ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಮತ್ತು ಆತ ಇಲ್ಲದೇ ಇದ್ದಿದ್ದರೆ ಧೋನಿ ಭಾರತ ತಂಡದಲ್ಲಿ ಉಳಿಯುತ್ತಿರಲಿಲ್ಲ: ಯುವರಾಜ್ ಸಿಂಗ್!

MS Dhoni had so much support from Kohli and Ravi Shastri at the end of his career says Yuvraj Singh

ಯುವರಾಜ್ ಸಿಂಗ್, ವಿಶ್ವಕಪ್ ಹೀರೋ ಎಂದೇ ಖ್ಯಾತಿಯನ್ನು ಪಡೆದಿರುವ ಆಟಗಾರ. 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡದ ಪರ ಉತ್ತಮ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಟೀಮ್ ಇಂಡಿಯಾ ಟ್ರೋಫಿ ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಯುವರಾಜ್ ಸಿಂಗ್ ನಂತರ ಕ್ಯಾನ್ಸರ್ ಖಾಯಿಲೆಯಿಂದ ಕೊಂಚ ಸಮಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇನ್ನು ಮೈದಾನದಲ್ಲಿ ಎದುರಾಳಿಗಳಿಗೆ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸಿ ಮಿಂಚಿರುವ ಯುವರಾಜ್ ಸಿಂಗ್ ಕ್ಯಾನ್ಸರ್ ವಿರುದ್ಧವೂ ಸಹ ಸಿಕ್ಸರ್ ಬಾರಿಸಿ ಗೆದ್ದು ಬಂದರು.

ಮೈದಾನದಲ್ಲೇ ಅಂಪೈರ್ ಮತ್ತು ಪಿವಿ ಸಿಂಧು ಮಧ್ಯ ಕಿರಿಕ್; ವಿಡಿಯೋ ವೈರಲ್ಮೈದಾನದಲ್ಲೇ ಅಂಪೈರ್ ಮತ್ತು ಪಿವಿ ಸಿಂಧು ಮಧ್ಯ ಕಿರಿಕ್; ವಿಡಿಯೋ ವೈರಲ್

ಆದರೆ, ನಂತರದ ದಿನಗಳಲ್ಲಿ ಯುವರಾಜ್ ಸಿಂಗ್‌ಗೆ ಹಿಂದೆ ಸಿಗುತ್ತಿದ್ದಷ್ಟು ಅವಕಾಶ ಮತ್ತು ಬೆಂಬಲ ಟೀಮ್ ಇಂಡಿಯಾದಲ್ಲಿ ಸಿಗಲಿಲ್ಲ. ನಿರೀಕ್ಷಿಸಿದ ಅವಕಾಶ ಮತ್ತು ಬೆಂಬಲ ಸಿಗದ ಯುವರಾಜ್ ಸಿಂಗ್ 2019ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದರು. ಯುವರಾಜ್ ಸಿಂಗ್ ಅವರನ್ನು ಬಹಳ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳಲಾಯಿತು ಎಂದೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್‌ಗಳಾದವು.

ಈತ ಚೆನ್ನಾಗಿ ಆಡುವುದು ತಲೆಮಾರಿಗೊಮ್ಮೆ; ಹೀನಾಯ ಟ್ರೋಲ್‌ಗೆ ತುತ್ತಾದ ಮಾಜಿ ಆರ್‌ಸಿಬಿ ಆಟಗಾರಈತ ಚೆನ್ನಾಗಿ ಆಡುವುದು ತಲೆಮಾರಿಗೊಮ್ಮೆ; ಹೀನಾಯ ಟ್ರೋಲ್‌ಗೆ ತುತ್ತಾದ ಮಾಜಿ ಆರ್‌ಸಿಬಿ ಆಟಗಾರ

ಇನ್ನು ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಅವರೂ ಸಹ ಹಲವಾರು ಬಾರಿ ಯುವರಾಜ್ ಸಿಂಗ್ ವೃತ್ತಿ ಜೀವನದ ಕುರಿತು ಮಾತನಾಡಿ ಕಿಡಿಕಾರಿದ್ದರು. ಇಷ್ಟೆಲ್ಲಾ ಬೆಳವಣಿಗೆಗಳು ಆದರೂ ಹೆಚ್ಚಾಗಿ ಎಲ್ಲಿಯೂ ತನಗೆ ಅನ್ಯಾಯವಾಯಿತು ಎಂದು ತುಟಿ ಬಿಚ್ಚದೇ ಇದ್ದ ಯುವರಾಜ್ ಸಿಂಗ್ ಇತ್ತೀಚೆಗಷ್ಟೇ ನಡೆದ ಖಾಸಗಿ ಕ್ರೀಡಾ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಟೀಮ್ ಇಂಡಿಯಾದಲ್ಲಿ ತನಗೆ ಸ್ಥಾನ ಸಿಗದೇ ಇದ್ದದ್ದರ ಕುರಿತು ಈ ಕೆಳಕಂಡತೆ ಮಾತನಾಡಿದ್ದಾರೆ.

