ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ವಿಚಾರದಲ್ಲಿ ಎಂಎಸ್ ಧೋನಿ, ಸೌರವ್ ಗಂಗೂಲಿ ಇಬ್ಬರೂ ಒಂದೇ: ಝಹೀರ್

MS Dhoni was similar to Sourav Ganguly in backing youngsters, says Zaheer Khan

ನವದೆಹಲಿ, ಏಪ್ರಿಲ್ 16: ಭಾರತದ ಮಾಜಿ ವೇಗಿ ಝಹೀರ್ ಖಾನ್ ತನ್ನ ವೃತ್ತಿ ಜೀವನ ಆರಂಭಿಸಿದ್ದು ಸೌರವ್ ಗಂಗೂಲಿ ನಾಯಕತ್ವದಡಿಯಲ್ಲಿ. ಆದರೆ ಝಹೀರ್ ಸ್ಟಾರ್ ಆಗಿ ಮಿನುಗಿದ್ದು ಕೂಲ್ ಕ್ಯಾಪ್ಟನ್ ಎಂಎಸ್ ಧೋನಿಯ ಕ್ಯಾಪ್ಟನ್ಸಿಯಡಿಯಲ್ಲಿ. ಇಬ್ಬರು ಶ್ರೇಷ್ಠ ನಾಯಕರ ಅಡಿಯಲ್ಲಿ ಆಡಿರುವ ಝಹೀರ್, ಇಬ್ಬರ ನಾಯಕತ್ವದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಿಡಿದಿದ್ದ ಸಚಿನ್-ಸಿಧು: ಆವತ್ತು ಪಾಕ್ ವಿರುದ್ಧ ಭಾರತ ದಾಖಲೆ ಜಯ ಸಾಧಿಸಿತ್ತು!ಸಿಡಿದಿದ್ದ ಸಚಿನ್-ಸಿಧು: ಆವತ್ತು ಪಾಕ್ ವಿರುದ್ಧ ಭಾರತ ದಾಖಲೆ ಜಯ ಸಾಧಿಸಿತ್ತು!

'ಖಂಡಿತವಾಗಿಯೂ ವೃತ್ತಿ ಜೀವನ ಆರಂಭಿಸಲು ಗಂಗೂಲಿಯಂತ ನಾಯಕರು ಬೇಕು. ವೃತ್ತಿ ಬದುಕು ಕಂಡುಕೊಂಡ ಮೇಲೆ ವೃತ್ತಿ ಬದುಕಿಗೆ ರೂಪ ನೀಡಲು ಧೋನಿಯಂತ ನಾಯಕಬೇಕು. ಒಟ್ಟಿನಲ್ಲಿ ಎರಡೂ ಹಂತಗಳಲ್ಲೂ ನಿಮಗೆ ನಾಯಕರ ಬೆಂಬಲ ಬಹಳ ಮುಖ್ಯ,' ಎಂದು ಯೂಟ್ಯೂಬ್ ಚಾಟ್‌ ಮಾಡುತ್ತ ಝಹೀರ್ ಹೇಳಿದ್ದಾರೆ.

ಕ್ರಿಕೆಟ್‌ನ ಅಪರೂಪದ ಕ್ಷಣ: ಮೈದಾನದಲ್ಲೇ ಕಣ್ಣೀರಿಟ್ಟ ಐದು ಭಾರತೀಯ ಕ್ರಿಕೆಟಿಗರು!ಕ್ರಿಕೆಟ್‌ನ ಅಪರೂಪದ ಕ್ಷಣ: ಮೈದಾನದಲ್ಲೇ ಕಣ್ಣೀರಿಟ್ಟ ಐದು ಭಾರತೀಯ ಕ್ರಿಕೆಟಿಗರು!

'ಗಂಗೂಲಿ ಮತ್ತು ಧೋನಿ ಇಬ್ಬರೂ ಟೀಮ್ ಇಂಡಿಯಾವನ್ನು ದೀರ್ಘಕಾಲ ಮುನ್ನಡೆಸಿದ್ದಾರೆ. ಇಬ್ಬರ ನಾಯಕತ್ವದಡಿಯಲ್ಲಿ ಆಗುತ್ತಿದ್ದ ಬದಲಾವಣೆಯನ್ನು ನಾನು ಗಮನಿಸಿದ್ದೇನೆ. ಯುವ ಆಟಗಾರರನ್ನು ಬೆಂಬಲಿಸುವ ವಿಚಾರದಲ್ಲಿ ದಾದ (ಗಂಗೂಲಿ) ಮತ್ತು ಧೋನಿ ಇಬ್ಬರಲ್ಲೂ ಸಾಮ್ಯತೆ ಇತ್ತು,' ಎಂದು ಖಾನ್ ವಿವರಿಸಿದರು.

ಎಬಿ ಡಿ ವಿಲಿಯರ್ಸ್ ಪಾಲಿಗೆ ಟಿ20 ವಿಶ್ವಕಪ್ ಕದ ಮುಚ್ಚಿಯೇಬಿಟ್ಟಿತಾ?!ಎಬಿ ಡಿ ವಿಲಿಯರ್ಸ್ ಪಾಲಿಗೆ ಟಿ20 ವಿಶ್ವಕಪ್ ಕದ ಮುಚ್ಚಿಯೇಬಿಟ್ಟಿತಾ?!

ಮಾತು ಮುಂದುವರೆಸಿದ ಝಹೀರ್, 'ಧೋನಿ ತಂಡದಲ್ಲಿದ್ದಾಗ ಆರಂಭದಲ್ಲಿ ಬಹಳಷ್ಟು ಸೀನಿಯರ್ ಆಟಗಾರಗಾರರಿದ್ದರು. ಅಂತಾರಾಷ್ಟ್ರೀಯ ಪಂದ್ಯಗಳ ಅನುಭವಿ ಆಟಗಾರರು ಅವರಾಗಿದ್ದರಿಂದ ಅವರ ಆಟದ ವೇಗದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿರಲಿಲ್ಲ. ಆದರೆ ಅನುಭವಿಗಳು ನಿವೃತ್ತಿ ಹೊಂದುತ್ತಾ ಬಂದ ಹಾಗೆ ಯುವಕರು ತಂಡ ಸೇರಿಕೊಳ್ಳಲಾರಂಭಿಸಿದ್ದರು. ಆಗ ಧೋನಿ, ಗಂಗೂಲಿಯಂತೇ ಯುವ ಆಟಗಾರರಿಗೆ ಬೆಂಬಲಿಸುತ್ತಿದ್ದರು,' ಎಂದರು.

Story first published: Thursday, April 16, 2020, 16:46 [IST]
Other articles published on Apr 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X