Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC ಫೈನಲ್‌ ವೇಳೆಯ ವೈರಲ್ ಪೋಸ್ಟ್‌ ಬಳಸಿ ಟ್ವೀಟ್ ಮಾಡಿದ 'ಮುಂಬೈ ಪೊಲೀಸ್'!

Mumbai Police Twitter Handle uses Viral Post of a Indian fans reaction on WTC Final Match

ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ವೇಳೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು. ಈ ಪೋಸ್ಟನ್ನು ಬಳಸಿ ಮುಂಬೈ ಪೊಲೀಸ್ ಟ್ವಿಟರ್ ಖಾತೆ ಒಂದು ಟ್ವೀಟ್ ಮಾಡಿದೆ. ಆ ಪೋಸ್ಟ್‌ ಮೂಲಕ ಮುಂಬೈ ಪೊಲೀಸ್ ಜನರಿಗೆ ಸಂದೇಶ ರವಾನಿಸಿದ್ದಾರೆ.

ಸೌಥಾಂಪ್ಟನ್‌ನಲ್ಲಿ ಬುಧವಾರ (ಜೂನ್ 23) ನಡೆದಿದ್ದ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿದ್ದ ಭಾರತೀಯ ಅಭಿಮಾನಿಯೊಬ್ಬ ಟೀಮ್ ಇಂಡಿಯಾಕ್ಕೆ ಚಿಯರ್ ಮಾಡುತ್ತಿದ್ದರು. ಆ ವೇಳೆ ಸ್ಟ್ರೈಕ್‌ನಲ್ಲಿ ಭಾರತದ ಉಪನಾಯಕ ಅಜಿಂಕ್ಯ ರಹಾನೆ ಆಡುತ್ತಿದ್ದರು.

ಅಭಿಮಾನಿ ಭಾರತ ತಂಡಕ್ಕೆ ಚಿಯರ್ ಮಾಡುತ್ತಿದ್ದಂತೆಯೇ ಆಚೆ ಬದಿಯಲ್ಲಿ ರಹಾನೆ ಔಟ್ ಆಗಿದ್ದರು. ರಹಾನೆ ಔಟ್ ಆಗಿದ್ದು ಕಣ್ಣಿಗೆ ಬೀಳುತ್ತಲೇ ಆ ಅಭಿಮಾನಿ ಪೆಚ್ಚುಮೋರೆ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಓಡಾಡಿತ್ತು. ಈ ಪೋಸ್ಟ್‌ ಬಳಸಿ ಮುಂಬೈ ಪೊಲೀಸ್ ಒಂದು ಟ್ವೀಟ್ ಮಾಡಿದ್ದಾರೆ.

ಭಾರತೀಯ ಅಭಿಮಾನಿ ಭಾರತಕ್ಕೆ ಚಿಯರ್ ಮಾಡುತ್ತಿದ್ದಾಗಿನ ಫೋಟೋ ಮತ್ತು ಪೆಚ್ಚು ಮೋರೆ ಹಾಕಿರುವ ಫೋಟೋ ಬಳಸಿಕೊಂಡಿರುವ ಮುಂಬೈ ಪೊಲೀಸ್, 'ಹೆಲ್ಮೆಟ್ ಧರಿಸದೆ ಗಾಡಿ ಓಡಿಸುವಾಗ, ಫೈನ್‌ ಕಟ್ಟುವಾಗ' ಎಂದು ಬರೆದುಕೊಂಡಿದ್ದಾರೆ. ಹೆಲ್ಮೆಟ್ ಧರಿಸದೆ ಗಾಡಿ ಓಡಿಸಿದರೆ ದಂಡ ಕಟ್ಟಬೇಕಾಗುತ್ತದೆ ಎಂಬ ಸಂದೇಶವನ್ನು ಈ ಪೋಸ್ಟ್‌ ಮೂಲಕ ನೆನಪಿಸಲು ಮುಂಬೈ ಪೊಲೀಸ್ ಟ್ವಿಟರ್ ಖಾತೆ ಮುಂದಾಗಿದೆ.

Story first published: Thursday, June 24, 2021, 19:36 [IST]
Other articles published on Jun 24, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+