ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಪಂದ್ಯದ ವೇಳೆ ಧೋನಿ 'ದೇಶಪ್ರೇಮ' ಎಲ್ಲೆಡೆಯಿಂದ ಮೆಚ್ಚುಗೆ

ಧೋನಿ ಅಭಿಮಾನಿಗಳಿಗೆ ಇಷ್ಟ ಆಗೋದು ಇದೇ ಕಾರಣಕ್ಕೆ..? | Oneindia Kannada
MS Dhoni wins heart with his love for Indian flag as a delirious fan trespasses on the field: Watch

ಹ್ಯಾಮಿಲ್ಟನ್, ಫೆಬ್ರವರಿ 11: ಟಿ20 ಸರಣಿಯಲ್ಲಿ ಅತಿಥೇಯ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಅಂತಿಮ ಟಿ20 ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಹಿರಿಯ ಆಟಗಾರ, ವಿಕೆಟ್ ಕೀಪರ್ ಎಂಎಸ್ ಧೋನಿ ಅವರು ನಡೆದುಕೊಂಡ ರೀತಿ ಕಂಡವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬ್ಯಾಟಿಂಗ್ ವೇಳೆ ಮೈದಾನಕ್ಕೆ ಕಾಲಿಡುತ್ತಿದ್ದಂತೆ 'ಧೋನಿ ಧೋನಿ' ಎಂಬ ಉದ್ಗಾರ ಪ್ರೇಕ್ಷಕರ ಗ್ಯಾಲರಿಯಿಂದ ಕೇಳಿ ಬರುವುದು ಈಗ ಸಾಮಾನ್ಯ ಸಂಗತಿಯಾಗಿದೆ. ಪಂದ್ಯದ ವೇಳೆ ಧೋನಿ ಅವರನ್ನು ಅಭಿಮಾನಿಗಳನ್ನು ಬಂದು ಭೇಟಿ ಮಾಡುವುದು ಕೂಡಾ ಆಗಾಗ ನಡೆಯುತ್ತಿರುತ್ತದೆ.

ಏಕದಿನ Rankingನಲ್ಲಿ ಮೇಲಕ್ಕೇರಿದ ಟೀಮ್ ಇಂಡಿಯಾ, ಎಂಎಸ್ ಧೋನಿ ಏಕದಿನ Rankingನಲ್ಲಿ ಮೇಲಕ್ಕೇರಿದ ಟೀಮ್ ಇಂಡಿಯಾ, ಎಂಎಸ್ ಧೋನಿ

ಇದೇ ರೀತಿ ಭಾನುವಾರದಂದು ಹ್ಯಾಮಿಲ್ಟನ್ ನಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಧೋನಿ ಅವರ ಅಭಿಮಾನಿಯೊಬ್ಬ, ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ, ತನ್ನ ನೆಚ್ಚಿನ ಆಟಗಾರನ ಪಾದಕ್ಕೆ ಬಿದ್ದಿದ್ದಾನೆ. ಈ ವೇಳೆಯಲ್ಲಿ ಆತನ ಕೈಲಿದ್ದ ಭಾರತದ ತ್ರಿವರ್ಣ ಧ್ವಜ ನೆಲದತ್ತ ಬಾಗುತ್ತದೆ. ಈ ಸಂದರ್ಭದಲ್ಲಿ ಸಮಯೋಚಿತವಾಗಿ ವರ್ತಿಸಿದ ಧೋನಿ, ಆತನ ಕೈಯಲ್ಲಿದ್ದ ತ್ರಿವರ್ಣ ಧ್ವಜವನ್ನ ಅಭಿಮಾನಿ ಕೈಯಿಂದ ತೆಗೆದುಕೊಂಡು ಮೇಲೆತ್ತಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೀಪಿಂಗ್ ಮಾಡುವಾಗ ತ್ರಿವರ್ಣ ಧ್ವಜವಿರುವ ಹೆಲ್ಮೆಟ್ ಅನ್ನು ನೆಲದ ಮೇಲೆ ಇಡದ 37 ವರ್ಷ ವಯಸ್ಸಿನ ಧೋನಿ ಅವರು ಮತ್ತೊಮ್ಮೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಧೋನಿಯ ಮಿಂಚಿನ ವೇಗದ ಕೈಗಳಿಗೆ ರಾಸ್ ಟೇಲರ್ ಬಲಿ: ವೈರಲ್ ವಿಡಿಯೋ ಧೋನಿಯ ಮಿಂಚಿನ ವೇಗದ ಕೈಗಳಿಗೆ ರಾಸ್ ಟೇಲರ್ ಬಲಿ: ವೈರಲ್ ವಿಡಿಯೋ

300ನೇ ಪಂದ್ಯವಾಡಿದ ಧೋನಿ ಅವರು 199 ಐಪಿಎಲ್ ಪಂದ್ಯಗಳನ್ನಾಡಿದ್ದು, ಹೊಸ ದಾಖಲೆಗೆ ಸಜ್ಜಾಗುತ್ತಿದ್ದಾರೆ. 96 ಟಿ20 ಪಂದ್ಯಗಳಿಂದ 1548 ರನ್, 36.85 ರನ್ ಸರಾಸರಿ ಹೊಂದಿದ್ದಾರೆ. 56 ಕ್ಯಾಚ್ ಹಾಗೂ 34 ಸ್ಟಂಪಿಂಗ್ ಮಾಡಿದ್ದಾರೆ.

Story first published: Monday, February 11, 2019, 14:44 [IST]
Other articles published on Feb 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X