ಎಂಎಸ್ ಧೋನಿಗೆ ಬೆಂಬಲ ಸಿಕ್ಕಿತ್ತು

ಎಂಎಸ್ ಧೋನಿಗೆ ಬೆಂಬಲ ಸಿಕ್ಕಿತ್ತು

ಟೀಮ್ ಇಂಡಿಯಾದಲ್ಲಿ ಹೆಚ್ಚು ದಿನ ಕ್ರಿಕೆಟ್ ಆಡಬೇಕೆಂದರೆ ನಾಯಕ ಮತ್ತು ಕೋಚ್ ಬೆಂಬಲ ಇರಬೇಕು ಎಂದು ಯುವರಾಜ್ ಸಿಂಗ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಎಂಎಸ್ ಧೋನಿ ಅವರನ್ನು ಉದಾಹರಣೆಯಾಗಿ ತೆಗೆದುಕೊಂಡ ಯುವರಾಜ್ ಸಿಂಗ್ ಎಂಎಸ್ ಧೋನಿ ನೋಡಿ, ವೃತ್ತಿ ಜೀವನದ ತುತ್ತ ತುದಿಯಲ್ಲಿ ಇದ್ದರೂ ಸಹ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಬೆಂಬಲದಿಂದ ಧೋನಿ 2019ರ ವಿಶ್ವಕಪ್ ಟೂರ್ನಿಯವರೆಗೂ ಆಟವನ್ನಾಡಿದರು ಎಂದು ಯುವರಾಜ್ ಸಿಂಗ್ ನೇರವಾದ ಹೇಳಿಕೆ ನೀಡಿ ಭಾರೀ ಚರ್ಚೆಗೆ ಒಳಗಾಗಿದ್ದಾರೆ. ಅದರಲ್ಲಿಯೂ ವಿರಾಟ್ ಕೊಹ್ಲಿ ಬೆಂಬಲದಿಂದ ಎಂಎಸ್ ಧೋನಿ ಹೆಚ್ಚು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದರು ಎಂದಿರುವ ಯುವರಾಜ್ ಸಿಂಗ್‌ರ ಈ ಹೇಳಿಕೆ ಇದೀಗ ವಿವಾದವನ್ನೂ ಸಹ ಹುಟ್ಟುಹಾಕಿದೆ.

ಟೀಮ್ ಇಂಡಿಯಾದಲ್ಲಿ ಹೆಚ್ಚು ದಿನ ಉಳಿಯಲು ಬೆಂಬಲ ಬೇಕು

ಟೀಮ್ ಇಂಡಿಯಾದಲ್ಲಿ ಹೆಚ್ಚು ದಿನ ಉಳಿಯಲು ಬೆಂಬಲ ಬೇಕು

ಇನ್ನೂ ಮುಂದುವರೆದು ಮಾತನಾಡಿರುವ ಯುವರಾಜ್ ಸಿಂಗ್ ಎಂಎಸ್ ಧೋನಿ 350 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವಷ್ಟು ಅವಕಾಶಗಳನ್ನು ಪಡೆದುಕೊಂಡರು, ಭಾರತ ತಂಡದಲ್ಲಿ ಹೆಚ್ಚು ದಿನ ಉಳಿಯಲು ಬೆಂಬಲ ಬೇಕು, ಆದರೆ ಆ ಬೆಂಬಲ ಪ್ರತಿಯೊಬ್ಬ ಆಟಗಾರನಿಗೂ ಸಿಗುವುದಿಲ್ಲ ಎಂದೆನಿಸುತ್ತದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

RCB ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಕಳೆದುಕೊಂಡಾಗ | Oneindia Kannada
ಯುವರಾಜ್ ಸಿಂಗ್ ಅಂಕಿಅಂಶ

ಯುವರಾಜ್ ಸಿಂಗ್ ಅಂಕಿಅಂಶ

ಯುವರಾಜ್ ಸಿಂಗ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ 40 ಟೆಸ್ಟ್ ಪಂದ್ಯಗಳು, 304 ಏಕದಿನ ಪಂದ್ಯಗಳು ಹಾಗೂ 58 ಟಿ ಟ್ವೆಂಟಿ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು ಕ್ರಮವಾಗಿ 1900, 8701 ಮತ್ತು 1177 ರನ್ ಕಲೆಹಾಕಿದ್ದಾರೆ. ಇನ್ನು ಆಲ್‌ರೌಂಡರ್ ಆಟಗಾರನಾಗಿರುವ ಯುವರಾಜ್ ಸಿಂಗ್ 9 ಟೆಸ್ಟ್ ವಿಕೆಟ್, 111 ಏಕದಿನ ವಿಕೆಟ್ ಹಾಗೂ 28 ಟಿ ಟ್ವೆಂಟಿ ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Thursday, May 5, 2022, 8:40 [IST]
Other articles published on May 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X