [IST]
Other articles published on Mar 17, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